ವಿಷಯಕ್ಕೆ ಹೋಗು

ಸಿ ಎಮ್ ಒ ಎಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸೀಮಾಸ್ ಇಂದ ಪುನರ್ನಿರ್ದೇಶಿತ)
ಸಿ ಎಮ್ ಒ ಎಸ್ ಇನ್ವರ್ಟರ್

ಸಿಎಮ್ಓಎಸ್ (CMOS - Complementary Metal Oxide Semiconductor) ಒಂದು ಅರೆವಾಹಕ ಉಪಕರಣ. PMOS (ಪೀಮಾಸ್) ಟ್ರಾನ್ಸಿಸ್ಟರ್ ಮತ್ತು NMOS (ಎನ್ಮಾಸ್) ಟ್ರಾನ್ಸಿಸ್ಟರ್ ಅಂತ ಎರಡು ಮೂಲ ರೀತಿಯ ಟ್ರಾನ್ಸಿಸ್ಟರ್ ಗಳು ಇವೆ. ಇವೆರಡೂ ಸ್ವಿಚ್ಚುಗಳು. ಈ ಸ್ವಿಚ್ಚುಗಳನ್ನು ಬಳಸಿಕೊಂಡೇ ಡಿಜಿಟಲ್ ಲಾಜಿಕ್ (ಮತ್ತು ಅನಲಾಗ್ ಭಾಗ) ಗಳನ್ನು ಅಸ್ತಿತ್ವಕ್ಕೆ ತರುತ್ತೇವೆ. CMOS ಅನ್ನುವುದು ಶೈಲಿ ಮತ್ತು "ತಂತ್ರಜ್ಞಾನ" ಎರಡಕ್ಕೂ ಸಂಬಂಧಿಸಿದ್ದು. ಈ ಬಗೆಗಿನ ತಂತ್ರಜ್ಞಾನ (fabrication - ಒಂದು ಚಿಪ್ ಅನ್ನು ಉತ್ಪಾದನೆ ಮಾಡುವುದು) ಗೆ ಸಂಬಂಧಪಟ್ಟಿದ್ದು. ಯಾವ ತಂತಜ್ಞಾನ / ಟೆಕ್ನಾಲಜಿ ಪೀಮಾಸ್ ಮತ್ತು ಎನ್ಮಾಸ್ ಎರಡೂ ಟ್ರಾನ್ಸಿಸ್ಟರಗಳನ್ನು ತಯಾರಿಸಲು ಅನುವು ಮಾಡಿಕೊಡುತ್ತೋ ಅಂತ ತಂತ್ರಜ್ನಾನಾವನ್ನು CMOS ತಂತ್ರಜ್ಞಾನ ಅನ್ನಬಹುದು . CMOS ತಂತ್ರಜ್ಞಾನದಲ್ಲಿ ಮುಖ್ಯವಾಗಿ ಎರಡು ರೀತಿಯ "ಮೂಲ" ಟ್ರಾನ್ಸಿಸ್ಟರ್ ಗಳನ್ನು ಬಳಸುತ್ತೇವೆ. ಒಂದು ಡಿಜಿಟಲ್ ಲಾಜಿಕ್ ಅನ್ನು ಉದಾಹರಣೆಯಾಗು ತೆಗೆದುಕೊಂದು ನಾವು CMOS –ಅಂದ್ರೆ ಏನು ಅಂತ ಅರ್ಥ ಮಾಡಿಕೊಳ್ಳಬಹುದು. ಈ CMOS ತಂತ್ರಜ್ನಾನದಲ್ಲಿ ಎನ್ಮಾಸ್ ಮತ್ತು ಪೀಮಾಸ್ ಅಂತ ಎರಡು ಟ್ರಾನ್ಸಿಸ್ಟರ್ ಬಳಸುತ್ತೇವೆ. ಎನ್ಮಾಸ್ ಟ್ರಾನ್ಸಿಸ್ಟರ್ ಲಾಜಿಕ್-ಝೀರೋವನ್ನು ಪೂರ್ತಿ ಅಸ್ತಿತ್ವಕ್ಕೆ ತಂದರೂ ಲಾಜಿಕ್ ಒನ್ ಅನ್ನು ಪೂರ್ತಿ ಅಸಿತ್ವಕ್ಕೆ ತರಲ್ಲ. ಇದರ ಅರ್ಥ ಸೊನ್ನೆ ವೋಲ್ಟೇಜ್ ಬರೋ ಜಾಗದಲ್ಲಿ ಸೊನ್ನೆ ವೋಲ್ಟೇಜ್ ಬಂದರೂ ೫ ವೋಲ್ಟೇಜ್ ಬರುವ ಜಾಗದಲ್ಲಿ ೪.೩ ವೋಲ್ಟೇಜ್ ಬರಬಹುದು. ಪೀಮಾಸ್ ಟ್ರಾನ್ಸಿಸ್ಟರ್ ಲಾಜಿಕ್-ಒನ್ಅನ್ನು ಪೂರ್ತಿ ಅಸ್ತಿತ್ವಕ್ಕೆ ತಂದರೂ ಲಾಜಿಕ್ ಝೀರೋವನ್ನು ಪೂರ್ತಿ ಅಸಿತ್ವಕ್ಕೆ ತರಲ್ಲ. ಇದರ ಅರ್ಥ ೫ ವೋಲ್ಟ್ ಬರೋ ಜಾಗದಲ್ಲಿ ಐದು ವೋಲ್ಟ್ ಬಂದರೂ ಸೊನ್ನೆ ವೋಲ್ಟ್ ಬರುವ ಜಾಗದಲ್ಲಿ ೦.೭ ವೋಲ್ಟೇಜ್ ಬರಬಹುದು. ಪೀಮಾಸ್ ಮತ್ತು ಎನ್ಮಾಸ್ ಫೆಟ್ಗಳ ಮೇಲಿನ ಮಿತಿಗಳನ್ನು ಮೀರಿ, ಡಿಜಿಟಲ್ ಲಾಜಿಕ್ ಅಸ್ತಿತ್ವ ಕ್ಕೆ ಬರಲು ( ಅಂದರೆ, ಪೂರ್ತಿ ಸೊನ್ನೆ ಮತ್ತು ಪೂರ್ತಿ ೫ ವೋಲ್ಟಗಳು) ಇವೆರಡನ್ನೂ ಬಳಸಬಹುದು. ಅದೇ ಈ CMOS ಶೈಲಿ ಅತ್ವ CMOS ತಂತ್ರಜ್ಞಾನ! ಇಲ್ಲಿ ಪೀಮಾಸ್ ಮತ್ತು ಎನ್ಮಾಸ್ಗಳು ಒಂದಕ್ಕೊಂದು ಪೂರಕವಾಗಿರುತ್ತವೆ (complementary) . ಸೊನ್ನೆ ಲಾಜಿಕ್ಕನ್ನು ಎನ್ಮಾಸ್ ಟ್ರಾನ್ಸಿಸ್ಟರಗಳು ಮತ್ತು ಪೀಮಾಸ್ ಟ್ರಾನ್ಸಿಸ್ಟರಗಳು ಹೈ ಲಾಜಿಕ್ ಅನ್ನು ಅಸ್ತಿತ್ವ ಕ್ಕೆ ಬರಿಸುತ್ತವೆ. ಈ ರೀತಿ ಎರಡು ರೀತಿಯ "ಮಾಸ್ (MOS)" ಟ್ರಾನ್ಸಿಸ್ಟರಗಳು ಅನ್ನು ಒಂದಕ್ಕೊಂದು "ಪೂರಕ"ವಾಗಿ ಬಳಸುವುದರಿಂದ ಈ "ರೀತಿ"ಗೆ CMOS ರೀತಿ ಅತ್ವ CMOS ತಂತ್ರಜ್ಞಾನ ಅನ್ನಬಹುದು.