ಸದಸ್ಯ:2240748gaganyc/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೮೪ ನೇ ಸಾಲು: ೮೪ ನೇ ಸಾಲು:


[[File:Paul Stark Sr. pays his respects at Luther Burbank's gravesite.jpg|Paul_Stark_Sr._pays_his_respects_at_Luther_Burbank's_gravesite]]
[[File:Paul Stark Sr. pays his respects at Luther Burbank's gravesite.jpg|Paul_Stark_Sr._pays_his_respects_at_Luther_Burbank's_gravesite]]























= <big>ಕ್ರಾಸುಲೇಸಿಯನ್ ಆಸಿಡ್ ಮೆಟಾಬಾಲಿಜಂ (ಸಿ.ಎ.ಎಂ)</big> =
[[ಚಿತ್ರ:Pineapple_(Ananas_comosus)_(2858289060).jpg|alt=Pineapple_(Ananas_comosus)_(2858289060)|border|thumb|300x300px|'ಅನಾನಸ್' ತಳಿಯ ಎಲೆಗಳು. ಇದು ಕ್ರಾಸ್ಸುಲೇಶಿಯನ್ ಆಸಿಡ್ ಮೆಟಾಬಾಲಿಸಮ್ ಅಥವಾ ಸಿ.ಎ.ಎಂ ದ್ಯುತಿಸಂಶ್ಲೇಷಣೆಯನ್ನು ನಡೆಸುವ ಪ್ರಮುಖ ಸಸ್ಯಗಳಲ್ಲಿ ಒಂದಾಗಿದೆ.]]
ಕ್ರಾಸುಲೇಸಿಯನ್ ಆಸಿಡ್ ಮೆಟಾಬಾಲಿಜಂ; ಇದು [[ಇಂಗಾಲೀಯ ರಸಾಯನಶಾಸ್ತ್ರ|ಇಂಗಾಲ]] ಫಿಕ್ಸೇಷನ್ ಮಾರ್ಗಗಳಲ್ಲಿ ಅತ್ಯಂತ ಸಮರ್ಥವಾದದ್ದು. ಈ ಮಾರ್ಗವು ಸಿ.ಎ.ಎಂ ದ್ಯುತಿಸಂಶ್ಲೇಷಣೆ ಎಂದೇ ಸುಪ್ರಸಿದ್ಧ.

ಇದರ ವಿಶೇಷತೆ ಏನೆಂದರೆ, ಇಂತಹ ಸಸ್ಯಗಳಲ್ಲಿ ಹಗಲಿನಲ್ಲಿ [[ದ್ಯುತಿಸಂಶ್ಲೇಷಣೆ]] ಮಾಡಬಹುದಾಗಿದ್ದು, ಆದರೆ ರಾತ್ರಿವೇಳೆ ಮಾತ್ರ ಅನಿಲಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತವೆ. ಇದು ಹೇಗೆ ಸಾಧ್ಯವೆಂದರೆ, ಎಲೆಗಳಲ್ಲಿರುವ ಸಣ್ಣ-ಸಣ್ಣ ಗಾತ್ರದ [[ಪತ್ರರಂಧ್ರ|ಪತ್ರರಂಧ್ರಗಳು]] [[ಬಾಷ್ಪೀಕರಣ|ಬಾಷ್ಪೀಕರಣವನ್ನು]] ಕಡಿಮೆ ಮಾಡಲು ಹಗಲಿನಲ್ಲಿ ಮುಚ್ಚಿರುತ್ತದೆ, ಆದರೆ [[ಇಂಗಾಲದ ಡೈಆಕ್ಸೈಡ್]]ಯನ್ನು ಸಂಗ್ರಹಿಸಲು ಮತ್ತು ಮೀಸೊಫಿಲ್ ಕೋಶಗಳಿಗೆ ಹರಡಲು ಅವು ರಾತ್ರಿಯಲ್ಲಿ ತೆರೆದುಕೊಳ್ಳುತ್ತವೆ. ಇಂಗಾಲದ ಡೈಆಕ್ಸೈಡ್ ಅನ್ನು ರಾತ್ರಿಯಲ್ಲಿ ವ್ಯಾಕ್ಯೂಲಿನ ಒಳಗೆ ನಾಲ್ಕು-[[ಇಂಗಾಲ]] ಮ್ಯಾಲಿಕ್ [[ಆಮ್ಲ|ಆಮ್ಲವಾಗಿ]] ಬದಲಾಯಿಸಿ ಅದನ್ನು ಸಂಗ್ರಹಿಸಲಾಗುತ್ತದೆ, ತದನಂತರ ಹಗಲಿನ ವೇಳೆಯಲ್ಲಿ ಮ್ಯಾಲೇಟ್ ಆಗಿ ಪರಿವರ್ತನೆಗೊಂಡು ಕ್ಲೋರೋಪ್ಲಾಸ್ಟ್ ಬಳಿ ತಲುಪುತ್ತದೆ. ಅಲ್ಲಿ ಅದನ್ನು ಮತ್ತೆ ಇಂಗಾಲದ ಡೈಆಕ್ಸೈಡ್ ಆಗಿ ಮರುರೂಪಾಂತರಿಸಲಾಗುತ್ತದೆ, ಇದನ್ನು ಹಗಲುವೇಳೆಯಲ್ಲಿ ನಡೆಯುವ ದ್ಯುತಿಸಂಶ್ಲೇಷಣೆಯ ಸಮಯದಲ್ಲಿ ಬಳಸಲಾಗುತ್ತದೆ.

ಈ ಕಾರ್ಯವಿಧಾನವನ್ನು ಮೊದಲು ಕ್ರಾಸ್ಸುಲೇಸಿ ಕುಟುಂಬದ ಸಸ್ಯಗಳಲ್ಲಿ ಕಂಡುಹಿಡಿದ ಕಾರಣ ಇದಕ್ಕೆ ಈ ಹೆಸರು ಬಂದಿದೆ<ref>https://www.britannica.com/plant/Crassulaceae</ref>.

== ಸಿ.ಎ.ಎಂ ಹೊಂದಿರುವ ಸಸ್ಯಗಳ ವರ್ಗೀಕರಣದ ವಿತರಣೆ: ==
{| class="wikitable"
|+
!ವಿಭಾಗ
!ವರ್ಗ
!ಆರ್ಡರ್
!ಫ್ಯಾಮಿಲಿ
!ಪ್ಲಾಂಟ್ ಟೈಪ್
!ಒಳಗೊಂಡಿರುವ ಕ್ಲೇಡ್
!ಚಿತ್ರಗಳು
|-
|ಲೈಕೋಪೊಡಿಯೋಫೈಟಾ
|ಐಸೊಟೊಪ್ಸಿಡಾ
|ಐಸೋಟೇಲ್ಸ್
|ಐಸೋಟೇಸಿಯೆ
|[[ಜಲವಾಸಿ ಸಸ್ಯಗಳು|ಹೈಡ್ರೋಫೈಟ್]]
|[[ಐಸೊಯೆಟೀಸ್]]
|[[ಚಿತ್ರ:Isoetes_lacustris_NRCS-4x3.jpg|alt=Isoetes_lacustris_NRCS-4x3|220x220px]]
|-
|[[ಪುಚ್ಛ ಸಸ್ಯಗಳು|ಪ್ಟೆರಿಡೋಫೈಟಾ]]
|[[ಜರೀಗಿಡ|ಪಾಲಿಪೊಡಿಯೊಪ್ಸಿಡಾ]]
|ಪಾಲಿಪೊಡಿಯಾಲ್ಸ್
|ಪಾಲಿಪೊಡಿಯಾಸಿಯೆ
|ಎಪಿಫೈಟ್, ಲಿಥೋಫೈಟ್
|ಪ್ಲಾಟಿಸೆರಿಯಂ, ಮೈಕ್ರೋಸೋರಂ ಮತ್ತು ಪೋಲಿಪೋಡಿಯಂ
|
[[File:Platycerium veitchii.jpg|Platycerium_veitchii|220x220px]]
|-
|ಗ್ನೆಟೊಫೈಟಾ
|ಗ್ನೆಟೊಪ್ಸಿಡಾ
|ವೆಲ್ವಿಟ್ಶಿಯಾಲ್ಸ್
|ವೆಲ್ವಿಟ್ಚಿಯಾಸಿಯೆ
|ಜೆರೋಫೈಟ್
|ವೆಲ್ವಿಟ್ಚಿಯಾ ಮಿರಾಬಿಲಿಸ್
|[[ಚಿತ್ರ:Welwitschia_at_Ugab_River_basin.jpg|alt=ವೆಲ್ವಿಟ್ಚಿಯಾ ಮಿರಾಬಿಲಿಸ್|220x220px]]
|-
|ಮ್ಯಾಗ್ನೋಲಿಯೋಫೈಟಾ
|ಮ್ಯಾಗ್ನೋಲಿಡ್ಸ್
|ಮ್ಯಾಗ್ನೋಲಿಯೆಲ್ಸ್
|ಪೈಪೆರೇಸಿಯೆ
|ಎಪಿಫೈಟ್
|ಪೆಪೆರೋಮಿಯಾ ಕ್ಯಾಂಪ್ಟೋಟ್ರಿಚಾ
|[[ಚಿತ್ರ:Peperomia_camptotricha_kz02.jpg|alt=ಪೆಪೆರೋಮಿಯಾ ಕ್ಯಾಂಪ್ಟೋಟ್ರಿಚಾ|220x220px]]
|}

== ಚಕ್ರದ ಎರಡು ಭಾಗಗಳ ==

==== <big>ರಾತ್ರಿವೇಳೆ:</big> ====
[[ಚಿತ್ರ:Light_Dependent_Cyclic_Reactions.gif|alt=Light_Dependent_Cyclic_Reactions|left|thumb|125x125px|ಬೆಳಕು-ಅವಲಂಬಿತ ಕ್ರಿಯೆ]] [[ಚಿತ್ರ:Calvin_cycle_background.svg|alt=Calvin_cycle_background|thumb|150x150px|ಕ್ಯಾಲ್ವಿನ್ ಚಕ್ರ]]
[[ಪತ್ರರಂಧ್ರ|ಪತ್ರರಂಧ್ರಗಳು]] ರಾತ್ರಿಯಲ್ಲಿ ತೆರೆದಿರುತ್ತವೆ ಇದರಿಂದಾಗಿ ಇಂಗಾಲದ ಡೈಆಕ್ಸೈಡ್ ಇದರ ಮೂಲಕ ಒಳಗೆ ಪ್ರವೇಶಿಸುತ್ತದೆ, ತದನಂತರ ಪೆಪ್ ಕ್ರಿಯೆಯನ್ನು ಬಳಸಿಕೊಂಡು ಸಾವಯವ ಆಮ್ಲಗಳಾಗಿ ಪರಿವರ್ತನೆಗೊಳ್ಳುತ್ತದೆ. ಈ ಆಮ್ಲಗಳನ್ನು<ref>[https://www.sciencedirect.com/topics/agricultural-and-biological-sciences/light-dependent-reactions#:~:text=Light%2Ddependent%20reactions%20happen%20in,chemical%20energy%20during%20these%20reactions. https://www.sciencedirect.com/topics/agricultural-and-biological-sciences/light-dependent-reactions#:~:text=Light%2Ddependent%20reactions%20happen%20in,chemical%20energy%20during%20these%20reactions.]</ref> ಹಗಲುವೇಳೆಯ ಕ್ರಿಯೆಗೆ ಬಳಕೆ ಮಾಡಿಕೊಳ್ಳಲು ನಿರ್ವಾತಗಳಲ್ಲಿ ಸಂಗ್ರಹಿಸಲಾಗುತ್ತದೆ. ಇದು ರಾತ್ರಿವೇಳೆ ಪೂರ್ತಿಯಾಗಿ ನಡೆಯದಿರಲು ಕಾರಣವೇನೆಂದರೆ ಕ್ಯಾಲ್ವಿನ್ ಚಕ್ರವು [[ಅಡೆನೋಸೀನ್ ಟ್ರೈಫಾಸ್ಫೇಟ್ (ಎ ಟಿ ಪಿ)]] ಮತ್ತು ಎನ್.ಎ.ಡಿ.ಪಿ.ಹೆಚ್ ಇಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಎ.ಟಿ.ಪಿ ಮತ್ತು ಎನ್.ಎ.ಡಿ.ಪಿ.ಹೆಚ್, ಇವುಗಳು ಬೆಳಕು-ಅವಲಂಬಿತ ಕ್ರಿಯೆಯ ಉತ್ಪನ್ನಗಳಾಗಿವೆ ಹಾಗು ಈ ಕ್ರಿಯೆ ರಾತ್ರಿವೇಳೆ ನಡೆಯುವುದಿಲ್ಲ.

==== <big>ಹಗಲುವೇಳೆ:</big> ====
ಹಗಲಿನಲ್ಲಿ, ನೀರು ಆವಿಯಾಗದಿರಲು [[ಪತ್ರರಂಧ್ರ|ಪತ್ರರಂಧ್ರವು]] ಮುಚ್ಚುವುದು ಹಾಗು ಸಂಗ್ರಹವಾಗಿರುವ ಆಮ್ಲಗಳನ್ನು ವ್ಯಾಕ್ಯೂಲಗಳಿಂದ ಮೆಸೊಫಿಲ್ ಕೋಶಗಳಿಗೆ  ಸಾಗಿಸುಲಾಗುತ್ತದೆ. ಕ್ಲೋರೊಪ್ಲಾಸ್ಟಗಳ ಸ್ಟ್ರೋಮಾದಲ್ಲಿರುವ ಕಿಣ್ವವು ಇಂಗಾಲದ ಡೈಆಕ್ಸೈಡ್ ಅನ್ನು ಸಾವಯವ ಆಮ್ಲಗಳಿಂದ ಬಿಡುಗಡೆ ಮಾಡುವಂತೆ ಮಾಡುತ್ತವೆ. ಈಗ ಬಿಡುಗಡೆಯಾದ ಇಂಗಾಲದ ಡೈಆಕ್ಸೈಡ್ ಕ್ಯಾಲ್ವಿನ್ ಚಕ್ರಕ್ಕೆ ಪ್ರವೇಶಿಸಿ ದ್ಯುತಿಸಂಶ್ಲೇಷಣೆಯನ್ನು ಪೂರ್ಣಗೊಳ್ಳಿಸುತ್ತದೆ.

== ಜೀವರಸಾಯನಶಾಸ್ತ್ರ ==
[[ಚಿತ್ರ:CAM-corrected.png|alt=CAM-corrected|left|thumb|500x500px]]
<ref>https://www.acs.org/careers/chemical-sciences/areas/biochemistry.html</ref>ಹಗಲುವೇಳೆಯಲ್ಲಿ ಸಿ.ಎ.ಎಂ ಅನ್ನು ಬಳಸುವ ಸಸ್ಯಗಳು ತಮ್ಮಲ್ಲಿ ಜೋಡಿಯಾಗಿರುವ ಕಾವಲು ಕೋಶಗಳನ್ನು ಮುಚ್ಚುತ್ತವೆ ಹಾಗು ಕ್ಲೋರೋಪ್ಲಾಸ್ಟಗಳಿಗೆ ಮ್ಯಾಲೇಟ್ ಯನ್ನು ಸಾಗಿಸಲಾಗುತ್ತದೆ. ಇದನ್ನು ಪೈರುವೇಟ್ ಮತ್ತು ಇಂಗಾಲದ ಡೈಆಕ್ಸೈಡ್ ಆಗಿ ಮ್ಯಾಲಿಕ್ ಕಿಣ್ವದಿಂದ ಅಥವಾ ಪಿ.ಈ.ಪಿ ಕಾರ್ಬಾಕ್ಸಿ ಕೈನೇಸ್ ಸಹಾಯದಿಂದ ವಿಭಜಿಸಲಾಗುತ್ತದೆ. ನಂತರ ಇಂಗಾಲದ ಡೈಆಕ್ಸೈಡ್ ಅನ್ನು ಕ್ಯಾಲ್ವಿನ್ ಸೈಕಲ್‌ಗೆ ವರ್ಗಾಯಿಸಲಾಗುತ್ತದೆ. ಉಪ-ಉತ್ಪನ್ನವಾಗಿ ದೊರೆತ ಪೈರುವೇಟ್ ಅನ್ನು [[ಮೈಟೋಕಾಂಡ್ರಿಯನ್|ಮೈಟೋಕಾಂಡ್ರಿಯದ]] ಸಿಟ್ರಿಕ್ ಆಸಿಡ್ ಚಕ್ರದಲ್ಲಿ ಮತ್ತಷ್ಟು ಅವನತಿಸಲಾಗುತ್ತದೆ, ಇದರಿಂದಾಗಿ ಕ್ಯಾಲ್ವಿನ್ ಸೈಕಲ್‌ಗೆ ಇನ್ನಷ್ಟು ಹೆಚ್ಚು ಇಂಗಾಲದ ಡೈಆಕ್ಸೈಡ್ ಒದಗಿಸುತ್ತದೆ.

ಮುಂಬರುವ ತಂಪಾದ ರಾತ್ರಿಯಲ್ಲಿ, ಪಿ.ಈ.ಪಿ ಅನ್ನು ಅಂತಿಮವಾಗಿ ಕೋಶ ದ್ರವದೊಳಗೆ ವರ್ಗಾಯಿಸಿ, ಅಲ್ಲಿ ಅದನ್ನು ಮ್ಯಾಲೇಟ್ ಮುಖಾಂತರ ಇಂಗಾಲ - ಫಿಕ್ಸೇಷನ್ ಮುಗಿಸುತ್ತದೆ.

ಕಡಿಮೆ ತಾಪಮಾನವಿದಲ್ಲಿ ಸಿ.ಎ.ಎಂ ಅನ್ನು ಬಳಸುವ ಸಸ್ಯಗಳು ತಮ್ಮ [[ಪತ್ರರಂಧ್ರ|ಪತ್ರರಂಧ್ರವನ್ನು]] ತೆರೆದು ಇಂಗಾಲದ ಡೈಆಕ್ಸೈಡ್ ಸ್ಪಂಜಿನಂಥ ಮೆಸೊಫಿಲ್‌ನ ಅಂತರಕೋಶೀಯ ಜಾಗಗಳಲ್ಲಿ [[ಪ್ರಸರಣೆ|ಪ್ರಸರಣಿಸಿ]] ಇದು ಪೂರ್ತಿ ತುಂಬಿದಲ್ಲಿ  ಕೋಶ ದ್ರವದೊಳಗೆ ಹರಡುತ್ತವೆ.

== [[ಜಲವಾಸಿ ಸಸ್ಯಗಳು|ಜಲವಾಸಿ ಸಸ್ಯಗಳಲ್ಲಿ]] ಸಿ.ಎ.ಎಂ ==
ಈ ಸಸ್ಯಗಳು ಕೂಡ ಭೂಮಿ ಮೇಲೆ ಬೆಳೆಯುವ ಸಿ.ಎ.ಎಂ ವುಳ್ಳ ಸಸ್ಯಗಳಂತೆಯೆ ರಾತ್ರಿ ಆಮ್ಲದ ಶೇಖರಣೆ ಮತ್ತು ಹಗಲಿನಲ್ಲಿ ಡಿ-ಅಸಿಡಿಫಿಕೇಶನ್ ಅನ್ನು ಅನುಸರಿಸುತ್ತವೆ.

ಜಲಸಸ್ಯಗಳಲ್ಲಿ ಸಿ.ಎ.ಎಂ ಗೆ ಕಾರಣ ಏನೆಂದರೆ, ಲಭ್ಯವಿರುವ ನೀರಿನ ಕೊರತೆಯಿಂದಲ್ಲ, ಆದರೆ ಇಂಗಾಲದ ಡೈಆಕ್ಸೈಡ್ ನ ಸೀಮಿತ ಪೂರೈಕೆಯಿಂದಾಗಿ. ನೀರಿನಲ್ಲಿ  ಇಂಗಾಲದ ಡೈಆಕ್ಸೈಡ್ ಬಹಳ ನಿಧಾನವಾಗಿ ಪ್ರಸರಣವಾಗುವ ಕಾರಣದಿಂದಾಗಿ ಸೀಮಿತವಾಗಿದೆ (ಗಾಳಿಗಿಂತ  ೧೦೦೦೦x ನಿಧಾನವಾಗಿರುತ್ತದೆ). ಅಮ್ಲ ಪಿ.ಹೆಚ್ ಅಡಿಯಿಂದ ಸಮಸ್ಯೆ ಇನ್ನೂ ಕಠಿಣ ಮತ್ತು ತೀವ್ರವಾಗುತ್ತದೆ, ಯಾಕೆಂದರೆ ಅಜೈವಿಕ ಇಂಗಾಲಿಗೆ ಕೇವಲ ಇಂಗಾಲದ ಡೈಆಕ್ಸೈಡ್ ಲಭ್ಯವಿರುವಿರುವುದು ಆದರೆ ಬೈಕಾರ್ಬನೇಟ್ ಅಥವಾ ಕಾರ್ಬೋನೇಟ್ ಲಭ್ಯವಿರುವುದಿಲ್ಲ.

ಬೇರೆ ದ್ಯುತಿಸಂಶ್ಲೇಷಕ ಸಸ್ಯಗಳಿಂದ ರಾತ್ರಿವೇಳೆ ಸ್ಪರ್ಧೆ ಇಲ್ಲದ ಕಾರಣ ಜಲವಾಸಿ ಸಿ.ಎ.ಎಂ ವುಳ್ಳ ಸಸ್ಯಗಳು ರಾತ್ರಿಯಲ್ಲಿ ಇಂಗಾಲದ ಡೈಆಕ್ಸೈಡ್ ಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೆರೆಹಿಡಿಯುತ್ತವೆ. ದ್ಯುತಿಸಂಶ್ಲೇಷಕದಿಂದ ಉತ್ಪತ್ತಿಯಾಗುವ ಬಹಳ ಕಡಿಮೆ ಆಮ್ಲಜನಕದ ಕಾರಣದಿಂದಾಗಿ ಸಸ್ಯಗಳ ದ್ಯುತಿ ಉಸಿರಾಟ ಕೂಡ ಕಡಿಮೆ ಮಾಡಿಕೊಳ್ಳುತ್ತದೆ<ref>[https://pubs.usgs.gov/publication/70021106#:~:text=Aquatic%20CAM%20plants%20inhabit%20sites,CO2%20levels%20in%20these%20habitats. https://pubs.usgs.gov/publication/70021106#:~:text=Aquatic%20CAM%20plants%20inhabit%20sites,CO2%20levels%20in%20these%20habitats.]</ref>.

== ಉಲ್ಲೇಖನಗಳು ==
<references />

೨೩:೩೧, ೧೪ ಮಾರ್ಚ್ ೨೦೨೪ ನಂತೆ ಪರಿಷ್ಕರಣೆ

ಲೂಥರ್ ಬರ್ಬ್ಯಾಂಕ್

ಲೂಥರ್ ಬರ್ಬ್ಯಾಂಕ್, ಇವರು ಅಮೆರಿಕನ್ ಸಸ್ಯಶಾಸ್ತ್ರಜ್ಞ ಮತ್ತು ತೋಟಗಾರಿಕಾಶಾಸ್ತ್ರಜ್ಞರಾಗಿದ್ದರು. ಕೃಷಿ ವಿಜ್ಞಾನದಲ್ಲಿ ಪ್ರವರ್ತಕರಾದ ಇವರು ತಮ್ಮ ೫೫ ವರ್ಷಗಳ ವೃತ್ತಿಜೀವನದಲ್ಲಿ ೮೦೦ಕ್ಕೂ ಹೆಚ್ಚು ತಳಿಗಳು ಮತ್ತು ಅನೇಕ ಪ್ರಭೇದಗಳನ್ನು ವಿಕಸನೆಗೊಳಿಸಿದ್ದಾರೆ. ಈ ಪಟ್ಟಿಯಲ್ಲಿ ಹಲವಾರು ಹಣ್ಣುಗಳು, ಹೂವುಗಳು, ಧಾನ್ಯಗಳು, ಹುಲ್ಲುಗಳು ಮತ್ತು ತರಕಾರಿಗಳು ಸೇರಿವೆ. ಸ್ಪೈನ್‌ಗಳಿಲ್ಲದ ಕಳ್ಳಿ, ಪ್ಲಮ್‌ಕಾಟ್ ಮತ್ತು ಮುಂತಾದ ಹೈಬ್ರಿಡ್ ಸಸ್ಯಗಳ ಅಭಿವೃದ್ಧಿಗೆ ಸೃಷ್ಟಿಕರ್ತರು.

Luther_Burbank_on_the_Steps_of_his_Cabin_at_Sebastopol

ಬರ್ಬ್ಯಾಂಕ್‌ನ ಯಶಸ್ವಿ ಕಂಡ ತಳಿಗಳ ನಡುವೆ ಪ್ರಮುಖವಾದದ್ದು ಶಾಸ್ತಾ ಡೈಸಿ, ಫೈಯರ್ ಪೊಪ್ಪಿ, ದಿ ಫ್ಲೇಮಿಂಗ್ ಗೋಲ್ಡ್ ಮತ್ತು ಮುಂತಾದವು. ತಳೀಯವಾಗಿ ಭಿನ್ನವಾಗಿದ್ದ ಬರ್ಬ್ಯಾಂಕ್ ಆಲೂಗಡ್ಡೆ, ಇದು ರಸ್ಸೆಟ್ ಬಣ್ಣದ ಚರ್ಮ ಹೊಂದಿದ್ದು ನಂತರದ ದಿನಗಳಲ್ಲಿ ಇದಕ್ಕೆ ರಸ್ಸೆಟ್ ಬರ್ಬ್ಯಾಂಕ್ ಆಲೂ ಎಂದು ಹೆಸರು ಬಂತು.ಈ ಆಲೂಗಡ್ಡೆ ಆಹಾರ ಸಂಸ್ಕರಣೆಯಲ್ಲಿ ವಿಶ್ವದ ಪ್ರಮುಖ ಆಲೂಗಡ್ಡೆಯಾಗಿದೆ. ರಸ್ಸೆಟ್ ಬರ್ಬ್ಯಾಂಕ್ ಆಲೂಗಡ್ಡೆಯನ್ನು ವಾಸ್ತವವಾಗಿ ಮಹಾ ಕ್ಷಾಮದ ನಂತರ ಐರ್ಲೆಂಡ್‌ನಲ್ಲಿನ ವಿನಾಶಕಾರಿ ಪರಿಸ್ಥಿತಿಯಿಂದ ಹೊರಬರಲು ಕಂಡುಹಿಡಿಯಲಾಗಿತ್ತು. ಈ ಆಲೂವಿನ ವಿಶಿಷ್ಟ ಲಕ್ಷಣವೆಂದರೆ ಲೇಟ್ ಬ್ಲೈಟ್ ರೋಗ ನಿರೋಧಕವಾಗಿದೆ. Potatoes

ಲೂಥರ್ ಬರ್ಬ್ಯಾಂಕ್ ಅವರು ಜನಿಸಿದ್ದು ಮಾರ್ಚ್ ೭ ೧೭೪೯, ಅಂದು ಕ್ಯಾಲಿಫೋರ್ನಿಯಾದ ಆರ್ಬರ್ ಡೇ ಎಂದು ಅವರ ಗೌರವಾರ್ಥವಾಗಿ ಆಚರಿಸಲಾಗುತ್ತದೆ.

ಜೀವನ ಮತ್ತು ಕೆಲಸ

ಲೂಥರ್ ಬರ್ಬ್ಯಾಂಕ್ ಮ್ಯಾಸುಚುಸೆಟ್ಸ್‌ನ ಲ್ಯಾನಕಾಸ್ಟರ್‌ನಲ್ಲಿ ಜನಿಸಿದರು. ಅಲ್ಲಿದ್ದ ಲ್ಯಾನಕಾಸ್ಟರ್‌ ಕೌಂಟಿ ಅಕಾಡೆಮಿಯಲ್ಲಿ ಪ್ರೌಢಶಾಲಾ ವರೆಗು ಶಿಕ್ಷಣವನ್ನು ಪಡೆದರು. ತನ್ನ ತಾಯಿ ನೊಡಿಕೊಳ್ಳುತ್ತಿದ್ದ ತೋಟದಲ್ಲಿ ಹೂವಿನ ಸಸ್ಯಗಳನ್ನು ನೋಡುತ್ತ ಆನಂದಿಸಿತ್ತಿದ್ದರು. ಅವರು ೧೮ ವರ್ಷ ಪ್ರಾಯದಲ್ಲಿ ಅವರ ತಂದೆಯನ್ನು ಕಳೆದುಕೊಂಡರು. ಪಿತ್ರಾರ್ಜಿತವನ್ನು ಬಳಸಿ ಲುನೆನ್‌ಬರ್ಗ್ ಬಳಿ ೧೭ ಎಕರೆ ಜಮೀನನ್ನು ಖರೀದಿಸಿದರು. ಇಲ್ಲಿಯೆ ಅವರು ಬರ್ಬ್ಯಾಂಕ್ ಆಲೂಗಡ್ಡೆಯನ್ನು ಅಭಿವೃದ್ಧಿಪಡಿಸಿದರು ಹಾಗು ಆಲೂಗೆಡ್ಡೆಯ ಹಕ್ಕನ್ನು $೧೫೦ ಕ್ಕೆ ಮಾರಾಟ ಮಾಡಿ ಬಂದ ಹಣದಲ್ಲಿ ಕ್ಯಾಲಿಫೋರ್ನಿಯಾದ ಸೆಂಟಾ ರೋಸಾಗೆ ಪ್ರಯಾಣಿಸಿದರು. ನಂತರ, ಇವರ ಸಾಮಾನ್ಯ ಸಸ್ಯಕ ಪ್ರಯೋಗಗಳಿಂದ ರಸ್ಸೆಟೆಡ್ ಚರ್ಮವನ್ನು ಆಯ್ಕೆಮಾಡಿ ಅದಕ್ಕೆ ರಸ್ಸೆಟ್ ಬರ್ಬ್ಯಾಂಕ್ ಆಲೂಗಡ್ಡೆ ಎಂದು ಹೆಸರಿಡಲಾಯಿತು. ಪ್ರಸ್ತುತ ಇಂದು ರಸ್ಸೆಟ್ ಬರ್ಬ್ಯಾಂಕ್ ಆಲೂಗೆಡ್ಡೆಯು ಯುನೈಟೆಡ್ ಸ್ಟೇಟ್ಸ್ನಲ್ಲಿ ವ್ಯಾಪಕವಾಗಿ ಬೆಳೆಯುವ ಬೆಳೆಗಳಲ್ಲಿ ಒಂದಾಗಿದೆ. ಈ ಆಲೂಗಡ್ಡೆ ವಿಶಿಷ್ಟ ಹಾಗು ಜನಪ್ರಿಯವಾಗಲು ಕಾರಣವೇನೆಂದರೆ ಇದು ಇತರೆ ವಿಧದ ಆಲೂಗಡ್ಡೆಗಳಂತೆ ಸುಲಭವಾಗಿ ಕೆಡುವುದಿಲ್ಲ. ಮೆಕ್ಡೊನಾಲ್ಡ್ಸ್ ಫ್ರೆಂಚ್ ಫ್ರೈಸ್ ಹೆಚ್ಚಿನ ಶೇಕಡಾವಾರು ಈ ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ.

Luther_Burbank_1900_Papaver

ಸೆಂಟಾ ರೋಸಾದಲ್ಲಿ, ಬರ್ಬ್ಯಾಂಕ್ ೪ ಎಕರೆ ಭೂಮಿಯನ್ನು ಖರೀದಿಸಿ ಅಲ್ಲಿ ಗಾಜಿನ ಮನೆ, ನರ್ಸರಿ ಮತ್ತು ಪ್ರಾಯೋಗಿಕ ಜಾಗಗಳನ್ನು ಸ್ಥಾಪಿಸಿದರು., ಅವರು ಅಲ್ಲಿಯೆ ಸಸ್ಯಗಳ ಮೇಲೆ ಕ್ರಾಸ್ ಬ್ರೀಡಿಂಗ್ ಪ್ರಯೋಗಗಳನ್ನು ನಡೆಸುತ್ತಿದ್ದರು. ಅವರು ಚಾರ್ಲ್ಸ್ ಡಾರ್ವಿನ್ ಅವರ "ದ ವೇರಿಯೇಶನ್ ಆಫ್ ಅನಿಮಲ್ಸ್ ಅಂಡ್ ಪ್ಲಾಂಟ್ಸ್ ಅಂಡರ್ ಡೊಮೆಸ್ಟಿಕೇಶನ್" ನಿಂದ ಪ್ರೇರಿತರಾಗಿದ್ದರು.

ಬರ್ಬ್ಯಾಂಕ್ ತನ್ನ ಸಸ್ಯದ ಕ್ಯಾಟಲಾಗ್‌ಗಳ ಮೂಲಕ ಚಿರಪರಿಚಿತರಾದರು, ಅತ್ಯಂತ ಪ್ರಸಿದ್ಧವಾದದ್ದು ಎಂದರೆ ೧೮೯೩ರ "ನ್ಯೂ ಕ್ರಿಯೇಷನ್ಸ್ ಇನ್ ಫ಼್ರೂಟ್ಸ್ ಅಂಡ್ ಫ಼್ಲವರ್ಸ" ಇದಲ್ಲದೆ ತೃಪ್ತ ಗ್ರಾಹಕರ ಬಾಯಿ ಮಾತಿನ ಮೂಲಕ ಹಾಗೂ ಪತ್ರಿಕಾ ವರದಿಗಳು ಅವರನ್ನು ಮೊದಲ ದಶಕದುದ್ದಕ್ಕೂ ಸುದ್ದಿಯಲ್ಲಿಟ್ಟ ಕಾರಣಕ್ಕೆ.

ಜೀರ್ಣಾಂಗವ್ಯೂಹದ ತೊಂದರೆಗಳು ಮತ್ತು ನಿರಂತರ ಹಿಂಸಾತ್ಮಕ ಬಿಕ್ಕಳಿಸುವಿಕೆಯು ಲೂಥರ್ ಅವರನ್ನು ದುರ್ಬಲಗೊಳಿಸಿತ್ತು, ಕೊನೆಗೆ ಹೃದಯಾಘಾತದಿಂದ ನಿಧನರಾದರು. ಏಪ್ರಿಲ್ ೧೧, ೧೯೨೬ ರಂದು ಅವರು ಮರಣಿಸಿದಾಗ ಅವರ ಹಾಸಿಗೆಯ ಬಳಿ ಅವರ ಪತ್ನಿ ಎಲಿಜ಼ಬೆತ್ ಮತ್ತು ಅವರ ಸಹೋದರಿ ಇದ್ದರು. ಇವರ ದೇಹವನ್ನು ಕ್ಯಾಲಿಫೋರ್ನಿಯಾದ ಸೆಂಟಾ ರೋಸಾದಲ್ಲಿನ 'ಲೂಥರ್ ಬರ್ಬ್ಯಾಂಕ್ ಹೋಮ್ ಮತ್ತು ಗಾರ್ಡನ್ಸ್‌ನಲ್ಲಿ' ದೈತ್ಯ ಸೀಡರ್ ನ ಅಡಿಯಲ್ಲಿ ಗುರುತು ಹಾಕದ ಸಮಾಧಿಯಲ್ಲಿ ಸಮಾಧಿ ಮಾಡಿದರು.

ಬರ್ಬ್ಯಾಂಕ್ ಅವರ ಜೀವನವು ಕೊನೆಗೊಳ್ಳುತ್ತಿದ್ದಂತೆ, ಅವರ ಕೆಲಸವನ್ನು ಯಾರು ಮುಂದುವರಿಸುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿತು ಮತ್ತು ಸ್ವಾಭಾವಿಕವಾಗಿ ಅನೇಕರು ಆಸಕ್ತಿ ಹೊಂದಿದ್ದರು. ಏಪ್ರಿಲ್ ೧೯೨೬ ರಲ್ಲಿ ಅವರು ಮರಣ ಹೊಂದುವ ಮೊದಲು, ತನ್ನ ಹೆಂಡತಿಯೊಂದಿಗೆ "ನನಗೆ ಏನಾದರೂ ಆದರೆ, ನೀವು ವ್ಯವಹಾರ ಮತ್ತು ಕೆಲಸವನ್ನು ವಿಲೇವಾರಿ ಮಾಡುವುದು ಸರಿ, ಏಕೆಂದರೆ ನೀವು ಅದನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಜಗತ್ತಿನಲ್ಲಿ ಯಾವುದೆ ಸಂಸ್ಥೆಗಳು ಇಂಥಃ ಕೆಲಸವನ್ನು ಮುಂದುವರಿಯಲು ಸಜ್ಜುಗೊಂಡಿಲ್ಲ, ಆದರೆ ಒಂದೇ ಒಂದು ಇದೆ ಎಂದು ನಾನು ಭಾವಿಸುತ್ತೇನೆ, ಅದು ಇನ್ನು ಹೆಚ್ಚಿನದನ್ನು ಮಾಡಬಹುದು." ಹೇಳಿದರು. ಅವರು ಕೆಲಸವನ್ನು ಮುಂದುವರಿಸಲು 'ಸ್ಟಾರ್ಕ್ ಬ್ರೋಸ್ ನರ್ಸರಿಗಳು ಮತ್ತು ಆರ್ಚರ್ಡ್ಸ್ ಕೋ,' ಎಂದು ಹೆಸರಿಸಿದರು.

ಬರ್ಬ್ಯಾಂಕ್ ತಳಿಗಳು

ನೂರಾರು ಹೊಸ ಪ್ರಭೇದಗಳ ಹಣ್ಣುಗಳನ್ನು (ಪ್ಲಮ್, ಪೇರಳೆ, ಒಣದ್ರಾಕ್ಷಿ, ಪೀಚ್, ಬ್ಲಾಕ್ಬೆರ್ರಿ, ರಾಶ್ಬೆರಿ); ಆಲೂಗಡ್ಡೆ, ಟೊಮೇಟೊ; ಅಲಂಕಾರಿಕ ಹೂವುಗಳು ಮತ್ತು ಇತರ ಸಸ್ಯಗಳನ್ನು ಸೃಷ್ಟಿಸಿದರು.

ಹಣ್ಣುಗಳ ಪ್ರಭೇದಗಳ ಸಂಖ್ಯೆ

೧೧೩ ಪ್ಲಮ್ ಮತ್ತು ಒಣದ್ರಾಕ್ಷಿ

Luther_Burbank_Spineless_Cactus

೬೯ ನಟ್ಸ್

೩೫ ಹಣ್ಣು ಕೊಡುವ ಕಳ್ಳಿ

೧೬ ಬ್ಲ್ಯಾಕ್ಬೆರಿ

೧೩ ರಾಶ್ಬೆರಿ

೧೧ ಕ್ವಿನ್ಸ್

೧೧ ಪ್ಲಮ್‌ಕಾಟ್‌

೧೦ ಚೆರ್ರಿ

೧೦ ಸ್ಟ್ರಾಬೆರಿ

೧೦ ಸೇಬು

೮ ಪೀಚ್

೬ ಚೆಸ್ಟ್ನಟ್

೪ ದ್ರಾಕ್ಷಿ

೪ ಪೇರಳೆ

Luther_Burbank_-_Sweet_Lemon

೩ ವಾಲ್ ನಟ್ಸ್

೨ ಅಂಜೂರ

೧ ಬಾದಾಮಿ

ಇತರ ಸಸ್ಯಗಳ ಪ್ರಭೇದಗಳ ಸಂಖ್ಯೆ

೯ ಧಾನ್ಯಗಳು, ಹುಲ್ಲುಗಳು, ಮೇವು

೨೬ ತರಕಾರಿ

೯೧ ಅಲಂಕಾರಿಕ ಸಸ್ಯ

ಅವರ ಕೆಲಸದ ವಿಧಾನಗಳ ಬಗ್ಗೆ ಎಲ್ಲರಿಗು ಸುಲಭವೆಂದು ತೋರುತ್ತದೆ ಆದರೆ ಅದನ್ನು ನಿರ್ವಹಿಸಲು ಬಂದಾಗ, ಅದು ಕಷ್ಟಕರವೆಂದು ತಿಳಿದುಬರುತ್ತದೆ. ಪ್ರತಿ ಸಲ ಅವರು ಒಂದು ಪ್ರಭೇದದ ೧೦೦೦೦ ಅಥವಾ ಅದಕ್ಕಿಂತ ಹೆಚ್ಚು ಸಸ್ಯಗಳನ್ನು ಬೆಳೆಸುತ್ತಾರೆ, ಅದರಲ್ಲಿ ಅವರು ಗರಿಷ್ಠ ೫೦ ಅಥವಾ ಕನಿಷ್ಠ ೧ ಮೊಳಕೆ ಆಯ್ಕೆ ಮಾಡುತ್ತಿದ್ದರು. ಆಯ್ದ ಸಸ್ಯಗಳಿಂದ, ಅವರು ಇನ್ನೂ ೧೦೦೦೦ ಮೊಳಕೆಗಳನ್ನು ಅವರು ಬಯಸಿದ ಫಲಿತಾಂಶಗಳನ್ನು ಸಾಧಿಸುವವರೆಗೆ ಬೆಳೆಸುತ್ತಿದ್ದರು. ಇವರ ಈ ಪ್ರಯತ್ನದಿಂದಾಗಿ ಸಾಮಾನ್ಯವಾಗಿ ೨೫ ವರ್ಷಗಳನ್ನು ನಂತರ ಫಲ ಕೊಡುತ್ತಿದ್ದ ಚೆಸ್ಟ್ನಟ್ ಮರಗಳು ಈಗ ಕೇವಲ ಮೂರು ವರ್ಷಗಳ ನಂತರ ಫಲವನ್ನು ಕೊಡುತ್ತವೆ. ಒಳಗಿನ ಬೀಜಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿರುವ ಬಿಳಿ ಬ್ಲ್ಯಾಕ್‌ಬೆರಿ, ವಿಶ್ವದಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿರುವ ರಸಭರಿತವಾದ ಮತ್ತು ದೊಡ್ಡ ಪ್ಲಮ್, ಸ್ಪೈನ್ಗಳಿಲ್ಲದ ಕಳ್ಳಿ, ಸುವಾಸನೆಯ ವಾಸನೆಯನ್ನು ಹೊಂದಿರುವ ಕೆಲ್ಲಾ ಲಿಲ್ಲಿ ಹೀಗೆ ಮುಂತಾದವು ಇವರ ಸೃಷ್ಟಿಗಳು.

ಪ್ರಕಟಣೆಗಳು

ಬರ್ಬ್ಯಾಂಕ್ ಅವರು ಕೆಲ ವಿಜ್ಞಾನಿಗಳಿಂದ ಟೀಕೆಗೆ ಗುರಿಯಾದರು ಏಕೆಂದರೆ ಅವರು ವೈಜ್ಞಾನಿಕ ಸಂಶೋಧನೆಯಲ್ಲಿ ರೂಢಿಯಲ್ಲಿರುವಂತೆ ದಾಖಲೆಗಳನ್ನು ಇಟ್ಟುಕೊಂಡಿರಲಿಲ್ಲ ಯಾಕೆಂದರೆ ಸಸ್ಯಗಳ ಮೇಲೆ ಸಂಶೋಧನೆ ಮಾಡುವುದಕ್ಕಿಂತ ಉಪಯುಕ್ತ ಸಸ್ಯಗಳ ತಳಿಗಳನ್ನು ಉತ್ಪಾದಿಸುವುದು ಅವರ ಮುಖ್ಯ ಆಸಕ್ತಿಯಾಗಿತ್ತು. ಪರ್ಡ್ಯೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೂಲ್ಸ್ ಜಾನಿಕ್, ೨೦೦೪ ರ 'ವರ್ಲ್ಡ್ ಬುಕ್ ಎನ್ಸೈಕ್ಲೋಪೀಡಿಯಾದಲ್ಲಿ' "ಬರ್ಬ್ಯಾಂಕ್ ಅನ್ನು ಶೈಕ್ಷಣಿಕ ಅರ್ಥದಲ್ಲಿ ವಿಜ್ಞಾನಿ ಎಂದು ಪರಿಗಣಿಸಲಾಗುವುದಿಲ್ಲ." ಎಂದು ಬರೆದಿದ್ದಾರೆ.

Burbank Cherries

The particular cherries here shown have been shipped twice across continent before this photograph was taken. Note, in addition to the large size of the Burbank cherry, the uniformity of size, and the almost cubical form, making it an ideal cherry for packing. The particular cherry here shown is one that bears the name of Burbank. It was one of the first cherries introduced by Mr. Burbank, and is still one of the best. Luther_Burbank_-_Burbank_cherries

ವೈಯಕ್ತಿಕ ಜೀವನ

ಬರ್ಬ್ಯಾಂಕ್ ರವರನ್ನು ತೋಟಗಾರಿಕೆ ಕೌಶಲ್ಯಕ್ಕಾಗಿ ಮಾತ್ರವಲ್ಲದೆ ಅವರ ನಮ್ರತೆ, ಔದಾರ್ಯ ಮತ್ತು ದಯೆಯ ಮನೋಭಾವಕ್ಕಾಗಿ ಕೂಡ ಪ್ರಶಂಸೆಗಳಿಸಿದ್ದಾರೆ. ಅವರು ಶಿಕ್ಷಣದಲ್ಲಿ ಬಹಳ ಆಸಕ್ತಿ ಹಾಗೂ ಪ್ರಾಮುಖ್ಯತೆ ತಿಳಿದಿದ್ದರು, ಅದಕ್ಕೆ ಸ್ಥಳೀಯ ಶಾಲೆಗಳಿಗೆ ಹಣವನ್ನು ನೀಡಿ ಬಡ ಮಕ್ಕಳಿಗೆ ಸಹಾಯವಾಗುತ್ತಿದ್ದರು.

ಅವರು ಎರಡು ಬಾರಿ ವಿವಾಹವಾದರು: ೧೮೯೦ ರಲ್ಲಿ ಹೆಲೆನ್ ಕೋಲ್ಮನ್ ಅವರನ್ನು ವಿವಾಹವಾದರು, ಈ ವೈವಾಹಿಕ ಸಂಬಂಧ ೧೮೯೬ ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು; ಮತ್ತು ೧೯೧೬ ರಲ್ಲಿ ಎಲಿಜಬೆತ್ ವಾಟರ್ಸ್ ರವರನ್ನು ಮದುವೆಯಾಗುತ್ತರೆ, ಇವರಿಗೆ ಸ್ವಂತ ಮಕ್ಕಳಿರಲಿಲ್ಲ ಆದರೆ ಮಗಳನ್ನು ದತ್ತು ಪಡೆದಿದ್ದರು.

ಮರಣ

೧೯೨೬ ರ ಮಾರ್ಚ್ ಮಧ್ಯದಲ್ಲಿ, ಬರ್ಬ್ಯಾಂಕ್ ಹೃದಯಾಘಾತದಿಂದ ಬಳಲುತ್ತಿದ್ದರು ಮತ್ತು ಜೀರ್ಣಾಂಗವ್ಯೂಹದ ತೊಂದರೆಗಳಿಂದ ಅನಾರೋಗ್ಯಕ್ಕೆ ಒಳಗಾದರು. ಅವರು ಏಪ್ರಿಲ್ ೧೧, ೧೯೨೬ ರಂದು ೭೭ನೇ ವಯಸ್ಸಿನಲ್ಲಿ ನಿಧನರಾದರು.

Paul_Stark_Sr._pays_his_respects_at_Luther_Burbank's_gravesite