ವಾಘಾ ಬಾರ್ಡರ್, ಅಮೃತಸರ್
ಗೋಚರ
Wagah
ਵਾਹਗਾ / वाघा / واہگہ Wahga | |
---|---|
Village | |
Country | ಪಾಕಿಸ್ತಾನ |
Province | Punjab |
District | Lahore |
Tehsil | Wagah Town |
Time zone | UTC+5 (PST) |
• Summer (DST) | +6 |
ಭಾರತದ ಪಂಜಾಬ್ ನಲ್ಲಿರುವ ಅಮೃತಸರ ಮತ್ತು ಪಾಕಿಸ್ತಾನದ ಪಂಜಾಬ್ ನಲ್ಲಿರುವ ಲಾಹೋರ್ ನಗರಗಳ ನಡುವೆ ವಾಘಾ ಬಾರ್ಡರ್ ಆರ್ಮಿ ಔಟ್ ಪೋಸ್ಟ್ ಉಪಸ್ಥಿತವಿದೆ. ಎರಡೂ ರಾಷ್ಟ್ರಗಳ ನಡುವಿನ ಸಂಪರ್ಕ ರಸ್ತೆಯಾಗಿರುವ ವಾಘಾ ಬಾರ್ಡರ್ ನ ಎರಡೂ ಬದಿಗಳಲ್ಲಿ ಬೃಹತ್ತಾದ ಕಟ್ಟಡಗಳಿವೆ. ಗಡಿಕಾವಲು ದಳದ ಪ್ರವೇಶ ದ್ವಾರವನ್ನು ಸ್ವರ್ಣ ಜಯಂತಿ ಗೇಟ್ ಎಂದೂ ಕರೆಯುತ್ತಾರೆ. ಇಲ್ಲಿಂದ ಸಮೃದ್ಧವಾಗಿರುವ ಸುತ್ತಮುತ್ತಲಿನ ಪರಿಸರವನ್ನು ಕಾಣಬಹುದು.[೧]
ವಾಘಾ ಬಾರ್ಡರ್ ಗೆ ಪ್ರವಾಸಿಗರು ಭೇಟಿ ನೀಡಲು ಮುಖ್ಯ ಕಾರಣವೇನೆಂದರೆ, ಪ್ರತಿನಿತ್ಯ ಇಲ್ಲಿ ನಡೆಯುವ 'ಬೀಟಿಂಗ್ ದಿ ರಿಟ್ರೀಟ್' ಎಂಬ ಆಕರ್ಷಕ ಕವಾಯತು. ಇದನ್ನು ಪ್ರತಿಸಂಜೆ ಗಡಿದ್ವಾರದಲ್ಲಿ, ಭಾರತ ಮತ್ತು ಪಾಕಿಸ್ತಾನದ ಸೈನಿಕರು ನಡೆಸುವ ಕವಾಯತು ಮತ್ತು ಚೇಂಜ್ ಆಫ್ ಗಾರ್ಡ್ ನೋಡಲು ಸಹಸ್ರಾರು ಸ್ಥಳೀಯರು ಮತ್ತು ಪ್ರವಾಸಿಗರು ನೆರೆಯುತ್ತಾರೆ. ಸೂರ್ಯಾಸ್ತವಾಗುತ್ತಿದ್ದಂತೆ 30 ನಿಮಿಷಗಳ ಈ ಸಮಾರಂಭ ಡ್ರಮ್ ಸದ್ದು ಮತ್ತು ಕಿವಿಗಡಚಿಕ್ಕುವ ಚಪ್ಪಾಳೆಗಳೊಂದಿಗೆ ಕೊನೆಗೊಳ್ಳುತ್ತದೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-12-26. Retrieved 2016-07-02.
- ↑ http://www.ndtv.com/topic/wagah-border