ರಾಣಿ ಲಕ್ಷ್ಮೀಬಾಯಿ ಝಾನ್ಸಿ
ಭರತದೇಶದ ಸ್ವಾತಂತ್ರ್ಯಪ್ರಾಪ್ತಿಗಾಗಿ, ಪರಕೀಯರೊಡನೆ ಒಂದು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳಿಂದಲೂ ಕೆಚ್ಚಿನ ಹೋರಾಟ ನಡೆದುಬಂದಿದೆ. ಪೀಳೀಗೆಯ ನಂತರದ ಪೀಳಿಗೆಗಳು ರಣಯಜ್ಞದಲ್ಲಿ ಪಾಲ್ಗೊಂಡಿದ್ದು ಅಸಂಖ್ಯ ವೀರರು ಯುದ್ಡರಂಗದಲ್ಲಿ ಆ ಧ್ಯೇಯಪೂರ್ತಿಗಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ೧೮೫೭ನೇ ಸ್ವಾತಂತ್ರ್ಯ ಯುದ್ಧವು ಮೈನವಿರೇಳಿಸುವ ಚಿರಂತನ ಸ್ಫೂರ್ತಿಯ ಒಂದು ಪರ್ವವೇ ಸರಿ. ನಮ್ಮ ದೇಶದ ಇತಿಹಾಸವನ್ನು ಅದರ ಸತ್ಯದ ಬೆಳಕಿನ ಮೇಲೆ ಮುಂದಿಟ್ಟ ಇತ್ತೀಚಿನ ಓರ್ವ ಚರಿತ್ರಕಾರರೆಂದರೆ ಸ್ವಾತಂತ್ರ್ಯ ವೀರ ಸಾವರಕರರು. ಶೋಧಗ್ರಂಥದಂತೆ ಕಂಗೊಳಿಸುವ ೧೮೫೭ ಸಂಗ್ರಾಮದ ಕಥೆಯನ್ನು ಅವರು ಪ್ರಪ್ರಥಮವಾಗಿ ಸತ್ಯನಿಷ್ಠವಾಗಿ ಜನತೆಯ ಮುಂದಿಟ್ಟರು. ೧೮೫೭ರ ಹೋರಾಟವು ಸ್ವಧರ್ಮ, ಸ್ವದೇಶಿ, ಸ್ವರಾಜ್ಯ ಎಂಬ ಪರಸ್ಪರ ಪೂರಕ ಹೊಂದಾಣಿಕೆಯ ಮೂರು ಅರ್ಥಪೂರ್ಣ ಪದ ಸಮುಚ್ಚಯಗಳ ಬುನಾದಿಯನ್ನು ಹೋದಿತ್ತು. ಸಹಸ್ರಸಹಸ್ರ ವರ್ಷಗಳಿಂದ ಭಾರತದ ನರನಾಡಿಗಳಲ್ಲಿ ಅಕ್ಷುಣ್ಣವಾಗಿ ಹರಿದು ಬರುತ್ತಿರುವ, ಎಂದೂ ಬತ್ತದ, ಸ್ವಾತಂತ್ರ್ಯಗಳಿಕೆಯ ಮಹಾಪ್ರೇರಣೆಯೇ ಆ ಹೋರಾಟದ ಮೂಲವಸ್ತು. ಸ್ವಧರ್ಮ, ಸ್ವದೇಶಿ,ಸ್ವರಾಜ್ಯ ಈ ಪದಗಳು ಪರಸ್ಪರ ಪೂರಕವಾದುವೇ ಹೊರತು ಬಿಡಿಯಾಗಿ ಒಂದೇ ಏನನ್ನೂ ಸಾಧಿಸಲಾರವು. ಸ್ವರಾಜ್ಯ ಇಲ್ಲದೆ ಸ್ವಧರ್ಮ ಬದುಕಲಾರದು. ಸ್ವಧರ್ಮರಹಿತ ಸ್ವರಾಜ್ಯ ಅರ್ಥಹೀನ. ಸ್ವದೇಶಿ ಇಲ್ಲದ ಸ್ವರಾಜ್ಯ ನಿರರ್ಥಕ. ಸ್ವಧರ್ಮ ರಕ್ಷಿಸಲು ಸ್ವರಾಜ್ಯ ಗಳಿಸಿ ಎಂಬ ಕರೆಯು ನಿನ್ನೆ ಮೊನ್ನೆಯದಲ್ಲ. ಭಾರತವಾಸಿಯನ್ನು ಸಾರ್ಥಕ ಜೀವನದತ್ತ ಕೊಂಡೊಯ್ಯಲು ತಲೆತಲಾಂತರಗಳಿಂದಲೂ ಉದ್ಯುಕ್ತಗೊಂಡಿರುವ ಪೊಬನೀತ ಮಂತ್ರ ಅದು. ವಿಶ್ವದ ಅತ್ಯಂತ ಪ್ರಾಚೀನ ಸಾಹಿತ್ಯ ಋಗ್ವೇದದಲ್ಲಿ ಸ್ವಧರ್ಮ-ಸ್ವರಾಜ್ಯಗಳ ಉಲ್ಲೇಖವನ್ನು ಕಾಣಬಹುದಾಗಿದೆ. ಆ ನಂತರದಲ್ಲಿ ಇದೇ ತತ್ವವನ್ನು ಉಪದೇಶಿಸಿದವರು ಸಮರ್ಥರಾಮದಾಸರು. ಅವರು ಹೇಳಿದ ಮಾತೆಂದರೆ "ಧರ್ಮಕ್ಕಾಗಿ ಪ್ರಾಣನೀಡು, ಪ್ರಾಣ ನೀಡುವಾಗ ಧರ್ಮವಿರೋಧಿಗಳನ್ನು ತುಂಡರಿಸು. ಸ್ವಾತಂತ್ರ್ಯಗಳಿಕೆಗೆ ಇದೇ ಮಾರ್ಗ, ಇದೇ ಶಪಥ." ೧೮೫೭ರ ಈ ಮಹಾ ಸಮರದಲ್ಲಿ ಪ್ರಾಣನೀಡಿ ಅಮರರಾದ ಬಲಿದಾನಿಗಳ ಪ್ರಾಣಾರ್ಪಣೆ ನಿರರ್ಥಕವಾದುದಲ್ಲ. ಏಕೆಂದರೆ ಅಂದಿನಿಂದ ೧೯೪೭ನೇ ಆಗಸ್ಟ್ ೧೫ರ ವರೆಗಿನ ೯- ವರ್ಷಗಳ ಅವಧಿಯಲ್ಲಿ ಬ್ರಿಟಿಷ್ ಸತ್ತೆಗೆ ಮೈನಡುಕ ಹುಟ್ಟಿಸಿದ ಅನೇಕಾರು ಕ್ರಾಂತಿಕಾರಿಗಳು, ಮತ್ತು ಕ್ರಾಂತಿ ಕಾರ್ಯಗಳು ಇಡೀ ದೇಶದಲ್ಲಿ ಸಿಡಿದೆದ್ದು ಪ್ರತಿಧ್ವನಿಸಿದವು. ಬ್ರಿಟಿಷ್ ಸರಕಾರ ತತ್ತರಿಸಿ ನಿಂತಿತು. ಆ ಮಹಾ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದವರು ಸರಿ ಸುಮಾರು ೩ ಲಕ್ಷ ಜನ. ವೀರವನಿತೆ ಝಾನ್ಸಿಲಕ್ಷ್ಮಿಬಾಯಿ ಈ ಸಂಗ್ರಾಮದ ಓರ್ವ ಪ್ರಮುಖ ನಾಯಕಿ. ತುಂಬು ಯೌವನದ ಹೆಣ್ಣು ಹೆಂಗಸು. ಬ್ರಿಟಿಷರೊಡನೆ ರಣರಂಗದಲ್ಲಿ ಅವರ ಸರಿಸಮನಾಗಿ ಸೆಣೆಸಿದಾಕೆ. ಯುದ್ಧರಂಗದಲ್ಲೇ ಸತ್ತು ಸ್ವರ್ಗ ಸೇರಿದಳು. ಆಕೆಯ ಬಾಲ್ಯದ ಹೆಸರು ಮನು. ಆಕೆ ತಾತ್ಯಾಟೋಪೆ, ರಾವ್ ಸಾಹೇಬ್ ಜತೆಜತೆಗೇ ಚಿಕ್ಕಂದಿನಲ್ಲಿ ಬೆಳೆದು, ಮದುವೆಯ ನಂತರ ಝಾನ್ಸಿಯಲ್ಲಿ ರಾಣಿ ಆದವಳು. ಲಕ್ಷ್ಮಿಬಾಯಿಯ ಪೂರ್ವಜರ ಊರು ಮಹರಾಷ್ಟ್ರದ ಸತಾರಾ ಜಿಲ್ಲೆಯ ವಾಯಿ. ಸಹ್ಯಾದ್ರಿಯ ಏರುತಗ್ಗುಗಳಲ್ಲಿ, ಭೀಕರ ಕಾಡುಗಳ ಮಧ್ಯೆ ಇತ್ತು, ಆ ಗ್ರಾಮ. ಒಂದು ಕಾಲಕ್ಕೆ ಅದು ಜನಭರಿತವಾಗಿದ್ದು ವೇದಶಾಸ್ತ್ರಕೋವಿದರ, ವಿದ್ವಾಂಸ, ಪಂಡಿತರ ಕೇಂದ್ರವಾಗಿತ್ತು. ಮನು ಚಿಕ್ಕವಳಿರುವಾಗಲೇ ತಾಯಿ ತೀರಿಕೊಂಡಳು. ಸದಾ ಗಂಡುಡುಗೆ, ಎದೆಯೆತ್ತಿ ನಡುಗೆ, ಮಾತುಕತೆ, ದಾಷ್ಟಿಕ ಸ್ವಭಾವ. ಓದು,ಆಟ ಎಲ್ಲದರಲ್ಲೂ ಅವಳು ಭಾಗಿ. ನಾಚಿಕೆಯಿಂದ ಮೂಲೆ ಹಿಡಿದು ಎಂದೂ ಕೂತವಳಲ್ಲ. ಮನುವಿನದು ಸ್ಪರ್ಧೆಯ ಸ್ವಭಾವ, ಮನು ಏನು ಕಲಿತರೂ ಸರಿ ಸಮವಯಸ್ಕರನ್ನು ಸ್ಪರ್ಧೆಗೆ ಕರೆಯುವಳು.
ದೇಶದ ರಾಜಧಾನಿ ದೆಹಲಿಯಿಂದ ದಕ್ಷಿಣಕ್ಕೆ ೨೫೦ ಮೈಲಿಗಳ ಅಂತರದಲ್ಲಿದೆ, ಝಾನ್ಸಿ ನಗರ. ಭೌಗೋಳಿಕವಾಗಿ ಅದು ಭಾರತದ ಹೃದಯ. ಭಾರತದ ಚರಿತ್ರೆಯಲ್ಲಿ 'ಬುಂದೇಲಖಂಡ' ಎಂಬ ಹೆಸರಿಗೆ ಗೌರವದ ಸ್ಥಾನವಿದೆ.ಗಂಗಾಧರರಾಯ ಝಾನ್ಸಿಯ ರಾಜನಾಗಿದ್ದು ೧೮೩೮ರಲ್ಲಿ. ಆಗಲೇ ಅವನಿಗೆ ಪ್ರೌಢವಯಸ್ಸು, ಮದುವೆಯಾದ ಹೆಂಡತಿ ರಮಾಬಾಯಿ ತೀರಿಹೋಗಿದ್ದಳು. ಮಕ್ಕಳು ಇರಲಿಲ್ಲ. ಹಠವಾದಿ, ತಪ್ಪಿತಸ್ಥತರನ್ನು ಶಿಕ್ಷಿಸಲು ಸ್ವಲ್ಪವೂ ಹಿಂದುಮುಂದು ನೋಡನು. ಪ್ರೀತಿ ಪ್ರೇಮ ಉಲ್ಲಾಸ ಇದ್ದಂತೆ ಜಿಗಟುತನವೂ ಇದ್ದದ್ದೇ. ಅವನು ನಿಷ್ಕರುಣಿ ಅಲ್ಲ. ಮನಸ್ಸು ಒಮೊಮ್ಮೆ ಬಲು ಉದಾರವಾಗುವುದು. ಝಾನ್ಸ್ಸಿಯ ಕುಲದೇವತೆ ಶ್ರೀ ಲಕ್ಷ್ಮೀದೇವಿ. ಗಂಡನ ಮನೆಗೆ ಬಂದ ಮನು ಅಂದಿನಿಂದ ಈ ಕುಲದ ಪದ್ಧತಿಯಂತೆ ಲಕ್ಷೀಬಾಯಿ ಆದಳು. ಮನುವಿನ ಆಪ್ತರಾದ ಮೂವರು-ತೋಪೆ, ನಾನಾ, ರಾವ್-ತಮ್ಮ ಒಡನಾಡಿಗೆ ಶುಭಾಶಯ ಸಲ್ಲಿಸಿ ಬ್ರಹ್ಮಾವರ್ತಕ್ಕೆ ಮರುಳಿದರು. ಆದರೆ ಗಂಗಾಧರರಾಯ, ಮಾವ ಮೋರೋಪಂತರನ್ನು ಅಲ್ಲೆ ಉಳಿಸಿಕೊಂಡ. ಹಲವಾರು ದಿನ ಕಳೆದ ಮೇಲೆ ಅವರನ್ನು ಅಲ್ಲೆ ನೆಲಸುವಂತೆ ವಿನಂತಿಸಿಕೊಂಡ. ಅವರೂ ಅನಿವಾರ್ಯವಾಗಿ ಒಪ್ಪಿಕೊಂಡರು. ೧೮೫೧ ಲಕ್ಷ್ಮೀಬಾಯಿಗೆ ಸುಪುತ್ರನಿಗೆ ಜನ್ಮ ನೀಡಿದಳು. ಅದರೆ ಅ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಗಂಗಾಧರರಾಯರ ಮೂರೇತಿಂಗಳ ಮಗು ತೀರಿಕೋಡಿತ್ತು. ದಿನಾಂಕ ೨೧ ನವೆಂಬರ್, ೧೮೫೩ ರಂದು ಗಂಗಾಧರರಾಯ ಕಣ್ಣು ಮುಚ್ಚಿದ. ನಿಶ್ಯಬ್ದವಾಗಿದ್ದ ಅರಮನೆ ಅಳುವಿನ ಹಂದರವಾಯಿತು. ಅರಮನೆ ಗೋಲು ನಗರಕ್ಕೂ ಮುಟ್ಟಿತು. "ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನುನನ್ನು ಮುಂದಿಟ್ಟುಕೊಂಡು ಬ್ರಿಟಿಷರು ಭಾರತದ ರಾಜ್ಯಗಳನ್ನು ವಶಪಡಿಸಿಕೊಳ್ಳುತ್ತಿದ್ದರು. ಹಾಗೆಯ ಝಾನ್ಸಿಯನ್ನು ವಶಪಡಿಸಿಕೊಳ್ಳುವುದಾಗಿ ಲಕ್ಷ್ಮೀಬಾಯಿಗೆ ಸಂದೇಶ ಕಳುಹಿಸಿದರು. ದಿ.೧೫ರ ಬೆಳಿಗ್ಗೆ ೧೦ ಗಂಟೆಗೆ ಸರಿಯಾಗಿ ಎಲಿಸರ ಸವಾರಿ ಅರಮನೆಗೆ ಆಗಮಿಸಿತು. ಅವರನ್ನು ಸ್ವಾಗತಿಸಲು ವಿಶೇಷ ವ್ಯವಸ್ತೆ ಮಾಡಲಾಗಿತ್ತು. ಎಲಿಸ್ ತನ್ನ ಆಸನದಲ್ಲಿ ಕುಳಿತೊಡನೆ ಹಾಲು ಹಣ್ಣೀನ ಸ್ವಾಗತವಾಯಿತು. ಲಕ್ಷ್ಮೀಬಾಯಿ ಸಿದ್ದರಿದ್ದಾರೆಯೇ ಎಂದು ಅವನು ಮುಖ್ಯಮಂತ್ರಿಯನ್ನು ಪ್ರಶ್ನಿಸಿದ.ಅವನು ಎದ್ದು 'ಹೌದು' ಎಂದು ಹೇಳುವ ಸಮಯಕ್ಕೆ ' I'll welcome you sir,' ಎಂಬ ಹೆಂಗಸಿನ ಧ್ವನಿ ಕೆಳಿಸಿತು. Yes your honour, ರಾಣಿ ಪರದೆಯ ಹಿಂದೆ ತಮಗಾಗಿ ಕಾದಿದ್ದಾರೆ ಎಂದ ಮುಖ್ಯಮಂತ್ರಿ. ಎಲ್ಲರಿಗೂ ಕಾತುರದ ಕ್ಷಣ ಅದು. ತೀರ್ಪು ಹೊರ ಬರುವ ಕ್ಷಣ. ಜಯವೋ, ಅಪಜಯವೋ, ಸಂತೋಷವೋ ದುಃ ಖವೋ? "ಲಕ್ಷ್ಮಿಬಾಯಿ,ವಂದನೆಗಳು. ನಾನೀಗ ಕಂಪನಿಯ ಗವರ್ನರ್ ಜನರಲ್ ರಿಂದ ಬಂದಿರುವ ಒಂದು ಮಹತ್ವದ ಸುದ್ದಿ ಹೇಳಲು ಬಂದಿರುವೆ. ಲಾರ್ಡ್ ಡಾಲ್ ಹೌಸಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಝಾನ್ಸಿ ರಾಜ್ಯ ಕಂಪನಿಗೆ ಸೇರಿಹೋಗಿದೆ" ಎಂದ, ಎಲಿಸ್. ಎಲಿಸ್ ನ ಮಾತು ಮುಗಿಯುವುದೆ ತಡ ಕಿವಿಯನ್ನಪ್ಪಳಿಸುವಂತೆ ಪರದೆಯ ಹಿಂದಿನಿಂದ ಮಾತು ಹೋರಬಂತು. "ಮೇರಿ ಝಾನ್ಸಿ ನಹೀ ದೂಂಗೀ" ಅದು ರಾಣಿಯ ಧ್ವನಿ, ಏನೂ ಸಂಶಯವಿಲ್ಲ. ಎಲಿಸ್: ರಾಣಿ ಗಾಬರಿ ಏತಕ್ಕೆ? ನಿಮಗೆ ಜೀವನಾಂಶ, ವಾಸಕ್ಕೆ ಮನೆ, ರಾಜವಂಶದ ಗೌರವ ಇವೆಲ್ಲವನ್ನೂ ಕಂಪನಿ ಒದಗಿಸಿದೆ, ನಿಶ್ಚಿಂತೆಯಿಂದಿರಿ. ರಾಣಿ: Thank you. ಬ್ರಿಟಿಷರ ಕೈ ಕೆಳಗೆ ಇರಲು ನಿರಾಕರಿಸಿದ ಲಕ್ಷ್ಮೀಯ ವಿರುದ್ದ ಬ್ರಿಟಿಷರು ಯುದ್ಧ ಘೋಷಿಸಿದರು. ಬ್ರಿಟಿಷರ ವಿರುದ್ದ ತಿರುಗೆದ್ದಿದ್ದ ಅನೇಕ ರಾಜವಂಶಿಯರು ಆಕೆಯ ಜೋತೆ ಕೈ ಜೋಡಿಸಿದರು . ಬ್ರಿಟಿಷ್ ಸೈನ್ಯಧಿಕಾರಿ ಕರ್ನಲ್ ಸ್ಮಿಥ್ ಹೆಸರಾಂತ ಯೊಧ. ಅವನು ಲಕ್ಷ್ಮೀಬಾಯಿಯ ಹೆಸರು ಕೇಳಿದ್ದನ್ನೇ ಹೊರತು ಆಕೆಯನ್ನು ನೊಡಿರಲಿಲ್ಲ. ಗ್ವಾಲಿಯರ್ ಪೂರ್ವದ ಕೋಟಕೀ ಸರಾಯ್ ಎಂಬಲ್ಲಿ ಅವರೀರ್ವರಿಗೆ ಯುದ್ಧ ಕೈಗತ್ತಿತು. ಗಂಡುಡುಗೆ ಧರಿಸಿದ ರಾಣಿ ಸೇನೆಯ ಮುಂಭಾಗದಲ್ಲೇ ನಿಂತಳು. ಆಕೆಗೆದುರಾಗಿ ಕರ್ನಲ್ ಸ್ಥಿಥ್: ನಾವಿಂದು ನಿರ್ಣಾಯಕ ಯುದ್ಧ ದಲ್ಲಿ ಜಯವೋ ಅಪಜಯವೋ ಹೇಳುವಂತಿಲ್ಲ. ಆದರೆ ಶತ್ರುವಿನ ಸರಿಸಮವಾಗಿ, ಅವನನ್ನು ಮೀರಿಸುವಂತೆ ಕದನಕೊಡುವುದು ಮುಖ್ಯ. ಈ ಗುರಿಯೆಡೆಗೆ ಹೆಜ್ಜೆ ಇಡೋಣ ಇಂದು ಹೇಳಿದ ರಾಣಿ ಸೈನಿಕರ ಮಧ್ಯೆ ಓಡಾಡುತ್ತಾ ಅವರನ್ನು ಹುರಿದುಂಬಿಸ ತೊಡಗಿದಳು. ಇಲ್ಲಿ ರಾಣಿಗೆ ಬೆಂಬಲವಾಗಿ ನಿಂತಿದ್ದು ಆಕೆಯೇ ಕಟ್ಟಿದ ಸ್ತ್ರೀಸೇನೆ. ಝಾನ್ಸಿಯ ರಕ್ಷಣೆಗೆ ಹೆಣಗಾಡಿ ಅದು ಫಲಿಸದಿದ್ದಾಗ ಲಕ್ಷ್ಮೀಬಾಯಿಯ ಜೊತೆಗೇ ಬಂದಾಗ ದಾರಿಯಲ್ಲಿ ಅವರು ಅನುಭವಿಸಿದ ಕಷ್ಟ ನಷ್ಟಗಳು, ಎದುರಿಸಿದ ಅಪಾಯಗಳು ಅಪಾರ. ಕರ್ನಲ್ ಸ್ಮಿಥ್ ನ ತೋಪುದಳ ಯುದ್ಧಾರಂಭದ ಕಹಳೆ ಊದಿತು.ಅದಕ್ಕೆ ರಾಣಿಯದು. ತೋಪಿನ ಪ್ರತ್ಯುತ್ತರ. ಕರ್ನಲ್ ರಸ್ನೆ ಮುನ್ನುಗ್ಗಲು ತೊರಿದ ಸಾಹಸ ಗಣನೀಯವಾಗಿತ್ತು. ರಾಣಿಯ ಸೇನೆಯನ್ನು ಹಿಂಬದಿಯಿಂದ ಅವನು ಬಳಸಿ ಬಂದ. ರಾಣಿಯ ಸೇನೆ ಇಕ್ಕಟ್ಟಿಗೆ ಸಿಕ್ಕಿತು. ಧೈರ್ಯಗೆಡೆದಿರುವಂತೆ ಸೈನಿಕರಿಗೆ ಹೇಳುತ್ತಾ ರಾಣಿ ಅಡ್ಡಾಡಿದಳು. ಶತ್ರುಗಳನ್ನು ಮರ್ದಿಸಿದಳು.ಅಂದು ನಡೆದದ್ದು ೧೦ ಘಂಟೆ ಅವಧಿಯ ಸತತ ಯುದ್ಧ. ಆ ಯುದ್ಧದಲ್ಲಿ ಆಕೆ ಕನಿಷ್ಠ ಒಂದು ನೂರು ಜನರನ್ನು ಕೊಂದಿರಬೇಕು. ಆಕ್ರಮಣ ಮಾಡಬಂದ ಕರ್ನಲ್ ರೆಸ್ನೇ ಬೆನ್ನು ತಿರುಗಿಸಬೇಕಾಯಿತು. ಹೀಗೆ ಪ್ರಥಮ ಜಯ ಲಭಿಸಿತ್ತು ಲಕ್ಷ್ಮೀಬಾಯಿಗೆ. ತಾತ್ಯಾ, ರಾವ್ ಸಾಹೆಬ, ಶತ್ರುವನ್ನು ಉಳಿದ ಕಡೆ ಎದುರಿಸಿದ್ದರು. ಅವರು ವಿರುದ್ಧಸೆಣಸಿದವನು ಜಯಾಜಿರಾವ್ ಸಿಂಧ್ಯ. ಆ ಯುದ್ಧದಲ್ಲಿ ಬ್ರಿಟಿಷರಿಗೇ ಗೆಲುವು. ಶತ್ರು ಸೈನಿಕ ರಾಣಿಯ ಶಿರ ಛೇದಿಸಲು ಗುರಿ ಇಟ್ಟು ರಭಸದಿಂದ ಕತ್ತಿ ಬೀಸಿದ. ಆದರೆ ಅವನೇ ಕೆಳಬಿದ್ದ. ರಾಣಿ ಹೆಜ್ಜೆ ಮುಂದಿಟ್ಟಳು,ಅಷ್ಟರಲ್ಲಿ ಕೇಳಿಸಿತು,ಚೀತ್ಕಾರ. ಅದು ಮಂದರಿಯ ಧ್ವನಿ.ಆಕೆ ಗುಂಡಿಗೆ ಆಹುತಿ! ರಾಣಿಗೆ ಕೈಕಾಲು ಕಟ್ಟಿದಂತೆಯೆ ಆಯಿತು. ಈಗ ಉಳಿದವರು ನಾಲ್ಕು ಜನ ಮಾತ್ರ. ಅವರ ಜೀವಕ್ಕೂ ಅಪಾಯ. ಆದರೂ ಅವರು ಖಡ್ಗ ಬೀಸುತ್ತಾ, ಶತ್ರುವನ್ನು ಉರುಳಿಸುತ್ತಾ ಸಾಗಿದ್ದಾರೆ. ಹಿಂದಿನಿಂದ ಮತ್ತೆ ಶತ್ರು ಗುಂಪು ಬರುತ್ತಿದೆ. ಗುಂಡುಗಳೂ ಧಾವಿಸುತ್ತಿವೆ. ಈಗ ರಾಣಿ ಕುದುರೆ ದೌಡಾಯಿಸಿದ್ದಾಳೆ ಇನ್ನು ಕೇವಲ ಕೆಲವು ನೂರು ಗಜಗಳು. ಶತ್ರು ವ್ಯೂಹದಿಂದ ಪಾರಾದಳು, ಬದುಕುಳಿದಾಳು ಎಂಬ ಧೈರ್ಯ ಬರುತ್ತಿದೆ. ಆದರೆ ಅಷ್ಟರಲ್ಲೆ ಅಡ್ದ ಬಂತು, ನೀರು ತುಂಬಿದ ಒಂದು ನಾಲೆ. ರಾಣಿಯ ಮೃತ್ಯುಭೂತವೇ ಆ ರೂಪ ಧರಿಸಿತ್ತೋ ಏನೋ? ನಾಲೆ ದಾಟಿಸಲು ಪ್ರಯತ್ನಿಸಿದರು ಕುದುರೆ ದಾಟಲೋಲ್ಲದು. ಅದು ನಿಂತಲ್ಲೆ ಸುತ್ತ ತಿರುಗುತ್ತಿದೆ. ಹಾಯ್! ರಾಣಿಯ ಸ್ವಂತ ಕುದುರೆ ಯಾಗಿದ್ದರೆ? ಅದು ಒಂದೇ ದಾಪಿಗೆ ನಾಲೆ ದಾಟುತ್ತಿತ್ತು. ತನ್ನ ಯಜಮಾನಿಯ ಜೀವ ಉಳಿಸುತ್ತಿತ್ತು. ಏಳೆಂಟು ಜನರ ಗುಂಪು ಹತ್ತಿರ ಬಂತು, ಅವರ ಹೋಡೆತಗಳಿಂದ ರಾಣಿ ಹೇಗೋ ಪಾರಾದಳು. ಆದರೆ ಮುಂದೆ ದಾರಿಯಿಲ್ಲ. ಅಷ್ಟರಲ್ಲೇ ಇನ್ನೊಂದು ಗುಂಪು ಬಂತು. ಸುತ್ತೆಲ್ಲ ಖಡ್ಗ ಬೀಸುವ ಶತ್ರು ಸೈನಿಕರೇ. ಅಂಗರಕ್ಷಕರು ದೂರದಲ್ಲಿದ್ದಾರೆ. ಶತ್ರು ಪ್ರಹರಿಸಿದ್ದನೆ. ಲಕ್ಷ್ಮೀಬಾಯಿಯ ತಲೆಯ ಬಲ ಭಾಗ ಕಣ್ಣು ಸೇರಿದಂತೆ ಕತ್ತರಿಸಿದೆ, ಇನ್ನೊಂದು ಎಟು ಎದೆಗೆ ಬಿದ್ದಿದೆ. ಇಷ್ಟಾದರೂ ಆಕೆ ಕುದುರೆ ಮೇಲೆಯೇ ಇದ್ದಾಳೆ. ನೆಚ್ಚಿನ ಗುಲಾಮ್ಂ ಅಹಮದ್ ಓಡಿಬಂದ. ಆದರೆ ಸಮಯ ಮೀರಿತ್ತು. ಅವನ ಕ್ರೋಧಕಂಡ ಶತ್ರು ಗುಂಪು ಚದುರಿತು. ರಾಣಿ ಕುದುರೆ ಇಂದ ಕೆಳಬಿದ್ದಳು. ಆಕೆಯ ಬಲಗಣ್ಣು ಹೊರಬಂದಿದೆ. ಉಸಿರು ಮೇಲೇರುತ್ತಿದೆ. ಅಂಗರಕ್ಷಕರು ಅವಳನ್ನು ಹೊತ್ತುಸಾಗಿಸಿದರು. ಆಕೆಯ ಮಗ ಕುಡಿಸಿದ ನೀರು ಗುಟುಕಿಸುತ್ತಾ ಆಕೆ ಕಡೆಯುಸಿರೆಳೆದಳು. ಅಂದು ಆಕೆಯ ಸೇನೆಯ ಎಲ್ಲರೂ ಕಣ್ಣೀರು ಸುರಿಸುತ್ತ ಆಕೆಯ ಸುತ್ತಾ ಗುಂಪುಗಟ್ಟಿ ನಿಂತಿದ್ದಾರೆ. ಅಂದು ೧೮೫೭ ಒಬ್ಬ ವೀರ ಮಹಿಳೆಯನ್ನು ಭಾರತ ದೇಶ ಕಳೆದು ಕೊಂಡಿತು. ಮುಂದೆ ಆಕೆಯ ಆಜ್ಞೆಯಂತೆ ಹೋರಾಡುತ್ತಿದ್ದ ತಾತ್ಯಗೆ ಈ ವಿಷಯ ತಿಳಿದು ಆಘಾತಕ್ಕೆ ಒಳಗಾದ, ಆದರೂ ಆಕೆಯ ಆಸೆಯನ್ನು ನೆರೆವೇರಿಸಲು ಆಕೆಯ ಮಗನಿಗೆ ರಾಜ್ಯ ಕೊಡಿಸಲು ಹೋರಾಟ ಮುಂದುವರೆಸಿದ.