ಯೋನಿ ಕ್ಯಾನ್ಸರ್
ಯೋನಿ ಕ್ಯಾನ್ಸರ್ ಯೋನಿಯ ಅಂಗಾಂಶಗಳಲ್ಲಿ ರಚನೆಯಾಗುವ ಒಂದು ಮಾರಕ ಗೆಡ್ಡೆ. ಪ್ರಾಥಮಿಕ ಗೆಡ್ಡೆಗಳು ಸಾಮಾನ್ಯವಾಗಿ ಸ್ಕ್ವಾಮಸ್ ಸೆಲ್ ಕಾರ್ಸಿನೋಮಗಳಾಗಿರುತ್ತವೆ. ಪ್ರಾಥಮಿಕ ಗೆಡ್ಡೆಗಳು ಅಪರೂಪ, ಮತ್ತು ಸಾಮಾನ್ಯವಾಗಿ ಯೋನಿ ಕ್ಯಾನ್ಸರ್ ದ್ವಿತೀಯ ಗೆಡ್ಡೆಯಾಗಿ ಕಂಡುಬರುತ್ತದೆ.[೧] ಯೋನಿ ಕ್ಯಾನ್ಸರ್ ಹೆಚ್ಚಾಗಿ ೫೦ ನೇ ವಯಸ್ಸಿನ ಮಹಿಳೆಯರಲ್ಲಿ ಕಂಡು ಬರುತ್ತದೆ, ಆದರೆ ಅದು ಶೈಶವಾವಸ್ಥೆಯಿಂದ ಹಿಡಿದು ಯಾವುದೇ ವಯಸ್ಸಿನಲ್ಲೂ ಸಂಭವಿಸಬಹುದು. ಆರಂಭಿಕ ಹಂತದಲ್ಲಿ ಇದು ಕಂಡುಬಂದರೆ ಗುಣಪಡಿಸಬಹುದು. ಪೆಲ್ವಿಕ್ ರೇಡಿಯೇಶನ್ ನಿಂದ ಕೂಡಿದ ಶಸ್ತ್ರಚಿಕಿತ್ಸೆ ಅಥವಾ ಸಾಮಾನ್ಯವಾದ ಶಸ್ತ್ರಚಿಕಿತ್ಸೆಯನ್ನು ಕೂಡ ಯೋನಿ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತದೆ. ಕೆಲವು ಮಕ್ಕಳಲ್ಲಿ ಮುಂದುವರಿದ ಯೋನಿ ಕ್ಯಾನ್ಸರ್ ಕಂಡುಬರಬಹುದು. ಅದನ್ನು ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ಮತ್ತು ಕಿಮೋತೆರಪಿ ಚಿಕಿತ್ಸೆಯಿಂದ ಗುಣಪಡಿಸಬಹುದು. ಮಕ್ಕಳಲ್ಲಿ ಯೋನಿ ಕ್ಯಾನ್ಸರ್ ಪುನಾರಾವರ್ತಿಸಬಹುದು. ಯೋನಿ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಜೀನ್ ಚಿಕಿತ್ಸೆಯು ಪ್ರಾಯೋಗಿಕ ಹಂತದಲ್ಲಿದೆ.
ವಿವರಣೆ
[ಬದಲಾಯಿಸಿ]ಯೋನಿಯ ಕಾರ್ಸಿನೋಮಾವು ಶ್ರೋಣಿಯ ಮಾರಕ ಗೆಡ್ಡೆಯೊಂದಿಗೆ ೨% ಗಿಂತ ಕಡಿಮೆ ಮಹಿಳೆಯರಲ್ಲಿ ಕಂಡುಬರುತ್ತದೆ. ಸ್ಕ್ವಾಮಸ್ ಕಾರ್ಸಿನೋಮಾವು ಯೋನಿ ಕ್ಯಾನ್ಸರ್ ನ ಅತ್ಯಂತ ಸಾಮಾನ್ಯ ವಿಧವಾಗಿದೆ. ದಿ ಹ್ಯೂಮನ್ ಪ್ಯಾಪಿಲ್ಲೊಮಾ ವೈರಸ್ (HPV) ಯೋನಿ ಕ್ಯಾನ್ಸರ್ ಗೆ ಸಂಬಂಧಿತವಾಗಿದೆ. ಯೋನಿ ಕ್ಯಾನ್ಸರ್ ಹೆಚ್ಚಾಗಿ (೫೧%) ಯೋನಿಯ ಮೂರನೇ ಹಂತದಲ್ಲಿ ಸಂಭವಿಸಿದರೆ, ೩೦% ಕೆಳಗೆ ಮತ್ತು ೧೯% ಮಧ್ಯದಲ್ಲಿ ಕಂಡುಬರುತ್ತದೆ. ಇದು ತೆಳುವಾದ ಮೇಲ್ಮೈಯಿಂದ ಅಥವಾ ಹೂಣ್ಣು ರೀತಿಯಲ್ಲಿ ಆಳಕ್ಕಿಳಿದು ಬೆಳೆಯಬಹುದು. ಬಯಾಪ್ಸಿ ವಿವೇಚನೆಯ ರೋಗನಿರ್ಣಯವನ್ನು ನಿರ್ಧರಿಸುತ್ತದೆ.
ಸೂಚನೆಗಳು ಮತ್ತು ರೋಗ ಲಕ್ಷಣಗಳು
[ಬದಲಾಯಿಸಿ]ಹೆಚ್ಚಿನ ಯೋನಿ ಕ್ಯಾನ್ಸರ್ ನಲ್ಲಿ ರೋಗದ ಚಿಹ್ನೆಗಳು ಮತ್ತು ಲಕ್ಷಣಗಳು ಮೊದಲ ಹಂತದಲ್ಲೇ ಗೊತ್ತಾಗುವುದಿಲ್ಲ. ಒಮ್ಮೆ ಯೋನಿ ಕ್ಯಾನ್ಸರ್ ಉಂಟಾದಾಗ, ಅದು ಈ ಕೆಳಗಿನ ಕೆಲವು ಲಕ್ಷಣಗಳನ್ನು ಒಳಗೊಳ್ಳಬಹುದು:[೨]
- ಯೋನಿಯ ವಿಸರ್ಜನೆ ಅಥವಾ ಅಸಹಜ ರಕ್ತಸ್ರಾವ
- ಅಸಾಧಾರಣವಾಗಿ ಭಾರೀ ರಕ್ತದ ಹರಿವು
- ಋತುಬಂಧದ ನಂತರದ ರಕ್ತಸ್ರಾವ
- ಮುಟ್ಟಿನ ಅವಧಿಯ ನಡುವಿನ ರಕ್ತಸ್ರಾವ ಅಥವಾ ಇನ್ನಿತರೇ
- ಸಾಮಾನ್ಯಕ್ಕಿಂತ ಧೀರ್ಘ ರಕ್ತಸ್ರಾವ
- ಮಲ ಅಥವಾ ಮೂತ್ರದಲ್ಲಿ ರಕ್ತಸ್ರಾವ
- ಆಗಾಗ ಅಥವಾ ತುರ್ತು ಮೂತ್ರ ವಿಸರ್ಜನೆ
- ಮಲಬದ್ದವಾದ ಭಾವನೆ
- ಲೈಂಗಿಕ ಸಂಭೋಗದ ಸಮಯದಲ್ಲಿನ ನೋವು
- ಯೋನಿಯು ಭಾರೀ ಗಾತ್ರವಾದಂತೆ ಅಥವಾ ಬೆಳೆದಂತ ಭಾವನೆ
- ದುಗ್ಧರಸಗ್ರಂಥಿಗಳು ದೊಡ್ಡ ಗಾತ್ರವನ್ನು ತಾಳಬಹುದು.
ಅಪಾಯಕಾರಿ ಅಂಶಗಳು
[ಬದಲಾಯಿಸಿ]- ಡೈಥೈಲ್ಸ್ಟಿಲ್ಬೆಸ್ಟ್ರೋಲ್ ಪ್ರಸವಪೂರ್ವ ಬಹಿರಂಗ
- ಹ್ಯೂಮನ್ ಪ್ಯಾಪಿಲೊಮಾ ವೈರಸ್ (HPV) ಟೈಪ್ ೧೬ ಸೋಂಕು
- ಎಚ್ಐವಿ (HIV) ಟೈಪ್ ೧ ಸೋಂಕು
- ಗರ್ಭಕಂಠದ ಕ್ಯಾನ್ಸರ್ ಹಿಂದೆ ಆಗಿದ್ದ ಪಕ್ಷದಲ್ಲಿ
- ಧೂಮಪಾನ
- ದೀರ್ಘಕಾಲದ ದುರ್ವಾಸನೆ, ತುರಿಕೆ ಅಥವಾ ಸುಡುವಿಕೆ
ವಿಧಗಳು
[ಬದಲಾಯಿಸಿ]ಯೋನಿ ಕ್ಯಾನ್ಸರ್ ನ್ನು ಪ್ರಾಥಮಿಕವಾಗಿ ಎರಡು ವಿಧಗಳಲ್ಲಿ ಹೇಳಬಹುದು: ಸ್ಕ್ವಾಮಸ್- ಸೆಲ್ ಕಾರ್ಸಿನೋಮ ಮತ್ತು ಅಡಿನೋಕಾರ್ಸಿನೋಮ.
- ಸ್ಕ್ವಾಮಸ್ - ಸೆಲ್ ಕಾರ್ಸಿನೋಮ ಯೋನಿ ರೇಖೆಯ ಸ್ಕ್ವಾಮಸ್ ಕೋಶಗಳಿಂದ (ಎಪಿಥೇಲಿಯಂ) ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಬರುವ ಯೋನಿ ಕ್ಯಾನ್ಸರ್ ವಿಧವಾಗಿದೆ. ಇದು ೬೦ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತದೆ.
- ಯೋನಿ ಅಡಿನೋಕಾರ್ಸಿನೋಮ ಯೋನಿಯ ಒಳಪದರದಲ್ಲಿರುವ ಗ್ರಂಥಿಗಳ (ಸ್ರವಿಸುವ) ಜೀವಕೋಶಗಳಿಂದ ಉಂಟಾಗುತ್ತದೆ. ಅಡಿನೋಕಾರ್ಸಿನೋಮ ಶ್ವಾಸಕೋಶ ಮತ್ತು ದುಗ್ಧರಸ ಗ್ರಂಥಿಗಳಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
- ಕ್ಲಿಯರ್-ಸೆಲ್ ಅಡಿನೋಕಾರ್ಸಿನೋಮ ಎಂಬುದು ೧೯೩೮ ರಿಂದ ೧೯೭೩ ರೊಳಗೆ ಜನಿಸಿದ ಮಹಿಳೆಯರಲ್ಲಿ ಸಣ್ಣ ಪ್ರಮಾಣದಲ್ಲಿ ಕಂಡುಬರುತ್ತದೆ. ಗರ್ಭಾಶಯದಲ್ಲಿ ಡ್ರಗ್ ಡೈಥೈಲ್ಸ್ಟಿಲ್ಬೆಸ್ಟ್ರಾಲ್ (DES) ಆಗುವುದರಿಂದ ಇದು ಉಂಟಾಗುತ್ತದೆ.
- ಯೋನಿಯ ಜೀವಾಣು ಕೋಶದ ಗೆಡ್ಡೆಗಳು ಅಪರೂಪ. ಇದು ಹೆಚ್ಚಾಗಿ ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ಕಂಡುಬರುತ್ತದೆ.
- ಸಾರ್ಕೋಮಾ ಬೊಟ್ರಿಯೋಯಿಡ್ ಕೂಡ ಸಾಮಾನ್ಯವಾಗಿ ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ಕಂಡುಬರುತ್ತದೆ.
- ಯೋನಿಯ ಮೆಲನೋಮ ಯೋನಿಯಲ್ಲಿ ಕಾಣಿಸಿಕೊಳ್ಳುವ ಒಂದು ಮೆಲನೋಮ.
ರೋಗ ನಿರ್ಣಯ
[ಬದಲಾಯಿಸಿ]ಯೋನಿ ಕ್ಯಾನ್ಸರ್ ನ್ನು ಪತ್ತೆ ಹಚ್ಚಲು ಹಲವಾರು ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು: ಶಾರೀರಿಕ ಪರೀಕ್ಷೆ ಮತ್ತು ಹಿಂದಿನ ಪರೀಕ್ಷೆಗಳು ಪೆಲ್ವಿಕ್ ಪರೀಕ್ಷೆ ಪ್ಯಾಪ್ ಸ್ಮೀಯರ್ ಬಯೋಪ್ಸಿ ಕಾಲ್ಪೊಸ್ಕೋಪಿ ಯೋನಿಯ ಕ್ಯಾನ್ಸರ್ ಹೊಂದಿರುವ ಮಹಿಳೆಯರು ಹೊಸ ರೋಗ ಲಕ್ಷಣಗಳು ಅಥವಾ ಗೆಡ್ಡೆಗಳೇಳುವ ಚಿಹ್ನೆಗಳು ಕಂಡುಬಾರದೇ ಇದ್ದಲ್ಲಿ ದಿನವೂ ಕಣ್ಗಾವಲು ಕಾಯುವ ಅಗತ್ಯವಿಲ್ಲ. ಯಾವುದೇ ಸೂಚನೆಗಳಿಲ್ಲದೇ ಮತ್ತೆ ಮರುಕಳಿಸಬಹುದಾದರೂ, ಅಥವಾ ಬದುಕಿಸುವುದಾದರೂ ಅದು ಅದರದ್ದೇ ಆದ ವೆಚ್ಚ ಮತ್ತು ಅಡ್ಡಪರಿಣಾಮಗಳನ್ನು ಹೊಂದಿರುತ್ತದೆ. MRI ಯೋನಿ ಕ್ಯಾನ್ಸರ್ ನ ಇರುವಿಕೆಯನ್ನು ಸ್ಪಷ್ಟೀಕರಿಸುತ್ತದೆ.
ನಿರ್ವಹಣೆ
[ಬದಲಾಯಿಸಿ]ಎಕ್ಸ್ಟರ್ನಲ್-ಬೀಮ್ ರೇಡಿಯೇಶನ್ ತೆರಪಿ (EBRT) ಸಾಮಾನ್ಯವಾಗಿ ಯೋನಿ ಕ್ಯಾನ್ಸರ್ ಗೆ ನೀಡುವ ಚಿಕಿತ್ಸೆಯಾಗಿದೆ. ಪ್ರಾರಂಭದ ಹಂತದಲ್ಲಿ ಇದು ಗುರುತಿಸಲ್ಪಟ್ಟರೆ ಶಸ್ತ್ರಚಿಕಿತ್ಸೆಯ ಲಾಭವನ್ನು ಪಡೆಯಬಹುದು. ಮುಂದುವರಿದ ಹಂತದಲ್ಲಿ ಈ ಚಿಕಿತ್ಸೆ ಮತ್ತು ನಿರ್ವಹಣೆ ಹೆಚ್ಚು ಪರಿಣಾಮಕಾರಿಯಲ್ಲದಿದ್ದರೂ ಪ್ರಾರಂಭದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ. ಮುಂದುವರಿದ ಯೋನಿ ಕ್ಯಾನ್ಸರ್ ರೋಗಿಗಳು ಹಂತ ೨, ೩ ಮತ್ತು ೪ ಎ ರೋಗದಿಂದ ೫೨.೨%, ೪೨.೫%, ಮತ್ತು ೨೦.೫% ಹೆಚ್ಚೆಂದರೆ ೫ ವರ್ಷಗಳ ಕಾಲ ಬದುಕುಳಿಯುವ ಸಾಧ್ಯತೆ ಇದೆ. ಅಂಡಾಶಯದ ಹಂತದವರೆಗಿನ ಚಿಕಿತ್ಸೆಗಾಗಿ ಹೊಸಚಿಕಿತ್ಸೆಗಳನ್ನು ಅಭಿವೃದ್ದಿಪಡಿಸಲಾಗಿದೆ.
ಸೋಂಕುಶಾಸ್ತ್ರ
[ಬದಲಾಯಿಸಿ]ಯೋನಿ ಕ್ಯಾನ್ಸರ್ ಅಪರೂಪ ಮತ್ತು ೨% ಸ್ತ್ರಿರೋಗ ಕ್ಯಾನ್ಸರ್ ಗಳಲ್ಲಿ ೦.೫% ಕ್ಕಿಂತಲೂ ಕಡಿಮೆ ಈ ಕ್ಯಾನ್ಸರ್ ಹೊಂದಿದ ಮಹಿಳೆಯರಿದ್ದಾರೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಒಂದು ಅಂದಾಜಿನ ಪ್ರಕಾರ ೨೦೧೭ ರಲ್ಲಿ ೪,೮೧೦ ಹೊಸ ಪ್ರಕರಣಗಳಿವೆ. ಅದೇ ರೀತಿ ಈ ಕ್ಯಾನ್ಸರ್ ನಿಂದ ಮರಣ ಹೊಂದಿದವರು ೧,೨೪೦. ಅದರಲ್ಲೂ ಇಳಿವಯಸ್ಸಿನ ಮಹಿಳೆಯರೇ ಜಾಸ್ತಿ.[೩]
ಯುಕೆ ಯಲ್ಲಿ, ೨೦೧೪ರಲ್ಲಿ ೨೫೪ ಯೋನಿ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಈ ಅವಧಿಯಲ್ಲಿ ಯೋನಿ ಕ್ಯಾನ್ಸರ್ ನಿಂದ ಮರಣ ಹೊಂದಿದವರ ಸಂಖ್ಯೆ ೧೧೦. ಯೋನಿ ಕ್ಯಾನ್ಸರ್ ಇರುವವರ ಪೈಕಿ ೫೩% ಜನರು HPV ಸೋಂಕಿಗೆ ಸಂಬಂಧಿಸಿರುತ್ತಾರೆ.