ಮರ್ಲಿನ್ ಮನ್ರೋ
ಮರ್ಲಿನ್ ಮನ್ರೋ | |
---|---|
ಜನನ | ನೋರ್ಮಾ ಜೀನ್ ಮಾರ್ಟನ್ಸನ್ 1 ಜೂನ್,1926 ಲಾಸ್ ಏಂಜಲಿಸ್, ಕ್ಯಾಲಿಫೋರ್ನಿಯಾ, ಅಮೆರಿಕ ಸಂಯುಕ್ತ ಸಂಸ್ಥಾನ |
ಮರಣ | 4 ಆಗಸ್ಟ್, 1962 ಲಾಸ್ ಏಂಜಲಿಸ್ |
Cause of death | ನಿದ್ರೆಮಾತ್ರೆಗಳ ಸೇವನೆ |
Resting place | ವೆಸ್ಟ್ ವುಡ್ ವಿಲೇಜ್ ಮೆಮೋರಿಯಲ್ ಸ್ಮಶಾನ |
ವೃತ್ತಿ(ಗಳು) | ನಟಿ, ರೂಪದರ್ಶಿ, ಗಾಯಕಿ |
ಸಕ್ರಿಯ ವರ್ಷಗಳು | 1945 - 1962 |
ಸಂಗಾತಿ(s) | ಜೇಮ್ಸ್ ಡಾಫರ್ಟಿ(1942-46) ಜೋ ಡಿಮ್ಯಾಗಿಯೋ(1954-55) ಅರ್ಥರ್ ಮಿಲ್ಲರ್(1956-61) |
Signature | |
ಮರ್ಲಿನ್ ಮನ್ರೋ(ಜೂನ್ 1, 1926 - ಆಗಸ್ಟ್ 4, 1962), ಅಮೆರಿಕದ ಅತ್ಯಂತ ಜನಪ್ರಿಯ ನಟಿ, ಗಾಯಕಿ. ಚಲನಚಿತ್ರ ಮತ್ತು ಮಾಧ್ಯಮಗಳಲ್ಲಿ ನಗ್ನತೆ ಮತ್ತು ಮೈಮಾಟ ಪ್ರದರ್ಶನ ವಿಚಾರಗಳ ಬಗೆಗಿದ್ದ ಬಹುಪಾಲು ನಂಬಿಕೆಗಳನ್ನು ಬದಲು ಮಾಡಿದ ರೂಪದರ್ಶಿ ಮನ್ರೋ. ಸತ್ತು ದಶಕಗಳೇ ಕಳೆದರೂ ಜನಪ್ರಿಯತೆ ಸ್ವಲ್ಪವೂ ಮಾಸಿಲ್ಲ ಎಂಬುದಕ್ಕೆ ಇಂದಿಗೂ ಮರ್ಲಿನ್ ಬಳಸಿದ ವಸ್ತುಗಳನ್ನು ಲಕ್ಷಗಟ್ಟಲೆ ಹಣ ನೀಡಿ ಮುಗಿಬಿದ್ದು ಕೊಳ್ಳುವ ಸುದ್ದಿಗಳೇ ಸಾಕ್ಷಿ.[೧][೨][೩]
ಹುಟ್ಟು-ಬಾಲ್ಯ
[ಬದಲಾಯಿಸಿ]1 ಜೂನ್, 1926ರಂದು ಲಾಸ್ ಏಂಜಲಿಸಿನ ಆಸ್ಪತ್ರೆಯೊಂದರಲ್ಲಿ ನೋರ್ಮಾ ಜೀನ್ ಮಾರ್ಟನ್ಸನ್ ಆಗಿ ಜನಿಸಿದ ಮನ್ರೋ ಅವರ ತಾಯಿ 'ಗ್ಲಾಡೀಸ್ ಪರ್ಲ್ ಬೇಕರ್'.[೪] ತಂದೆ 'ಮಾರ್ಟಿನ್ ಎಡ್ವ್ವರ್ಡ್ ಮಾರ್ಟನ್ಸನ್', ವಿಚ್ಛೇದನ ಕೊಟ್ಟು ದೂರ ಸರಿದಿದ್ದರು. ಮಾನಸಿಕ ಸ್ತಿಮಿತತೆ ಕಳೆದುಕೊಂಡು ತಾಯಿ ಆಸ್ಪತ್ರೆ ಸೇರಿದ ಮೇಲೆ ಬಾಲಕಿ ಮನ್ರೋ ಅವರಿವರ ಆಶ್ರಯದಲ್ಲಿ ಬೆಳೆದರು.
—ಮನ್ರೋ 1962ರಲ್ಲಿ ನೀಡಿದ ಸಂದರ್ಶನವೊಂದರಿಂದ
ಮನ್ರೋ ತಾಯಿಯ ಹತ್ತಿರದ ಗೆಳತಿ 'ಗ್ರೇಸ್ ಗೋಡ್ಡರ್ಡ್' ಕಾಳಜಿಯಿಂದ ಬೆಳೆಸಿದರು. ಸ್ವಂತ ಕುಟುಂಬದ ಒಡನಾಟವಿಲ್ಲದೆ ಅನಾಥೆಯಂತೆ ಬೆಳೆದ ಮನ್ರೋ, ಒಂಟಿತನದ ಜೊತೆಗೆ ಚಿಕ್ಕ ವಯಸ್ಸಿನಲ್ಲೇ ದೈಹಿಕ ಕಿರುಕುಳಗಳನ್ನು ಅನುಭವಿಸಬೇಕಾಯಿತು.
ವೈವಾಹಿಕ ಜೀವನ
[ಬದಲಾಯಿಸಿ]ತಮ್ಮ 16ನೇ ವಯಸ್ಸಿನಲ್ಲಿ ನೆರೆಮನೆಯ 21 ವರ್ಷದ ಹುಡುಗ, ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜೇಮ್ಸ್ ಡಾಪರ್ಟಿಯನ್ನು ಮದುವೆಯಾದ ಮನ್ರೋ ಶಾಲೆ ಬಿಟ್ಟು ಗೃಹಿಣಿಯಾದರು. ಆದರೆ, ನಟಿಯಾಗಲು ಹೊರಟ ತನ್ನ ಹೆಂಡತಿಯ ಇಚ್ಛೆಯನ್ನು ಒಪ್ಪದ ಜೇಮ್ಸ್ ನಿಂದ 1946ರಲ್ಲಿ ಮನ್ರೋ ವಿಚ್ಛೇದನ ಪಡೆದರು.
ನಟಿಯಾಗಿ ಪ್ರಸಿದ್ಧಿಗೆ ಬಂದ ಮನ್ರೋ ಬೇಸ್ ಬಾಲ್ ಆಟಗಾರ ಜೋ ಡಿಮ್ಯಾಗಿಯೋ ಅವರನ್ನು 1954ರಲ್ಲಿ ಮದುವೆಯಾದರು. ಆದರೆ ಚಿತ್ರವೊಂದರ ಚಿತ್ರೀಕರಣದ ವೇಳೆಯಲ್ಲಿ ಮನ್ರೋ ಧರಿಸಿದ್ದ ವಸ್ತ್ರ ಗಾಳಿಗೆ ಮೇಲೆ ಹಾರಿ, ಅದನ್ನು ತಡೆಯಲೆತ್ನಿಸುವ ಮನ್ರೋ ಚಿತ್ರಗಳು ಎಲ್ಲಡೆ ಹರಿದಾಡಿ ದೊಡ್ಡ ವಿಷಯವಾಯಿತು. ಇಂದರಿಂದ ಕುಪಿತಗೊಂಡ ಜೋ 1955ರಲ್ಲಿ ತಮ್ಮ ಸಂಬಂಧ ಮುರಿದರು.
ಮನ್ರೋ ಅವರ ಮೂರನೇ ಮದುವೆ ಅಮೆರಿಕದ ಖ್ಯಾತ ನಾಟಕಕಾರ ಆರ್ಥರ್ ಮಿಲ್ಲರ್ ಅವರೊಂದಿಗೆ 1956ರಲ್ಲಿ ಆಯಿತು. ಅಲ್ಲಿಂದ ಮನ್ರೋ ಜುಡಾಯಿಸಂ ಪಂಥಕ್ಕೆ ಬದ್ಧರಾದರು. ನಿದ್ರಾಹೀನತೆಯಿಂದ ಬಳಲುತ್ತಿದ್ದ ಮನ್ರೋ ಸಾಕಷ್ಟು ಮಾದಕ ವಸ್ತುಗಳಿಗೆ ಒಗ್ಗಿಕೊಂಡಿದ್ದರು. ಕೊನೆಗೆ 1961ರಲ್ಲಿ ಅರ್ಥರ್ ಅವರಿಂದಲೂ ದೂರವಾದ ಮನ್ರೋ ಒಂಟಿಯಾದರು.
ಉಲ್ಲೇಖಗಳು
[ಬದಲಾಯಿಸಿ]- ↑ "ದುಬಾರಿ ಬೆಲೆಗೆ ಮರ್ಲಿನ್ ಮನ್ರೋ ವಸ್ತುಗಳು ಹರಾಜು". filmibeat.com.
- ↑ https://kannada.filmibeat.com/hollywood/marilyn-monroe-s-rare-classic-black-white-negative-sold-016675.html?utm_medium=Mobile&utm_source=FB-KN&utm_campaign=Similar-Topic-Slider
- ↑ "ಮರ್ಲಿಮ್ ಮನ್ರೋ ಎದೆಯ ಎಕ್ಸ್ ರೇಗೆ 45000 ಡಾಲರ್". filmibeat.com.
- ↑ https://www.udayavani.com/articles/web-focus/45-things-you-didnt-know-about-marilyn-monroe
- ↑ Meryman, Richard (September 14, 2007). "Great interviews of the 20th century: "When you're famous you run into human nature in a raw kind of way"". The Guardian. Guardian Media Group. Archived from the original on November 4, 2015. Retrieved October 21, 2015.