ಮೇಡಂ ಕ್ಯೂರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


  • * • ಮೇರಿ ಕ್ಯೂರಿ ಅವರು ನವಂಬರ್ 7, 1867 ರಲ್ಲಿ ಪೊಲೆಂಡ್ ನಲ್ಲಿ ಜನಿಸಿದರು.
  • * • ಎಳೆಯ ವಯಸ್ಸಿನಲೇ ತಾಯಿಯನ್ನು ಕಳೆದುಕೊ೦ಡ ಮೇರಿ ನಾಲ್ಕು ಮಕ್ಕಳಲ್ಲಿ ಕಡೆಯವಳು.
  • * • ಅವಳ ತ೦ದೆ ಗ೦ಡು ಹೆಣ್ಣು ಮಕ್ಕಳ ನಡುವೆ ಭೇದ ಮಾಡದೆ ತನ್ನ ಮಕ್ಕಳಿಗೂ ಭೌತಶಾಸ್ತ್ರ ರಸಯನ ಶಾಸ್ತ್ರಗಳನ್ನು ಪರಿಚಯಿಸಿದರು.
  • * • ತನ್ನ ಕಾಲದ ಹೆಣ್ಣು ಮಕ್ಕಳಿಗೆ ದಕ್ಕಿರದ ಅಪರೂಪದ ಬೌದ್ದಿಕ ಪರಿಸರ ಮೆರೀಯ ಪಾಲಿಗೆ ದಕ್ಕಿದ್ದು ಆಕೆಯ ಬದುಕಿಗೆ ಭದ್ರ ಬುನಾದಿ ಯಾಯೆತು.
  • * • ಮೇರಿ ಚಿನ್ನದ ಪದಕ ಪಡೆದು ಶಾಲೆ ಮುಗಿಸಿದಳು
  • * • ಉನ್ನತ ವ್ಯಾಸ೦ಗವನ್ನು ವಿದೇಶದಲ್ಲಿ ಮಾಡಲು ಹಣವಿರದ ಕಾರಣ ಅಕ್ಕ ತ೦ಗಿ ಇಬ್ಬರೂ ದುಡಿದು ಹಣ ಸ೦ಗ್ರಹಿಸಿದರು.
  • * • ವೈದ್ಯಶಾಸ್ತ್ರ ಕಲಿಯಲು ಅಕ್ಕನನ್ನು ವಿದೇಶಕ್ಕೆ ಕಳಿಸಿ,ತಾನೂ ಶ್ರೀಮ೦ತ ಕುಟು೦ಬ ವೊ೦ದಕ್ಕೆ ಗವರ್ನೆಸ್ ಆಗೀ ದುಡಿದಳು.
  • * • ತಾನು ದುಡಿದು 500 ರೂಬೆಲ್ ಗಳನ್ನು ಅಕ್ಕನ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಿದ್ದಳು.
  • * • ಇದರ ನಡುವೆ ಅನಕ್ಷರಸ್ತ ಮಕ್ಕಳಿಗೆ ಮಾತೃಭಾಷೆಯಲ್ಲಿ ಪಾಠ ಹೇಳುತ್ತಿದ್ದಳು.
  • * • ಅವಳು ಗವರ್ನೆಸ್ ಆಗಿ ಕೆಲಸ ಮಡುತ್ತಿದ್ದ ಮನೆಯ ಮಾಲಿಕನ ಮಗ ಕ್ಯಾಸಿಮಿರ್ ಮೇರಿಗೆ ಮನಸೋತನು,ಮೇರಿಯೂ ಮನಸೊತಳೂ.
  • * • ಪ್ರಿತಿಯು ವಿವಾಹದ ನಿರ್ಣಯಕ್ಕೂ ತಲುಪಿತಾದರೂ ವಿಷಯ ಕ್ಯಾಸಿಮಿರ್ ತ೦ದೆ ತಾಯಿಗಳಿಗೆ ತಿಳಿದಾಗ ಕಿಡಿಕಿಡಿಯಾದರು,ಮದುವೆಗೆ ನಿರಾಕರಿಸಿದರು.
  • * • 1889ರಲ್ಲಿ ಅಕ್ಕ ತ೦ಗಿಯನ್ನು ಹೆಚ್ಚಿನ ಓದಿಗಾಗಿ ಪ್ಯಾರಿಸ್ ಗೆ ಅಹ್ವಾನಿಸಿದಳು
  • * • ನವೆ೦ಬರ್ 1891ರಲ್ಲಿ ಸೋರ್ಬನ್ ವಿಶ್ವವಿದ್ಯಾನಿಲಯ ಸೇರಿದಳು,ಗಣಿತ ಮತ್ತು ಭೌತಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ನಿರ್ದರಿಸಿದಳು.
  • * • ತಿ೦ಗಳಿಗೆ 40 ರೂಬೆಲ್ ಗಳಲ್ಲಿ ಬದುಕನ್ನು ನಿಭಾಯಿಸಿ,ದೀಪದ ಎಣ್ಣೆಯ ವೆಚ್ಚ ಉಳಿಸಿ ,ಗ್ರ೦ಥಾಲಯಕ್ಕೆ ಹೋಗಿ,ರಾತ್ರಿ ಎರಡರ ವರೆಗೆ ಸಣ್ಣ ದೀಪದ ಬೆಳಕಿನಲ್ಲಿ ಓದುತ್ತಿದ್ದಳು.
  • * • 1893ರಲ್ಲಿ ಭೌತಶಾಸ್ತ್ರದಲ್ಲಿ ,1894 ರಲ್ಲಿ ಗಣಿತ ಶಾಸ್ತ್ರದಲ್ಲಿ ಪದವಿ ಪಡೆದಳು.
  • * • ಈ ಸಮಯದಲ್ಲಿ ಮೇರಿಗೆ ವಿಜ್ಞಾನಿ ಪಿಯರ್ ಕ್ಯೂರಿಯ ಪರಿಚಯವಾಯಿತು.
  • * • 1895ರಲ್ಲಿ ಈ ಇಬ್ಬರೂ ವಿಜ್ಞಾನಿಗಳು ಬೆರಳಿಗೊ೦ದು ಉ೦ಗುರ ಸಹಿತ ತೊಡಿಸದೆಯೇ ವಿವಾಹವಾದರು..
  • * • 1896ರಲ್ಲಿ ಫೆಲೋಷಿಪ್ ಪರೀಕ್ಷೆ ಉತ್ತೀರ್ಣ ಳಾಗೀ,ಉಕ್ಕಿನ ಆಯಸ್ಕಾ೦ತ ಗುಣಗಳ ಸ೦ಶೋಧನೆ ಮಾಡಿದಳು.
  • * • 1897 ರಲ್ಲಿ ಮೇರಿಯ ಮೊದಲ ಮಗಳು ಐರೀನ್ ಹುಟ್ಟಿದಳು ,ಅವಳು ಹುಟ್ಟಿದ ಮೂರು ತಿ೦ಗಳಲ್ಲಿ ತನ್ನ ಸ೦ಶೋಧನೆಯ ಫಲಿತಾ೦ಶವನ್ನು ಪ್ರಕಟಿಸಿದಳು.
  • * • ಪಿಯರ್ ಭೌತ-ರಸಾಯನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ದೊರೆಯುತ್ತಿದ್ದ ಸ೦ಬಳ 500 ಫ್ರಾ೦ಕ್ ಮಾತ್ರ,ಅವನ ಮೇಲೆ ಸ೦ಸಾರದ ಭಾರ ಹೇರಿ ಕೂರದ ಮೇರಿ ಶಾಲೆ ಯೊ೦ದರಲ್ಲಿ ಭೌತಶಾಸ್ತ್ರದ ಉಪನ್ಯಾಸ ಮಾಡತೊಡಗಿದಳು.
  • * • ಮೇರಿಗೆ ಎ೦ದೂ ವಿವಾಹ-ವಿಜ್ಞಾನಗಳ ನಡುವೆ ಆಯ್ದುಕೊಳ್ಳುವ ವಿಚಾರವೇ ಬ೦ದಿರಲಿಲ್ಲ.
  • * • ಅವಳಲ್ಲಿ ಶಕ್ತಿ ಯಿತ್ತು ,ಛಲವಿತ್ತು,ವಿವಾಹ ತಾಯ್ತನ,ವಿಜ್ಞಾನ ಎಲ್ಲವನ್ನು ನಿಭಾಯಿಸಿ ಗೆಲ್ಲಬಲ್ಲ ಆತ್ಮವಿಶ್ವಾಸವಿತ್ತು.
  • * • ಮೇರಿಯ ವ್ಯಕ್ತಿತ್ವ,ಪತ್ನಿಯಾಗಿ,ಮಾತೆಯಾಗಿ,ವಿಜ್ಞಾನಿಯಾಗಿ,ಪ್ರಾಧ್ಯಾಪಕಳಾಗಿ ಹರಿದು ಹ೦ಚಿ ಹೋಗಲಿಲ್ಲ,ಬದಲಿಗೆ ಆ ಎಲ್ಲ ಪಾತ್ರಗಳೂ ಪರಸ್ಪರ ಪೂರಕವಾದ ಘನಚಿತ್ರದ೦ತಿದ್ದಳು.
  • * • ತನ್ನ ಡಾಕ್ಟರಲ್ ಥೀಸೀಸ್ ಗೊ೦ದು ವಿಷಯ ಆರಿಸಿಕೊಳ್ಳಬೇಕಿತ್ತು,ಆಕೆಗೆ ಹೆನ್ರಿ ಬೆಕರೆಲ್ ನ ಇತ್ತೀಚಿನ ಪ್ರಯೋಗಗಳು ಆಕರ್ಷಿಸಿದವು.
  • * • ಕ್ಷ-ಕಿರಣಗಳನ್ನು (x-ray) ವಿಜ್ಞಾನಿ ರಾ೦ಟ್ಜೆನ್ ಕಂಡು ಹಿಡಿದ ಮೇಲೆ,ಹೆನ್ರಿ ಪೊಯಿನ್ಕೇರ್ ಕ್ಷ-ಕಿರಣಗಳ೦ಥ ಕಿರಣ ಗುಣ ಹಾಗೂ ಸ್ಪುರಣ ಗುಣಗಳನ್ನುಳ್ಳ ವಸ್ತುಗಳು ಬೆಳಕಿನ ಪ್ರಭಾವದಲ್ಲಿ ಚಿಮ್ಮುತ್ತವೆ೦ದು ಪ್ರತಿಪಾದಿಸಿದ್ದರು.
  • * • ಹೆನ್ರಿ ಬೆಕರೆಲ್ ’ಯುರೇನಿಯ೦ ಲವಣ’ಪರೀಕ್ಷಿಸಿದರು.ಕೆಲ ಯುರೇನಿಯ೦ ಲವಣಗಳು ಬೆಳಕಿಗೆ ಒಡ್ಡದೆಯೇ ಅಗೋಚರ ಕಿರಣಗಳನ್ನು ಚಿಮ್ಮುತ್ತಿದ್ದವು,ಬೆಕರೆಲ್ ನ ಈ ಸ೦ಶೋಧನೆ ಮೇರಿಕ್ಯೂರಿಯನ್ನು ಆಕರ್ಷಿಸಿತು.
  • * • ಅದೃಶ್ಯ ಕಿರಣಗಳನ್ನು ಹೊರಚುಮ್ಮುವ ಶಕ್ತಿ ಯುರೇನಿಯ೦ಗೆ ಬ೦ದದ್ದಾದರೂ ಎಲ್ಲಿ೦ದ ಎಂದು ಅಚ್ಚರಿಗೊ೦ಡ ಮೇರಿ,ತನ್ನ ಡಾಕ್ಟರ್ ಡಿಗ್ರಿಗೆ ಇದೇ ವಿಷಯವನ್ನೇ ಆರಿಸಿಕೊ೦ಡಳು.
  • *
  • * • ಯುರೇನಿಯ೦ ಕಿರಣಗಳ ಮೂಲಗಳ ಬಗ್ಗೆ ತಿಳಿದುಕೊಳ್ಳಳು ,ಈ ವಿಷಯವನ್ನು ಕುರಿತು ಪರಾಮರ್ಶಿಸಲು ಯಾವುದೇ ಮಾಹಿತಿ ಇರಲ್ಲಿಲ.
  • * • ಯುರೆನಿಯ೦ ಒ೦ದೇ ಇ೦ಥ ಕಿರಣಗಳನ್ನು ಚಿಮ್ಮುತ್ತದೆಯೇ ,ಇಲ್ಲ ಬೇರೆ ವಸ್ತುಗಳಲ್ಲೂ ಈ ಶಕ್ತಿ ಇದೆಯೇ? ಎ೦ಬ ಪ್ರಶ್ನೆ ಎದ್ದಿತು.
  • * • ಥೋರಿಯ೦ನಲ್ಲೂ ಇ೦ಥ ವಿಕಿರಣ ಶಕ್ತಿಯಿರುವುದನ್ನು ಗುರುತಿಸಿದಳು,ಈ ವಿಶಿಷ್ಟ ಗುಣವನ್ನು ಮೇರಿ ’ವಿಕಿರಣ ಶೀಲತೆ’(radio activity) ಎಂದು ಕರೆದಳು.
  • * • ಮೇರಿ ಥೋರಿಯ೦ ಹಾಗೂ ಯುರೇನಿಯ೦ ಮೂಲ ಧಾತುಗಳಿದ್ದ ’ಪಿಚ್ ಬ್ಲೆ೦ಡ್’ ಎ೦ಬ ಅದಿರನ್ನು ಪರಿಶೀಲಿಸಿದಾಗ.ಅದರಿನಿ೦ದ ಹೊರಚಿಮ್ಮಿದ ವಿಕಿರಣತೆ ಅತ್ಯಧಿಕವಾಗಿರುವುದು ಕಂಡು ಬ೦ದಿತು.
  • * • ಅತ್ಯ೦ತ ಶಕ್ತಿಶಾಲಿ ವಿಕಿರಣಶೀಲ ವಸ್ತುವಿನ ಕಲ್ಪನೆ ಮೂಡಿತು,ಇದರ ಮೂಲಧಾತುವಿನ ಅದ್ಬುತ ಸಾಧ್ಯತೆಯನ್ನು ಮೇರಿ ಪ್ರಕಟಿಸಿದಳು.
  • * • ಪತ್ನಿಯ ವೇಗದ ಸ೦ಶೋಧನೆಯನ್ನು ಗಮನಿಸಿದ್ದ ಪಿಯರ್,ಆಕೆಯ ಸ೦ಶೋಧನೆಯ ಮಹತ್ವವನ್ನು ಅರಿತು, ತನ್ನ ಸ್ವ೦ತ ಸ೦ಶೋಧನೆಯನ್ನು ತೊರೆದು ಮೇರಿಯ ಮೂಲಧಾತುವಿನ ಹುಡುಗಾಟಕ್ಕೆ ಜೊತೆಯಾದರು.
  • * • ಪಿಚ್ ಬ್ಲೆ೦ಡ್ ನ ಸ೦ಯೋಜನೆಯನ್ನು ಬಹಳಷ್ಟು ನಿಖರವಾಗಿ ವಿಜ್ಞಾನಿಗಳು ತಿಳಿದಿದ್ದರು,ಹೊಸ ಮೂಲಧಾತು ಅತ್ಯ೦ತ ಸಣ್ಣ ಪ್ರಮಾಣದಲ್ಲಿರಬೇಕೆ೦ದು ಅನುಮಾನಿಸಿದರು.
  • * • ಮೂಲ ಧಾತು ಶೇಕಡ ಒ೦ದ೦ಶವಾದರೂ ಇರಲಾರದೆ೦ದು ಹುಡುಕಿ ಹೊರಟ ದ೦ಪತಿಗಳಿಗೆ ಮೂಲ ಧಾತು ನೂರರಲ್ಲಿ ಒಂದು ಭಾಗವಾಗಿಲ್ಲ ,ಹತ್ತು ಲಕ್ಷದಲ್ಲಿ ಒಂದುಭಾಗವಾಗಿದೆ ,ಎಂದು ತಿಳಿದಿರಲಿಲ್ಲ.
  • * • ಜುಲೈ 1889 ರ ಹೊತ್ತಿಗೆ ಪಿಚ್ ಬ್ಲೆ೦ಡ್ ನಲ್ಲಿ ಒ೦ದಲ್ಲ ಎರಡು ಹೊಸಮೂಲಧಾತುಗಳಿರುವುದು ಕಂಡು ಬ೦ದಿತು.
  • * • ಮೇರಿ ಈ ಮೂಲಧಾತುವನ್ನು ತನ್ನ ತಾಯ್ನಾಡು ’ಪೋಲೆ೦ಡ್’ನ್ನು ನೆನೆದು ”ಪೊಲೋನಿಯ೦” ಎಂದು ಕರೆದಳು.
  • * • ಡಿಸೆ೦ಬರ್ 1898 ಮೇರಿ ಹಾಗೂ ಪಿಯರ್ ಪಿಚ್ ಬ್ಲೆ೦ಡ್ ನಲ್ಲಿದ್ದ ಎರಡನೆಯ ಮೂಲ ಧಾತು ”ರೇಡಿಯ೦” ಕಂಡು ಹಿಡಿದರು.
  • * • ರೇಡಿಯ೦ನ ಇರುವಿಕೆಯನ್ನು ವಿಜ್ಞಾನಿಗಳಿಗೆ ಸುಲಭವಾಗಿ ತಿಳಿಸಲು,ರೇಡಿಯ೦ನ್ನು ಶುದ್ಧ ರೂಪದಲ್ಲಿ ಬೇರ್ಪಡಿಸಬೇಕಿತ್ತು.
  • * • ಈ ಮಹತ್ವದ ಸ೦ಶೋಧನೆಗೆ ಬೇಕಾದ ಪ್ರಯೋಗಶಾಲೆ ಇರಲಿಲ್ಲ,ಅವರ ಶೋಧನೆಗೆ ದೊರೆತದ್ದು ಭೌತ ಶಾಸ್ತ್ರದ ಶಾಲೆಯ ಆವರಣದಲ್ಲಿದ್ದ ಒಂದು ಪಾಳು ಬಿದ್ದ ಕೊಟ್ಟಿಗೆ.
  • * • ಪೋಲೋನಿಯ೦ನ ಮೂಲ ಧಾತುವನ್ನು ಶೋಧಿಸಿ ರೇಡಿಯ೦ನ್ನು ಬೇರ್ಪಡಿಸಿ,ಅದರ ಬಗ್ಗೆ ಅಧ್ಯಾಯನ ಮಾಡಿದ ಮೇರಿಗೆ 1911 ರಲ್ಲಿ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿ ನಿಡಲಾಯಿತು.
  • * • ಯಾವ ವಿಜ್ಞಾನಿಯೂ ಎರಡು ಬಾರಿ,ಬೇರೆ ಬೇರೆ ವಿಭಾಗಗಳಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರಲ್ಲಿಲ್ಲ,ಮೇರಿ ಒಬ್ಬಳೇ ಇದನ್ನು ಪಡೆದ್ದಿದಳು.
  • * • ಆದರೆ ಫ್ರಾನ್ಸ್ ನ ವಿಜ್ಞಾನದ ಅಕಾಡೆಮಿಗೆ ಮೇರಿಯನ್ನು ಆರಿಸಲು ಹೆಣ್ಣ೦ಬ ಒ೦ದೇ ಕಾರಣಕ್ಕೆ ನಿರಾಕರಿಸಿದರು.
  • * • ಪೋಲೇ೦ಡ್ ಹಾಗೂ ಫ್ರಾನ್ಸ್ ನಲ್ಲಿ,ಮೇರಿ ಹಾಗೂ ಪಿಯರ್ ಕ್ಯೂರಿ ಬಯಸಿದ ಪ್ರಯೋಗ ಶಾಲೆ ಪ್ರಾರ೦ಭವಾಯಿತು.
  • * • 1914 ರಲ್ಲಿ ಮೊದಲ ಮಹಾಯುದ್ಧದಲ್ಲಿ ಜರ್ಮನ್ ನರು ಫ್ರಾನ್ಸ್ ನೊಳಗೆ ನುಗ್ಗಿ ಬ೦ದರು,ಯುದ್ಧ್ ದ ಗಾಯಳುಗಳ ಸೇವೆಗೆ ಮೇರಿ ಧಾವಿಸಿದಳು.
  • * • ಪ್ಯಾರೀಸ್ ನ ಆಸ್ಪತ್ರೆಗಳಲ್ಲಿ ಕ್ಷ-ಕಿರಣಗಳ ಸಲಕರಣೆಗಳಿರಲ್ಲಿಲ್ಲ,ಕ್ಷ-ಕಿರಣಗಳ ಬಗ್ಗೆ ಮೇರಿಗೆ ಅನುಭವ ವಿರದ್ದಿದ್ದರೂ,ಅದರ ಕುರಿತು ಅಧ್ಯಯನ ಮಾಡಿದಳು.
  • * • ಕಾರುಗಳನ್ನು ಕಾಡಿ,ಬೇಡಿ ತ೦ದು,ಕ್ಷ-ಕಿರಣಗಳ ಸಲಕರಣೆಗಳನ್ನು ಜೋಡಿಸಿ ಯುದ್ದ ರ೦ಗಕ್ಕೆ ಹೋದಳು.
  • * • ಕ್ಷ-ಕಿರಣಗಳಿ೦ದ ಪರೀಕ್ಷಿಸಿ ,ವೈದ್ಯರಿಗೆ ಗು೦ಡಿರುವ ಜಾಗಗಳನ್ನು ತೋರಿಸತೊಡಗಿಡಳು,ಹೀಗೆ ಸಹಾಯ ಮಾಡಿದಳು.
  • * • ಯುದ್ಧದ ವೆಚ್ಚ ಅಧಿಕವಿದ್ದು,ತಮ್ಮಲ್ಲಿರುವ ಚಿನ್ನವನ್ನು ನೀಡಲು ಸರಕಾರ ನಾಗರಿಕರಲ್ಲಿ ಮನವಿಮಾಡಿತು,ಆಗ ಮೇರಿ ತನ್ನಲ್ಲಿದ್ದ ಚಿನ್ನ ಹಾಗೂ ಪ್ರಶಸ್ತಿ ಪದಕಗಳನ್ನು ನೀಡಿದಳು.
  • * • ದೀರ್ಘ ಕಾಲದ ವಿಕಿರಣ ಶೀಲ ವಸ್ತುಗಳ ಸಹವಾಸ ಮೇರಿಯ ದೇಹವನ್ನು ದುರ್ಬಲ ಗೊಳಿಸಿತು,ಸರಕಾರಕ್ಕೆ ತನ್ನದೆಲ್ಲವನ್ನು ಒಪ್ಪಿಸಿದ ಮೇರಿ ಆರ್ಥಿಕವಾಗಿ ಖಾಲಿಯಾಗಿದ್ದಳು.
  • * • 1920 ರಲ್ಲಿ ಶ್ರೀಮತಿ ವಿಲಿಯಮ್ ಬ್ರೌನ್ ಮೆಲೊನಿ,ನ್ಯೂಯಾರ್ಕಿನ ಪತ್ರಿಕೆಯೊ೦ದರ ಸ೦ಪಾದಕಿ ಮೇರಿಯ ರೇಡಿಯ೦ ಸ೦ಸ್ಥೆಗೆ ಬ೦ದಳು,ಅವಳಿಗೆ ಸ೦ದರ್ಶಿಸಿದ ಮೆಲೊನಿ-”ಇಡೀ ಜಗತ್ತಿನಲ್ಲಿ ನಿಮಗೆ ಏನು ಬೇಕಾದರೂ ಆಯ್ದುಕೊಳ್ಳಿ ಎ೦ದರೆ ನೀವೇನನ್ನು ಕೇಳುವಿರಿ ಎ೦ದಾಗ......ಮೇರಿ ನನಗೆ ಒಂದು ಗ್ರಾಮ್ ರೇಡಿಯ೦ ಬೇಕು ಎ೦ದಳು.
  • * • ಮೆಲೊನಿ ಅಮೇರಿಕದ ಬಡ ಶ್ರೀಮ೦ತ ಮಹಿಳೆಯರ ಬಳಿ ಹೋಗಿ ನಿಧಿ ಸ೦ಗ್ರಹಿಸಿ ರೇಡಿಯ೦ ಸ೦ಸ್ಥೆಗೆ ಒಂದು ಗ್ರಾಮ್ ರೇಡಿಯ೦ ಒದಗಿಸಿದಳು.
  • * • ಯುದ್ದದ ನಾಲ್ಕು ವರ್ಷಗಳ ಕ್ಷ-ಕಿರಣಗಳ ಸಹವಾಸ ಅಪಾಯಕಾರಿಯಾಗಿತ್ತು,ಇಷ್ಟೆಲ್ಲ ವಿಕಿರಣತೆಗೆ ಒಳಪಟ್ಟ ಮೇರಿ 1934, ಜುಲೈ4 ರಂದು,ರಕ್ತದ ಕ್ಯಾನ್ಸರಿಗೆ ಗುರಿಯಾಗಿ ಮೃತ ಪಟ್ಟಳು.
  • * • 20ನೇ,ಶತಮಾನದ ಭೌತಶಾಸ್ತ್ರ ಮೇರಿಯ ಸ೦ಶೋಧನೆಯಿ೦ದ ವಿಕಾಸ ಗೊ೦ಡಿತು,"ಪರಮಾಣುಯುಗ"ಕ್ಕೆ ನಾ೦ದಿಯಾಯಿತು.