ವಿಷಯಕ್ಕೆ ಹೋಗು

ಮೆಟಫಿಸಿಕಲ್ ಕಾವ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾನ್ ಡನ್, ಪ್ರಖ್ಯಾತ ಮೆಟಫಿಸಿಕಲ್ ಕವಿ

ಮೆಟಫಿಸಿಕಲ್ ಕಾವ್ಯವು ಸಾಮಾನ್ಯವಾಗಿ ಹದಿನೇಳನೆಯ ಶತಮಾನದ ಮೊದಲ ಅರ್ಧದಲ್ಲಿ ಕಂಡುಬಂದ ಒಂದು ಕಾವ್ಯ ಪ್ರಕಾರ. ಈ ಕಾವ್ಯವು ಚಾಣಾಕ್ಷಾತನದಿಂದ ಕೂಡಿರುತ್ತದೆ. ಈ ಕಾವ್ಯವು ಚತುರತೆಯ ರೂಪಕಗಳು, ಮಾ‌ರ್ಮಿಕ ಆಲೋಚನೆ, ಮತ್ತು ವಿಡಂಬನೆಗಳಿಗೆ ಹೆಸರುವಾಸಿಯಾಗಿದೆ. ಹದಿನೇಳನೆಯ ಶತಮಾನದ ಮೊದಲಾರ್ಧಾದಲ್ಲಿ ಕಂಡುಬರುವ ಇಂಗ್ಲೀಷ್ ಸಾಹಿತಿಗಳ ಕಾವ್ಯಕ್ಕೆ ಸಂಬಂಧಿಸಿದಂತೆ 'ಮೆಟಫಿಸಿಕಲ್' ಎಂಬ ಪದವನ್ನು ಬಳಸಲಾಗುತ್ತದೆ.ಮೆಟಫಿಸಿಕಲ್ ಕಾವ್ಯದ ಮುಖ್ಯ ಸಾಹಿತಿಗಳೆಂದರೆ ಜಾನ್ ಡನ್ {೧೫೭೧-೧೬೩೧},ಜಾರ್ಜ್ ಹರ್ಬರ್ಟ್{೧೫೯೩-೧೬೩೩},ಹೆನ್ರಿ ವಾನ್ {೧೬೨೨-೯೫}, ಆಂಡ್ರ್ಯೂ ಮಾರ್ವೆಲ್{೧೬೨೧-೭೮}ಮತ್ತು ರಿಚರ್ಡ್ ಕ್ರಾಷ{೧೬೧೨-೪೯}.

17ನೆಯ ಶತಮಾನ ಇಂಗ್ಲೆಂಡಿನ ಚರಿತ್ರೆಯಲ್ಲಿ ರಾಜಕೀಯ ಮತ್ತು ಧಾರ್ಮಿಕ ಜಿಜ್ಞಾಸೆಯ ಮತ್ತು ಕಲಹಗಳ ಕಾಲ. ಎಲಿಜಬೆತ್ಳ ಯುಗದಂತೆ ತಾರುಣ್ಯದ ಉತ್ಸಾಹ, ಉದ್ವೇಗ, ಭಾವಾತಿಶಯಗಳು ಪ್ರಧಾನವಾಗಿರದೆ ಆಲೋಚನೆ, ವಿಮರ್ಶೆ ಈ ಕಾಲದಲ್ಲಿ ಪ್ರಾಬಲ್ಯಕ್ಕೆ ಬಂದುವು. ಇದಕ್ಕೆ ಅನುಗುಣವಾಗಿ ಚರ್ಚಾತ್ಮಕವಾದ ಗದ್ಯಸಾಹಿತ್ಯ ಈ ಶತಮಾನದಲ್ಲಿ ಬೆಳೆಯಿತು. ಆದರೆ ಕಾವ್ಯಸೃಷ್ಟಿಯೂ ನಡೆಯಿತು. ಇಡೀ ರಾಷ್ಟ್ರಜೀವನವನ್ನು ಪ್ರತಿಬಿಂಬಿಸುವ ಕಾವ್ಯ ಬಂದಿತು. ಪ್ರಾಟೆಸ್ಟಂಟ್ ಮತ ಮತ್ತು ಅದರ ಒಳಪಂಗಡಗಳು, ಕ್ಯಾಥೊಲಿಕ್ ಮತ ಮುಂತಾದುವನ್ನು ಪ್ರತಿನಿಧಿಸುವ ಕವಿಗಳು ಬಂದರು. ಲೌಕಿಕ ಕಾವ್ಯವೂ ಪ್ರಣಯಗೀತೆಗಳ ಮತ್ತು ರಾಜಕೀಯ ವಿಡಂಬನೆಗಳ ರೂಪವನ್ನು ತಳೆದು ಬೆಳೆಯಿತು.

ಮೆಟಫಿಸಿಕಲ್ ಕಾವ್ಯಕ್ಕೆ ಸಂಬಂಧಿಸಿದಂತೆ ಟಿ. ಎಸ್. ಎಲಿಯಟ್ ತನ್ನ ಅಭಿಪ್ರಾಯವನ್ನು ಈ ರೀತಿ ವ್ಯಕ್ತಪಡಿಸುತ್ತಾನೆ-

"ಮೆಟಫಿಸಿಕಲ್ ಕಾವ್ಯವು ಕೇವಲ ವ್ಯಾಖ್ಯಾನಿಸುವುದಕ್ಕಷ್ಟೆ ಕಷ್ಟವಲ್ಲ ; ಯಾವ ಸಾಹಿತಿಗಳು ಯಾವ ಕಾವ್ಯದಲ್ಲಿ ಇದನ್ನು ಅಭ್ಯಾಸ ಮಾಡಿದ್ದಾರೆ ಎನ್ನುವುದನ್ನು ನಿರ್ಧರಿಸುವುದು ಕಷ್ಟ."

ಮೂಲತಃ ಮೆಟಫಿಸಿಕಲ್ ಎಂಬ ಪದವನ್ನು ತತ್ವಶಾಸ್ತ್ರದಲ್ಲಿ ಬಳಸಲಾಗಿದೆ. ಸರ್ ಹರ್ಬರ್ಟ್ ಗ್ರಿಯರ್ಸನ್ ಮೆಟಫಿಸಿಕಲ್ ಕಾವ್ಯದ ಬಗ್ಗೆ ತನ್ನ ಪುಸ್ತಕವಾದ "ಮೆಟಫಿಸಿಕಲ್ ಲಿರಿಕ್ಸ್ ಅಂಡ್ ಪೊಯೆಮ್ಸ್ ಆ‍ಫ್ ದ ಸೆವೆನ್ಟೀನ್ತ್ ಸೆಂಚುರಿ"ಯಲ್ಲಿ ಈ ರೀತಿ ಹೇಳಿದ್ದಾನೆ-

" ಈ ಕವನಗಳು ಜೀವನವೆಂಬ ಅತ್ಯದ್ಭುತ ನಾಟಕದಲ್ಲಿ ಮಾನವನ ಆತ್ಮಕ್ಕೆ ನೀಡಿದ ಪಾತ್ರದಿಂದ ಮತ್ತು ವಿಶ್ವದ ತಾತ್ವಿಕ ಪರಿಕಲ್ಪನೆಯಿಂದ ಪ್ರೇರಣೆಗೊಂಡಿರುವವು.

ಮೆಟಫಿಸಿಕಲ್ ಎಂಬ ಪದವನ್ನು ಮೊದಲು ಬಳಸಿದವನು ಡ್ರ್ಯೂಮಂಡ್.ಆದರೆ ಈ ಪದವನ್ನು ಪ್ರಖ್ಯಾತಿಗೊಳಿಸಿದವನು ಡಾ. ಜಾನ್ಸನ್. ಈತನನ್ನು ಸ್ಯಾಮುಯಲ್ ಜಾನ್ಸನ್ ಎಂತಲೂ ಕರೆಯುತ್ತಾರೆ. ಡಾ. ಜಾನ್ಸನ್ ತನ್ನ ಕೃತಿಯಾದ "ಲೈಫ್ ಆಫ್ ಕೌಲಿ" ಯಲ್ಲಿ ಮೆಟಫಿಸಿಕಲ್ ಕಾವ್ಯದ ಬಗ್ಗೆ ಈ ರೀತಿ ಹೇಳಿದ್ದಾನೆ-

" ಹದಿನೇಳನೆಯ ಶತಮಾನದ ಪ್ರಾರಂಭದಲ್ಲಿ ಕಾಣಿಸಿಕೊಳ್ಳುವ ಬರಹಗಾರರ ಕಾವ್ಯದ ಓಟವನ್ನು "ಮೆಟಫಿಸಿಕಲ್ ಕಾವ್ಯ" ಎಂದು ಹೇಳಬಹುದು. ಇವರು ಕಲಿಕೆಯ ಜನ ಮತ್ತು ಅವರ ಸಂಪೂರ್ಣ ಪ್ರಯತ್ನವು ಕಲಿಕೆಯನ್ನು ಪ್ರದರ್ಶಿಸುವುದೇ ಆಗಿರುತ್ತದೆ.

ಮೆಟಫಿಸಿಕಲ್ ಕಾವ್ಯವು ಮನುಷ್ಯನ ಸಂಪೂರ್ಣ ಅನುಭವಕ್ಕೆ ಸಂಬಂಧಿಸಿದ್ದು ; ಅಂದರೆ ಮನುಷ್ಯನ ಪ್ರೀತಿಯ ಬಗೆಗಿನ ಅನುಭವ, ಇಂದ್ರಿಯಾಸಕ್ತ ಅನುಭವ , ಕಲ್ಪನಾಮಯ ಅನುಭವ, ದೇವರು ಮತ್ತು ಮನುಷ್ಯನ ನಡುವಿನ ಸಂಬಂಧ ಮತ್ತು ಸ್ವಲ್ಪ ಮಟ್ಟಿಗೆ ಕಲೆ, ಸಂತೋಷ ಮತ್ತು ಕಲಿಕೆಗೆ ಸಂಬಂಧಪಟ್ಟಿದ್ದಾಗಿದೆ.ಮೆಟಫಿಸಿಕಲ್ ಕಾವ್ಯವು ಭಾವಗೀತೆಯಾಗಿರುತ್ತದೆ. ಇದು ಸಂಕ್ಷಿಪ್ತವಾಗಿದ್ದರೂ ತೀವ್ರವಾದ ಆಲೋಚನೆಯನ್ನು ಒಳಗೊಂಡಿರುತ್ತದೆ. ಮೆಟಫಿಸಿಕಲ್ ಕಾವ್ಯ ಬುದ್ಧಿಚಾತುರ್ಯ, ವಿಡಂಬನೆ ಮತ್ತು ಪದಗಳ ಆಟವನ್ನು ಒಳಗೊಂಡಿರುತ್ತದೆ.

ಲಕ್ಷಣಗಳು

[ಬದಲಾಯಿಸಿ]

ಚಿತ್ತದ ಏಕಾಗ್ರತೆ: ಮೆಟಫಿಸಿಕಲ್ ಕಾವ್ಯವು ಅಗತ್ಯವಾಗಿ ಸ್ವಲ್ಪಸಮಯದ ಚಂದೋಬದ್ದ ಪಂಕ್ತಿ. ಈ ಕಾವ್ಯವು ಎಂಟು ಮಾತ್ರೆಗಳಾಗಿ ಉಚ್ಚರಿಸಲ್ಪಡುವ ಸಾಲುಗಳನ್ನೊಳಗೊಂಡ ರೂಪವನ್ನು ಹೊಂದಿರುತ್ತದೆ.ಓದುಗರಿಗೆ ಚರಣಗಳು ಗರಿಕೆದರಿದ ಸ್ಪರ್ಶವನ್ನು ಕೊಡುವುದಿಲ್ಲ. ಆದ್ದರಿಂದ ಓದುವ ಪ್ರಕ್ರಿಯೆಯನ್ನು ತೀವ್ರವಾಗಿಸುತ್ತದೆ. ಸರಳವಾಗಿ ಬರೆಯುವ ಸ್ಪೆನ್ಸರ್ ಮತ್ತು ಇತರ ಕವಿಗಳ ಕಾವ್ಯದಂತಲ್ಲ ಈ ಮೆಟಫಿಸಿಕಲ್ ಕಾವ್ಯ . ಜೀವನದ ಪ್ರತಿಯೊಂದು ಅಂಶವನ್ನು ತಾತ್ತಿಕ ನೆಲೆಗಟ್ಟಿನಲ್ಲಿ ಮತ್ತು ತರ್ಕದ ನೆಲೆಗಟ್ಟಿನಲ್ಲಿ ಚಿಂತಿಸುತ್ತದೆ..

ಮೆಟಫಿಸಿಕಲ್ ರೂಪಕಗಳು: ಚಾಣಾಕ್ಷತನದಿಂದ ಹೋಲಿಕೆ ಮಾಡುವ ಸಲುವಾಗಿ ಮೆಟಫಿಸಿಕಲ್ ಕಾವ್ಯದಲ್ಲಿ ರೂಪಕಗಳನ್ನು ಹೆಚ್ಚು ಬಳಸಲಾಗುತ್ತದೆ . ರೂಪಕಗಳೆಂಬ ಅಂಶಗಳನ್ನು ಎಲಿಜಬತ್ ಕಾವ್ಯದಿಂದ ತೆಗೆದುಕೊಳ್ಳಲಾಗಿದೆ. ಮೆಟಫಿಸಿಕಲ್ ಕಾವ್ಯವು ರೂಪಕಗಳನ್ನು ಬಳಸಿ ಚತುರತೆಯಿಂದ ಹೋಲಿಕೆ ಮಾಡುತ್ತದೆ. ಮನಗಾಣಿಸಲು, ವಾದಿಸಲು , ನಕಾರಾತ್ಮಕದಲ್ಲಿ ಸಕಾರಾತ್ಮಕವನ್ನು ತೋರಿಸಲು ಈ ಕಾವ್ಯದಲ್ಲಿ ರೂಪಕಗಳನ್ನು ಬಳಸಲಾಗುತ್ತದೆ.

೩.ಬುದ್ದಿವಂತಿಕೆ ಹೆಚ್ಚಿನ ಮೆಟಫಿಸಿಕಲ್ ಕಾವ್ಯವು ತಾರ್ಕಿಕ ವಸ್ತುಗಳಿಂದ ತುಂಬಿರುತ್ತದೆ.ಆದ್ದರಿಂದ ಸುಲಭವಾಗಿ ಅರ್ಥೈಸಿಕೊಳ್ಳುವುದು ಕಷ್ಟವೆನಿಸುತ್ತದೆ. ಈ ಕಾವ್ಯವು ಚಮತ್ಕಾರದಿಂದ ಕೂಡಿರುತ್ತದೆ. ಈ ಕಾವ್ಯವನ್ನು ಅರ್ಥೈಸಿಕೊಳ್ಳಲು ಸ್ವಲ್ಪ ಮಟ್ಟಿನ ಬುದ್ದಿಶಕ್ತಿ ಬೇಕಾಗುತ್ತದೆ.

೪.ಥಟಕ್ಕನೆ ಪ್ರಾರಂಭ: ಮೆಟಫಿಸಿಕಲ್ ಕಾವ್ಯವು ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಈ ಕಾವ್ಯವು ನಾಟಕೀಯ ಸ್ಥಿತಿಯನ್ನು ಪ್ರಸ್ತುತ ಪಡಿಸುತ್ತದೆ. ಓದುಗರ ಗಮನವನ್ನು ಸೆಳೆಯಲು ಮೆಟಫಿಸಿಕಲ್ ಸಾಹಿತಿಗಳು ಥಟಕ್ಕನೆ ಪ್ರಾರಂಭಿಸುವ ವಿಧಾನವನ್ನು ಬಳಸಿದ್ದಾರೆ. ಈ ವಿಧಾನಕ್ಕೆ ಉದಾಹರಣೆಯಾಗಿ ಜಾನ್ ಡನ್ ಸಾಹಿತಿಯ "ದ ಕ್ಯಾನೋನೈಸೇಷನ್" ಎಂಬ ಕವನದ ಪ್ರಾರಂಭದ ಸಾಲನ್ನು ತೆಗೆದುಕೊಳ್ಳಬಹುದು. "ಫಾರ್ ಗಾಡ್ಸ್ ಸೇಕ್ ಯುವರ್ ಟಂಗ್ ಅಂಡ್ ಲೆಟ್ ಮಿ ಲವ್"

ಭಾವನೆ ಮತ್ತು ಚಾತುರ್ಯದ ಸಮ್ಮಿಶ್ರಣ: ಹಲವಾರು ಮೆಟಫಿಸಿಕಲ್ ಕಾವ್ಯದಲ್ಲಿ ಚತುರತೆ ಮತ್ತು ಭಾವನೆಯ ಸಮ್ಮಿಶ್ರಣವನ್ನು ಕಾಣಬಹುದು.

ಪ್ರೀತಿ ಮತ್ತು ಧರ್ಮದ ವಸ್ತುವಿಷಯ: ಮೆಟಫಿಸಿಕಲ್ ಕಾವ್ಯದ ವಸ್ತುವಿಷಯ ಪ್ರೀತಿ ಮತ್ತು ಧರ್ಮ ಆಗಿರುತ್ತದೆ. ಬಹುತೇಕ ಮೆಟಫಿಸಿಕಲ್ ಕಾವ್ಯವು ಈ ವಸ್ತುವಿಷಯಗಳನ್ನೇ ಒಳಗೊಂಡಿರುತ್ತದೆ. ಪ್ರೀತಿಯನ್ನು ವಸ್ತುವಿಷಯವನ್ನಾಗಿಸಿಕೊಂಡ ಕವನಗಳಿಗೆ ಉದಾಹರಣೆಯೆಂದರೆ ಜಾನ್ಡನ್ ನ "ದ ಕ್ಯಾನೋನೈಸೇಷನ್" ,"ಲೆಕ್ಚರ್ ಅಪಾಂದ ಷಾಡೋ" "ವ್ಯಾಲಿಡಿಕ್ಷನ್ ಫಾರ್ಬಿಡಿಂಗ್ ಮೌರ್ನಿಂಗ್".ಧರ್ಮವನ್ನು ವಸ್ತುವಿಷಯವನ್ನಾಗಿಸಿಕೊಂಡ ಕವನಗಳಿಗೆ ಉದಾಹರಣೆಯೆಂದರೆ ಜಾನ್ಡನ್ ನ" ಬ್ಯಾಟರ್ ಮೈ ಹಾರ್ಟ್" ಮತ್ತು ಹರ್ಬರ್ಟ್ ನ "ದ ಕಾಲರ್".

೭.ನಂಬಲಾಗದ ಪ್ರತಿಮೆಗಳು: ಮೆಟಫಿಸಿಕಲ್ ಕಾವ್ಯವು ನಂಬಲು ಅಸಾದ್ಯವಾದ ಉಪಮೇಯಗಳನ್ನು ಮತ್ತು ರೂಪಕಗಳನ್ನು ಒಳಗೊಂಡಿದೆ. ಜಾನ್ಡನ್ ನ "ದ ಕ್ಯಾನೋನೈಸೇಷನ್" ಕಾವ್ಯವು ಹಲವಾರು ಪ್ರತಿಮೆಗಳನ್ನು ಒಳಗೊಂಡಿದೆ.

೮.ಪ್ರತಿಮೆಗಳು ಮತ್ತು ಸನ್ನೆಗಳು: ಮೆಟಫಿಸಿಕಲ್ ಕಾವ್ಯವು ಹಲವಾರು ಪ್ರತಿಮೆ ಮತ್ತು ಸನ್ನೆಗಳಿಂದ ಕೂಡಿದೆ.ಈ ಕಾವ್ಯದಲ್ಲಿ ಬಳಸಲಾಗಿರುವ ಪ್ರತಿಮೆ ಮತ್ತು ಸನ್ನೆಗಳಿಂದ ಇದು ಎಲಿಜಬತ್ ಕಾವ್ಯದಿಂದ ಬೇರ್ಪಡುತ್ತದೆ.

೯.ಚತುರತೆ ಮತ್ತು ವಿರೋಧಭಾಸ: ಚತುರತೆ ಮತ್ತು ವಿರೋಧಭಾಸ ಮೆಟಫಿಸಿಕಲ್ ಕಾವ್ಯದ ಪ್ರಾಥಮಿಕ ಲಕ್ಷಣಗಳಾಗಿವೆ.

೧೦.ಚರ್ಚಾತ್ಮಕ: ಮೆಟಫಿಸಿಕಲ್ ಕಾವ್ಯವು ಚರ್ಚಾತ್ಮಕತೆಯಿಂದ ಕೂಡಿದೆ. ಮೆಟಫಿಸಿಕಲ್ ಕಾವ್ಯದ ಹತ್ತು ಕವನಗಳು ಚರ್ಚಾತ್ಮಕ ರೀತಿಯಲ್ಲಿವೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: