ಮಿರಾಂಡಾ ಕಾರ್ಟರ್(ಎಂ.ಜೆ.ಕಾರ್ಟರ್)
ಮಿರಾಂಡಾ ಕಾರ್ಟರ್(ಎಂ.ಜೆ.ಕಾರ್ಟರ್) ಅವರು ಪ್ರಸಿದ್ದ ಇಂಗ್ಲಿಷ್ ಇತಿಹಾಸಕಾರರು,ಬರಹಗಾರರು ಮತ್ತು ಜೀವನಚರಿತ್ರಕಾರರು. ಅವರು ಜನಿಸಿದ್ದು ೧೯೬೫, ಲಂಡನ್ ನಲ್ಲಿ . ಅವರ ಎಲ್ಲಾ ಪುಸ್ತಕಗಳು ಎ.ಜೆ.ಕಾರ್ಟರ್ ಎಂದು ಪ್ರಕಟಿಸಲಾಗೆದೆ.[೧]
ಶಿಕ್ಷಣ
[ಬದಲಾಯಿಸಿ]ಇವರು ಸೆಂಟ್. ಪಾಲ್ಸ್ ಗರ್ಲ್ಸ್ ಸ್ಕೂಲ್ ಮತ್ತು ಆಕ್ಸ್ಫರ್ಡ್ ನಲ್ಲಿ ಶಿಕ್ಷಣ ಪಡೆದರು.
ವೈಯಕ್ತಿಕ ಜೀವನ
[ಬದಲಾಯಿಸಿ]ಮಿರಾಂಡಾ ಕಾರ್ಟರ್ ಅವರ ಗಂಡನ ಹೆಸರು ಜಾನ್ ಲ್ಯಾಂಚೆಸ್ಟರ್ರ್ ಹಾಗೂ ಅವರಿಗೆ ಎರಡು ಗಂಡು ಮಕ್ಕಳು. ಲಂಡನ್ ನಲ್ಲಿ ವಾಸಿಸುತ್ತಿದ್ದರು. ಅವರಿಗೆ ಮೊದಲಿಗೆ ಪುಸ್ತಕ ಬರೆಯುವದರಲ್ಲಿ ಆತ್ಮವಿಶ್ವಾಸವಿರಲಿಲ್ಲ, ಅವರ ಶಿಕ್ಷಣ ಮುಗಿದ ನಂತರ ಪ್ರಕಾಶಕರಾಗಿ ಕಾರ್ಯ ಮಾಡುತ್ತಿರುವಾಗ, ಅವರು'ನಾನು ಸಹ ಬರಹಗಾರನಾಗಬಹುದು' ಎಂದು ಆಲೋಚಿಸಿದರು.
ವೃತ್ತಿ ಜೀವನ
[ಬದಲಾಯಿಸಿ]ಕೆಲವು ವರ್ಷಗಳ ನಂತರ ೧೯೮೦ ರಲ್ಲಿ ಬ್ರಿಟನ್‌ನಲ್ಲಿ ಗೋಲ್ಡ್ ಏಜ್ ಆಪ್ ಪ್ರಿಲೆನ್ಸ್ ಜರ್ನಲಿಸ್ಮಂ ನಲ್ಲಿಇವರು ಪ್ರಕಾಶಕರಾಗಿ ಮತ್ತು ಪತ್ರಕರ್ತರಾಗಿ ಕೆಲಸ ಮಾಡಿದರು. ಅವರ ವಿದ್ಯಾಭ್ಯಾಸ ಮುಗಿದ ನಂತರ ಪ್ರಕಾಶಕರಾಗಿ ಕೆಲಸಕ್ಕೆ ಸೇರುವುದರಿಂದ ಬರಹಗಾರರಿಗೆ ಹತ್ತಿರವಾಗಬಹುದೆಂದು ಯೋಚಿಸಿದರು.
ಪ್ರಶಸ್ತಿಗಳು
[ಬದಲಾಯಿಸಿ]ಇವರ ಆಂಥೋನಿ ಬ್ಲಂಟ್ ಎಂಬ ಕೃತಿಗೆ ೨೦೦೧ರಲ್ಲಿ ಗಾರ್ಡಿಯನ್ ಫಸ್ಟ್ ಬುಕ್ ಅವಾರ್ಡ,೨೦೦೨ ರಲ್ಲಿಉ ಕ್ರೈಮ್ ರೈಟರ್ಸ್ ಅಸೋಸಿಯೇಷನ್ ಸಿಲ್ವರ್ ಡಾಗ್ಗರ್ ಫಾರ್ ನಾನ್-ಫಿಕ್ಷನ್ ಅವಾರ್ಡ್,೨೦೦೨ ರಲ್ಲಿ ಡಫ್ ಕೂಪರ್ ಪ್ರಶಸ್ತಿ, ಜೇಮ್ಸ್ ಟೈಟ್ ಬ್ಲಾಕ್ ಸ್ಮಾರಕ ಪ್ರಶಸ್ತಿ (ಜೀವನಚರಿತ್ರೆಗಾಗಿ),ಆರ್ವೆಲ್ ಪ್ರಶಸ್ತಿ,ರಾಯಲ್ ಸೊಸೈಟಿ ಆಫ್ ಲಿಟರೇಚರ್ ಪ್ರಶಸ್ತಿ,ವಿಟ್ಬ್ರೆಡ್ ಬಯೋಗ್ರಫಿ ಪ್ರಶಸ್ತಿ.
ಸಾಧನೆಗಳು
[ಬದಲಾಯಿಸಿ]೧೯೯೪ ರಲ್ಲಿ ಆಂಥೋನಿ ಬ್ಲಂಟ್ ಅವರ ಜೀವನ ಚರಿತ್ರೆಯನ್ನು ಸಂಶೋಧಿಸಿ ನಂತರ ಅವರ ಹೆಸರಿನಲ್ಲಿ "ಆಂಥೋನಿ ಬ್ಲಂಟ್" ಎಂಬ ಪುಸ್ತಕವನ್ನು ಪ್ರಕಟಿಸಿದರು. ಇದು ಕಾರ್ಟರ್ ಅವರ ಮೊಟ್ಟ ಮೊದಲ ಪುಸ್ತಕವಾಗಿತ್ತು. ೨೦೦೧ರಲ್ಲಿ ಗಾರ್ಡಿಯನ್ ಫಸ್ಟ್ ಬುಕ್ ಅವಾರ್ಡ,ಟಾರ್ ನಿಕೋಲಸ್(೨), ರಾಜ ಜರ್ಜ್ (೫) ನವರ ಜೀವನಚರಿತ್ರೆಯನು "ತ್ರಿ ಎಂಪರ್ರ್"(ಮೂರು ಚಕ್ರವರ್ತಿ) ಎಂಬ ಪುಸ್ತಕವನ್ನು ಪ್ರಕಟಿಸಿದರು. ಇತ್ತೀಚೆಗೆ ೨೦೧೫ರಲ್ಲಿ ಇನ್ಪಿಡೆಲ್ ಸ್ಟೇನ್ ಎಂಬ ಪುಸ್ತಕವನ್ನು ಬರೆದಿದ್ದಾರೆ. ಮಿರಾಂಡಾ ಕಾರ್ಟಾರ್‌ರವರ ಇತ್ತೀಚಿನ ಪುಸ್ತಕವಾದ ಇನ್ಪಿಡಲ್ ಸ್ಟೇನ್(೨೦೧೫) ಬ್ಲೇಕ್ ಮತ್ತು ಆವೆರಿ ಎಂಬವರ ಪತ್ತೆದಾರಗಳನ್ನು ಒಳಗೊಂಡ ಪುಸ್ತಕವಾಗಿದೆ. ಇವರು ಬರವಣಿಗೆಗಳ ಲಕ್ಷಣಗಳನ್ನು ಬರೆಯಲು ಪ್ರಾರಂಭಿಸಿದರು. ನಂತರ ಇವರು ಪತ್ರಿಕೆಯ ಪೂರಕದಲ್ಲಿ ಮತ್ತು ಗ್ಲಾಸಿ ಪತ್ರಿಕೆಯಲ್ಲಿ ಕೆಲಸವನ್ನು ಪಡೆದುಕೊಂಡರು.
ಪತ್ರಿಕೂದ್ಯಮದಲ್ಲಿದ್ದಾಗಲೂ ಸಹ ಇವರು ವಿಮರ್ಶೆಗಳನ್ನು ಬರೆಯಲು ಪ್ರಾರಂಬಿಸಿದರು. ಅಲ್ಲಿ ಅವರು ಬರಹಗಳನ್ನು ಸಂಪಾದಿಸುವುದು, ನಿಯೋಜನೆ ಮತ್ತು ಬರೆಯುವುದು ಮತ್ತು ಮುಂತಾದ ವಿಷಯಗಳನ್ನು ಕಲಿತರು. ಮತ್ತು ಇತರ ಪತ್ರಿಕೆಗಳಿಗೆ ಬರೆಯಲು ಪ್ರಾರಂಬಿಸಿದರು. ಇವರು ಆಂಟೋನಿ ಬ್ಲಂಟ್‌ರವರು ಕಲಾ ಇತಿಹಾಸಕ್ಕೆ ಪ್ರಸಿದ್ದರಾಗಿದ್ದಾರೆ.