ಮಾರ್ಕ್ ಜ಼ುಕರ್‌ಬರ್ಗ್
ಮಾರ್ಕ್ ಎಲಿಯಟ್ ಜ಼ುಕರ್‌ಬರ್ಗ್‌ನು (ಆಂಗ್ಲ:Mark Elliot Zuckerberg) ಅಮೇರಿಕನ್ ಕಂಪ್ಯೂಟರ್ ಪ್ರೋಗ್ರಾಮರ್, ಇಂಟರ್ನೆಟ್ ಉದ್ಯಮಿ, ಹಾಗೂ ಲೋಕೋಪಕಾರಿ ವ್ಯಕ್ತಿ[೧]. ಸಾಮಾಜಿಕ ನೆಟ್ವರ್ಕಿಂಗ್ ವೆಬ್‌ಸೈಟ್ ಆದ ಫೇಸ್ಬುಕ್ನ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹ ಸಂಸ್ಥಾಪಕರಾದ ಇವರ ಒಟ್ಟು ಐಶ್ವರ್ಯ ಅಮೇರಿಕಾದ 55.3 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಇವರನ್ನು ವಿಶ್ವದ 5 ನೇ ಶ್ರೀಮಂತ ವ್ಯಕ್ತಿ ಎಂದು ಗುರುತಿಸಲಾಗಿದೆ.
೨೦೧೦ರಿಂದ, ಟೈಮ್ ಮ್ಯಾಗಜ಼ಿನ್ ಜ಼ುಕರ್‌ಬರ್ಗ್ ಅವರನ್ನು ವಿಶ್ವದ ಶ್ರೀಮಂತ ಮತ್ತು ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲೊಬ್ಬರೆಂದು ಗುರುತಿಸಿದೆ.
ಜನನ
[ಬದಲಾಯಿಸಿ]ಜ಼ುಕರ್‌ಬರ್ಗ್ ಅವರು ೧೯೮೪ರ ಮೇ ೧೪ರಂದು ಜನಿಸಿದರು[೨]. ಇವರ ತಂದೆ ಎಡ್ವರ್ಡ್ ಜ್ಯೂಕರ್ಬರ್ಗ್ ದಂತವೈದ್ಯರಾಗಿದ್ದರು ಹಾಗೂ ತಾಯಿ ಕರೆನ್ ಕೆಮ್ಪ್‌ನರ್ ಅವರು ಮನೋವೈದ್ಯರಾಗಿದ್ದರು. ಯಹೂದಿಯಾಗಿ ಮಿಡ್ಟೌನ್ ಮ್ಯಾನ್‌ಹಟ್ಟನ್ನಲ್ಲಿರುವ ವೆಸ್ಟ್ ಚೆಸ್ಟರ್ ಎಂಬಲ್ಲಿ ಬೆಳೆದರು. ಅವರು ಬೌದ್ಧ ಧರ್ಮಕ್ಕೆ ಮೆಚ್ಚುಗೆ ತೋರಿಸಿದ್ದಾರೆ.
ವಿದ್ಯಾಭ್ಯಾಸ
[ಬದಲಾಯಿಸಿ]ಆರ್ಡ್‌ಸ್ಲೆ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಪಡೆದರು. ಕಾಲೇಜಿನ ದಿನಗಳಲ್ಲಿ ಫ಼್ರೆಂಚ್, ಹಿಬ್ರೂ, ಲಾಟೀನ್ ಮತ್ತು ಗ್ರೀಕ್ ಭಾಷೆಗಳನ್ನು ಓದಲು, ಬರೆಯಲು ಕಲಿತರು. ಅವರು ಫೆನ್ಸಿಂಗ್ ತಂಡದ ನಾಯಕರಾಗಿದ್ದರು. ಜ್ಯೂಕರ್ಬರ್ಗ್ ಕಂಪ್ಯೂಟರ್ ಬಳಸಲು ಹಾಗು ತಂತ್ರಾಂಶ ಬರೆಯಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತರು. ಮರ್ಸಿ ಕಾಲೇಜಿನಿಂದ ಪದವಿ ಪಡೆದರು.
೨೦೧೦ರಿಂದ, ಟೈಮ್ ಮ್ಯಾಗಜ಼ಿನ್ ಜ಼ುಕರ್‌ಬರ್ಗ್ ಅವರನ್ನು ವಿಶ್ವದ ಶ್ರೀಮಂತ ಮತ್ತು ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲೊಬ್ಬರೆಂದು ಗುರುತಿಸಿದೆ. ಜ್ಯೂಕರ್ಬರ್ಗ್ ಕಂಪ್ಯೂಟರ್ ಬಳಸಲು ಹಾಗು ತಂತ್ರಾಂಶ ಬರೆಯಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತರು. ಮರ್ಸಿ ಕಾಲೇಜಿನಿಂದ ಪದವಿ ಪಡೆದರು.
೨೦೦೪ರ ಫೆಬ್ರವರಿ ೪ ರಂದು ತಮ್ಮ ವಿದ್ಯಾನಿಲಯದ ಕೊಟಡಿಯಿಂದ ಫೇಸ್‌ಬುಕ್ ಅನ್ನು ಪ್ರಾರಂಭಿಸಿದರು.