ವಿಷಯಕ್ಕೆ ಹೋಗು

ಮಾಯಂದಾಲ್ ದೈವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಯಂದಾಲ್ ಅಥವಾ ಮಾಣಿ ಬಾಲೆ ಎಂಬ ಹೆಸರಿನಿಂದ ಕರೆಯಲ್ಪಡುವ ಈ ದೈವವು ಬಾಣಂತಿ ದೈವವಾಗಿ ತುಳುನಾಡುನಾದ್ಯಂತ ಗರಡಿಗಳಲ್ಲಿ []]ರೊಂದಿಗೆ ಆರಾಧನೆಗೆ ಒಳಪಟ್ಟಿದೆ ಮಗುವಿನ ಜೊತೆಯಿರುವ ದೈವದ ಪ್ರತಿಮೆಯನ್ನು ನಾವು ಹೆಚ್ಚಿನ ಗರಡಿಗಳಲ್ಲಿ ಕಾಣಬಹುದು . ಹೆರಿಗೆ ಎಂಬುದು ಹೆಣ್ಣಿನ ಜೀವನದಲ್ಲಿ ಅತ್ಯಂತ ಸಂಕಷ್ಟದ ಸಮಯ ಕುಟುಂಬದ ಎಲ್ಲಾ ಸದಸ್ಯರು ಆತಂಕಕ್ಕೆ ಒಳಗಾಗುವ ಈ ಕಠಿಣ ಸಮಯದಲ್ಲಿ ದೈವಕ್ಕೆ ಮೊರೆಹೋಗುವುದರಂದ ಮಾನಸಿಕ ನೆಮ್ಮದಿ ಹಾಗು ಧೈರ್ಯ ದೊರೆಯುತ್ತದೆ.

ಮಾಣಿಬಾಲೆಯನ್ನು ಸೋದರ ಮಾವನದ ಆಲಿಬಾಲಿ ನಾಯಕನು ರಜಪತಿ ಬೈದ್ಯನ ಮಗನೊಂದಿಗೆ ವಿಜೃಂಭಣೆಯಿಂದ ಮದುವೆ ಮಾಡಿಕೊಡುತ್ತಾನೆ. ಮದುವೆಯಾಗಿ ಕೆಲವು ವರ್ಷ ಕಳೆದರೂ ಸಂತಾನ ಭಾಗ್ಯ ಒದಗದಿರಲು ಬೆರ್ಮರಿಗೆ ಹರಕೆ ಹೇಳಿದ ಮೇರೆಗೆ ಆಕೆ ಗರ್ಭವತಿಯಾಗುತ್ತಾಳೆ. ಸಂಭ್ರಮದ ಸೀಮಂತ ನಡೆದ ಬಳಿಕ ಆಕೆ ಹೆರಿಗೆಗಾಗಿ ತನ್ನ ಸೋದರ ಮಾವನಾದ ಆಲಿಬಾಲಿ ನಾಯಕನ ಮನೆಗೆ ಬರುತ್ತಾಳೆ. ನವ ಮಾಸ ತುಂಬಿದ ಮಾಣಿಬಾಲೆ ಗಂಡು ಮಗುವಿಗೆ ಜನ್ಮ ನೀಡು‍ತ್ತಾಳೆ. ಅದೇ ಮಾಗಣೆಗೆ ಸೇರಿದ ಗುಡ್ಡೆಯ ಮೂಡಂದಾಲ ಪಟ್ಟದ ಬೀಡಿನ ಪಾಂಗೊಲ್ಲ ಬನ್ನಾರ ಎಂಬ ಜೈನ ಜಮೀನ್ದಾರನು ಜುಮಾದಿ ಭೂತವನ್ನು ನಂಬಿಕೊಂಡು ಅದಕ್ಕೆ ಗುಡಿ ನಿರ್ಮಿಸಿ ಕೋಲಕ್ಕೆ ದಿನ ನಿಗದಿಪಡಿಸುತ್ತಾನೆ. ಊರಿನ ಜನರಿಂದ ಕೋಲಕ್ಕಾಗಿ ಸಿರಿ ಸೀಯಾಳ ಹಾಗೂ ಕಾಣಿಕೆ ಸಂಗ್ರಹಿಸಲು ಆಳುಗಳನ್ನು ಕಳುಹಿಸುವನು . ಆದರೆ ಆಲಿಬಾಲಿಯು ಬಲ್ಲಾಳನ ಕರೆಯನ್ನು ಧಿಕ್ಕರಿಸಿ ಕಾಡಿನ ಕಾಟು ಭೂತಕ್ಕೆ ಸಿರಿ ಬೊಂಡ ಕೊಡುವುದಿಲ್ಲ ಎಂದು ಹೇಳುತ್ತಾನೆ. ಆಗ ಜುಮಾದಿ ದೈವವು ಪಾಂಗೊಲ್ಲ ಬನ್ನಾರನ ರೂಪ ಧರಿಸಿ ಆಲಿಬಾಲಿ ಯ ಮನೆಗೆ ಬಂದು ಆತನ್ನು ಕರೆಯುತ್ತಾನೆ. ಹೊರಗೆ ಬಂದ ಮೂರು ದಿನದ ಬಾಣಂತಿಯನ್ನು ಮಾಯಮಾಡುತ್ತಾಳೆ. ನಂತರ ಜುಮಾದಿ ಗರಡಿಗೆ ಬಂದು ನೆಲೆಯಾಗುತ್ತಾಳೆ. ಹೀಗೆ ಮಾಯಂದಾಲ್ ದೈವವು ತುಳುನಾಡಿನಾದ್ಯಂತ ಮುತ್ತೈದೆ ಭಾಗ್ಯ , ಸಂತಾನ ಭಾಗ್ಯ ಹಾಗೂ ಸಿರಿ ಸಂಪತ್ತು ನೀಡುವ ಕಾರಣಿಕದ ಸ್ತ್ರೀ ದೈವವಾಗಿ ಬೈದರ್ಕಳರೊಂದಿಗೆ ಆರಾಧಿಸಲ್ಪಡುತ್ತಿದೆ.

ಉಲ್ಲೇಖೋ

[ಬದಲಾಯಿಸಿ]
  1. [[ಕೋಟಿಚೆನ್ನಯ]