ಮಾನಸಿಕ ರೋಗಗಳು
rahul
ಮಾನಸಿಕ ರೋಗಗಳು
[ಬದಲಾಯಿಸಿ]ಪೀಠಿಕೆ
[ಬದಲಾಯಿಸಿ]ಮನೋಬೇನೆಗಳು ಮತ್ತು ಮನೋವಿಕೃತಿಗಳು: ಮನುಷ್ಯನು ತನ್ನ ಅಗತ್ಯಗಳನ್ನು ಪೂರೈಸಿಕೊಂಡು ಪರಿಸರ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ ತನ್ನ ವರ್ತನೆಯನ್ನು ಮಾಡಿಕೊಳ್ಳುವನು. ಆಕಸ್ಮಿಕವಾಗಿ ಅವನ ಅಗತ್ಯಗಳು ಪೂರೈಸದಿದ್ದರೆ ಅವನು ವ್ಯಾಕುಲನಾಗುವನು. ವ್ಯಾಕುಲತೆಯಿಂದ ಉದ್ವಿಗ್ನನಾಗುವನು, ಹತಾಶನಾಗುವನು ಅಥವಾ ಘರ್ಷಣೆಗೆ ಒಲಗಾಗುವನು. ತನ್ನ ವಿಫಲತೆಯನ್ನು ಮರೆಯಲು ಅವನು ಯತ್ನಿಸುವನು ಅದಕ್ಕಾಗಿ ಹೊಂದಾಣಿಕೆ ತಂತ್ರಗಳನ್ನು ಉಪಯೋಗಿಸಿಕೊಳ್ಳುವನು. ರಕ್ಷಣಾ ತಂತ್ರಗಳಿದ್ದು ವ್ಯಕ್ತಿಯು ತಾತ್ಕಾಲಿಕವಾಗಿ ನೆಮ್ಮದಿ ಪಡೆಯಬಹುದು. ಆದರೆ ಅವನ ವಿಫಲತೆಯನ್ನು ಶಮನಗೊಳಿಸುವಲ್ಲಿ ರಕ್ಷಣಾ ತಂತ್ರಗಳು ಅಸಮರ್ಥವಾದಾಗ ವ್ಯಕ್ತಿಯ ವರ್ತನೆಯಲ್ಲೂ ಅಸಹಜತೆ ಅಸಂಬದ್ಧತೆ ಮತ್ತು ವೈಪರಿತ್ಯ ಕಾಣುವುದು. ಇಂತಹ ವ್ಯಕ್ತಿಯು ಪರಿಸರಕ್ಕೆ ಹೊಂದಿಕೊಳ್ಳುವುದಿಲ್ಲ. ತನ್ನ ದೈನಂದಿನ ವ್ಯವಹಾರಗಳನ್ನು ಸರಿಯಾಗಿ ನಿರ್ವಹಿಸಲಾರನು. ತನ್ನ ವರ್ತನೆಯಿಂದ ತನಗೂ ಇತರರಿಗೂ ತೊಂದರೆಯನ್ನುಂಟುಮಾಡುವನು. ಇಂತಹ ವ್ಯಕ್ತಿಯನ್ನೇ ಮನೋರೋಗಿ ಎಂದು ಕರೆಯುವರು. ದೇಹದ ಅಂಗಾಂಗಳು ಮತ್ತು ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡದಿದ್ದಾಗ ವ್ಯಕ್ತಿಯು ದೈಹಿಕ ಕಾಯಿಲೆಗೆ ಗುರಿಯಾಗುತ್ತಾನೆ. ಅದೇ ರೀತಿಯಾಗಿ ಮನಸ್ಸು ತನ್ನ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾಗ ಆ ವ್ಯಕ್ತಿಯು ಮನೋರೋಗಕ್ಕೆ ಗುರಿಯಾಗುತ್ತಾನೆ.
ಪ್ರಮುಖ ಮಾನಸಿಕ ರೋಗಗಳು
[ಬದಲಾಯಿಸಿ]- ಖಿನ್ನತೆ ಕಾಯಿಲೆ
- ಆತಂಕ, ಭಯದ ಮನೋರೋಗಿಗಳು.
- ಉನ್ಮಾದ ಮನೋರೋಗ.
- ಗೀಳು ಮನೋರೋಗ
- ಸ್ಕಿಜೋಫ್ರೀನಿಯಾ
- ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್
- ಇಳಿವಯಸ್ಸಿನ ಮರೆವಿನ ರೋಗ- ಡೆಮೆನ್ಷಿಯ
- ಸನ್ನಿ-ಡೆಲೆರಿಯಂ
- ಮದ್ಯಪಾನ- ಮಾದಕವಸ್ತುಗಳ ಚಟ
- ಬುದ್ದಿಮಾಂದ್ಯತೆ.
- ಮಕ್ಕಳಲ್ಲಿ ಕಂಡುಬರುವ ಮಾನಸಿಕ ಅಸ್ವಸ್ಥತೆಗಳು.
- ವ್ಯಕ್ತಿತ್ವ ದೋಷದ ಕಾಯಿಲೆಗಳು.
ಹಿಸ್ಟಿರೀಯಾ
[ಬದಲಾಯಿಸಿ]ಇದು ಸ್ತ್ರೀಯರ ಕಾಯಿಲೆಯೆಂದು, ಗರ್ಭಕೋಶ ಚಲಿಸುವುದರಿಂದ ಬರುವ ಕಾಯಿಲೆಯೆಂದು, ದೈಹಿಕ ಜನ್ಯ ಕಾಯಿಲೆಯಯೆಂದು, ಲೈಂಗಿಕ ಅತೃಪ್ತಿಯಿಂದ ಉಂಟಾಗುವ ಕಾಯಿಲೆಯೆಂದು ಅನೇಕರು ಭಾವಿಸಿದ್ದರು ಆದರೆ ಇಂದು ಈ ಕಾಯಿಲೆಯನ್ನು ನಿರ್ಧಿಷ್ಟ ರೋಗವಲ್ಲ ಎಂದು ತಿಳಿಯಲಾಗಿದೆ. ಅಹಿತಕರ ಸನ್ನಿವೇಶ, ಸಮಸ್ಯೆ ಅಥವಾ ತೊಂದರೆಯಿಂದ ತಪ್ಪಿಸಿಕೊಳ್ಳಲು ಕಲಿತ ಫಲಾಯನ ತಂತ್ರವೇ ಹಿಸ್ಟಿರೀಯಾ. ಇದು ಬಹುರೂಪಿಯಾಗಿದೆ. ಶರೀರದ ಸಾಮಥ್ರ್ಯ ಕಡಿಮೆಯಾಗುವುದು ಕಣ್ಣು ಕಾಣಿಸದಂತಾಗುವುದು ಕಿವಿ ಕೇಳದಂತಾಗುವುದು ಚರ್ಮಕ್ಕೆ ಸಂವೇದನೆಯಿಲ್ಲದಂತಾಗಬಹುದು. ಪಾಶ್ವಪೀಡಿತವಾಗಬಹುದು, ಮಾತು ಬರದಂತಾಗುವುದು ಬಂದರೂ ಧ್ವನಿಯಾಗುವುದು, ಗುಗ್ಗಬಹುದುವ, ಬೆವರಿದಂತಾಗುವುದು, ಚರ್ಮದ ಬಣ್ಣ ಬದಲಾದಂತಾಗುವುದು, ಹಸಿವೆಯಾಗದಿದ್ದಂತೆ ಭಾಸವಾಗುವುದು, ಹುಸಿ ಬಿಸಿರಾಗಬಹುದು, ಮುಟ್ಟಿನ ಸಮಸ್ಯೆ ಉಂಟಾಗದಂತಾಗುವುದು, ವಿಸ್ಮರಣಿಯಾಗುವುದು, ನಿದ್ದೆಯಲ್ಲಿ ಅಡ್ಡಾಡುವುದು, ರೋಗಜನಿತ ಗಾಡ ನಿದ್ದೆ ಬರುವುದು ಮುಂತಾದವುಗಳು ಹಿಸ್ಟಿರೀಯಾದ ವೈವಿದ್ಯಮಯ ರೂಪಗಳಾಗಿವೆ. ಇಲ್ಲಿ ರೋಗವಿರುವುದಿಲ್ಲ ಹೆಚ್ಚಾಗಿ ರೋಗದ ಭ್ರಮೆಯಿರುವುದು. ರೋಗಿಯು ತನ್ನ ರೊಗದಿಂದ ಇತರರ ಸಹಾನುಭೂತಿ ಮತ್ತು ಕರುಣೆಯನ್ನು ಇಚ್ಛಿಸುತ್ತಾನೆ. ಮನೋಬೇನೆಯ ಕೆಲವು ರೂಪಗಳು: ಮನೋಬೇನೆಯು ಲಘುವಾದ ಮನೋರೋಗ. ಈ ರೋಗಕ್ಕೆ ಒಳಗಾದವರು ತಮ್ಮ ರೋಗದಿಂದ ಮುಕ್ತರಾಗಲಿಕ್ಕೆ ಬಯಸುತ್ತಿರುತ್ತಾರೆ. ಚಿಕಿತ್ಸೆಯಿಂದ ಈ ರೋಗವನ್ನು ನಿವಾರಿಸಬಹುದು. ಈ ರೋಗವು ಹಲವಾರು ರುಪದಲ್ಲಿ ಪ್ರಕಟವಾಗುವುದು. ಅವುಗಳಲ್ಲಿ ಪ್ರಮುಖವಾದುವೆಂದರೆ.
ಉದ್ವಿಗ್ನತೆ
[ಬದಲಾಯಿಸಿ]ಯಾವ ಕಾರಣವೂ ಇಲ್ಲದೆ ವ್ಯಕ್ತಿಯ ಭಯಪಡುವ ಮತ್ತು ಕಳವಳ ಪಡುವ ಅವಸ್ಥೆಯು ಉದ್ವಿಗ್ನತೆಯಾಗಿದೆ. ನಿಷ್ಕಾರಣವಾಗಿ ಚಿಂತೆ ಪಡುವುದು, ಭಯಹೊಂದುವುದು, ಉತ್ಕಂಠಿತರಾಗುವುದು, ಉದ್ರಕ್ತವಾಗುವುದು, ಈ ರೋಗಿಗೆ ನಿದ್ರೆ ಬರುವುದಿಲ್ಲ. ಬಡಿದುಕೊಳ್ಳುವುದು, ಹೊಟ್ಟೆನೋವು ಬರುವುದು, ಮೈ ಕೈಗಳಲ್ಲಿ ಸೆಳೆತ ಉಂಟಾಗುವುದು, ತಲೆನೋವು ಸಾಮಾನ್ಯವಾಗಿ ಬರುವುದು, ಉತ್ಸಾಹವಿರುವುದಿಲ್ಲ, ಅನಿಶ್ಚಿತತೆ ತುಂಬಿಕೊಳ್ಳುವುದು ಇವೆಲ್ಲವೂ ಈ ರೋಗದ ಲಕ್ಷಣವಾಗಿವೆ. ಉದ್ವಿಗ್ನತೆಯು ಬಾಲ್ಯಾನುಭವದಲ್ಲಿ ಅಡಕವಾಗಿರುವುದು.
ಅಂಗಚೇಷ್ಟೆ
[ಬದಲಾಯಿಸಿ]ಅನೇಕರು ತಮ್ಮ ಅಂಗಾಂಗಗಳ ಮೇಲೆ ನಿಯಂತ್ರಣ ಕಳೆದುಕೊಂಡು ತಮಗೇ ಅರಿವಿಲ್ಲದಂತೆ ಕಾಲು ಕುಣಿಸುವುದು, ಕಾಲು ಅಲ್ಲಾಡಿಸುವುದು, ಭುಜ ಕುಣಿಸುವುದು, ತಲೆ ಆಡಿಸುವುದು, ಕಣ್ಣು ಮಿಟುಕಿಸುವುದು, ಉಗುರು ಕಡಿಯುವುದು, ವಿಕಾರವಾಗಿ ಮುಖ ಮಾಡುವುದು ಇತ್ಯಾದಿ. ಪ್ರಾರಂಭದಲ್ಲಿ ಈ ಅಂಗಾಂಗ ಚೇಷ್ಟೆಯಿಂದ ವ್ಯಕ್ತಿಯು ತನ್ನ ಮನದ ಉದ್ವಿಗ್ನತೆಯನ್ನು ಕಡಿಮೆ ಮಾಡಿಕೊಳ್ಳುವನು ಆದರೆ ಇದೇ ಅಭ್ಯಾಸ ಮುಂದುವರೆದಾಗ ಅದು ಯಾಂತ್ರಿಕವಾಗಿ ಪರಿಣಮಿಸುವುದು. ಅವು ಯಾಂತ್ರಿಕವಾದ ನಂತರ ವಿಷಯುತವಾಗಿ ಅಸಹ್ಯವಾಗಿ ಕಾಣುವುದು. ಅವುಗಳನ್ನು ನಿಯಂತ್ರಿಸಲು ಅಸಮರ್ಥನಾಗುವನು.
ಖಿನ್ನತೆ
[ಬದಲಾಯಿಸಿ]ಸಾಮಾನ್ಯವಾಗಿ ಮನುಷ್ಯನು ತನ್ನ ಆಶಾಭಂಗವಾದಾಗ ಆತ್ಮೀಯರನ್ನು ಕಳೆದುಕೊಂಡಾಗ ದುರ್ಘಟನೆಗಳು ನಡೆದಾಗ ಖಿನ್ನನಾಗುವನು. ಈ ಖಿನ್ನತೆ ತೀವ್ರವಾದರೆ ಮನೋಬೇನೆಯಾಗಿ ಪರಿಣಮಿಸುವುದು. ಖಿನ್ನತೆಗೊಳಗಾದವನಲ್ಲಿ ನಿರಾಶೆ, ನಿರುತ್ಸಾಹ ಅಸಹಾಯಕತೆ ಹಾಗೂ ಏಕಾಂಗಿ ತನಗಳನ್ನು ಅನುಭವಿಸುತ್ತಾನೆ. ಪಾಪಪ್ರಜ್ಞೆಯುಂಟಾಗಿ ಆತ್ಮಹತ್ಯೆ ತನಗಿರುವ ಏಕೈಕ ದಾರಿ ಎಂದು ಅಂದುಕೊಳ್ಳುವನು
ಪ್ರತಿಭೀತಿ
[ಬದಲಾಯಿಸಿ]ಇದು ಭಯದ ಮತ್ತೊಂದು ಭೀಕರ ಸ್ವರೂಪವಾಗಿದೆ. ಭಯವು ಒಂದು ಸನ್ನಿವೇಶಕ್ಕೆ ಅಥವಾ ಪ್ರಚೋದನೆಗೆ ಸೀಮಿತವಾಗಿರುತ್ತದೆ. ಪ್ರಚೋದನೆ ಭೀಕರವಾದರೆ ಭಯವು ಭೀಕರವಾಗಿರುವುದು, ಪ್ರಚೋದನೆ ಸಾದಾರಣವಾದರೆ ಭಯವು ಸೀಮಿತವಾಗಿರುತ್ತದೆ. ಆದರೆ ಪ್ರತಿಭೀತಿಯೂ ಆಗಿರದೆ ಪ್ರಚೋದನೆಯ ಪ್ರಮಾಣವನ್ನಾವಲಂಬಿಸಿರುವುದರಿಲ್ಲ ಆದ್ದರಿಂದ ಪ್ರತಿಭೀತಿಯು ಯಾವಾಗಲು ಪ್ರಬಲ ಭೀಕರವಾಗಿರುತ್ತದೆ. ಪ್ರತಿಭೀತಿಯು ಅನೇಕ ವಿಧಗಳಿವೆ ಎತ್ತರದ ಸ್ಥಳದ ಭೀತಿ, ನಿರ್ಜನ ಭೀತಿ, ಕತ್ತಲೆಯ ಭೀತಿ, ಜನಸಂದಣಿ ಭೀತಿ, ರಕ್ತದ ಭೀತಿ, ಏಕಾಂತ ಭಯ ಮುಂತಾದವುಗಳು ಪ್ರತಿಭೀತಿಗೆ ನಿದರ್ಶನಗಳಾಗಿವೆ.
ಗೀಳುಚಾಳಿ
[ಬದಲಾಯಿಸಿ]ಒಂದು ವಿಚಾರ ಆಲೋಚನೆ ಶಬ್ಧ ಸಂವೇಗ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ಮನದಲ್ಲಿ ಸುಳಿಯುತ್ತಿದ್ದರೆ ಅದನ್ನು ಗೀಳು ಎಂದು ಕರೆಯುವರು. ಮನದಲ್ಲಿ ಪುನಃ ಪುನಃ ಬರುವ ಈ ಗೀಳು ಅಹಿತಕರ ಮತ್ತು ಅಸಂಬದ್ಧವಾಗಿರುತ್ತದೆ. ಗೀಳು ಚಾಳ ಎರಡು ಭಿನ್ನವಾದರೂ ಒಂದು ಮತ್ತೊಂದರಲ್ಲಿ ಅಂತರ್ಗತವಾಗಿರುತ್ತವೆ.
ನರದೌರ್ಬಲ್ಯ ಮನೋಬೇನೆ
[ಬದಲಾಯಿಸಿ]ಸಾಮಾನ್ಯವಾಗಿ ನರಗಳ ಅಶಕ್ತತೆಯನ್ನು ನರದೌರ್ಬಲ್ಯ ಎಂದು ಕರೆಯುತ್ತಾರೆ. ಇಲ್ಲಿ ಉಂಟಾಗುವ ನರದೌರ್ಬಲ್ಯವು ಆಂಗಿಕ ಶ್ರಮದಿಂದ ಅಥವಾ ಅತೀವ ದುಡಿಮೆಯಿಂದ ಬರುವುದಿಲ್ಲ. ದೈನಂದಿನ ಸಮಸ್ಯೆಗಳನ್ನು ಭಾವೋದ್ವೇಗಕ್ಕೆ ಒಳಗಾಗಿ ಎದುರಿಸುವುದರಿಂದ ಈ ನರದೌರ್ಬಲ್ಯ ಉಂಟಾಗುವುದು. ಈ ರೋಗದಿಂದ ಬಳಲುವವರು ಸದಾ ಸುಸ್ತಾಗಿದೆ ಎಂದು ಗೊಣಗುತ್ತಿರುತ್ತಾರೆ. ಇವರಿಗೆ ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ ಏನಾದರೂ ಕೆಲಸ ಬಂದರೆ ಆಯಾಸವಾದಂತೆ ತೋರಿಕೊಳ್ಳುತ್ತಾರೆ. ಈ ರೋಗಗಳಲ್ಲದೇ ಕದನ ಮನೋವೇದನೆ ಅಭಿಘಾತ ಮನೋಬೇನೆ ರೋಗ ಚಿಂತನೆಯು ಮನೋಬೇನೆ ಮುಂತಾದ ರೋಗಗಳಿರುತ್ತವೆ. ಈ ಎಲ್ಲಾ ರೋಗಗಳನ್ನು ಮನೋಬೇನೆಯ ವಿವಿಧ ರೂಪಗಳೆಂದು ಕರೆಯಬಹುದು. ಮನೋಬೇನೆಗೆ ಒಳಗಾದವನಿಗೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದರೆ ಅವನು ಗಣನೀಯವಾಗಿ ಸುಧಾರಿಸಬಹುದು ಅದ್ದರಿಂದ ಈ ರೋಗಗಳನ್ನು ಲಘು ಮನೋರೋಗಗಳೆಂದು ಕರೆಯುವರು.
ಮನೋವೃತ್ತಿಯ ಕೆಲವು ರೂಪಗಳು
[ಬದಲಾಯಿಸಿ]ಮನೋವಿಕೃತಿಗಳು
[ಬದಲಾಯಿಸಿ]ಗಂಭೀರವಾದ ಮನೋರೋಗಗಳಾಗಿರುತ್ತವೆ. ಮನೋವಿಕೃತಿಯ ಸಂವೇಗಾತ್ಮಕ ಮಾನಸಿಕ ಹಾಗೂ ದೈಹಿಕ ಕ್ರಿಯೆಗಳು ತೀವ್ರ ಅವ್ಯವಸ್ಥಿತವಾಗಿರುತ್ತವೆ. ವರ್ತನೆಯು ವಿಚಿತ್ರವಾಗಿದ್ದು ಅವನನ್ನು ನೋಡಿದಾಕ್ಷಣ ಅವನೊಬ್ಬ ಅಪಸಾಮಾನ್ಯವ್ಯಕ್ತಿಯೆಂದು ಸುಲಭವಾಗಿ ತಿಳಿಯುವುದು. ಅವನು ಸಮಾಜಕ್ಕೆ ಹೊರೆಯಾಗಿರುತ್ತಾನೆ. ಮನೋವಿಕೃತಿಯಲ್ಲಿ ಅನೇಕ ವಿಧಗಳಿವೆ. ವಿಕಾರದ ಸ್ವರೂಪ ಮತ್ತು ತೀವ್ರತೆಯ ಮೇಲೆ ಅವುಗಳನ್ನು ವರ್ಗೀಕರಿಸಬಹುದು ಮನೋವಿಕೃತಿಗಳನ್ನು ಕಾರ್ಯಾತ್ಮಕ ಮನೋವಿಕೃತಿಗಳೆಂದು ಆಂಗಿಕ ಮನೋವಿಕೃತಿಗಳೆಂದು ಪ್ರಮುಖವಾಗಿ ವಿಂಗಡಣೆ ಮಾಡಲು ಇದನ್ನು ಸಂಕ್ಷಿಪ್ತವಾಗಿ ಅರಿಯುವಾ.
ಕಾರ್ಯಾತ್ಮಕ ಮನೋವಿಕೃತಿಗಳು
[ಬದಲಾಯಿಸಿ]ಕಾರ್ಯಾತ್ಮಕ ಮನೋವಿಕೃತಿಗಳಿಗೆ ಗುರಿಯಾದವರ ದೈಹಿಕ ಸ್ಥಿತಿಯು ಉತ್ತಮವಾಗಿರುವುದು ಶಾರೀರಿಕವಾಗಿ ಇವರು ಸಧೃಡರಾಗಿರುತ್ತಾರೆ. ಇವರ ಅಂಗಾಂಗಗಳು ಸರಿಯಾಗಿರುತ್ತವೆ ಆದರೆ ಇವರ ವರ್ತನೆ ಅಸಂಬದ್ಧವಾಗಿರುತ್ತದೆ. ಇವರ ಕಾರ್ಯಗಳು ಅಸ್ತವ್ಯಸ್ತವಾಗಿರುತ್ತದೆ. ಸಮಾಜದ ಮತ್ತು ಕಾನೂನಿನ ದೃಷ್ಟಿಯಿಂದ ಇವನು ಹುಚ್ಚನಾಗಿರುತ್ತಾನೆ.
ಇಚ್ಛಿತ
[ಬದಲಾಯಿಸಿ]ಈ ರೋಗಕ್ಕೆ ಒಳಗಾದವರು ವ್ಯಕ್ತತ್ವ ವಿರೋಧಭಾಸಗಳಿಂದ ಕೂಡಿರುತ್ತಾರೆ. ಇವರು ಭಾವಸನ್ಯರಾಗಿದ್ದು ಇಚ್ಛಿತ್‍ವೆಂದು ಪ್ರೀತಿ ವಾತ್ಸಲ್ಯ ಅನುರಾಗ, ಕರುಣೆ, ಸಹಾನುಭೂತಿ ಮುಂತಾದ ಸಂವೇಗಗಳು ಇವರಲ್ಲಿ ಭಿತ್ತಿ ಹೋಗಿರುತ್ತವೆ. ಸುಖ-ದುಃಖ, ಜನನ-ಮರಣ, ಲಾಭ-ಹಾನಿ ಮುಂತಾದ ದ್ವಂದ್ವಗಳು ಇವರಿಗೆ ತಟ್ಟುವುದಿಲ್ಲ.
ಉನ್ಮಾದ ಖಿನ್ನತೆ ಮನೋವಿಕೃತಿ
[ಬದಲಾಯಿಸಿ]ಉನ್ಮಾದ ಮತ್ತು ಖಿನ್ನತೆಗಳು ಪರಸ್ಪರ ವಿರುದ್ಧವಾದ ಅವಸ್ಥೆಗಳು. ಮನುಷ್ಯನಿಗೆ ಸುಖ-ಸಂತೋಷವಾದಗ ಉನ್ಮಾದಿತನಾಗುವನು. ದುಃಖದ ವಿಚಾರವಾದಗಾ ಖಿನ್ನತೆಗೊಳ್ಳುವನು. ಈ ಭಾವನೆಗಳು ಪರತಿಯೊಬ್ಬನಲ್ಲಿಯೂ ಇರುತ್ತವೆ. ಆದರೆ ಇವು ಅಲ್ಪಕಾಲಿಕ ಮತ್ತು ಮಿತ ಪ್ರಮಾಣದಲ್ಲಿರುತ್ತವೆ. ಈ ಭಾವನೆಗಳು ದೀರ್ಘಕಾಲಿಕವಾದರೆ ಮತ್ತು ಹೆಚ್ಚು ಪ್ರಮಾಣದಲ್ಲಿ ಉಂಟಾದರೆ ವ್ಯಕ್ತಿಯು ಮನೋವಿಕೃತಿ ರೋಗಕ್ಕೆ ತುತ್ತಾಗುವನು. [೧]
ಅಂಗೀತ ಮನೋವಿಕೃತಿ
[ಬದಲಾಯಿಸಿ]ವ್ಯಕ್ತಿಯ ನರಮಂಡಲ ಗ್ರಂಥಿ, ಮಿದುಳು, ಕಶೇರುಕ, ಮುಂತಾದ ಅಂಗಗಳು ರೋಗಕ್ಕೆ ಗುರಿಯಾಗಿ ಶಕ್ತಿಹೀನವಾಗಿ ಅಥವಾ ಅಪಘಾತಕ್ಕೆ ಒಳಗಾಗಿ ಹಾನಿಗೊಳಗಾಗುತ್ತವೆ. ಇವು ವ್ಯಕ್ತಿಯ ವರ್ತನೆಯಲ್ಲಿ ಅಸಹಜನೆಯನ್ನುಂಟುಮಾಡುವುದು. ಅಂಗಾಂಗಗಳಿಗೆ ಆಗಿರುವ ಹಾನಿಯ ಪ್ರಮಾಣ ಮತ್ತು ತೀವ್ರತೆಯನ್ನು ಅನುಸರಿಸಿಕೊಂಡು ಮನೋವಿಕೃತಿಯು ಗಂಭೀರವಾಗುವುದು ಅಥವಾ ಸೌಮ್ಯವಾಗಿರಬಹುದು. ಈ ಮನೋವಿಕೃತಿಯಿಂದ ಪೀಡಿತರಾದವರು ತಮಗೂ ಮತ್ತು ಸಮಾಜಕ್ಕೆ ಹೋರೆಯಾಗುವರು.
ಅಪಸ್ಮಾರ
[ಬದಲಾಯಿಸಿ]ಅಪಸ್ಮಾರವನ್ನು ಮೂರ್ಛೆರೋಗ ಅಥವಾ ಸೆಳೆವು ಎಮದು ಕರೆಯುವರು. ಈ ರೋಗವು ಯಾವುದೇ ವಯಸ್ಸಿನಲ್ಲಿ ಬರಬಹುದು. ಸ್ತ್ರೀ ಪುರುಷರಿಬ್ಬರು ಈ ರೋಗಕ್ಕೆ ಬಲಿಯಾಗುವರು.
ಸಾಮಾನ್ಯ ಸ್ನಾಯು ಪಾಶ್ರ್ವವಾಯು ಮನೋವಿಕೃತಿ
[ಬದಲಾಯಿಸಿ]ಲೈಂಗಿಕ ಸಂಪರ್ಕದಿಂದ ಉಂಟಾಗುವ ಸಿಫಲಿಸ್ ಎಂಬ ರೋಗವು ಈ ಮನೋವಿಕೃತಿಗೆ ಕಾರಣವಾಗಬಹುದು. ತಲೆನೋವು, ತಲೆಸುತ್ತುವುದು, ಆಯಾಸವಾಗುವುದು ಇದರ ಆರಂಭದ ಲಕ್ಷಣ ಕ್ರಮೇಣ ನಡತೆ ಬದಲಾಗುವುದು, ಸೃತಿ ಕುಗ್ಗುವುದು, ಸಂವೇದಗಳು ಅಸ್ತವ್ಯಸ್ತವಾಗುವುದು. ರೋಗ ಉಲ್ಬಣವಾದಂತೆ ತನ್ನ ಬಂಧುಗಳನ್ನು ಗುರುತಿಸುವುದಿಲ್ಲ. ಭ್ರಾಂತಿ ತುಂಬಿದವರಂತೆ ಕಾಣುವನು. ಮಾತು ಕೃತಿಗಳು ಗೊಂದಲ ನಿರ್ಮಾಣ ಮಾಡುವುವು. ಅದೂ ಅಸ್ಪಷ್ಟವಾಗುವುವು. ಕ್ರಮೇಣ ರೋಗಾಣುಗಳು ಮಿದುಳನ್ನು ನಾಶ ಮಾಡಿದಂತೆ ಇವನ ವರ್ತನೆ ಅಸ್ತವ್ಯಸ್ತವಾಗುತ್ತಾ ಹೋಗುವುದು.
ರಕ್ತನಾಳದ ಬಗೆಯುವಿಕೆಯಿಂದಾಗುವ ಮನೋವಿಕೃತಿ
[ಬದಲಾಯಿಸಿ]ಮನುಷ್ಯನ ಹೃದಯದಲ್ಲಿ ಶುದ್ಧವಾಗಿರುವ ರಕ್ತದ ಬಹುಭಾಗವು ಅಪಧಮನಿಗಳ ಮೂಲಕ ಮಿದುಳನ್ನು ಸೇರುವುದು. ಮಿದುಳು ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸಬೇಕಾದರೆ ರಕ್ತದ ಪೂರೈಕೆ ಸರಿಯಾಗಿ ಆಗಬೇಕಾಗುವುದು. ರಕ್ತ ಪೂರೈಕೆ ಮಾಡುವ ರಕ್ತನಾಳವು ಬಿಗಿದು ಬಿಟ್ಟರೆ ರಕ್ತ ಸಂಚಾರ ಅಸ್ತವ್ಯಸ್ತವಾಗುವುದು. ಇದರಿಂದ ಆಯಾಸ, ತಲೆನೋವು, ತಲೆಸುತ್ತುವಿಕೆ, ಚಂಚಲ, ನಿದ್ರಾಹೀನತೆ, ಕಿರಿ-ಕಿರಿ ಉಂಟಾಗುವುದು. ಅವನ ವರ್ತನೆಯ ಮೇಲೆ ಗಮನ ಇಡಬೇಕು. [೨]
ಸಮಾಯೋಜನಾ ಮತ್ತು ಹೊಂದಾಣಿಕೆ ಸಮಸ್ಯೆಗಳು
[ಬದಲಾಯಿಸಿ]ಸಮಾಯೋಜನೆಯಿದ್ದಲ್ಲಿ ಬಾಳು ಸುಗಮವಾಗುತ್ತದೆ. ಆದರೆ ಸಮಾಯೋಜನೆಗಳನ್ನು ಗಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಆದರೆ ನಮ್ಮ ಈ ಅಗತ್ಯಗಳನ್ನು ಪುರೈಸಿಕೊಳ್ಳುವ ಪ್ರಯತ್ನದಲ್ಲಿ ಅನೇಕ ಅಡಚಣೆಗಳು ಹತಾಶೆ ಮತ್ತು ಘರ್ಷಣೆಗಳಿಂದಾಗಿ ಸಮಾಯೋಜನೆ ಸಮಸ್ಯೆಗಳುಂಟಾಗುತ್ತದೆ. ಈ ಅಡಚಣೆಗಳನ್ನು ಮೂರು ವಿಧಗಳನ್ನಾಗಿ ವಿಂಗಡಿಸಲಾಗಿದೆ. ವೈಯಕ್ತಿಕ ಅಡಚಣೆಗಳು, ಸಾಮಾಜಿಕ ಅಡಚಣೆಗಳು ಹಾಗೂ ಪ್ರಕೃತಿದತ್ತÀವಾದ ಅಡಚಣೆಗಳು.
ಚಿಕಿತ್ಸೆ
[ಬದಲಾಯಿಸಿ]- ಔಷಧಿಗಳು: ಖಿನ್ನತೆ ನಿವಾರಕ, ಪ್ರಧಾನ ಮತ್ತು ಅಲ್ಪಮಟ್ಟದ ಶಮನಕಾರಿಗಳು.
- ವಿದ್ಯುತ್ ಕಂಪನ ಚಿಕಿತ್ಸೆ.
- ಮನೋಚಿಕಿತ್ಸೆ ಮತ್ತು ನಡವಳಿಕೆ ಚಿಕಿತ್ಸೆ
- ಆಪ್ತಸಲಹೆ ಮತ್ತು ಸಮಾಧಾನ
- ತರಭೇತಿ ಮತ್ತು ಅಂಗಮರ್ದನ ಚಿಕಿತ್ಸೆ.
- ಅನುಕೂಲಕರ ಪರಿಸರ.
- ವಿರಾಮಕರ ಹಾಗೂ ಕಲಾ ಚಟುವಟಿಕೆಗಳು, ಯೋಗ, ಧ್ಯಾನ.ಇತರೆ