ಮನೋಹರ ಎಂ. ಕೋರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Ganu 010210 sharana13.jpg
'ಮನೋಹರ ಎಂ. ಕೋರಿಯವರು, ದೀಪ ಪ್ರಜ್ವಲನ ಮಾಡುತ್ತಿರುವುದು'

ಮನೋಹರ ಎಂ. ಕೋರಿ ಯವರು, 'ಮುಂಬಯಿನಗರ'ದ ’ಮಾಹಿಮ್’ ಉಪನಗರದಲ್ಲಿರುವ 'ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ',ರು. ಅವರೊಬ್ಬ ಸಮರ್ಥ ಆಡಳಿತಗಾರ, ಯಶಸ್ವಿ ಉದ್ಯಮಿ, ಮತ್ತು ಶಿಕ್ಷಣ ಪ್ರೇಮಿ, ಕನ್ನಡದ ಕಟ್ಟಾಳು ಆಗಿ, ಸುಮಾರು ೭೦ ರ ದಶಕದಿಂದ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಆಗ 'ಕರ್ನಾಟಕ ಸಂಘ'ಕ್ಕೆ ಸದಸ್ಯರಾಗಿ ಸೇರಿದಮೇಲೆ ಒಂದಲ್ಲ ಒಂದು ರೀತಿಯಲ್ಲಿ ಸಂಘದ ಯೇಳಿಗೆಗೆ ಶ್ರಮಿಸುತ್ತಲೇ ಬಂದಿದ್ದಾರೆ. ಕನ್ನಡ ಕಾರ್ಯಕ್ರಮಗಳಲ್ಲಿ ತಪ್ಪದೆ ಒಬ್ಬ 'ಕಲಾಪ್ರೇಮಿ ಪ್ರೇಕ್ಷಕ'ರಾಗಿ ಎಲ್ಲರೊಡನೆಯೂ ಬೆರೆಯುತ್ತಾರೆ. ೯೦ ರ ದಶಕದಲ್ಲಿ ಆಗಿನ ಅಧ್ಯಕ್ಷ, 'ಸದಾನಂದ ಶೆಟ್ಟಿ' ಯವರ ಕಾರ್ಯಾವಧಿಯಲ್ಲಿ ಕಾರ್ಯಕಾರಿ ಮಂಡಳಿಗೆ ಪಾದಾರ್ಪಣೆಮಾಡಿದ ಕೋರಿಯವರು, ಉತ್ತಮ ಸ್ಪೂರ್ಥಿಪಡೆದು ಶೆಟ್ಟರ ನಂತರ 'ಉಪಾಧ್ಯಕ್ಷ'ರಾಗಿ ಆಯ್ಕೆಗೊಂಡರು. ಸನ್ ೨೦೦೪ ರಲ್ಲಿ 'ಕೋರಿ'ಯವರು 'ಅಧ್ಯಕ್ಷ'ರಾಗಿ ಆಯ್ಕೆಯಾದರು.೨೦೦೪-೭ ಮತ್ತು ೨೦೦೭-೧೦, ಈ ಎರಡೂ ಅವಧಿಗಳಲ್ಲಿ ಅಧ್ಯಕ್ಷರಾಗಿದ್ದ ಕೋರಿಯವರು ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಮುಂಬಯಿನಗರದಲ್ಲಿ ಪಸರಿಸಲು, ಹೆಚ್ಚು-ಹೆಚ್ಚು ಬೆಳೆಸಲು ಸಮರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದರು. ಅವರ ಕಾರ್ಯವಧಿಯಲ್ಲಿ ಕಾರ್ಯಾಕ್ರಮಗಳು ನಿಜಕ್ಕೂ ದಾಖಲುಮಾಡುವಂತಹದು.

  • 'ಕರ್ನಾಟಕ ಸಂಘ'ಕ್ಕೆ ೨೦೦೬ 'ರಾಜ್ಯೋತ್ಸವ ಪ್ರಶಸ್ತಿ' ದೊರಕಿತು.
  • ೨೦೦೮-೯ 'ಅಮೃತಮಹೋತ್ಸ'ವದ ಸಡಗರ, ಹಾಗೂ ಅದ್ಧೂರಿಯಾಗಿ ನೆರವೇರಿದ ಖ್ಯಾತಿ.
  • 'ಗಾನ ಸಾಮ್ರಾಟ', 'ಸಿ. ಅಶ್ವಥ್' ರವರ ಸಂಗೀತ ಕಾರ್ಯಕ್ರಮವನ್ನು 'ಶಣ್ಮುಖಾನಂದ ಸಭಾಗೃಹ'ದಲ್ಲಿ ಏರ್ಪಡಿಸಿದ್ದು ಅದ್ಭುತವಾಗಿ ನೆರೆವೇರಿದ ಸಂಗೀತ ಕಾರ್ಯಕ್ರಮ.

ಕನ್ನಡ ಭಾಷಾಭಿಮಾನ, ಬಾಲ್ಯದಿಂದಲೇ ಚಿಗುರಲು ಅನುವುಮಾಡಿಕೊಡುವುದು ಅಗತ್ಯ[ಬದಲಾಯಿಸಿ]

ಒಬ್ಬ ವ್ಯಕ್ತಿಯ ಭಾಷೆ, ಸಂಸ್ಕೃತಿ ಬಗ್ಗೆ ಪ್ರೇಮ ಮನೆಯಿಂದಲೇ ಆರಂಭವಾಗಬೇಕು ಎಂದು ನುಡಿದ ಕೋರಿಯವರು, ಸಭಾಗೃಹದ ನವೀಕರಣ ಕಾರ್ಯದಲ್ಲಿ ವಹಿಸಿದರು. ಕನ್ನಡದ ಬಗ್ಗೆ ಅಭಿಮಾನವನ್ನು ಮಕ್ಕಳಿಗೆ ಅವರ ಬಾಲ್ಯದಲ್ಲೇ ಹುಟ್ಟಿಸಿದರೆ, ಮುಂದಿನ ಪೀಳಿಗೆ ಕನ್ನಡವಾಗುವಸಾಧ್ಯತೆಯನ್ನು ಒತ್ತಿಹೇಳುತ್ತಾಬಂದರು. ಈಗ ಹೊಸ ಅಧ್ಯಕ್ಷರ ಆದಮೇಲೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೋರಿಯವರು ಮೊದಲಿನಂತೆಯೇ ಆಸಕ್ತಿವಹಿಸಿದ್ದಾರೆ. ಅಧಿಕಾರ ಅವರಿಗೆ ಮುಖ್ಯವಲ್ಲ. ಕನ್ನಡದ ಕೆಲಸ ಆಗಬೇಕು ಅಷ್ಟೆ ಎಂದು ಕಳಕಳಿಯಿಂದ ಹೇಳುತ್ತಾರೆ, ಅವರು.

ಕೋರಿಯವರ ಜವಾಬ್ದಾರಿಯುತ ಹುದ್ದೆಗಳು[ಬದಲಾಯಿಸಿ]

೧೯೬೩ ರಿಂದ ಮುಂಬಯಿ ಮಹಾನಗರ ಪಾಲಿಕೆಯಲ್ಲಿ, 'ಸಿವಿಲ್ ಎಂಜಿನಿಯರ್' ಆಗಿ ಸೇವೆಸಲ್ಲಿಸಿದ, ಸರಳ ಸಜ್ಜಿನಿಕೆ ವ್ಯಕ್ತಿತ್ವದ ಕೋರಿಯವರು, 'ಮೆ. ಜ್ಯೋತಿ ಕನ್ ಸ್ಟ್ರ ಕ್ಷನ್ ಕಂಪೆನಿ'ಯ ಮಾಲಿಕರು.

  • 'ಮಹಾರಾಷ್ಟ್ರ'ದ, 'ಆಲ್ ಇಂಡಿಯಾ ವೀರಶೈವ ಮಹಾಸಭೆಯ ಅಧ್ಯಕ್ಷರು'.
  • 'ಬಸವೇಶ್ವರ ಫಿಲೊಸಾಫಿಕಲ್ ಅಂಡ್ ಕಲ್ಚರಲ್ ಸೊಸೈಟಿ' ಯ 'ಟ್ರಸ್ಟಿ'ಯಾಗಿದ್ದಾರೆ.
  • 'ಮುಂಬಯಿನ ವೀರಶೈವ ಕೋ-ಆಪರೇಟಿವ್ ಬ್ಯಾಂಕ್ ನ ಸ್ಥಾಪಕರು', ಹಾಗೂ 'ಕಾರ್ಯಾಧ್ಯಕ್ಷರು'.
  • 'ವರ್ಲ್ಡ್ ಬ್ಯಾಂಕ್' ನ ಹಲವಾರು 'ಪ್ರೊಜೆಕ್ಟ್' ಗಳಲ್ಲಿ ಸಕ್ರಿಯವಾಗಿ ಸಹಾಯಕರಾಗಿ, ಸೇವೆಸಲ್ಲಿಸಿದ್ದಾರೆ.

ಸನ್,'೨೦೧೦ ರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರು'[ಬದಲಾಯಿಸಿ]

'ಮುಂಬಯಿನ ಕರ್ನಾಟಕ ಸಂಘ'ದ ಮಾಜಿ ಅಧ್ಯಕ್ಷ, 'ಮನೋಹರ ಎಂ. ಕೋರಿ'ಯವರಿಗೆ, 'ಸನ್, ೨೦೧೦ ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ'ವನ್ನು ಮಾನ್ಯ ಮುಖ್ಯಮಂತ್ರಿಗಳಾದ 'ಬಿ.ಎಸ್.ಎಡಿಯೂರಪ್ಪನವರು', 'ಕನ್ನಡ ರಾಜ್ಯೋತ್ಸವ'ದ ದಿನ, ನವೆಂಬರ್ ೧ ರಂದು, ಬೆಂಗಳೂರಿನ 'ರವೀಂದ್ರ ಕಲಾಕ್ಷೇತ್ರ ಸಭಾಗೃಹದಲ್ಲಿ ಪ್ರದಾನಿಸಿದರು. ಆ ಸಂದರ್ಭದಲ್ಲಿ ಪ್ರತಿಕ್ರಯಿಸುತ್ತಾ 'ಕಾಯಕವೇ ಕೈಲಾಸ'ವೆನ್ನುವ ಮಾತಿನಲ್ಲಿ ತಾವು ವಿಶ್ವಾಸವಿಟ್ಟಿರುವುದಾಗಿ ತಿಳಿಸಿದರು. ತಮ್ಮ ಬದುಕಿನ ಅನೇಕ ಮಲಿಗಲ್ಲುಗಳು ತಾವು ಕರ್ನಾಟಕ ಸಂಘದಲ್ಲಿರುವಾಗಲೇ ಕಾಣಿಸಿಕೊಂಡಿವೆ. ಹಾಗಾಗಿ 'ಮುಂಬಯಿಕನ್ನಡಿಗರಿಗೆ ಮಾತೃ ಸಂಸ್ಥೆ' ಎನ್ನಿಸಿರುವ 'ಕರ್ನಾಟಕ ಸಂಘ, ನನಗೂ ಮಾತೃ ಸಂಸ್ಥೆಯೇ' ಎಂದು ಭಾವುಕರಾಗಿ ನುಡಿಯುತ್ತಾರೆ. 'ಅನೇಕ ಹಿತೈಶಿಗಳ, ಬಂಧುಗಳ, ಗೆಳೆಯರ, ಮುಂಬಯಿ ಕನ್ನಡಿಗರ, ಹಾಗೂ ಸಂಘದ ಸದಸ್ಯರೆಲ್ಲರ ಆಶೀರ್ವಾದ, ತಮಗೆ ಲಭಿಸಿದೆ' ಎಂದು ಹೇಳಲು ಸಂತೋಷಪಡುತ್ತೇನೆ', ಎನ್ನುತ್ತಾರೆ.