ಭಾರತೀಯ ತಂತ್ರಜ್ಞಾನ ಸಂಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐಐಟಿ ಖರಗ್ಪುರ್

ಭಾರತೀಯ ತಂತ್ರಜ್ಞಾನ ವಿದ್ಯಾಲಯಗಳು ಅಥವಾ ಐಐಟಿ (Indian Institutes of Technology) ಭಾರತದ ೨೩ ಸ್ವತಂತ್ರ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳು. ಭಾರತ ಸರ್ಕಾರಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಇವುಗಳನ್ನು ಸಂಸತ್ತಿನ ಆದೇಶದ ಮೇಲೆ ೧೯೫೦ರಲ್ಲಿ ಸ್ಥಾಪನೆ ಮಾಡಲಾಯಿತು. ವ್ಯಾಸಂಗ ಮತ್ತು ಸಂಶೋಧನೆ ಎರಡರಲ್ಲೂ ಪ್ರಸಿದ್ದಿ ಪಡೆದಿರುವ ಈ ಕೇಂದ್ರಗಳಲ್ಲಿ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲದೆ ಅನೇಕ ವಿದೇಶಿ ವಿದ್ಯಾರ್ಥಿಗಳು ತಮ್ಮ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದ.

ಐಐಟಿಗಳು, ಐಐಟಿ-ಜೆಇಇ ಎಂಬ ಪದವಿಪೂರ್ವ ಪ್ರವೇಶಾತಿ ಒಂದು ಸಾಮಾನ್ಯ ಪ್ರವೇಶ ಪ್ರಕ್ರಿಯೆ ಹೊಂದಿವೆ. ಇದನ್ನು ೨೦೧೩ ರಲ್ಲಿ ಸುಧಾರಿತ ಜಂಟಿ ಪ್ರವೇಶ ಪರೀಕ್ಷೆ ಬದಲಿಸಿತು. ಈ ಪ್ರಕ್ರಿಯೆ ಎಲ್ಲಾ ಸ್ನಾತಕೋತ್ತರ ಮಟ್ಟದ ಪದವಿಗಳಿಗೂ ಅನ್ವಯಿಸುತ್ತದೆ. ಇದು ಅತ್ಯತ್ತಮ ಅಭಿಯಂತ್ರ ಪದವಿಯನ್ನು ನೀಡುತ್ತದೆ.ಭಾರತದಲ್ಲಿ ೨೩ ಐಐಟಿಗಳಿವೆ. ಆವುಗಳಲ್ಲಿ ಮುಖ್ಯವಾದವು ಖರಗ್ಪುರ, ಮುಂಬಯಿ, ಮದ್ರಾಸ್, ಕಾನ್ಪುರ್, ದೆಹಲಿ, ಧನ್ಬಾದ್, ರೂರ್ಕಿ, ವಾರಾಣಸಿ, ಗೌಹಾತಿಗಳಲ್ಲಿ ಇದೆ.