ಭಾರತೀಯ ಜನಸಂಘ
ಗೋಚರ
ಭಾರತೀಯ ಜನಸಂಘ (ಬಿಜೆಎಸ್ ಅಥವಾ ಜನಸಂಘ ಎಂದು ಪ್ರಖ್ಯಾತಿ) ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ಇದು ೧೯೫೧ ರಿಂದ ೧೯೮೦ ರ ವರೆಗೆ ಅಸ್ಥಿತ್ವದಲ್ಲಿತ್ತು. ನಂತರ ಇದು ಭಾರತೀಯ ಜನತಾ ಪಕ್ಷವಾಗಿ ರೂಪಾಂತರಗೊಂಡಿತು.
ಭಾರತೀಯ ಜನಸಂಘವನ್ನು ೧೯೫೧ರ ಅಕ್ಟೋಬರ್ ೨೧ ರಂದು, ಶ್ಯಾಮ್ ಪ್ರಸಾದ್ ಮುಖರ್ಜಿ ಯವರು ಪ್ರಾರಂಭಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಇದಕ್ಕೆ ಬೆನ್ನೆಲುಬಾಗಿ ನಿಂತಿತು. ಭಾರತೀಯ ಜನಸಂಘವನ್ನು ರಾಷ್ತ್ರೀಯ ಸ್ವಯಂ ಸೇವಕ ಸಂಘದ ರಾಜಕೀಯ ಮುಖಪಡೆ ಎಂದೆ ಪರಿಗಣಿಸಲ್ಪಡುತ್ತದೆ.