ಬ್ರಹ್ಮಚೈತನ್ಯ ಮಹರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಬ್ರಹ್ಮಚೈತನ್ಯ ಮಹಾರಾಜರು'

ಬ್ರಹ್ಮಚೈತನ್ಯರು (ಗೋಂದಾವಲೇಕರ ಮಹಾರಾಜ), ೧೮೪೫ರ 'ಮಾಘ ಶುದ್ಧ ದ್ವಾದಶಿಯಂದು' ಸಾತಾರಾ ಜಿಲ್ಲೆ, 'ಮಾನ್' ತಾಲೂಕಿನ 'ಗೋಂದಾವಲೆ'ಯಲ್ಲಿ ಜನಿಸಿದ ಒಬ್ಬ ಹಿಂದೂ ಸಂತರಾಗಿದ್ದರು. ಅವರ ಪೂರ್ವನಾಮ 'ಗಣಪತಿ' ಎಂದಾಗಿತ್ತು. ಇವರ ಮಹಿಮೆ ಅಪರಂಪಾರ. ಇವರು ಇದ್ದಲ್ಲೇ ಇದ್ದು ದೂರ ಇರುವ ಭಕ್ತನಿಗೆ ದರ್ಶನ ನೀಡಿದರು. ಒಂದು ಪಾವಿನ ಅನ್ನವ ಸಾವಿರ ಜನಗಳಿಗೆ ಉಣ್ಣಿಸಿದರು. ಇವರ ಶಿಷ್ಯ ವೃಂದದಲ್ಲಿ ಬ್ರಹ್ಮಾನಂದ ಮಹಾರಾಜರು. ಶ್ರೀ ಬ್ರಹ್ಮಚೈತನ್ಯರು ಶ್ರೀರಾಮನ ಪರಮ ಭಕ್ತರಾಗಿದ್ದರು ಮತ್ತು 'ಬ್ರಹ್ಮಚೈತನ್ಯ ರಾಮದಾಸಿ' ಎಂದು ಸಹಿ ಮಾಡುತ್ತಿದ್ದರು. ಸಾಮಾನ್ಯ ಜನರಿಗೆ ಅರ್ಹವಾಗುವಂತೆ ಆಡುಭಾಷೆಯಲ್ಲಿ ಶ್ರೀರಾಮನ ಬಗ್ಗೆ ಕವಿತೆಗಳನ್ನು ರಚಿಸಿ ಹಾಡಿದರು. ದೀನ ದಲಿತರ ಸೇವೆಯೇ ರಾಮನ ಸೇವೆಯೆಂದು ಅವರು ಭಾವಿಸಿದ್ದರು. ಅವರೆಲ್ಲಾ 'ಅಯೋಧ್ಯೆ'ಗೆ ಹೋಗಿ ರಾಮನ ದರ್ಶನ ಭಾಗ್ಯ ಪಡೆಯಲು ಸಾಧ್ಯವಾಗಿಲ್ಲವಾಗಿರುವುದರಿಂದ 'ಗೋಂದಾವಲೆ'ಯಲ್ಲೇ 'ಶ್ರೀರಾಮ ದೇವರ ಪ್ರತಿಷ್ಠಾಪನೆ' ಮಾಡಿದರು. ತಮ್ಮ ಆಯುಷ್ಯದ ಪ್ರತಿನಿಮಿಷದಲ್ಲೂ ರಾಮನ ಬಗ್ಗೆ ಹಾಡುತ್ತಲೇ ತಮ್ಮ ಜೀವನವನ್ನು ಕಳೆದರು. ಶ್ರೀರಾಮ ನಾಮದ ಮಹತ್ವಗಳನ್ನು ಜಗತ್ತಿಗೆ ಸಾರಿದರು. ಇಂದಿಗೂ ಗೋದಾವಲೆಯಲ್ಲಿ ದಿನದ ೨೪ ಗಂಟೆಯೂ 'ಶ್ರೀರಾಮನ ಅಖಂಡ ಭಜನೆ' ನಡೆಯುತ್ತಲೇ ಇರುತ್ತದೆ.

'ಶ್ರೀ ಕ್ಷೇತ್ರದ ಐತಿಹ್ಯ'[ಬದಲಾಯಿಸಿ]

ಚಿತ್ರ:BCM 047.JPG
'ಶ್ರೀ ಬ್ರಹ್ಮಚೈತನ್ಯ ಮಹರಾಜ್'

ಒಮ್ಮೆ 'ಬ್ರಹ್ಮಚೈತನ್ಯ ಮಹರಾಜರು', 'ತೀರ್ಥಯಾತ್ರೆ'ಗೆಂದು 'ನಮಿಷಾರಣ್ಯ'ಕ್ಕೆ ಹೊರಟಾಗ ದೇವಾಲಯದ ಶ್ರೀರಾಮನ ವಿಗ್ರಹದಿಂದ ಕಣ್ಣೀರು ಬರುತ್ತಿತ್ತಂತೆ. ಶ್ರೀರಾಮನಿಗೆ ಗುರುಗಳ ಬಗ್ಗೆ ಅಷ್ಟು ಪ್ರೇಮವಿತ್ತೆಂದು, 'ಸದ್ಗುರು ಚರಿತ್ರೆ' ವರ್ಣಿಸುತ್ತದೆ. ಗೋಂದಾವಲೆಗೆ ಹೋಗಿ ಶ್ರೀರಾಮನ ದರ್ಶನಮಾಡಿದ ಪ್ರತಿಯೊಬ್ಬರ ಜೀವನದಲ್ಲೂ ಮಹತ್ತರ ಬದಲಾವಣೆಯಾಗುತ್ತದೆಯೆಂದು ತಿಳಿದವರು ಹೇಳುತ್ತಾರೆ. ಯಾತ್ರಿಕರಿಗೆ ತಂಗಲು ಬಹಳ ಉತ್ತಮವಾದ 'ವಸತಿ ಸೌಕರ್ಯ'ಗಳನ್ನು ಕಲ್ಪಿಸಿದ್ದಾರೆ. ಈ 'ಶ್ರೀ ಕ್ಷೇತ್ರ'ದಲ್ಲಿ 'ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಸಮಾಧಿ ಮಂದಿರ'ವಿದೆ. 'ಶ್ರೀ ಬ್ರಹ್ಮಚೈತನ್ಯ ಮಹರಾಜರ ಮಂದಿರ ಗೋಂದಾವಲೆ', ಬೆಂಗಳೂರು (ಶ್ರೀನಿವಾಸನಗರ), ಮತ್ತು ಹೆಬ್ಬಳ್ಳಿಯಲ್ಲಿ ಇವೆ. ದಿನ ನಿತ್ಯವೂ ಶ್ರೀ ರಾಮನ ನಾಮಸ್ಮರಣೆ ಈ ಮಂದಿರಗಳಲ್ಲಿ ನಡೆಯುತ್ತೆ.