ಬಿ. ಆರ್. ವಿಜಯಲಕ್ಷ್ಮೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:BRV-1.jpg
'ಬಿ. ಆರ್. ವಿಜಯಲಕ್ಷ್ಮೀ'

ತಮಿಳು ಚಿತ್ರಗಳಾದ 'ವೀರಪಾಂಡ್ಯ ಕಟ್ಟ ಬೊಮ್ಮನ್', 'ಕಪ್ಪಲೊಟ್ಟಿಯ ತಮಿಝನ್', ಹಾಗೂ ಕನ್ನಡ ಚಿತ್ರಗಳಲ್ಲಿ ಅತ್ಯಂತ ಯಶಸ್ಸನ್ನು ಸಾಧಿಸಿದ, 'ಸ್ಕೂಲ್ ಮಾಸ್ಟರ್' ಮುಂತಾದ ಭವ್ಯಪರಂಪರೆಯ ಹೆಸರಾಂತ ಚಿತ್ರನಿರ್ಮಾಪಕ, 'ಶ್ರೀ.ಬಿ.ಆರ್.ಪಂತುಲು' ತವರ ಪುತ್ರಿ 'ಬಿ.ಆರ್.ವಿಜಯಲಕ್ಶ್ಮೀ,' ತಂದೆಯವರ ಜಾಡನ್ನೇ ಅನುಸರಿಸಿದ್ದಾರೆ. ಸ್ವಲ್ಪ ಭಿನ್ನವಾಗಿ, ಅಂದರೆ, ಚಲನಚಿತ್ರ-ಛಾಯಾಗ್ರಾಹಕಿಯಾಗಿದ್ದು ಒಂದು ಗಮನಾರ್ಹ ಸಂಗತಿಯಾಗಿದೆ.

ಚಲನಚಿತ್ರಗಳ ನಿರ್ಮಾಪಕಿಯಾಗಿ[ಬದಲಾಯಿಸಿ]

ಚಿತ್ರ:Exhibition-2.jpg
'ಬಿ. ಆರ್. ಪಂತುಲುರವರ ಜನ್ಮಶತಮಾನೋತ್ಸವ ಸಮಾರಂಭ'

ಹೆಸರಾಂತ ನಟ-ನಟಿಯರನ್ನು ಒಳಗೊಂಡ ಹಲವಾರು ಚಲನಚಿತ್ರಗಳ ನಿರ್ಮಾಪಕಿ ಬಿ. ಆರ್. ವಿಜಯಲಕ್ಷ್ಮೀ.

  • ’ಎನ್ ಪುರುಷನ್ ತಾನ್ ಎನಕ್ಕು ಮಟ್ಟುಮ್ ತಾನ್,
  • ’ಮಲ್ಲುವೆಟ್ಟಿ ಮೈನರ್’,
  • ’ಆರುವಡೈ ನಾಳ್’,
  • ’ತಾಲಾಟ್ಟು'

ಮುಂತಾದ ಚಲನಚಿತ್ರಗಳಿಗೆ 'ಕ್ಯಾಮರಾ ಸೇವೆ' ಒದಗಿಸಿ 'ಸೈ' ಎನ್ನಿಸಿಕೊಂಡರು. ಆ ಚಿತ್ರಗಳಲ್ಲಿ ಅಭಿನಯಿಸಿದ ಕಲಾವಿದರುಗಳು ಅತ್ಯಂತ ಮೇರು ನಟರು, ಹಾಗೂ ಚಿತ್ರರಂಗದಲ್ಲಿ ಚೆನ್ನಾಗಿ ಪಳಗಿ ಹೆಸರು ಮಾಡಿದರು. ಅವರುಗಳಲ್ಲಿ ಪ್ರಮುಖರು :

  • 'ವಿಜಯ ಕಾಂತ್,'
  • 'ಸತ್ಯರಾಜ್,'
  • 'ಅರವಿಂದ ಸ್ವಾಮಿ,'
  • 'ಪ್ರಭು,'

'ವಿಜಯ ಲಕ್ಷ್ಮೀ'ಯವರ ಶ್ರಮ, ಹಾಗೂ ಆಸಕ್ತಿಗಳು ಅವರ ೨೦ ಚಿತ್ರಗಳಲ್ಲಿ ಅವರ 'ಫಿಲ್ಮೋಗ್ರಫಿಯ ಛಾಯೆ' ನಮಗೆ ಕಾಣಿಸುತ್ತದೆ. ಮಿಕ್ಕ ಒಂದು ಚಿತ್ರವನ್ನು ಅವರೇ ನಿದೇಶಿಸಿದ್ದು. ’ಪಾಟ್ಟು ಪಾಡುವ’ ಎಂಬ ಸಂಗೀತಮಯ ಚಿತ್ರದ ನಿರ್ದೇಶನವನ್ನು ಅವರು ಮಾಡಿದರು. ಚಿತ್ರದ ನಾಯಕ ನಟ, 'ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಮ್'. 'ಡಾ.ಎಸ್.ಪಿ'ಯವರ ಜೊತೆಗೆ, 'ವಿಜಯಲಕ್ಷ್ಮೀ' ಯವರಿಗೂ ಹಲವಾರು ಪ್ರಶಸ್ತಿಗಳು ಲಭಿಸಿವೆ.

ಕಿರುತೆರೆ[ಬದಲಾಯಿಸಿ]

ಕಿರುತೆರೆಯಲ್ಲಿ 'ವಸಂತಂ ಕಾಲನಿ ಧಾರಾವಾಹಿ',ಯನ್ನು ನಿರ್ದೇಶಿಸಿದರು. ಅದರಲ್ಲಿ ದೊಡ್ಡ ತೆರೆಯಲ್ಲಿ ಅತ್ಯಂತ ಸುಪ್ರಸಿದ್ಧ ನಾಯಕ ನಟ, 'ಅರವಿಂದ ಸ್ವಾಮಿ', ಕೆಲವು ಕಂತುಗಳಲ್ಲಿ ಅಭಿನಯಿಸಿದರು. 'ಶ್ರೀ. ಬಿ.ಆರ್.ಪಂತುಲು' ರವರ ಮಗಳು, ,ಕರ್ನಾಟಕ ಚಲನಚಿತ್ರ ಅಕಾಡೆಕಿ,, ಆಯೋಜಿಸಿದ್ದ ,'ಪಂತಲು ರವರ ಜನ್ಮಶತಮಾನೋತ್ಸವ ಸಮಾರಂಭದ ಉದ್ಘಾಟನೆ'ಗೆಂದು ಬೆಂಗಳೂರಿಗೆ ಬಂದಿದ್ದರು. ಕನ್ನಡ ತೆಲುಗು, ತಮಿಳು ಭಾಷೆಯ ಚಿತ್ರನಿರ್ಮಾಪಕ ಪಂತುಲು ಒಳ್ಳೆಯ ಹೆಸರಾದವರು. ಚಿಕ್ಕಂದಿನಂದಿಲೂ ತೆರೆಯ ಹಿಂದೆ ಕೆಲಸಮಾಡಲು ಇಷ್ಟಪಟ್ಟರು. ಚಲನಚಿತ್ರ ಛಾಯಾಗ್ರಾಹಕಿಯಾಗುವ ಬಯಕೆ. ೮೦ ರ ದಶಕದಲ್ಲಿ ಕಂಡ ಕನಸು ಸಾಕಾರವಾಗಲು ಅವರು ಸತತವಾಗಿ ೫ ವರ್ಷ, ಅಶೋಕ್ ಕುಮಾರ್ ಬಳಿ ಶಿಷ್ಯೆಯಾಗಿ ಸೇರಿ ಕಲಿತರು. ಛಾಯಾಗ್ರಹಣ ಕಲೆಯ ಎಲ್ಲಾ ಪ್ರಾಕಾರಗಳನ್ನೂ ಕಲಿತುಕೊಂಡರು. ಮೊಟ್ಟ ಮೊದಲ ಚಿತ್ರ, ಭಾಗ್ಯರಾಜ್ ನಿರ್ದೇಶಕ, 'ಚಿನ್ನವೀಡು' ಚಿತ್ರಮಾಡುವಾಗ ಅವರಿಗೆ ಸ್ವತಂತ್ರ್ಯವಾಗಿ 'ಛಾಯಾಗ್ರಾಹಕ ಪಟ್ಟ'ಕ್ಕೇರಿಸಿದರು. ಹೀಗೆ ಯಶಸ್ವಿಯಾದ ಮೊದಲ ಚಿತ್ರದಲ್ಲಿ ಅರಿವಿಲ್ಲದಂತೆಯೇ 'ಏಷ್ಯಾದ ಮೊಟ್ಟಮೊದಲ ಮಹಿಳಾ ಛಾಯಾಗ್ರಾಹಕಿ'ಯ ಶಿರೋಪಟ್ಟಿ, ಮುಡಿಗೇರಿತ್ತು. ದೊಡ್ಡ ತೆರೆಗಿಂತಾ ಕಿರುತೆರೆಯೇ ಅವರಿಗೆ ಬಲುಪ್ರಿಯವಾಯಿತು.

ಧಾರಾವಾಹಿಗಳು[ಬದಲಾಯಿಸಿ]

  • ’ಮೀಂಡುಂ ಕುಟ್ಟಿ ಚೆಟ್ಟಾನ್’
  • 'ಮಾಯಾ ಮಚ್ಚಿಂದ್ರ’
  • ’ವೇಲನ್,’
  • 'ಶೂಲಂ’ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ.

ಕೆಲವು 'ಭಕ್ತಿಪ್ರಧಾನ'ವಾದರೆ, ಮತ್ತೆ ಕೆಲವು 'ಸಾಮಾಜಿಕ ದೃಷ್ಟಿಕೋನ' ಹಾಗೂ ಒಳ-ನೋಟಗಳನ್ನು ಹೊಂದಿವೆ. ಅವುಗಳಲ್ಲಿ ಹೆಚ್ಚು 'ಸೋಷಿಯೋ-ಮೈಥಿಲಾಜಿಕಲ್’ ವರ್ಗದವು. ಅಂದರೆ, ಒಂದು ಕಡೆ ಕೆಲವು ಧಾರಾವಾಹಿಗಳು 'ಭಕ್ತಿಪ್ರಧಾನ'ವಾದರೆ ಮತ್ತೊಂದೆಡೆ ಅವು 'ಸಾಮಾಜಿಕ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತವೆ. ಇದಕ್ಕೆ ತಕ್ಕ ಉದಾಹರಣೆ, ’ಅಮ್ಮ ನಾಗಮ್ಮ,’ ಇಂತಹ ಹಲವಾರು ಧಾರಾವಾಹಿಗಳನ್ನು ಛಾಯಾಗ್ರಹಿಸಿ, ನಿರ್ದೆಶಿಸಿಯೂ ಇದ್ದಾರೆ.

ರಿಯಾಲಿಟಿ-ಕ್ರಿಯೇಟೀವ್ ಶೋ[ಬದಲಾಯಿಸಿ]

'ಸ-ರಿ-ಗ-ಮ'-ಎಂಬ 'ರಿಯಾಲಿಟಿ-ಕ್ರಿಯೇಟೀವ್ ಶೋ' ನ, ಮುಖ್ಯಸ್ಥಳಾಗಿಯೂ ದುಡಿದಿದ್ದಾರೆ

ವಿಜಯಲಕ್ಷ್ಮೀ'ಯವರ ಕೆಲವು ಅನಿಸಿಕಿಗಳು :

  • 'ಒಬ್ಬ ವಿಶ್ವಾಸನೀಯ ಛಾಯಾಗ್ರಾಹಕ/ಕಿಗೆ, ಅಪಾರ ’ದೈಹಿಕ ಶಕ್ತಿಯ ಅಗತ್ಯ. ಕೆಲವು ದೃಷ್ಯಗಳನ್ನು ಸೆರೆಹಿಡಿಯಲು ಅತ್ಯಂತ ಏಕಾಗ್ರತೆ, ಮತ್ತು ಸಂಯಮ, ಬೇಕಾಗುತ್ತದೆ.
  • ತಮ್ಮ '೨೫ ವರ್ಷಗಳ ಛಾಯಾಗ್ರಹಣದ ವೃತ್ತಿಯಲ್ಲಿ' ನಲ್ಲಿ ಹಲವಾರು 'ಕಟು-ಸತ್ಯ'ಗಳನ್ನು ಕಂಡುಕೊಂಡಿದ್ದಾರೆ. ಸದಾ 'ಜೀನ್ಸ್' ಧರಿಸಿ ಸ್ವಲ್ಪ ಕಾಲ ತಾನು 'ಮಹಿಳೆ'ಯೆಂಬುದನ್ನು ಮರೆಯುವುದೂ 'ವೃತ್ತಿಜೀವನ'ದ ಅನೇಕ ಅಗತ್ಯಗಳಲ್ಲಿ ಒಂದಾಗಿತ್ತು, ಎಂದು ನೆನೆಯುತ್ತಾರೆ.

ವಿವಾಹ ಮತ್ತು ಸಾಂಸಾರಿಕ ಜೀವನ[ಬದಲಾಯಿಸಿ]

ಅವರು ಮದುವೆಯಾದದ್ದು ಸೌಂಡ್ ರೆಕಾರ್ಡಿಸ್ಟ್ ಹಾಗೂ ಗ್ರಾಫಿಕ್ಸ್ ತಜ್ಞ' ಸುನೀಲ್ ಕುಮಾರ್. 'ವಿಜಯಲಕ್ಷ್ಮೀ' ನೆಮ್ಮದಿಯ ಸಾಂಸಾರಿಕ ಜೀವನನಡೆಸುತ್ತಿದ್ದಾರೆ.