ಬಿಯಾಂಡ್ ದ ಲಾಸ್ಟ್ ಬ್ಲೂ ಮೌಂಟೈನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಯಾಂಡ್ ದ ಲಾಸ್ಟ್ ಬ್ಲೂ ಮೌಂಟೈನ್ ರುಸ್ಸಿ ಲಾಲಾ ಅವರಿಂದ ರಚಿತವಾದ ಜೆ. ಆರ್. ಡಿ. ಟಾಟಾ ಅವರ ಜೀವನಚರಿತ್ರೆ. ಇದು ಟಾಟಾರವರ ಜೀವಿತಕಾಲದಲ್ಲೇ ಪ್ರಕಟವಾಯಿತು ; ಮತ್ತು ಅವರ ಜೀವನಪಥದ ಅತ್ಯಂತ ಸಣ್ಣ ಪುಟ್ಟ ವಿವರಗಳನ್ನೂ ಒಳಗೊಂಡಿದೆ. ಅಲ್ಲದೆ ಟಾಟಾ ಸಂಸ್ಥೆಯ ಹಲವು ಮುಖಗಳನ್ನೂ ಇದರಲ್ಲಿ ದಾಖಲಿಸಲಾಗಿದೆ. ಭಾರತದ ಯಂತ್ರೋದ್ಯಮ ಕ್ಷೇತ್ರದಲ್ಲಿ, ಹಲವು ಪ್ರಥಮಗಳನ್ನು ದೇಶಕ್ಕೆ ಒದಗಿಸಿದ ಟಾಟಾ ಪರಿವಾರದ ಕಥೆಯೂ ಇದರಲ್ಲಿ ವರ್ಣಿತವಾಗಿದೆ.