ಬಾಂದ್ರ ಸ್ಕೈವಾಕ್'
ಮುಂಬಯಿ ಉಪನಗರ, ಬಾಂದ್ರದ ರೈಲ್ವೆನಿಲ್ದಾಣದಬಳಿ, ೧೩.೬೩ ಕೋಟಿರೂಪಾಯಿ ಗಳ ಖರ್ಚಿನ ಸ್ಕೈವಾಕ್ ಗಗನ-ನಡಿಗೆ, ಕಲಾನಗರಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ಮಹಾರಾಷ್ಟ್ರದ ಮುಖ್ಯ ಮಂತ್ರಿ ವಿಲಾಸರಾವ್ ದೇಶಮುಖ್, ಇದನ್ನು ಉದ್ಘಾಟಿಸಿದರು. ಮುಂಬಯಿನ ರಸ್ತೆಯನ್ನು ದಾಟುವಾಗ ಆಗುವ ಅನಾಹುತಗಳನ್ನು ನಿಯಂತ್ರಿಸುವಲ್ಲಿ ಇದು ಮೊದಲ ಹೆಜ್ಜೆ. ಸಮುದ್ರದ ಹತ್ತಿರದ ಪ್ರದೇಶಗಳನ್ನು ಸಂಪರ್ಕಿಸಲು ಮುಂಬಯಿ ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ, ಈ ಆಕಾಶನಡಿಗೆಯನ್ನು ನಿರ್ಮಿಸುವ ವ್ಯವಸ್ಥೆಮಾಡಿದೆ. ಸುಮಾರು ೧.೩ ಕಿ.ಮೀ.ಉದ್ದದ ೪೫೦ ಟನ್ ಸ್ಟೀಲ್ ನಿಂದ ನಿರ್ಮಿತವಾದ ಈ ಸೇತುವೆಯು, ಬಾಂದ್ರಾ ಹಾಗೂ ಕಲಾನಗರಗಳನ್ನು ಜೋಡಿಸುತ್ತದೆ. ಬಾಂದ್ರಾ ರೈಲ್ವೆ ನಿಲ್ದಾಣ ದಿಂದ ನೇರವಾಗಿ ಈ ಸೇತುವೆಯ ಮುಖಾಂತರ ನಡೆದುಬಂದರೆ, ಅನಂತ ಕಾನೇರ್ಕರ್ ಮಾರ್ಗ, ಇಂಡಿಯನ್ ಆಯಿಲ್ ಬಿಲ್ಡಿಂಗ್, ನಂದಾದೀಪ್ ಗಾರ್ಡನ್, ಹಾಗೂ ಕಲಾನಗರಕ್ಕೆ ಆಗಮನ-ನಿರ್ಗಮನಗಳ ಬಾಗಿಲುಗಳನ್ನುಹೊಂದಿದೆ. ದಿನಂಪ್ರತಿ, ಸುಮಾರು ೫ ಲಕ್ಷ ಪ್ರಯಾಣಿಕರು ಇದರಮೇಲೆ ನಡೆದು ದಾಟಬೇಕಾಗುತ್ತದೆ. ಮುಂಬಯಿನ ಪಶ್ಚಿಮ ವಿಭಾಗದಲ್ಲಿ ೨೭, ಮಧ್ಯ ವಿಭಾಗದಲ್ಲಿ, ೧೯, ಹಾಗೂ ಹಾರ್ಬರ್ ಲೈನ್ ನಲ್ಲಿ, ೪, ಒಟ್ಟು, ೫೦ ಸ್ಕೈವಾಕ್ ಗಳ ನಿರ್ಮಾಣಗಳನ್ನು ಮಾಡಿಮುಗಿಸುವ ಯೋಜನೆ ಪ್ರಾಧಿಕಾರದ ಮುಂದಿದೆ. ಇದಕ್ಕೆ ತಗಲುವ ವೆಚ್ಚ ಸುಮಾರು, ೬೦೦ ಕೋಟಿರೂಪಾಯಿಗಳು. ಉಳಿದ ೪೯ ಆಕಾಶಸೇತುವೆಗಳ ನಿರ್ಮಾಣವನ್ನು ೨೦೦೯ ರ ಮಾರ್ಚ್ ತಿಂಗಳಿನೊಳಗೆ ಮುಗಿಸುವ ಯೋಜನೆಯಿದೆ.
೩೦೦ ಮಂದಿಗೆ ಪರವಾನಗಿದೊರೆತಿದೆ. ಕಾನೂನು ರೀತಿಯಾಗಿ ಅನುಮತಿಗೆ ಹಕ್ಕುದಾರರಾದ ಒಟ್ಟು ಫೇರಿವಾಲರ ಸಂಖ್ಯೆ ೧,೫೦೦, ಎಂದು ನಿರ್ಧರಿಸಲಾಗಿದೆ. ಇವರೆಲ್ಲಾ ಸುಮಾರು ೫೦ ಸ್ಕೈವಾಕ್ ಗಳಲ್ಲಿ ನೆಲೆಸುವ ಆಲೋಚನೆಯಿದೆ. ಪ್ರಮುಖವಾಗಿ, ಇದು ದಾಟುವ ಸೇತುವೆಯಾದ್ದರಿಂದ, ಫೇರಿವಾಲರ ಮಾರಾಟದ ಪುಟ್ಟ ಮಳಿಗೆಗಳು ಜನರ ಓಡಾಟಕ್ಕೆ ಅಡಚಣೆ ಮಾಡುವ ಸಾಧ್ಯತೆಯೇ ಹೆಚ್ಚು.