ಬಸವ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಝಳಕಿ, ತಾ. ಇಂಡಿ, ಜಿ.ವಿಜಯಪುರ
ಬಸವ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಝಳಕಿ, ತಾ. ಇಂಡಿ, ಜಿ.ವಿಜಯಪುರ | |
---|---|
ಸ್ಥಾಪನೆ | 2018 |
ಸ್ಥಳ | ಝಳಕಿ, ತಾ. ಇಂಡಿ, ಜಿ.ವಿಜಯಪುರ, ಕರ್ನಾಟಕ |
ವಿದ್ಯಾರ್ಥಿಗಳ ಸಂಖ್ಯೆ | 1000 |
ಅಂತರಜಾಲ ತಾಣ | http://www.becbgk.edu |
ಬಸವ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಝಳಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ-೧೩ದ ಹತ್ತಿರದಲ್ಲಿದೆ. ಇದು 2018ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ದಿಂದ ಮಾನ್ಯತೆ ಹೊಂದಿದೆ. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್(ನವದೆಹಲಿ) ಕೂಡ ಮಾನ್ಯತೆ ನೀಡಿದೆ. ಅದರಂತೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಕೊಡ ಮಾನ್ಯತೆ ನೀಡಿದೆ. ಪ್ರಸ್ತುತ 4 ಪದವಿ ವಿಭಾಗಗಳು ಕಾರ್ಯನಿರ್ವಹಿಸುತ್ತವೆ.[೧]
ವಿಭಾಗಗಳು
[ಬದಲಾಯಿಸಿ]ಪದವಿ ವಿಭಾಗಗಳು
- ಸಿವಿಲ್ ಎಂಜಿನಿಯರಿಂಗ್
- ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
- ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
- ಮೆಕ್ಯಾನಿಕಲ್ ಎಂಜಿನಿಯರಿಂಗ್
ಲಭ್ಯವಿರುವ ವಿಷಯಗಳು
[ಬದಲಾಯಿಸಿ]ಮಹಾವಿದ್ಯಾಲಯದಲ್ಲಿ ಈ ಕೆಳಕಂಡ ವಿಷಯಗಳಲ್ಲಿ ೪ ವರ್ಷಗಳ ಅವಧಿಯ ಬಿ.ಇ ಪದವಿಗೆ ಸೀಟುಗಳು ಲಭ್ಯವಿರುತ್ತವೆ.
ವಿಷಯ | ಲಭ್ಯವಿರುವ ಸೀಟುಗಳು | ಅವಧಿ |
---|---|---|
ಸಿವಿಲ್ ಇಂಜಿನಿಯರಿಂಗ್ | 60 | 4 ವರ್ಷ |
ಮೆಕ್ಯಾನಿಕಲ್ ಇಂಜಿನಿಯರಿಂಗ್ | 60 | 4 ವರ್ಷ |
ವಿದ್ಯುನ್ಮಾನ ಮತ್ತು ಸಂವಹನ ಇಂಜಿನಿಯರಿಂಗ್ | 60 | 4 ವರ್ಷ |
ಗಣಕ ವಿಜ್ಞಾನ ಇಂಜಿನಿಯರಿಂಗ್ | 60 | 4 ವರ್ಷ |
ಆವರಣ
[ಬದಲಾಯಿಸಿ]ಮಹಾವಿದ್ಯಾಲಯವು 10 ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಕ್ರೀಡಾಂಗಣ, ಸಭಾಂಗಣ ಇದೆ.
ಕ್ರೀಡೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ ಈ ಸಂಸ್ಥೆಯು ನೀಡುತ್ತದೆ. ಕಾಲೇಜು ವಾಲಿಬಾಲ್, ಫೂಟ್ಬಾಲ್, ಟೆನ್ನಿಸ್, ಬಾಸ್ಕೆಟ್ಬಾಲ್, ಕಬಡ್ಡಿ, ಕ್ರಿಕೆಟ್, ಬ್ಯಾಡ್ಮಿಂಟನ್ ಮುಂತಾದ ಹೊರಾಂಗಣ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಒಳಾಂಗಣ ಕ್ರೀಡಾಂಗಣವನ್ನೂ ಹೊಂದಿದೆ. ಈಗಾಗಲೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆದ ಕ್ರೀಡಾ ಸ್ಪರ್ದೆಗಳಲ್ಲಿ ಉತ್ತಮ ಸಾಧನೆ ಮಾಡಿದೆ.
ಗ್ರಂಥಾಲಯ
[ಬದಲಾಯಿಸಿ]ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.
ಗ್ರಂಥಾಲಯವು ಪ್ರಮುಖ ಸಂಪನ್ಮೂಲ ಕೇಂದ್ರವಾಗಿದ್ದು ಸಂಪೂರ್ಣ ಗಣಕೀಕೃತವಾಗಿದೆ. ವಿದ್ಯಾರ್ಥಿಗಳ ಮತ್ತು ಭೋದಕರ ಸಮಗ್ರ ಅಭಿವೃದ್ದಿಗೆ ಪೂರಕವಾಗಿದೆ.
ಪ್ರವೇಶ
[ಬದಲಾಯಿಸಿ]ದ್ವಿತೀಯ ಪಿಯುಸಿ (10+2) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಅದರಂತೆ ಬಿ.ಎಸ್ಸಿ , ಡಿಪ್ಲೊಮಾ, ಜಿಟಿಟಿಸಿ, ಸಿಬಿಎಸ್ಸಿ (10+2) ಮತ್ತು ಐಸಿಎಸ್ಸಿ (10+2) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.
ವಿದ್ಯಾರ್ಥಿನಿಲಯಗಳು
[ಬದಲಾಯಿಸಿ]- ವಿದ್ಯಾರ್ಥಿ ನಿಲಯ
- ವಿದ್ಯಾರ್ಥಿನಿಯರ ನಿಲಯ
ಜೀವನ ಮಾರ್ಗದರ್ಶನ ಕೇಂದ್ರ
[ಬದಲಾಯಿಸಿ]ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಐಬಿಎಮ್ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.