ಪ್ರಾಚೀನ ಭಾರತ (ಪುಸ್ತಕ)
ಗೋಚರ
ಲೇಖಕರು | ಆರ್ ಎಸ್ ಶರ್ಮ |
---|---|
ಅನುವಾದಕ | ಶಂಕರನಾರಾಯಣ ರಾವ್ ಎನ್ ಪಿ |
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ಇತಿಹಾಸ |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೩, ೬ನೇ ಮುದ್ರಣ |
ಪುಟಗಳು | ೨೮೮ |
ಐಎಸ್‍ಬಿಎನ್ | 978-81-7302-280-7 |
ಪ್ರಾಚೀನ ಭಾರತ ಆರ್ ಎಸ್ ಶರ್ಮ ಅವರು ಬರೆದ ಪುಸ್ತಕ. ಕನ್ನಡಕ್ಕೆ ಅನುವಾದ : ಎನ್ ಪಿ ಶಂಕರನಾರಾಯಣ ರಾವ್.
ಒಂದು ದೇಶದ ಇತಿಹಾಸವೆಂದರೆ, ಆ ದೇಶವನ್ನು ಆಳಿದ ರಾಜವಂಶಗಳ, ಅವು ನಡೆಸಿದ ದಂಡಯಾತ್ರೆಗಳ, ಸಣ್ಣಪುಟ್ಟ ಯುದ್ಧಗಳ ಅಥವಾ ಅವುಗಳ ಸೋಲು-ಗೆಲುವು, ಅಳಿವು-ಉಳಿವುಗಳ ವರದಿಯಷ್ಟೇ ಅಲ್ಲ. ಇತಿಹಾಸವೆಂದರೆ ಸರಿಯಾದ ಆಧಾರವಿಲ್ಲದ ಕಾಲ್ಪನಿಕ ಭವ್ಯ ಚಿತ್ರಣವೂ ಅಲ್ಲ. ಇತಿಹಾಸದ ಅವಧಿಯಲ್ಲಿ ಅಲ್ಲಿ ಬದುಕಿದ ಜನರ ಜೀವನ, ಅಲ್ಲಿನ ಆರ್ಥಿಕ ಪರಿಸ್ಥಿತಿ, ಪರದೇಶಗಳೊಂದಿಗಿನ ವಾಣಿಜ್ಯ-ಆರ್ಥಿಕ ಸಂಬಂಧಗಳು, ನಾನಾ ಕಾರಣಗಳಿಂದ ವಲಸೆ ಬಂದು ಅಲ್ಲಿ ನೆಲಸಿದ ಇತರ ಜನರು, ಅಲ್ಲಿ ಹುಟ್ಟಿದ ಮತ ಧಾರ್ಮಿಕ ಚಳವಳಿಗಳು ಹಾಗೂ ಪಂಥಗಳು ಇತಿಹಾಸವನ್ನು ರೂಪಿಸುವುದರಲ್ಲಿ ಮುಖ್ಯ ಪಾತ್ರವಹಿಸುತ್ತವೆ ಎಂಬುದನ್ನು ಮರೆಯಬಾರದು. ಇತಿಹಾಸ ಬೆಸೆದ ಕೊಂಡಿಗಳ ಮೂಲಕ ಇಂದಿನ ಆಗುಹೋಗುಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಂತೆಯೇ ಭವಿಷಯವನ್ನು ರೂಪಿಸುವುದಕ್ಕೆ, ಇತಿಹಾಸದ ವಸ್ತುನಿಷ್ಠ ಅಧ್ಯಯನ ನೆರವಾಗುತ್ತದೆ.
ಬಾಹ್ಯ ಸಂಪರ್ಕ
[ಬದಲಾಯಿಸಿ]- ಆರ್ ಎಸ್ ಶರ್ಮ ಅವರ ಪುಸ್ತಕಗಳು[ಶಾಶ್ವತವಾಗಿ ಮಡಿದ ಕೊಂಡಿ]
- R S Sharma, authority on ancient India