ಪುಷ್ಪಾ ಗುಜ್ರಾಲ ವಿಜ್ಞಾನ ನಗರ, ಜಲಂಧರ್
ಗೋಚರ
ಪುಷ್ಪಾ ಗುಜ್ರಾಲ ವಿಜ್ಞಾನ ನಗರವು ಜಲಂಧರ್ ಮತ್ತು ಕಪುರ್ತಲಾ ರಸ್ತೆಯಲ್ಲಿದೆ, ಇದು 72 ಎಕರೆ ಪ್ರದೇಶದಲ್ಲಿ ಹರಡಿದೆ. ಇದು ಮಕ್ಕಳಿಗೆ ಪ್ರಸಕ್ತವಾದ ಜಾಗವಾಗಿದ್ದು, ವಿಜ್ಞಾನಕ್ಕೆ ಸಂಬಂಧಪಟ್ಟ ಹಲವಾರು ಪ್ರಾಜೆಕ್ಟುಗಳಿವೆ. ಇಲ್ಲಿರುವ ಪ್ರಾಜೆಕ್ಟುಗಳು ಭೌತಶಾಸ್ತ್ರ, ಸ್ವಾಭಾವಿಕ, ಸಮಾಜ ಶಾಸ್ತ್ರ, ಇಂಜಿಯನಿರಿಂಗ್, ಆಧುನಿಕ ವ್ಯವಸಾಯ, ಮಾನವವಿಕಾಸ, ಪರಮಾಣು ವಿಜ್ಞಾನ, ಆರೋಗ್ಯ, ಐಟಿ, ಬಿಟಿ ಮುಂತಾದವುರ ಬಗ್ಗೆ ಇದೆ. ಮನೋರಂಜನೆ, ಲೇಸರ್ ಶೋ ಮತ್ತು ವಿಮಾನ ವೇಳಾಪಟ್ಟಿ ಮುಂತಾದುವುದರ ಬಗ್ಗೆಯೂ ಆಯೋಜಿತವಾಗಿದೆ. ಕೆಲವೊಂದು ಹೋಟೆಲುಗಳು ವಿಜ್ಞಾನ ಪಾರ್ಕಿನೊಳಗಿದೆ, ಇಲ್ಲಿ ಪ್ರವಾಸಿಗರು ಬಗೆಬಗೆಯ ಖಾದ್ಯಗಳನ್ನು ಸವಿಯಬಹುದಾಗಿದೆ. ಹಲವಾರು ಶಾಲೆಗಳು ಈ ವಿಜ್ಞಾನ ಸಿಟಿಯಲ್ಲಿ ವಿಶೇಷ ಕೋರ್ಸನ್ನು, ಪ್ರವಾಸವನ್ನು ಆಯೋಜಿಸುತ್ತವೆ. ಎಲ್ಲಾ ವಯಸ್ಸಿನವರು ಇಲ್ಲಿಗೆ ಬಂದು ವಿಶ್ರಾಂತಿ ಪಡೆದುಕೊಳ್ಳುತ್ತಾರೆ.[೧]