ನ್ಯೂ ಎಂಪೈರ್ ಸಿನಿಮಾ ಹೌಸ್, ಮುಂಬೈ
ಮುಂಬಯಿಮಹಾನಗರದ ಕೋಟೆ ಪ್ರದೇಶದಲ್ಲಿ ಸುಮಾರು ೯೬ ವರ್ಷಗಳಿಂದ ಚಲನಚಿತ್ರ ರಸಿಕರಿಗೆ ಅತ್ಯಂತ ಸುಂದರ ಮತ್ತು ಜನಪ್ರಿಯ ಹಾಲಿವುಡ್ ಚಿತ್ರಗಳನ್ನು ವೀಕ್ಷಿಸಲು ಅನುವುಮಾಡಿಕೊಡುತ್ತಿದ್ದ 'ನ್ಯೂ ಎಂಪೈರ್ ಸಿನಿಮಾ ಹೌಸ್'[೧] ನಗರ ಕೆಲವೇ ಸುಸಜ್ಜಿತ, ಅತ್ಯಾಧುನಿಕ ಚಿತ್ರಮಂದಿರಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ನಗರದ ಸಿ.ಎಸ್.ಟಿ.ರೈಲ್ವೆ ನಿಲ್ದಾಣಕ್ಕೆ ಕೇವಲ ೨ ನಿಮಿಷದ ನಡೆದೇ ಹೋಗುವಷ್ಟು ಹತ್ತಿರದ ಚಿತ್ರಮಂದಿರ ಮುಂಬಯಿ ರಸಿಕರಿಗೆ ಚಿರಪರಿಚಿತ.
ಲೈವ್ ಥಿಯೇಟರ್ ಆಗಿ ಪ್ರಾರಂಭವಾಯಿತು
[ಬದಲಾಯಿಸಿ]೧೯೦೮ ರ ಫೆಬ್ರವರಿ, ೨೧ ರಂದು 'ಲೈವ್ ಥಿಯೇಟರ್' ಆಗಿ ಶುರುವಾಯಿತು. ೧,೦೦೦ ಜನರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಮಾಡಲಾಗಿತ್ತು. ಸರ್ಕಲ್, ಗ್ಯಾಲರಿ, ಮತ್ತು ಆರ್ಕೆಸ್ಟ್ರಸ್ಟಾಲ್ ಗಳ ವ್ಯವಸ್ಥೆ. ದೊಡ್ಡ ಪರದೆ ಮತ್ತು ಡೂಂಮ್ಡ್ ಸೀಲಿಂಗ್,ಏಶ್ಯದಾಲ್ಲೆ ಕ್ಯಾಂಟಿಲಿವರ್ ಬಾಲ್ಕನಿಯನ್ನು ನಿರ್ಮಿಸಿದ ಮೊಟ್ಟಮೊದಲ ಸಿನಿಮಾ ಹೌಸ್ ಆಗಿತ್ತು. ೧೯೩೭ ರಲ್ಲಿ ಈ ಟಾಕೀಸಿಗೆ 'ನ್ಯೂ ಎಂಪೈರ್ ಸಿನಿಮಾ' ಎಂದು ಮರುನಾಮಕರಣ ಮಾಡಲಾಯಿತು. ಇತಿಹಾಸಕಾರರು ವರದಿಯಂತೆ ಬೊಂಬಾಯಿಮಹಾನಗರದ ಥಿಯೇಟರ್ ಗಳಿಗೆ ಹೋಲಿಸಿದರೆ ಒಂದರಲ್ಲೇ ಅಷ್ಟು ಸುಂದರ ಮತ್ತು ಅತ್ಯುತ್ತಮ ವ್ಯವಸ್ಥೆಯ ಆರ್ಟ್ ಡೆಕೊ ಮಾದರಿಯ ಹಾಲಿನ ಒಳಭಾಗ್ದ ಸಜಾವಟ್ಟನ್ನು ಹೊಂದಿದ ಚಿತ್ರಮಂದಿರ ಎಲ್ಲರಿಗೂ ಬಹಳ ಪ್ರಿಯವಾಗಿತ್ತು. ಬೊಂಬಾಯಿನ ಹಳೆಯ ಚಿತ್ರಮಂದಿರಗಳಾದ, ನ್ಯೂ ಜೆಂಪೈರ್, ಲಿಬರ್ಟಿ ಸಿನೆಮಾ ಥಿಯೇಟರ್, ಆಗ ಹೊಸದಾಗಿ ಮಾರುಕಟ್ಟೆಗೆ ಬಂದ ಆರ್ಟ್ ಡೆಕೊ ಮಾದರಿಗೆ ಹೆಸರುಗಳಿಸಿದ್ದವು. ಕಟ್ಟಡ ನಿರ್ಮಾತೃಳಾಗಿದ್ದ 'ರಿಡ್ಲಿ ಅಬ್ಬಾಟ್' ಕಟ್ಟಡಕ್ಕೆ ಅಸ್ತಿಭಾರ ಹಾಕಿದ್ದರು. ಪ್ರಾಜೆಕ್ಟ್, 'ಜೆ. ಬಿ. ಫರ್ನಾಂಡಿಸ್' ಮತ್ತು 'ವಾಮನ್ ನಾಮ್ ಜೋಶಿ, ಕಾಲದಲ್ಲಿ ಮುಕ್ತಾಯಗೊಂಡಿತು.
೧೯೯೬ ರಲ್ಲಿ ಪ್ರಮುಖ ದುರಸ್ತಿಕಾರ್ಯ
[ಬದಲಾಯಿಸಿ]೧೯೩೫ ರಲ್ಲಿ ರೂಸಿ ಮೋದಿಯವರ ತಂದೆ 'ಕೆಕಿ ಮೋದಿ' ಥಿಯೇಟರ್ ನ್ನು ಖರೀದಿಸಿದ್ದರು. ೧೯೪೮ ರಲ್ಲಿ 'ಬರ್ಜರ್ ಕೂಪರ್ ರವರ ಮಾವ, 'ರೂಸಿ ಮೋದಿ'ಯವರು ಸಿನಿಮಾ ಹೌಸ್ ನ ಆಡಳಿತದ ವ್ಯವಸ್ಥೆಯನ್ನು ತಮ್ಮ ಕೈಗೆ ತೆಗೆದುಕೊಂಡರು. ೧೯೯೬ ರಲ್ಲಿ ಸಿನಿಮಾಮಂದಿರದ ಸರ್ವತೋಮುಖದ ದುರಸ್ತಿಕಾರ್ಯ ಶುರುವಾಯಿತು ಸಿ.ಪಿ,ಉಮ್ರೇಕರ್, ಮ್ಯಾನೇಜರ್ ೪೦ ವರ್ಷಗಳಿಂದ ಸೇವೆಮಾಡುತ್ತಿದ್ದಾರೆ. 'ನ್ಯೂ ಎಂಪೈರ್' ಮೊದಲು ನಾಟಕದ ರಂಗಮಂದಿರವಾಗಿದ್ದು ಚಿತ್ರಗಳನ್ನು ಪ್ರದರ್ಶಿಸಲು ನಂತರ ಮಾಡಲಾಯಿತು. ಆಸಮಯದಲ್ಲಿ ಬೊಂಬಾಯಿನಲ್ಲಿದ್ದ ೪-೫ ಥಿಯೇಟರ್ ಗಳಲ್ಲಿ 'ನ್ಯೂ ಎಂಪೈರ್' ಒಂದು ಅತಿ ಜನಪ್ರಿಯ ಆಗಿತ್ತು. ಹೆಸರಾಂತ ಹಾಲಿವುಡ್ ಕಲಾವಿದರು ನಿಯಮಿತವಾಗಿ ಭೇಟಿನೀಡುತ್ತಿದ್ದರು.[೨]
ಹಾಲಿವುಡ್ ಚಿತ್ರಗಳ ಪ್ರದರ್ಶನ
[ಬದಲಾಯಿಸಿ]೧೯೬೦-೧೯೮೦ ವರೆಗೆ ಹಾಲಿವುಡ್ ಚಿತ್ರಗಳು ಬಹಳ ಅದ್ಧೂರಿಯಿಂದ ಪ್ರದರ್ಶನಗೊಂಡವು.
- 'ಲವ್ ಸ್ಟೋರಿ',
- 'ನಾರ್ತ್ ಟು ಅಲಾಸ್ಕಾ',
- 'ಅರೌಂಡ್ ದ ವರ್ಲ್ಡ್ ಇನ್ ೮೦ ಡೇಸ್',
- ವೇರ್ ಈಗಲ್ಸ್ ಡೇರ್,'
ಮೊದಲಾದ ಚಿತ್ರಗಳನ್ನು ವೀಕ್ಷಿಸಿದ ಸುಂದರ ಮಧುರ ಅನುಭವಗಳನ್ನು ಚಿತ್ರ ರಸಿಕರು ಇಂದಿ
ಉಲ್ಲೇಖಗಳು
[ಬದಲಾಯಿಸಿ]- ↑ http://epaper.timesofindia.com/Default/Scripting/ArticleWin.asp?From=Archive&Source=Page&Skin=MIRRORNEW&BaseHref=MMIR/2014/03/27&PageLabel=7&EntityId=Ar00500&DataChunk=Ar00700&ViewMode=HTML
- ↑ "ಆರ್ಕೈವ್ ನಕಲು". Archived from the original on 2013-11-16. Retrieved 2014-03-28.