ನಿಯೊ ಕ್ಲಾಸಿಕಲ್ ಇಂಗ್ಲಿಶ್ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಯೊ ಕ್ಲಾಸಿಕಲ್ ಸಾಹಿತ್ಯವೂ ೧೮ ನೇ ಶತಮಾನದ ಸಾಹಿತ್ಯ ಬೆಳವಣಿಗೆಯ ಹಂತಗಳಲ್ಲಿ ಒಂದಾಗಿದೆ.೧೮ನೇ ಶತಮಾನದ ಇಂಗ್ಲೀಶ್ ಸಾಹಿತ್ಯ ಪ್ರಕ್ರಿಯೆಯನ್ನು ಪ್ರಮುಖವಾಗಿಮೂರುಪ್ರಕಾರವಾಗಿವಿಭಾಗಿಸಬಹುದು.ಅವುಗಳೆಂದರೆ, ರೆಸ್ಟೋರೇಶನ್ ಕಾಲ,ನಿಯೊ ಕ್ಲಾಸಿಕಲ್ ಕಾಲ,ಮತ್ತು ಸ್ಯಾಮ್ಯೂಯಲ್ ಜಾನ್ಸನ್ ಕಾಲ.ಈ ಸಾಹಿತ್ಯದಲ್ಲಿ ಫ್ರೆಂಚ್ ಸಾಹಿತ್ಯದ ಪ್ರಭಾವವನ್ನು ಕಾಣಬಹುದು.ಪುನರುಜ್ಜೀವನ ಸಾಹಿತ್ಯದ ಪ್ರಭಾವವೂ ಫ್ರೆಂಚ್ ಸಾಹಿತ್ಯದ ಪ್ರಭಾವದಿಂದಾಗಿ ಕಡಿಮೆಯಾಯಿತು.ಈ ಶತಮಾನದಲ್ಲಿ ಇಂಗ್ಲೆಂಡಿನ ರಾಜಕೀಯವೂ ಸಹ ಬದಲಾವಣೆಯ ಆದಿಯಲ್ಲಿ ಸಾಗಿತ್ತು. ರಾಜಕೀಯವಾಗಿ ಎರಡು ಬಣಗಳಾಗಿ ವಿಭಾಗವಾಯಿತ್ತು.ಅದರಲ್ಲಿ 'ವಿಗ್' ಪ್ರಥಮ ಬಣ ಇದರ ಪ್ರತಿನಿದಿಗಳು ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆ ಬಯಸುವವರಾಗಿದ್ದು ಬ್ರಿಟಿಷ್ ರಾಜಕೀಯ ಬಣದ ಸದಸ್ಯರಾಗಿದ್ದರು. ಎರಡನೆಯ ಬಣ 'ಟೋರಿ' ಈ ಬಣದ ಸದಸ್ಯರುಗಳು ಸಾಮಾಜಿಕ ಬದಲಾವಣೆಯನ್ನು,ಅತಿಯಾದ ಕಂದಾಯ ಪದ್ದತಿಯನ್ನು,ಮತ್ತು ವ್ಯಾಪಾರಿಗಳು ಸರಕಾರದ ವಿಚಾರಗಳಲ್ಲಿ ಭಾಗವಹಿಸುವುದನ್ನು ವಿರೋಧಿಸುವ ಬಣವಾಗಿತ್ತು. ಮೇಲೆ ತಿಳಿಸಿದಂತೆ ೧೮ನೇ ಶತಮಾನದ ಸಾಹಿತ್ಯ ಬೆಳವಣಿಗೆ ಪ್ರಕ್ರಿಯೆಯಲ್ಲಿ ಪ್ರಥಮ ಹಂತವನ್ನು ರೆಸ್ಟೋರೇಶನ್ ಕಾಲ ಎಂದು ಕರೆಯುವರು ಕಾರಣ ನಾಗರೀಕ ಯುದ್ದದಲ್ಲಿ ಪ್ರಥಮ ಚಾರ್ಲ್ಸ್ ದೊರೆಯ ಹತ್ಯೆಯಾಯಿತು.ಆನಂತರ ೧೬೬೦ ರಲ್ಲಿ ಎರಡನೇಯ ಚಾರ್ಲ್ಸ್ ಆಡಳಿತ ವಹಿಸಿಕೊಂಡನು ಆದ ಕಾರಣ ಈ ಕಾಲವನ್ನು ರೆಸ್ಟೋರೇಶನ್ ಕಾಲವೆಂದು ಕರೆಯುವರು. ೧೭ನೇ ಶತಮಾನದ ಮಧ್ಯ ಭಾಗದವರೆಗೂ ಇಂಗ್ಲೆಂಡ್ ಜನತೆಯ ಶಕ್ತಿ ಧಾರ್ಮಿಕ ಮತ್ತು ರಾಜಕೀಯ ಹಿತಾಸಕ್ತಿಗಳಲ್ಲಿ ವ್ಯಯವಾಗುತಿತ್ತು.ಚಾರ್ಲ್ಸ್ ಅದಿಕಾರಕ್ಕೆ ಬಂದ ಮೇಲೆ ಇಂಗ್ಲೆಂಡಿನಲ್ಲಿ ಶಾಂತಿ ನೆಲೆಯೂರಿತು ಹಾಗೂ ಸಾಹಿತ್ಯದಲ್ಲಿಯೂ ಸಹ ತೀವ್ರಗತಿಯ ಬದಲಾವಣೆ ಸಾದ್ಯವಾಯಿತು. ಈ ಕಾಲದಲ್ಲಿ ಸಾಹಿತ್ಯದಲ್ಲಿ ಕಾಲ್ಪನಿಕ ಮತ್ತು ಭಾವನಾತ್ಮಕ ಅಂಶಗಳಿಗೆ ಬದಲಾಗಿ ವಾಸ್ತವಿಕ ಅಂಶಕ್ಕೆ ಹೆಚ್ಚಿನ ಪ್ರಾಮುಖ್ಯ್ತತೆ ಕೊಡಲಾಯಿತು.ಆಡಳಿತ ಪದ್ದತಿಯಲ್ಲಿ ಆದ ಬದಲಾವಣೆಯ ಜೊತೆಗೆ ಸಾಹಿತ್ಯ ರಂಗದಲ್ಲಿಯೂ ಬದಲಾವಣೆಗಳಾದವು.

ಎರಡನೆಯ ಹಂತ ನಿಯೊ ಕ್ಲಾಸಿಕಲ್ ಕಾಲ ;ಈ ಕಾಲವನ್ನು ಆಗಸ್ಟ್ನನ್ನನ ಕಾಲವೆಂದು ಕರೆಯುವರು ಕಾರಣ ಈ ಕಾಲದಲ್ಲಿ ರೋಮ್ ಆಗಸ್ಟ್ ನ್ ಸೀಸರ್ ಆಡಳಿತ ವ್ಯವಸ್ಥೆಯಲ್ಲಿ ಸಾಹಿತ್ಯ ಯಾವ ರೀತಿ ಅತ್ಯಂತ ವೈಭವದಿಂದ ಮತ್ತು ಬುದ್ದಿವಂತಿಕೆಯಿಂದ ಕೂಡಿತ್ತೋ ಅದೇ ರೀತಿಯಾಗಿ ನಿಯೊ ಕ್ಲಾಸಿಕಲ್ ಸಾಹಿತ್ಯವೂ ಕೂಡ ವೈಭವೀಪೂರಿತವಾಗಿತ್ತು. ಈ ಸಾಹಿತ್ಯವನ್ನು ನಿಯೊ ಕ್ಲಾಸಿಕಲ್ ಸಾಹಿತ್ಯವೆಂದು ಕರೆಯಲು ಕಾರಣವೆನೇಂದರೆ ಇದು ಹಳೆ ಸಾಹಿತ್ಯ ಮತ್ತು ಹೊಸ ಸಾಹಿತ್ಯದ ಮಿಶ್ರಣ ಆದ್ದರಿಂದ ನಿಯೋಕ್ಲಾಸಿಕಲ್ ಸಾಹಿತ್ಯವೆಂದು ಕರೆಯುವರು. ಈ ಒಂದು ಸಾಹಿತ್ಯ ಪ್ರಕಾರವು ಇಂಗ್ಲೆಂಡ್ ಜನತೆಯಲ್ಲಿ ಸ್ವಯಂ ಜಾಗೃತಿಯನ್ನು ಮೂಡಿಸಿ ತಮ್ಮ ಸರಿ ತಪ್ಪುಗಳ ಬಗ್ಗೆ ಆಲೋಚಿಸುವಂತೆ ಮಾಡಿತು.ನಾನು ಮಾಡುತಿರುವ ಕೆಲಸ ಸರಿಯೇ? ಎಂಬ ಪ್ರಶ್ನೆ ಮೂಡಿತು. ಇಲ್ಲಿ ಹಳೆ ಸಾಹಿತ್ಯವೆಂದರೆ ಈ ಕಾಲದ ಬರಹಗಾರರು ಗ್ರೀಕ್ ವಿದ್ವಾಂಸರಾದ ವರ್ಜಿಲ್, ಹೋರೆಸ ಇತ್ಯಾದಿ ಬರಹಗಾರರನ್ನು ಅನುಕರಿಸುವುದರ ಮೂಲಕ ಸಾಹಿತ್ಯ ರಚನೆಯನ್ನು ಪ್ರಾರಂಭಿಸಿದರು ಆದ್ದರಿಂದ ಈ ಸಾಹಿತ್ಯವನ್ನು ಹೊಸತು ಹಳತು ಇವೆರಡರ ಮಿಶ್ರಣ ಎನ್ನಬಹುದು.ಪ್ರಾರಂಭದ ದಿನಮಾನಗಳಲ್ಲಿ ಕಲೆ ಕಲೆಗಾಗಿ , ಕಲೆಗಾಗಿ ಜೀವವನ್ನು ಮೂಡುಪಾಗಿಡುವ ನಂಬಿಕೆ ಇತ್ತು ಆದರೆ ಈ ಕಾಲದಲ್ಲಿ ಕಲೆ ಕಲೆಗಾಗಿ ಅಲ್ಲ, ಕಲೆ ಮಾನವೀಯತೆಗಾಗಿ ಎಂಬ ಹೊಸ ನಂಬಿಕೆಯನ್ನು ಹುಟ್ಟು ಹಾಕಿತು.ಈ ಕಾಲದ ಸಾಹಿತ್ಯ ಬೆಳವಣಿಗೆಯನ್ನು ಗಡಿಯಾರದ ಲೋಲಕಕ್ಕೆ ಹೋಲಿಸಬಹುದು ಏಕೆಂದರೇ ಹಳೆ ಸಾಹಿತ್ಯ ಮತ್ತು ಹೊಸ ಸಾಹಿತ್ಯ ಗಳೆರಡರ ನಡುವೆ ತೂಗಾಡುತ್ತಿದೆ.ಇದರ ಪ್ರಮುಖ ಆಸಕ್ತಿಯೆಂದರೇ ಪ್ರಾಚೀನ ಸಾಹಿತ್ಯ ಮತ್ತು ವಾಸ್ತವಿಕ ಅಂಶಗಳಿಗೆ ಪ್ರಾಮುಖ್ಯತೆ ಕೊಡುವ ರೊಮ್ಯಾಂಟಿಕ್ ಸಾಹಿತ್ಯ. ಕಾಲ್ಪನಿಕ ಅಂಶಗಳು ಹಾಗೂ ಭಾವನಾತ್ಮಕ ಅಂಶಗಳು ಸಾಹಿತ್ಯಕ್ಕೆ ಸಮರ್ಪಕವಲ್ಲವೆಂಬುದು ನಿಯೋಕ್ಲಾಸಿಕಲ್ ಸಾಹಿತ್ಯದ ಪ್ರಮುಖ ಚಿಂತನೆ.ಪುನರುಜ್ಜೀವನ ಕಾಲದ ಸಾಹಿತ್ಯದ ಪ್ರಕಾರ ಮಾನವ ಸ್ವಭಾವತಃ ಉತ್ತಮ ಗುಣದವನು ಆದ್ದರಿಂದ ಅವನ ಭೌದ್ದಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಸಮರ್ಥನು. ಈ ಸಾಹಿತ್ಯವೂ ಪುನರುಜ್ಜೀವನ ಕಾಲದ ಆಸ್ತಿಕತೆ ಮತ್ತು ಉತ್ಸುಕತೆಗೆ ವಿರುದ್ಧವಾಗಿ ರೂಪತಾಳಿತು.ಈ ಸಾಹಿತ್ಯವೂ ಪುನರುಜ್ಜೀವನ ಕಾಲದ ಕಾಲ್ಪನಿಕತೆ,ಶೋಧನೆ, ಪ್ರಯೋಗಶೀಲತೆ, ಆಧ್ಯಾತ್ಮಯೋಗ ಈ ಎಲ್ಲ ಅಂಶಗಳನ್ನು ಕಾರಣ, ಕ್ರಮಬದ್ಧತೆ, ಧಾರ್ಮಿಕ, ರಾಜಕೀಯ, ಆರ್ಥಿಕ ಮತ್ತು ತಾತ್ವಿಕ ಇತ್ಯಾದಿ ಅಂಶಗಳಿಂದ ಸ್ಥಾನಪಲ್ಲಟಗೊಳಿಸಿತು. ಈ ಕಾಲದ ಬರಹಗಾರರು ಮಾನವನೇ ಸಾಹಿತ್ಯದ ಬರವಣಿಗೆಗೆ ಸೂಕ್ತ ವಸ್ತು, ಕಲೆ ಒಂದು ಮೌಲ್ಯಾತ್ಮಕ ವಸ್ತು ಆದ್ದರಿಂದ ಭಾವಾನಾತ್ಮಕ ಅಂಶಗಳಿಗಿಂತ ಭೌದ್ಧಿಕ ಅಂಶಗಳು ಸಾಹಿತ್ಯ ಬರವಣಿಗೆಗೆ ಸೂಕ್ತವೆಂಬುದು ಬರಹಗಾರರ ವಾದ. ಮಾನವ ಮೂಲತಃ ಸಮಾಜ ಜೀವಿ ಆದ್ದರಿಂದ ಆತನಿಗೆ ಸಮಾಜದ ಆಗುಹೋಗುಗಳ ಬಗ್ಗೆ ಮಾಹಿತಿ ನೀಡುವ, ಜಾಗೃತಿ ಮೂಡಿಸುವ, ತಪ್ಪುಗಳನ್ನು ಸರಿಪಡಿಸುವ ಮತ್ತು ಸೂಚನೆಗಳನ್ನು ನೀಡುವ ನಿಟ್ಟಿನಲ್ಲಿ ಸಾಹಿತ್ಯ ಸಾಗಬೇಕು. ಮಾನವ ಸಾಮಾಜಿಕ ಸಂಘಟನೆಯ ಅವಿಭಾಜ್ಯ ಅಂಗ ಆದ್ದರಿಂದ ಮಾನವನಿಗೆ ಸಾಹಿತ್ಯದಲ್ಲಿ ಪ್ರಥಮ ಆದ್ಯತೆ ನೀಡಿದರು.ಕಾವ್ಯವೂ ಮಾನವನ ಜೀವನದ ಅನುಕರಣೆಯಾಗಿತ್ತು. ಅದಕ್ಕೆ ಸೂಕ್ತವಾದ ಜಾಣ್ಣುಡಿಯೆಂದರೆ' ಕಾವ್ಯವೂ ಮಾನವನ ಸ್ವಭಾವಕ್ಕಿಡಿದ ಕನ್ನಡಿಯಂತೆ'. ಈ ಕಾಲವನ್ನು ಸ್ವಯಂಜಾಗೃತಿಯನ್ನು ಮೂಡಿಸಿದ ಕಾಲ ಎಂದು ಹೇಳಬಹುದು ಏಕೆಂದರೇ ಮಾನವ ತನ್ನ ಸರಿ ತಪ್ಪುಗಳ ಬಗ್ಗೆ ಗಮನಹರಿಸಿದನು, ನಾನು ನನ್ನ ಕಾರ್ಯಗಳನ್ನು ಸರಿಯಾಗಿ ನಿಭಾಯಿಸುತ್ತೆನೆಯೆ? ಎಂಬಿತ್ಯಾದಿ ಪ್ರಶ್ನೆಗಳು ಉಂಟಾದವು.

ಈ ಕಾಲದ ಸಾಹಿತ್ಯವೂ ಕೆಲವೊಂದು ಪ್ರಮುಖ ಲಕ್ಶಣಗಳನ್ನು ಒಳಗೊಂಡಿದೆ ಅವುಗಳೆಂದರೆ,

  • ಅನುಕರಣೆ
  • ಕಲೆಯ ಪ್ರಕಾರಗಳಲ್ಲಿ ನೀತಿ
  • ಸಾಹಿತ್ಯ ಒಂದು ಕಲೆಯಾಗಿ
  • ಸೌಂರ್ದಯವನ್ನು ಗುರ್ತಿಸುವಿಕೆ
  • ಕಾರಣಕ್ಕೆ ಮಹತ್ವ
  • ಸಾರ್ವತ್ರಿಕತೆ
  • ವಿಡಂಬನೆ

ಅನುಕರಣೆ:ಈ ಸಾಹಿತ್ಯ ಪ್ರಕಾರವು ಹಳೆಯ ಗ್ರೀಕ್ ಹಾಗೂ ರೋಮನ್ ಸಾಹಿತ್ಯ ದ ಅನುಕರಣೆಯಾಗಿದೆ.ನಿಯೋಕ್ಲಾಸಿಕಲ್ ಎಂಬ ಪದವೂ "ನಿಯೊ ಮತ್ತು ಕ್ಲಾಸಿಕಲ್"ಎರಡು ಪದಗಳಿಂದಾಗಿದೆ .ನಿಯೊ ಎಂದರೇ ಹೊಸತು, ಕ್ಲಾಸಿಕಲ್ ಎಂದರೇ ಶಾಸ್ತ್ರೀಯ ಎಂಬರ್ಥವನ್ನು ಕೊಡುತ್ತದೆ. ಆದ್ದರಿಂದ ನಿಯೋಕ್ಲಾಸಿಕಲ್ ಸಾಹಿತ್ಯವೂ ಇವೆರಡರ ಮಿಶ್ರಣ.ಈ ಕಾಲದ ಬರಹಗಾರರು ಗ್ರೀಕ್ ಮತ್ತು ರೋಮನ್ ಸಾಹಿತ್ಯದ ಬರಹಗಾರರನ್ನು ರ್ಸ್ಪೂತಿಯಾಗಿ ಹಾಗೂ ಮಾರ್ಗದರ್ಶಕರಾಗಿ ಆರಿಸಿಕೊಂಡರು.ಶಾಸ್ತ್ರೀಯ ಬರಹಗಾರರಾದ ಹೊಮರ್, ವರ್ಜಿಲ್,ಮತ್ತು ಹೊರೇಸ್ ಇವರನ್ನು ಸಂಘಟನೆ,ಸಮತೋಲನೆ ಹಾಗೂ ಉತ್ತಮ ಬರಹವೆಂದು ಭಾವಿಸಿ ಅವರನ್ನು ಅನುಕರಿಸಿದರು.

ಸೌಂರ್ದಯವನ್ನು ಗುರ್ತಿಸುವಿಕೆ: ಈ ಕಾಲದ ಬರಹಗಾರರು ಈ ಒಂದು ಅಂಶದಲ್ಲಿಯು ಕೂಡ ಶಾಸ್ತ್ರೀಯ ಬರಹಗಾರರನ್ನು ಅನುಕರಿಸಿದರು.ಇವರ ಪ್ರಕಾರ ನಮಗೆ ಚಿರಪರಿಚಿತವಿರುವ ವಸ್ತ್ತು ಹಾಗೂ ವಿಶಯಗಳಲ್ಲಿ ಸೌಂರ್ದಯವನ್ನು ಗುರ್ತಿಸುವುದು. ಇದನ್ನು ಅವರು ಸೌಂರ್ದಯ ಗುರ್ತಿಸುವಿಕೆ ಎಂದು ಕರೆದರು.

ಕಲೆಯ ಪ್ರಕಾರಗಳಲ್ಲಿ ನೀತಿ:ಈ ಕಾಲದ ಬರಹಗಾರರ ಪ್ರಕಾರ ಪ್ರತಿಯೊಂದು ಕಲೆಗೂ ತನ್ನದೇ ಆದ ಕೆಲವೊಂದು ನೀತಿ ನಿಯಮಗಳಿರುತ್ತವೆ ಎಂಬುದಾಗಿ ನಂಬಿದ್ದರು.

ಕಾರಣಕ್ಕೆ ಮಹತ್ವ  : ಹೆಚ್ಛು ಜ್ಞಾನ ಸಂಪಾದನೆ ಕಾರಣಗಳಿಂದ ಮಾತ್ರ ಸಾದ್ಯ ಎಂಬುದು ನಿಯೋಕ್ಲಾಸಿಕಲ್ ಬರಹಗಾರರ ಅಭಿಪ್ರಾಯವಾಗಿತ್ತು.

ಈ ಒಂದು ಸಾಹಿತ್ಯ ಯುಗವನ್ನು ಒಂದು ಗಡಿಯಾರದ ಲೋಲಕಕ್ಕೆ ಹೋಲಿಸಲಾಗಿದೆ. ಏಕೆಂದರೇ ಇದು ಪ್ರಾಚೀನ ಸಾಹಿತ್ಯ ಮತ್ತು ನಂತರದ ರೋಮ್ಯಾಂಟಿಕ್ ಸಾಹಿತ್ಯ ಗಳೆರಡರ ನಡುವೆ ಹಿಂದಕ್ಕೂ ಮುಂದಕ್ಕೂ ಚಲಸುವಂತದ್ದು . ಇದರ ಪ್ರಮುಖ ಆಸಕ್ತಿಯೆಂದರೆ ಪ್ರಾಚೀನಸಾಹಿತ್ಯ ಮತ್ತು ವಾಸ್ತವಿಕ ಅಂಶಗಳಿಗೆ ಪ್ರಾಮುಖ್ಯತೆ ಕೊಡುವ ರೋಮ್ಯಾಂಟಿಕ್ ಸಾಹಿತ್ಯ. ಈ ಸಾಹಿತ್ಯ ಪುನರುಜ್ಜಿವನ ಕಾಲದ ಕಾಲ್ಪನಿಕತೆ,ಶೋದನೆ, ಪ್ರಯೋಗಶೀಲತೆ , ಆದ್ಯಾತ್ಮಯೋಗ ಈ ಎಲ್ಲಾ ಭಾವನಾತ್ಮಕ ವಿಶಯಗಳು ಸಾಹಿತ್ಯ ಬರವಣಿಗೆಗೆ ಸೂಕ್ತವಲ್ಲವೆಂದು ಮಾನವ ಮೂಲತಃ ಒಳ್ಳೆಯ ಗುಣದವನು ಮತ್ತು ಬೆಳವಣಿಗೆಯಲ್ಲಿ ಸಮರ್ಥನು ಎಂದು ಪರಿಗಣಿಸಿತು. ಈ ಕಾಲದ ಬರಗಾರರ ಪ್ರಕಾರ ಮಾನವ ಸಾಹಿತ್ಯದ ಬರವಣಿಗೆಗೆ ಪ್ರಮುಖ ವಿಶಯ ಆದ್ದರಿಂದ ಭಾವಾನಾತ್ಮಕ ವಿಶ್ಯಗಳಿಗಿಂತ ಭೌದ್ದಿಕ ವಿಶ್ಯಗಳು ಬರವಣಿಗೆಗೆ ಸೂಕ್ತ ಎಂಬುದು ಈ ಕಾಲದ ಬರಹಗಾರರವಾದ.


ಡೀಇಸಮ್; ಈ ಕಾಲದ ಪ್ರಮುಖ ಲಕ್ಶಣಗಳಲ್ಲಿ ಡೀಇಸಮ್ ಸಹ ಒಂದು. ಇದು ೧೮ ನೆ ಶತಮಾನದಲ್ಲಾದ ಧಾರ್ಮಿಕ ಬದಲಾವಣೆ. ಇದು ಕ್ರಿಶ್ಚಿಯನ್ ಧರ್ಮದ ಒಂದು ತಾರ್ಕಿಕವಾದ ಗುಂಪು . ಇವರ ಪ್ರಕಾರ ಪ್ರಪಂಚದ ಸೃಸ್ಟಿಕರ್ತ ದೇವರು ಅತನ ಕೆಲವೊಂದು ನೀತಿನಿಯಮಗಳಿವೆ. ಅದ್ಭುತಗಳು ದೇವರ ಸೃಸ್ಟಿಯಲ್ಲ , ಸೃಸ್ಟಿಯ ನಂತರ ಆತ ಯಾವುದೇ ರೀತಿಯ ಗಮನಹರಿಸುವುದಿಲ್ಲ. ಬೈಬಲ್ ಒಂದು ನೈತಿಕ ಅಧಿಕಾರ ಹೊಂದಿರುವ ಗ್ರಂಥ ಎಂಬುದು ಅವರ ನಂಬಿಕೆ.

ವಿಡಂಭಾನಾತ್ಮಕ ಸಾಹಿತ್ಯ ; ಈ ಕಾಲದ ಪ್ರಮುಖ ಅಂಶಗಳಲ್ಲಿ ಒಂದು . ಉದಾಹರಣೆಗೆ ಅಲೆಕ್ಸಾಂಡರ್ ಪೋಪ್ ನ 'ಎಪಿಸ್ಟಲ್ ಟು ಆರ್ಬುತನಾಟ್' ಈ ಒಂದು ಪತ್ರದಲ್ಲಿ ವಿಡಂಬನೆಯ ಅಂಶವನ್ನು ಕಾಣಬಹುದು ಈ ಗ್ರಂಥ ನಿಯೊಕ್ಲಾಸಿಕಲ್ ಸಾಹಿತ್ಯದ ಬುದ್ದಿವಂತಿಕೆ ವ್ಯಂಗ್ಯ ಮತ್ತು ವಿಡಂಬನೆಗೆ ಪ್ರಮುಖ ಉದಾಹರಣೆ. ಅರ್ಬುತನಾಟ್ ಪೋಪ್ ನ ಆತ್ಮೀಯ ಗೆಳೆಯ ವೃತ್ತಿಯಲ್ಲಿ ವೈದ್ಯ, ಮತ್ತು ಬುದ್ದಿವಂತಿಕೆ ಮತ್ತು ಸಾಂಸ್ಕೃತಿಕತೆಗೆ ಬೆಲೆಯನ್ನು ಕೊಡುವ ವ್ಯಕ್ತಿ. ಇವನು ಪೋಪ್ಗೆ ನೀಡಿದ ಸಲಹೆಯೆಂದರೆ ವೈಯುಕ್ತಿಕವಾಗಿ ವಿಡಂಬನೆ ಮಾಡುವುದನ್ನು ನಿಲ್ಲಿಸು ಎಂದು ಹೇಳಿದ ಇದಕ್ಕೆ ಪೋಪ್ ನ ಉತ್ತರವೆಂದರೆ ಮನುಶ್ಯರಿಗೆ ಅವರ ಸರಿ ತಪ್ಪುಗಳ ಬಗ್ಗೆ ತಿಳಿಸದ ಹೊರತು ಸಾಮಾಜಿಕ ಸುಧಾರಣೆ ಸಾದ್ಯವಿಲ್ಲ ಎಂಬುದು ಪೋಪ್ ನ ಉತ್ತರವಾಗಿತ್ತು. ಆದ್ದರಿಂದ ಇದು ವಿಡಂಬನಾತ್ಮಕ ಕಾವ್ಯಕ್ಕೆ ಉತ್ತಮ ಉದಾಹರಣೆ. ಇಲ್ಲಿ ಮನುಷ್ಯರೆಂದರೇ ಅವರು ಕವಿಗಳು,ವಿಮರ್ಶಕರು,ಹಾಗೂ ಆಶ್ರಯಧಾತರು ಇತ್ಯಾದಿ ಈ ರೀತಿಯಾಗಿ ಸಾಮಾಜಿಕ ಸುಧಾರಣೆಯನ್ನು ತರಲು ತನ್ನ ಸಾಹಿತ್ಯವನ್ನು ಮೂಲ ಆಯುಧವನ್ನಾಗಿ ಮಾಡಿಕೊಳ್ಳಬೇಕು.ಮೂರು ವ್ಯಕ್ತಿಗಳನ್ನು ತನ್ನ ಕಾಲ್ಪನಿಕ ವ್ಯಕ್ತಿಗಳನ್ನಾಗಿ ತನ್ನ ಸಾಹಿತ್ಯದಲ್ಲಿ ಬಳಸಿಕೊಳ್ಳುತ್ತಾನೆ, ಅವರೆಂದರೇ,ಹ್ಯಾಟಿಕಸ್, ಬಫೋ, ಮತ್ತು ಸ್ಫೋರಸ್.ವಿಡಂಬನೆಗೆ ಮತ್ತೊಂದು ಉದಾಹರಣೆಯೆಂದರೇ ಜೋನಾಥನ್ ಸ್ವಿಫ್ಟ್ ಬರೆದ 'ಮಾಡೆಸ್ಟ ಪ್ರೊಪೊಸಲ್ಸ್'.ಈ ಒಂದು ಕೃತಿಯಲ್ಲಿಯೂ ಸಹ ಐರ್ಲೆಂಡ್ ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ಸಂಧರ್ಭದಲ್ಲಿ ಜಮೀನ್ದಾರರು ಮತ್ತು ವಸಾಹತುಶಾಹಿಗಳು ಯಾವ ರೀತಿಯಾಗಿ ಬಡವರ ಮಕ್ಕಳಿಗೆ ಚಿತ್ರಹಿಂಸೆ ಕೊಡುತಿದ್ದರು ಎಂಬುದರ ಬಗ್ಗೆ ಚಿತ್ರಿಸುತ್ತಾನೆ.ಆ ರೀತಿಯ ಚಿತ್ರಹಿಂಸೆಗೆ ಬದಲಾಗಿ ನಾನು ಆರು ಹೊಸ ರೀತಿಯ ಪರ್ಯಾಯ ಕ್ರಮಗಳನ್ನು ಕೊಡುತ್ತೇನೆ ನೀವು ಅವುಗಳನ್ನು ಅನುಸರಿಸಿ ಎಂಬ ಮಾತಿನಲ್ಲಿ ವಿಡಂಬನೆಯನ್ನು ಕಾಣಬಹುದು. ೧೮ನೇ ಶತಮಾನದ ಇಂಗ್ಲೀಷ ಸಾಹಿತ್ಯವನ್ನು 'ಏಜ್ ಆಫ್ ರೀಸನ್' ಎಂದು ಕರೆಯುವರು ಕಾರಣ ಕೇವಲ ಈ ಕಾಲದ ಬರಹಗಾರರು ಕಾರಣಕ್ಕೆ ಮಹತ್ವ ಕೊಡುತ್ತಿದ್ದರು ಎಂಬುದಕ್ಕಲ್ಲ, ಇಸೋಬೆಲ್ ಗ್ರಂಡಿಯವರ ಪ್ರಕಾರ ಈ ಕಾಲದ ಬರಹಗಾರರು ಕಾರಣದ ಬಗ್ಗೆ ಗೌರವ ಮತ್ತು ಭಯವಿದ್ದ ಕಾರಣ ಈ ಕಾಲವನ್ನು ಹಾಗೆಂದು ಕರೆಯುವರು. ಜಾನ್ ಡೈಡನ್ ಪ್ರಕಾರ ನಿಜವಾದ ವಿಡಂಬನೆ ಕೊನೆಯಾಗುವುದು ದೋಷಕ್ಕೆ ಸಲಹೆಯೆಂಬ ತಿದ್ದುಪಡಿ ಮಾಡಿ ಎಂಬುದು ಈತನ ಅಭಿಪ್ರಾಯ. ಈ ಕಾಲದ ಪ್ರಮುಖ ಸಾಹಿತ್ಯ ಪ್ರಕಾರಗಳೆಂದರೇ ಪ್ರಭಂದ,ವಿಡಂಬನೆ,ಪತ್ರಗಳು,ಕಾಲ್ಪನಿಕ ಕಥೆಗಳು, ವಿಡಂಬನಾಕಾವ್ಯ ಮತ್ತು ಭಾವನಾತ್ಮಕ,ಸುಖಾಂತವಾದ ಮತ್ತು ರೋಂಮಾಚಕ ನಾಟಕಗಳು ಇತ್ಯಾದಿ.ಈ ಕಾಲದ ಪ್ರಮುಖ ಬರಹಗಾರರೆಂದರೇ, ಅಲೆಕ್ಸಾಂಡರ್ ಪೋಪ್, ಜಾನ್ ಡ್ರೇಡನ್, ಜೋಸೆಫ ಅಡಿಸನ್ ,ಜೋನಾಥನ್ ಸ್ವೀಫ್ಟ್ ಮತ್ತು ಸಾಮ್ಯೂಯಲ್ ಜಾನಸನ್ ಇತ್ಯಾದಿ.

ಜಾನ್ ಡ್ರೇಡನ್; ನಾರ್ಥ್ಯಾಂಮ್ಟನ್ ಶೈರ್ ನಲ್ಲಿ ೧೬೩೧ ರಲ್ಲಿ ಜನಿಸಿದ ಈತನು ಪ್ರಾಥಮಿಕ ವಿಧ್ಯಾಭ್ಯಾಸವನ್ನು ವೆಸ್ಟಮಿನಿಸ್ಟರ್ ಶಾಲೆಯಲ್ಲಿ ಪಡೆದು ಆನಂತರ ಉನ್ನತ ವ್ಯಾಸಂಗವನ್ನು ಕೇಂಬ್ರಿಡ್ಜ ವಿಶ್ವವಿದ್ಯಾಲಯದಲ್ಲಿ ಪಡೆದನು.೧೬೮೫ ರಲ್ಲಿ ೨ನೇ ಜೇಮ್ಸ ಅಧಿಕಾರಕ್ಕೆ ಬಂದನು,ತದನಂತರ ಅವನ ಪ್ರಭಾವಕ್ಕೆ ಒಳಗಾದ ಇವನು ಪ್ರಾಟಿಸ್ಟೆಂಟ್ ಧರ್ಮದಲ್ಲಿನ ನಂಬಿಕೆ ಕಳೆದುಕೊಂಡು ರಾಜಕೀಯ ಶಕ್ತಿಯಿಂದ ಪ್ರಭಾವಿತನಾಗಿ ಕ್ಯಾಥೋಲಿಕ್ ಧರ್ಮವನ್ನು ಸೇರಿದನು. ಇವನ ಪ್ರಮುಖ ಕೃತಿಗಳು; ೧.ಅಬ್ಸಾಲಮ್ ಮತ್ತು ಆಕಿಟೋಪೆಲ್ ೧೬೯೧ ೨.ಮ್ಯಾಕಪ್ಲೆಕ್ನೊ ೩.ದಿ ಹಿಂದ್ ಮತ್ತು ದಿ ಪಂಥರ್ ೧೬೮೭ ೪.ದಿ ಮೆಡಲ್ ಇತ್ಯಾದಿ. ವಿಲಿಯಂ ಕಾಂಗ್ರೇವ್; ಈತನು ಬರ್ಡಸೇಯಲ್ಲಿ ೧೬೭೦ ರಲ್ಲಿ ಜನಿಸಿದನು.ಡಬ್ಲಿನ್ನಿನ ಟ್ರಿನಿಟಿ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮುಗಿಸಿದ ಇವನು ೧೬೯೧ರಲ್ಲಿ ಲಂಡನ್ನಿಗೆ ತೆರಳಿದನು.ಇವನು ಪ್ರಮುಖ ಕೃತಿಗಳೆಂದರೇ,೧.ದಿ ವೋಲ್ಡ್ ಬ್ಯಾಚುಲರ್ ೧೬೯೩ ೨.ದಿ ಡಬ್ಬಲ್ ಡೀಲರ್ ೧೬೯೩ ೩.ಲವ್ ಫಾರ್ ಲವ್ ೧೬೯೫ ೪.ದಿ ವೇ ಆಫ್ ದಿ ವರ್ಲ್ಡ್ ೧೭೦೦. ಜೋನಾಥನ್ ಸ್ವಿಫ್ಟ್ ; ಈತನು ೧೬೬೭ ರಲ್ಲಿ ಡಬ್ಲಿನ್ನಲ್ಲಿ ಜನಿಸಿದನು.ಈತನ ಪ್ರಮುಖ ಕೃತಿಗಳೆಂದರೇ;೧.ದಿ ಬ್ಯಾಟಲ್ ಆಫ್ ದಿ ಬಂಕ್ ೧೭೦೪ ೨.ಎ ಟೇಲ್ ಆಫ್ ಎ ಟಬ್ ೩. ಗಲಿವರಾಸ ಟ್ರಾವೆಲ್ ಇತ್ಯಾದಿ.