ದ್ವಿ-ಮುಖ ಸರ್ಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರಿ.ಶ ೧೭೬೫ ರಲ್ಲಿ ಪಶ್ಚಿಮ ಬಂಗಾಳದ ಗವರ್ನರ್ ಆಗಿ ನೇಮಕಗೊಂಡ ರಾಬರ್ಟ್ ಕ್ಲೈವ್ ಜಾರಿಗೆ ತಂದ ಹೊಸ ಆಡಳಿತ ನೀತಿಯೇ ದ್ವಿ-ಸರ್ಕಾರ ಪದ್ಧತಿ. ಇದರ ಅಡಿಯಲ್ಲಿ ಬಂಗಾಳದ ಆಡಳಿತ ನವಾಬ ಸಿರಾಜುದ್ದೌಲ ಮತ್ತು ಬ್ರಿಟಿಷರ ನಡುವೆ ಹಂಚಿಕೆಯಾಯಿತು. ಬ್ರಿಟಿಷರು ದಿವಾನಿ ಹಕ್ಕನ್ನು ಪಡೆದು ಭೂಕಂದಾಯ ವಸೂಲಿ ಅಧಿಕಾರ ಪಡೆದರು. ಆಡಳಿತ, ನ್ಯಾಯ ಪ್ರತಿಪಾದನೆ ಮುಂತಾದ ಆಡಳಿತ ಸೂತ್ರಗಳು ನವಾಬನ ಅಧೀನದಲ್ಲಿತ್ತು. ಅಲ್ಲಿನ ಪ್ರಜೆಗಳು ಇಬ್ಬರ ಆಡಳಿತಕ್ಕೆ ಸಿಲುಕಿ ನಲುಗುವಂತಾಯಿತು.