ಡಿಜಿಟಲ್ ಕ್ಯಾಮೆರಾ ಮೋಡಿ - ಕ್ಲಿಕ್ ಮಾಡಿ ನೋಡಿ (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಿಜಿಟಲ್ ಕ್ಯಾಮೆರಾ ಮೋಡಿ - ಕ್ಲಿಕ್ ಮಾಡಿ ನೋಡಿ
ಲೇಖಕರುಟಿ ಜಿ ಶ್ರೀನಿಧಿ
ದೇಶಭಾರತ
ಭಾಷೆಕನ್ನಡ
ವಿಷಯಫೋಟೋಗ್ರಾಫಿ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೩, ೧ನೇ ಮುದ್ರಣ
ಪುಟಗಳು೫೨
ಐಎಸ್‍ಬಿಎನ್978-81-8467-379-1

ಡಿಜಿಟಲ್ ಕ್ಯಾಮೆರಾ ಮೋಡಿ - ಕ್ಲಿಕ್ ಮಾಡಿ ನೋಡಿ ಟಿ ಜಿ ಶ್ರೀನಿಧಿಯವರು ಬರೆದ ಪುಸ್ತಕ. ಇದು ಫೋಟೋಗ್ರಾಫಿ ಬಗೆಗಿನ ಪುಸ್ತಕ.

ಈ ಪುಸ್ತಕ ಫೋಟೋ ತೆಗೆಯುವ ಹವ್ಯಾಸ ಉಳ್ಳವರಿಗಾಗಿ ಮಾಹಿತಿ ನೀಡುವ ಕೈಪಿಡಿಯಂತಿದೆ. ಫೋಟೋ ತೆಗೆಯಬೇಕಾದಲ್ಲಿ ಫೋಟೋಗ್ರಾಫಿ ಕಲಿಯಬೇಕಾದ ಕಾಲ ಹಿಂದೆ ಸರಿದು ನವನವೀನ ತಂತ್ರಜ್ಞಾನದ ಅಭಿವೃದ್ಧಿಯಾಗಿ ಕ್ಯಾಮೆರಾ ಇದ್ದಲ್ಲಿ ಯಾರೂ ಫೋಟೋ ತೆಗೆಯಬಹುದಾದ ಸಂದರ್ಭ ಸೃಷ್ಟಿಯಾಗಿದೆ. ಕ್ಯಾಮೆರಾಗಳ ವಿಧ, ಲೆನ್ಸ್ ಉಪಯೋಗ, ಪಾಯಿಂಟ್ ಅಂಡ್ ಶೂಟ್ ಝೂಮ್ ಬಳಕೆ ಮುಂತಾಗಿ ವಿವರವಾಗಿ ತಿಳಿಸುವ ಕೃತಿಯಿದು. ಫೋಟೋ ತೆಗೆಯುವಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸುತ್ತ ಡಿಜಿಟಲ್ ಕ್ಯಾಮೆರಾದ ವೈಶಿಷ್ಟ್ಯವನ್ನು ಎತ್ತಿಹಿಡಿಯಲಾಗಿದೆ. ಇನ್ನಿತರ ಕ್ಯಾಮೆರಾ ಬಳಕೆ ಬಗ್ಗೆ ಮಾಹಿತಿಯಿದ್ದು ಇಂದಿನ ದಿನಗಳಲ್ಲಿ ಹೆಚ್ಚು ಉಪಯೋಗಕ್ಕೆ ಬರುವ ಪುಸ್ತಕವಿದು.

ಟಿ ಜಿ ಶ್ರೀನಿಧಿ ಅವರ ಪುಸ್ತಕಗಳು[ಬದಲಾಯಿಸಿ]

  • ಡಿಜಿಟಲ್ ಕ್ಯಾಮೆರಾ ಮೋಡಿ - ಕ್ಲಿಕ್ ಮಾಡಿ ನೋಡಿ (ಪುಸ್ತಕ)

ಬಾಹ್ಯ ಸಂಪರ್ಕ[ಬದಲಾಯಿಸಿ]