ಝೊಹ್ರಾ ಸೆಹೆಗಲ್
(೧೯೧೨ ರ ಏಪ್ರಿಲ್, ೨೭-೨೦೧೪ ರ ಜುಲೈ, ೧೦)
ಝೊಹ್ರಾ ಸೆಹೆಗಲ್ | |
---|---|
ಜನನ | |
ಮರಣ | 10 July 2014 | (aged 102)
ಇತರೆ ಹೆಸರು | ಝೊಹ್ರಾ ಮಮ್ತಾಝ್-ಉಲ್ಲಾ ಖಾನ್ ಸಾಹಿಬ್ ಝಾದಿ ಝೊಹ್ರಾ ಬೇಗಮ್ ಮಮ್ತಾಝ್-ಉಲ್ಲಾ ಖಾನ್ (ನಾಮಕರಣದ ಹೆಸರು) |
ವೃತ್ತಿ(ಗಳು) | ಅಭಿನೇತ್ರಿ, ನೃತ್ಯಾಂಗನೆ, ನೃತ್ಯ ನಿರ್ದೇಶಕಿ |
ಸಕ್ರಿಯ ವರ್ಷಗಳು | 1935–2007 |
ಸಂಗಾತಿ | ಕಮ್ಲೇಶ್ವರ್ ನಾಥ್ ಸೆಹೆಗಲ್ |
ಮಕ್ಕಳು | ಕಿರಣ್ ಸೆಹೆಗಲ್ ಪವನ್ ಸೆಹೆಗಲ್ |
'ಝೊಹ್ರಾ ಸೆಹೆಗಲ್,'[೧] ಎಂದು ಚಲನಚಿತ್ರ ಜಗತ್ತಿನಲ್ಲಿ ಪ್ರಸಿದ್ದರಾಗಿರುವ ಆಭಿನೇತ್ರಿಯ ಬಾಲ್ಯದ ಹೆಸರು, ಸಾಹಿಬ್ ಝಾದಿಝೊಹ್ರಾ ಬೇಗಂ ಮುಮ್ತಾಝ್ ಉಲ್ಲಾ ಖಾನ್ ಎಂದು. ಸುಮಾರು ೭ ದಶಕಗಳ ಕಾಲ ಭಾರತೀಯ ಸಿನಿಮಾರಂಗ, ಹಾಗೂ ಥಿಯೇಟರ್ ಗಳಲ್ಲಿ ಅಭಿನಯಿಸಿ, 'ದ ಗ್ರಾಂಡ್ ಓಲ್ಡ್ ಲೇಡಿ ಆಫ್ ದ ಇಂಡಿಯನ್ ಸಿನೆಮಾ' ಎಂಬ ಹೆಗ್ಗಳಿಕೆಗೆ ಪಾತ್ರರಾದ ದೆಹಲಿ ವಾಸಿ, 'ಝೊಹ್ರಾ ಸೆಹೆಗಲ್' ತನ್ನ ಶತಮಾನೋತ್ಸವವನ್ನು ಆಚರಿಸುವ ಸಮಯದಲ್ಲಿ 'ಭಾರತೀಯ ಹಿಂದಿ ಚಿತ್ರರಂಗ'ಕ್ಕೂ ನೂರುವರ್ಷ ತುಂಬಿದೆ. ಝೊಹ್ರಾ, ಥಿಯೇಟರ್ ನಲ್ಲಿ ಕೆಲಸಮಾಡಿದ್ದರು. ಹಲವು ಹಿಂದಿ ಚಲನ ಚಿತ್ರಗಳಲ್ಲಿ ನಟಿಸಿ ಕೆಲವಕ್ಕೆ ಕೊರಿಯಾಗ್ರಫಿಯನ್ನೂ ಒದಗಿಸಿದ್ದಾರೆ. ಇತ್ತೀಚೆಗೆ ಅಂದರೆ, ಸನ್, ೨೦೦೭ ರಲ್ಲೂ, ಸಂಜಯ್ ಲೀಲಾ ಬನ್ಸಾಲಿಯವರ್ ’ಸಾವರಿಯಾ’ಚಿತ್ರದಲ್ಲಿ ನಟಿಸಿದರು. ಝೊಹ್ರಾರವರ, ಇತರ ಚಿತ್ರಗಳು :
- 'ಹಮ್ ದಿಲ್ ದೇ ಚುಕೆ ಸನಂ'
- 'ದಿಲ್ ಸೇ'
- 'ಚೀನಿ ಕಮ್'
ಜನನ
[ಬದಲಾಯಿಸಿ]'ಝೊಹ್ರಾ ಸೆಹೆಗಲ್' ಉತ್ತರ ಪ್ರದೇಶದ ಸೆಹಾರನ್ ಪುರದಲ್ಲಿ ೧೯೧೨ ರ ಏಪ್ರಿಲ್, ೨೭ ರಂದು ಜನಿಸಿದರು. ಬೆಳೆದದ್ದು ಡೆಹ್ರಾಡುನ್ ಸಮೀಪದ ಚಕ್ರಾಕದಲ್ಲಿ. ೭ ಮಂದಿ ಮಕ್ಕಳಲ್ಲಿ ಮೂರನೆಯವರು. ರೋಹಿಲ್ಲಾ ಪಥಾನ್ ವಂಶಕ್ಕೆ ಸೇರಿದ ಜಮೀನ್ದಾರ್ ಮನೆಯಲ್ಲಿ ಬೆಳೆದರು. ಎಳೆ ವಯಸ್ಸಿನಲ್ಲೇ ತಾಯಿ ಮರಣ ಹೊಂದಿದರು. ಒಂದು ವರ್ಷದ ಪ್ರಾಯದಲ್ಲಿ ಎಡಗಣ್ಣಿನ ದೃಷ್ಟಿ ಗ್ಲುಕೋಮಾದಿಂದ ಹಾಳಾಯಿತು. ವೈದ್ಯರು ಬರ್ಮಿಂಗ್ ಹ್ಯಾಂನ ಆಸ್ಪತ್ರೆಯೊಂದರಲ್ಲಿ ತೋರಿಸಲು ಸಲಹೆ ನೀಡಿದರು. ಅದಕ್ಕೆ ತಗುಲಿದ ವೆಚ್ಚ ೩ ಲಕ್ಷ ಬ್ರಿಟಿಷ್ ಪೌಂಡ್ ಗಳು.
ವೃತ್ತಿಜೀವನ
[ಬದಲಾಯಿಸಿ]ಸನ್ ೧೯೩೫ ರಲ್ಲಿ ಸುಪ್ರಸಿದ್ಧ ನೃತ್ಯ ಸಂಯೋಜಕ, ಹಾಗೂ ನೃತ್ಯಪಟು, ಉದಯ ಶಂಕರ್ ಜೊತೆ ನರ್ತಿಸಿ ತನ್ನ ವೃತ್ತಿಜೀವನಕ್ಕೆ ಪಾದಾರ್ಪಣೆಮಾಡಿದರು. ಆಕೆ ಜಪಾನ್, ಇಜಿಪ್ಟ್, ಯೂರೋಪ್, ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ತಮ್ಮ ಹಲವಾರು ಪ್ರದರ್ಶಗಳನ್ನು ನೀಡಿದ್ದರು. ಕಮಲೇಶ್ವರ್ ಸಹೆಗಲ್ ಎಂಬ ಬಹುಮುಖಿ ವ್ಯಕ್ತಿತ್ವದ ಕಲಾವಿದನನ್ನು ಸನ್ ೧೯೪೨ ರ ಆಗಸ್ಟ್ ತಿಂಗಳಿನಲ್ಲಿ ವಿವಾಹವಾದರು. ಕಮಲೇಶ್ವರ್ ಒಬ್ಬ ವಿಜ್ಞಾನಿ, ಪೈಂಟರ್, ಹಾಗೂ ಉತ್ತಮ ಡಾನ್ಸರ್ ಸಹಿತ.ಈ ದಂಪತಿಗಳಿಗೆ ಇಬ್ಬರು ಮಕ್ಕಳು; ಕಿರಣ್ ಹಾಗೂ ಪವನ್.
ಥಿಯೇಟರ್
[ಬದಲಾಯಿಸಿ](ಐಪಿಟಿಎ) ನಲ್ಲಿ ಪೃಠ್ವಿರಾಜ್ ಕಪೂರ್ ರ ಪೃಥ್ವಿ ಥಿಯೇಟರ್ ನಲ್ಲಿ ೧೪ ವರ್ಷಗಳ ಕಾಲ ನಟಿಸಿದ್ದರು. ಆ ಸಮಯದಲ್ಲೇ ಆಕೆಗೆ ಹಿಂದಿ ಚಲನಚಿತ್ರರಂಗದಲ್ಲಿ ಕೆಲವು ಬೇಡಿಕೆಗಳು ಬಂದವು.
- ೧೯೫೧ ಗುರುದತ್ ರ ’ಬಾಝಿ’
- ೧೯೫೧ 'ರಾಜ್ ಕಪೂರ್' ರ, ’ಆವಾರ,'.ಇಲ್ಲಿ ಕನಸಿನ ದೃಶ್ಯದ ಹಾಡು ಕೂಡಾ ಸೇರಿದೆ.
ಹಲವಾರು ಚಿತ್ರಗಳು, ನಾಟಕಗಳು, ಮತ್ತು ಕೆಲವು 'ಟೆಲಿವಿಶನ್ ಧಾರಾವಾಹಿ'ಗಳಲ್ಲಿ ಪಾತ್ರವಹಿಸಿದ್ದರು.
ನಾಟಕ ಕಲೆಯ ಪ್ರಶಿಕ್ಷಣಕ್ಕಾಗಿ ವಿದೇಶಕ್ಕೆ
[ಬದಲಾಯಿಸಿ]೧೯೬೨ ರಲ್ಲಿ ನಾಟಕಕ್ಕೆ ಒದಗಿಸುವ 'ಸ್ಕಾಲರ್ಶಿಪ್' ಮೂಲಕ ಲಂಡನ್ ನಗರಕ್ಕೆ ಪ್ರಶಿಕ್ಷಣಕ್ಕಾಗಿ ತೆರಳಿದ್ದರು. ಅಲ್ಲಿನ ಹಲವಾರು ಟೆಲಿವಿಶನ್ ಪ್ರೊಡಕ್ಷನ್ ಗಳಲ್ಲಿ ಕಾಣಿಸಿಕೊಂಡರು. ಇವುಗಳಲ್ಲಿ ಪ್ರಮುಖವಾದದ್ದು, ’ಮೈ ಬ್ಯೂಟಿಫುಲ್ ಲಾಂ ಡ್ರೆಟ್ಟೆ’, ಇದಲ್ಲದೆ, 'ಜ್ಯುವೆಲ್ ಆಫ್ ದ ಕ್ರೌನ್', 'ತಂದೂರಿ ನೈಟ್ಸ್' ನಲ್ಲಿ ಅಭಿನಯಿಸಿದ್ದರು. ಸನ್ ೧೯೯೦ ರ ಮಧ್ಯಭಾಗದಲ್ಲಿ ಭಾರತಕ್ಕೆ ಹಿಂದಿರುಗಿದರು.
- ೧೯೯೧ 'ಮಸಾಲ'
- ೧೯೯೯ 'ದಿಲ್ಲಗಿ'
- ೨೦೦೧ 'ಕಭಿ ಖುಷಿ ಕಭಿ ಗಮ್'
- ೨೦೦೨ 'ಬೆಂಡ್ ಇಟ್ ಲೈಕ್ ಬೆಕ್ ಹ್ಯಾಂ'
- ೨೦೦೪ 'ವೀರ್ ಝಾರಾ'
- 'ಸಾವರಿಯಾಂ'
- 'ಚೀನಿಕಮ್'
ಪ್ರಶಸ್ತಿ, ಪುರಸ್ಕಾರಗಳು
[ಬದಲಾಯಿಸಿ]- ೧೯೬೩ ಸಂ.ನಾ.ಅ
- ೧೯೯೮ ಪದ್ಮಶ್ರಿ
- ೨೦೦೧ ಕಾಳಿದಾಸ್ ಸಮ್ಮಾನ್
- ೨೦೦೨ ಪದ್ಮ ಭೂಷಣ
- ೨೦೦೪ ಸಂ.ನಾ.ಅ.
- ೨೦೧೦ ಪದ್ಮ ವಿಭೂಷಣ
- ೨೦೦೮ ’ಲಾಡ್ಲಿ ಆಫ್ ದ ಸೆಂಚ್ಯುರಿ’(ವಿಶ್ವಸಂಸ್ಥೆಯ ಜನಸಂಬಾ ಫಂಡ್ ನ ’ಲಾಡ್ಲಿ ಮೀಡಿಯ ಪ್ರಶಸ್ತಿಗಳಲ್ಲಿ ದೊರೆತದ್ದು)
ಝೊಹ್ರಾರವ ತಮ್ಮ ಬಗ್ಗೆ ನುಡಿದ ಉಕ್ತಿಗಳು : " ನೀವೆಲ್ಲಾ ನನ್ನನ್ನು ಈಗ, ಅಂದರೆ, ನನ್ನ ವಯಸ್ಸಾದ ಕೆಟ್ಟ ಮುಖವನ್ನು ನೋಡಿದ್ದೀರಿ ; ಆದರೆ, ನಾನು ಯುವತಿಯಾಗಿದ್ದಾಗಿನ ನನ್ನ ಬದ್ ಸೂರತ್ ಮುಖ ನೋಡಿಲ್ಲ "
ಈಗ ನವ ದೆಹಲಿಯಲ್ಲಿ ವಾಸ
[ಬದಲಾಯಿಸಿ]ಈಗ 'ಝೊಹ್ರಾ ಸೆಹೆಗಲ್' [೨] ತಮ್ಮ ಮಗಳು, 'ಕಿರಣ್ ಸೆಹೆಗಲ್' ಜೊತೆ 'ಹೊಸ ದೆಹಲಿ'ಯಲ್ಲಿದ್ದಾರೆ. ಕಿರಣ್ ಸೆಹೆಗಲ್, ಒಬ್ಬ ಒಡಿಸ್ಸಿ ನೃತ್ಯಾಂಗನೆ, ಮಗ, ಪವನ್, ವಿಶ್ವಸಂಸ್ಥೆಯಲ್ಲಿ ಕೆಲಸದಲ್ಲಿದ್ದಾರೆ, ಸೊಸೆ, ಸೀಮಾರಾಯ್. [೩] ಈಕೆ, 'ಮುನ್ಷಿ ಪ್ರೇಮ್ ಚಂದ್' ರವರ ಮೊಮ್ಮಗಳು. ಈ ದಂಪತಿಗಳಿಗೆ, ೩ ಜನ ಮಕ್ಕಳು, ’ರೋಹನ್’, ’ತಾಮ್ರ’, ’ಅನುಷ್ಕಾ’,[೪]
ನಿಧನ
[ಬದಲಾಯಿಸಿ]೧೦೨ ವರ್ಷ ಪ್ರಾಯದ ಝೊಹ್ರಾ ಸೆಹೆಗಲ್,[೫] ೨೦೧೪ ರ, ಜುಲೈ, ೧೦ ರಂದು ಎದೆಯ ನೋವಿನಿಂದ ಪೀಡಿತರಾಗಿದ್ದು ನವದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ವೃದ್ಧಾಪ್ಯದ ವೇದನೆಯನ್ನು ಸಹಿಸಲಾರದೆ, ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ Biography of Zohra sehegal
- ↑ ಚಿರನಿದ್ರೆಗೆ ಬಾಲಿವುಡ್ ಹಿರಿಯಜ್ಜಿ ಜೊಹ್ರಾ ಸೆಹಗಲ್
- ↑ World of acting mourns Zohra Sehegal's death
- ↑ Theatre actress Zohra Sehgal dies at 102 Mirror, 7-11-2014,page 25[ಶಾಶ್ವತವಾಗಿ ಮಡಿದ ಕೊಂಡಿ]
- ↑ Zohra Sehgal No More ; A Life Full Of Life
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Articles with hCards
- Commons link is locally defined
- Articles with FAST identifiers
- Pages with authority control identifiers needing attention
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BNF identifiers
- Articles with BNFdata identifiers
- Articles with GND identifiers
- Articles with LCCN identifiers
- Articles with NLA identifiers
- Articles with PLWABN identifiers
- Articles with CINII identifiers
- Articles with DTBIO identifiers
- Articles with Trove identifiers
- ಚಲನಚಿತ್ರ ನಟಿಯರು