ವಿಷಯಕ್ಕೆ ಹೋಗು

ಚೆನ್ನು ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೆನ್ನು ಕುಣಿತ

ಮೇ ತಿಂಗಳ ಹುಣ್ಣಿಮೆಯ ನಂತರ ಐದು, ಏಳು ಅಥವಾ ಒಂಬತ್ತು ದಿನಗಳ ಕಾಲ ಮತ್ತು ಸುಗ್ಗಿಯ ಹುಣ್ಣಿಮೆಯವರೆಗೆ ತುಳುನಾಡಿನ ಮೇರ ಜನಾಂಗದವರು ಮಾಡುವ ನೃತ್ಯವೇ ಚೆನ್ನುನಲಿಕೆ ಅಥಾವ ಚೆನ್ನು ಕುಣಿತ.

ಚೆನ್ನು ವೇಷ

[ಬದಲಾಯಿಸಿ]

ಚೆನ್ನು ಒಬ್ಬ ಮಹಿಳೆ, ಈ ನೃತ್ಯದಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ಸೇರಿ ನೃತ್ಯವನ್ನು ಮಾಡುತ್ತಾರೆ. ಚೆನ್ನು ವೇಷವನ್ನು ಗಂಡಸರೇ ಮಾಡುತ್ತಾರೆ. ಹೆಣ್ಣಿನ ವೇಷ ಹಾಕಿದವರು ಸೀರೆ ಸುತ್ತಿ, ರವಕೆ ಧರಿಸಿ, ತಲೆ ಬಾಚಿ ಸೂಡಿ ಸುತ್ತಿ,ಕೈಗೆ ಬಳೆ, ಕಾಲಿಗೆ ಗೆಜ್ಜೆ, ತಲೆಗೆಕೆದಗೆ ಹೂವು ಧರಿಸುತ್ತಾರೆ.

ಕುಣಿತದ ಕ್ರಮ

[ಬದಲಾಯಿಸಿ]

ಚೆನ್ನು ತನ್ನ ಕೈಯಲ್ಲಿ ಮಗು ಗೊಂಬೆಯೊಂದಿಗೆ ನೃತ್ಯಗಾರರ ನಡುವೆ ನೃತ್ಯ ಮಾಡುತ್ತಾಳೆ. ಚೆನ್ನು ವೇಷದ ಸುತ್ತಲೂ ಗಂಡಸರೂ ಹೆಂಗಸರೂ ತಮ್ಮ ನಿತ್ಯ ಕೆಲಸ ಮಾಡಲು ಧರಿಸುವ ವಸ್ತ್ರ ಗಳೊಂದಿಗೆ ದುಡಿಯನ್ನು ಬಡಿಯುತ್ತಾ ಚೆನ್ನುವಿನ ಪದ್ಯ ಹೇಳುತ್ತಾ ನಲಿಯುತ್ತಾರೆ.

ಕುಣಿತದ ಹಿನ್ನೆಲೆ

[ಬದಲಾಯಿಸಿ]

ಇದು ಮಹಿಳೆಗೆ ಸಂಬಂಧಿಸಿದ ಜಾನಪದ ನೃತ್ಯವಾಗಿದೆ. ಧರಣೆ ಪಾಡ್ದನ ಮತ್ತು ಚೆನ್ನು ನಲಿಕೆ ಪದ್ಯಗಳು ಒಂದೇ ಲೆಕ್ಕ ಇರುವುದರಿಂದ ಧರಣೆ ಮತ್ತು ಚೆನ್ನು ಒಂದೇ ಎಂದು ನಂಬಲಾಗಿದೆ. ನೃತ್ಯದ ಸಾಹಿತ್ಯದ ಪ್ರಕಾರ ಧರಣೆಯ ತಂದೆಯನ್ನು ಕೋಟೆಯ ಬಬ್ಬು ಅಂತಾ, ಚೆನ್ನು ಪದ್ಯದಿಂದ ತಿಳಿದು ಬರುತ್ತದೆ. ಧರಣೆಗೆ ಯಾರೂ ಇಲ್ಲದೆ ಆಕೆ ಅನಾಥೆ ಆಗುತ್ತಾಳೆ.ಅವಳಿಗೆ ಗ್ರಾಮದ ಹಿರಿಯರು, ಬಂಟ ಜಾತಿಯವರು, ಮೋಂಟ್ಕಾ ಕಡಪನ ದೆಕ್ಕುರು ಆಶ್ರಯ ನೀಡಿ ಸಾಕುತ್ತಾ ಇದ್ದರು. ಅಲ್ಲಿ, ಹುಡುಗಿ ಹೋಗಿ ಹೆಂಗಸಾದಳು. ಒಂದು ದಿನ ಋತುಮತಿಯಾದ ಚೆನ್ನು ನದಿಯಲ್ಲಿ ಸ್ನಾನ ಮಾಡಲು ಹೋಗಿ , ಹಿಂದೆ ಬರುವಾಗ ಆಲೌಕಿಕ ಗರ್ಭ ಧರಿಸುತ್ತಾಳೆ. ಮದುವೆ ಆಗದೆ ಬಸಿರಾದ ಧರಣೆಯನ್ನು ನೋಡಿ ಊರಿನವರು ಆಶ್ರಯ ಕೊಟ್ಟ ಮೋಂಟ ಕಡ್ಪನ ಮೇಲೆ ಸಂಶಯ ಮಾಡುತ್ತಾರೆ. ಧರಣೆನ ಸತ್ಯಪರೀಕ್ಷೆ ನಡೆಯುತ್ತದೆ.ತಾನು ಸತ್ಯವಂತೆ ನನ್ನನ್ನು ಸಾಕಿದ ದೆಕ್ಕುಲು ನಿರಪರಾಧಿ ಎಂದು ಸಾಬೀತು ಮಾಡಲು ಕೊತ ಕೊತ ಕೊದಿಯುತಿರುವ ಎಣ್ಣೆಗೆ ಧರಣೆ ಕೈಬೆರೆಳು ಹಾಕುವಳು. ಬೆರಳು ಸುಡದೆ ಬೆರಳಿನ ಮೇಲೆ ಇದ್ದ ಎಣ್ಣೆಯನ್ನು ಸಿಟ್ಟಿನಿಂದ ಆಚೆ ಸಿಂಪಡಿಸಿದಾಗ, ಕೋಟೆ ಜರಿದು ಬೀಳುತ್ತದೆ. ಧರಣೆ ಸತ್ಯವಂತೆ ಅಲೌಕಿಕ ತಾಯಿ ಅಂತ ಸಾಬೀತಾಗುತ್ತದೆ. ಧರಣೆ ಮಾಯ ಆಗುತ್ತಾಳೆ. ಅವಳ ನೆನಪಿಗೆ ಚೆನ್ನು ನಲಿಕೆ ಪ್ರಾರಂಭವಾಗಿರಬಹುದು ಎಂದು ನಂಬಿಕೆ. ಚೆನ್ನು ನಲಿಕೆಯಲ್ಲಿ ಹೆಣ್ಣು ವೇಷ ಹಾಕಿ ನಲಿಯುವಾಗ ಕೈಯಲ್ಲಿ ಮಗುವಿನ ರೂಪ ಇರುತ್ತದೆ. ಅದನ್ನು ಆಡಿಸಿಕೊಂಡು ನಲಿಯುತ್ತಾರೆ.

ಕೋಪಾಲ' ಜನಾಂಗ ಮತ್ತು ಕುಣಿತ

[ಬದಲಾಯಿಸಿ]

ಕಾಸರಗೋಡು ಪ್ರಾಂತ್ಯ ಮತ್ತು ವಿಟ್ಲ ಭಾಗದಲ್ಲಿ 'ಚೆನ್ನು ಕುಣಿತ'-ವನ್ನು 'ಕೋಪಾಲ' ಜನಾಂಗದವರು ನಡೆಸಿಕೊಡುವರು. 'ಚೆನ್ನು' ಎಂಬಾಕೆಯ ಕುರಿತು ಹಾಡುವರು. ಈ ಜನಾಂಗದ ಸಾಂಸ್ಕೃತಿಕ ಮೂಲ ಸ್ತ್ರೀ 'ಚೆನ್ನು' ಎಂಬುದಾಗಿ ಭಾವಿಸಿರುವರು. ಮಾಯಿ ಹುಣ್ಣಿಮೆ ದಿವಸ (ಫೆಬ್ರವರಿ ತಿಂಗಳು) ನಲಿಕೆ ಅಥವಾ ಕೋಪಾಳ ಜನಾಂಗದವರು ಆರಾಧಿಸುವರು. ಕೋಪಾಳ ಜನವರ್ಗದ ಹೆಂಗಸರು (ಎಂಟು-ಹತ್ತು ಜನ) ಕಾಲಿಗೆ ಗೆಜ್ಜೆ ಕಟ್ಟಿ ಎಕ್ಕ ಮಲೆ ಹೂಗಳಿಂದ ಸಿಂಗರಿಸಿಕೊಂಡು ತೆಂಬರೆ ವಾದ್ಯದೊಂದಿಗೆ ಹಾಡುತ್ತಾ ಕುಣಿಯುವರು, ಆ ಬಳಿಕ ಭತ್ತ, ಅಕ್ಕಿ-ಪಡಿಯನ್ನು ಹಾಗೂ ತೆಂಗಿನ ಕಾಯಿ ದಾನವಾಗಿ ಸ್ವೀಕರಿಸುವರು. ಈ ನೃತ್ಯ ಪ್ರಕಾರ ಇಂದು ವಿರಳವಾಗಿದೆ. ಬೆಳ್ತಂಗಡಿ ಭಾಗದಲ್ಲಿ ಮೇರ ಜನವರ್ಗದವರು 'ಚೆನ್ನು' ಕುಣಿತವನ್ನು ದುಡಿ ವಾದ್ಯದೊಂದಿಗೆ ನುಡಿಸುವರು. ವೇಷದ ನೃತ್ಯಗಾರ್ತಿಯು ಕೈಯಲ್ಲಿ ಅಡಕೆ ಹಾಳೆ ಹಿಡಿದುಕೊಂಡಿರುತ್ತಾಳೆ, ಈ ಹಾಳೆಯಲ್ಲಿ ಬಟ್ಟೆಯ ಸಿಂಬೆಯನ್ನು ಮಗುವಿನ ಆಕಾರದಲ್ಲಿ ಇಟ್ಟುಕೊಂಡು ಕುಣಿಯುವಳು, ಚೆನ್ನು -ವಿನ ಜೊತೆಯಲ್ಲಿ ವೇಷ ಭೂಷಣವಿಲ್ಲದೆ ಕುಣಿಯುವ ಹೆಂಗಸರು, ಗಂಡಸರೂ ಇರುತ್ತಾರೆ. ಇವರ ನಡುವೆ ಚೆನ್ನು ವೇಷದಾರಿ ಕುಣಿಯುತ್ತಾನೆ. ಸುತ್ತಲೂ ಐದಾರು ಮಂದಿ 'ದುಡಿ' (ಚರ್ಮ ವಾದ್ಯ) ಬಾರಿಸುತ್ತಾ ಹಾಡು ಹೇಳುತ್ತಾ ಕುಣಿಯುವರು. ಕೆಲವೆಡೆ ಚೆನ್ನು ವೇಷದ ಜೊತೆಯಲ್ಲಿ ಕೊರಗ ವೇಷವೂ ಇರುತ್ತದೆ.

ಚೆನ್ನು ನಲಿಕೆ ಹಾಡು

[ಬದಲಾಯಿಸಿ]

ಚೆನ್ನು ಚೆನ್ನುಗಲೆ ಚೆನ್ನು ಚೆನ್ನು ಚೆನ್ನುಗಲೆ
ಚೆನ್ನುನ ದಟ್ಟಿಗೆಡ್ ಚೆನ್ನು ಬಿನ್ನೆರ್ ಬೈದೆರ್
ಬಿನ್ನೇರೇರ್ಗಲೆ ಚೆನ್ನು ಬಿನ್ನೇರೇರ್ಗಲೆ
ಅಪ್ಪೆಲಮ್ಮೆಲ ದೆತ್ತಿ ಅಪ್ಪೆಲಮ್ಮೇಲ..
ಓ ಲಮ್ಮನ ಪುದರ್ ಪನ್ ಚೆನ್ನು ಅಪೆನ ಪುದರ್ ಪನ್..
ಓ ಲಮ್ಮನ ಪುದರ್ಯೇ ದೆತ್ತಿ ಕೋಟೆದ ಬಬ್ಬುಂದ್..
ಓ ಅಪ್ಪೆ ಪುದರ್ಯೇ ದೆತ್ತಿ ಪೊವಂಬಲಕ್ಕಂಬಲೆ..
ಓ ಲೇಲೇಲೆ ಚೆನ್ನು ಲೇಲೇಲೆ..
ಚೆನ್ನುನ ದಟ್ಟಿಗೆಡ್ ಚೆನ್ನು ಬಿನ್ನೆರ್ ಬೈದೆರ್..
ಓ ಬಂಜಿಗ್ ದಾಲದ್ದಿಂದ್ ಚೆನ್ನು ಬೈತ್ತಡಿಯೊಕ್ಕುಬಲ್..
ಒರ ತೂನಗಸ ದೆತ್ತಿ ಕೈತ್ತಡಿ ಒಕ್ಕುಬಲ್..
ಓ ಗಂಜಿಗ್‌ ದಾಲದ್ದಿಂದ್‌ ಚೆನ್ನು ಬಂಜಿಗ್ ನೋತೋಂಡಲ್‌..
ಓ ಗಂಜಿಗ್‌ ದಾಲದ್ದಿಂದ್‌ ಚೆನ್ನು ಬಂಜಿಗ್ ನೋತೋಂಡಲ್‌..
ಓ ಲೇಲೇಲೆ ಚೆನ್ನು ಲೇಲೇಲೆ..
ಓ ಬಾಲೆ ಬುಲಿಪುಂಡುಯೇ ದೆತ್ತಿ ಪಕ್ಕಿದಲೆಕ್ಕೊನೇ..
ಓ ಉಲಯಿ ಪೋಲಯ ಚೆನ್ನು ಬಾಲೆನೊಚ್ಚಿಲೇ..
ಓ ಲೇಲೆಲೇ.. ಪಿದಯಿ ಬಲೆಯೇ ದೆತ್ತಿ ಚೆನ್ನು ನಲಿಕೆ ತೊಲೆ..
ಓ ಬಾಲೆದ ಪುದರ್ಯೇ ದೆತ್ತಿ ಕೈಲ ಕಾನೆಂದೋ..
ಓ ಪುಚ್ಚೆದ ಕುತ್ತಾಂಡ ದೆತ್ತಿ ಪೇರ‍್ಡೆ ಪೋವಡ್..
ಓ ನಾಯಿದ ಕುತ್ತಾಂಡ ದೆತ್ತಿ ಕಡಲ್ ಪಾಯಡ್..
ಓ ಮಾಯಿದ ತಿಂಗೊಳುಡು ಚೆನ್ನು ಮಾಯೊನು ಪೋಪಳ್..
ಓ ಸುಗ್ಗಿದ ತಿಂಗೊಳುಡು ಚೆನ್ನು ನಟ್ಟ್‌ಬರ್ಪಳ್‌ಯಾ..
ದೂರ ಒಚ್ಚೊನು ಚೆನ್ನು ಗಿಟ್ಟ ಮಾನವೊನು..
ಬಾಲೆದಲೇರುಂಡು ಚೆನ್ನು ಬಾಲೆದಲೇರುಂಡು..
ಓ ಕಂಟ ಪುಚ್ಚೆಲುಂಡು ದೆತ್ತಿ ಕರಿಯ ನಾಯಿಲುಂಡು..
ಓ ನಾಯಿಲ ತುಚ್ಚಿಡಂದೋಸ ಚೆನ್ನು ಪುಚ್ಚೆ ಪರಂಕ್ದಂದೋ..
ಓ ಪುಚ್ಚೇಗ್ ಬಾಸೆಲುಂಡು ದೆತ್ತಿ ನಾಯಿಗ್ ಬುದ್ದಿಲುಂಡು..
ಚೆನ್ನು ಚೆನ್ನುಗಲೆ ಚೆನ್ನು ಚೆನ್ನು ಚೆನ್ನುಗಲೆ

ಚೆನ್ನು ಚೆನ್ನು ಕಣೇ.. ಚೆನ್ನು ಚೆನ್ನು ಕಣೇ..
ಚೆನ್ನುನ ಗುಡಿಸಲಿಗೆ ಚೆನ್ನು ನೆಂಟರು ಬಂದಿದ್ದಾರೆ
ನೆಂಟರು ಯಾರು ಕಣೇ ಚೆನ್ನು ನೆಂಟರು ಯಾರು ಕಣೇ
ತಂದೆ ತಾಯಂದಿರು ಒಡತಿ ತಂದೆ ತಾಯಂದಿರು
ಓ ತಂದೆಯ ಹೆಸರು ಹೇಳು ಚೆನ್ನು ತಾಯಿಯ ಹೆಸರು ಹೇಳು
ಓ ತಂದೆಯ ಹೆಸರು ಒಡತಿ ಕೋಟೆದ ಬಬ್ಬು ಅಂತ
ಓ ತಾಯಿಯ ಹೆಸರು ಒಡತಿ ಪೊವಮ್ಮ ಲೆಕ್ಕಮ್ಮಲೆ
ಓ ಲೇಲೇಲೆ ಚೆನ್ನು ಲೇಲೇಲೆ..
ಚೆನ್ನುನ ಗುಡಿಸಲಿಗೆ ಚೆನ್ನು ನೆಂಟರು ಬಂದಿದ್ದಾರೆ
ಓ ಹೊಟ್ಟೆಗೆ ಏನಿಲ್ಲೆಂದು ಚೆನ್ನು ಬೈಹುಲ್ಲು ಕೆದಕುವಳು
ಒಮ್ಮೆ ನೋಡುವಾಗ ಒಡತಿ ಕೈ ಕೆದಕುವಳು
ಓ ಅನ್ನಕ್ಕೆ ಏನಿಲ್ಲೆಂದು ಚೆನ್ನು ಹೊಟ್ಟೆ ಹೊಡಕೊಂಡಳು
ಓ ಅನ್ನಕ್ಕೆ ಏನಿಲ್ಲೆಂದು ಚೆನ್ನು ಹೊಟ್ಟೆ ಹಡಕೊಂಡಳು
ಓ ಲೇಲೇಲೆ ಚೆನ್ನು ಲೇಲೇಲೆ..
ಓ ಮಗು ಅಳುತ್ತದೆ ಒಡತಿ ಹಕ್ಕಿಯ ಹಾಗೇನೇ..
ಓ ಒಳಗೆ ಹೋಗು ಚೆನ್ನು ಮಗುವನ್ನು ತೂಗಿಕೊಳ್ಳು
ಓ ಲೇಲೇಲೆ.. ಹೊರಗೆ ಬನ್ನಿ ಒಡತಿ ಚೆನ್ನು ಕುಣಿತ ನೋಡಿ
ಓ ಮಗುವಿನ ಹೆಸರು ಒಡತಿ ಕೈಲ ಕಾನೆ ಅಂತ
ಓ ಬೆಕ್ಕಿನ ಕುತ್ತಾದರೆ ಒಡತಿ ಹಾಲಲ್ಲಿ ಹೋಗಲಿ
ನಾಯಿಯ ಕುತ್ತಾದರೆ ಒಡತಿ ಕಡಲು ಸೇರಲಿ
ಓ ಮಾಯಿ ತಿಂಗಳಲ್ಲಿ ಚೆನ್ನು ಮಾಯವಾಗುತ್ತಾಳೆ
ಓ ಸುಗ್ಗಿ ತಿಂಗಳಲ್ಲಿ ಚೆನ್ನು ಬೇಡಿ ಬರುವಳು
ದೂರಕ್ಕೆ ತೂಗಿಕೊಳ್ಳು ಚೆನ್ನು ಹತ್ತಿರ ಬಾಮಿಸು
ಮಗುವಿನ ಹತ್ತಿರ ಯಾರಿದ್ದಾರೆ ಚೆನು ಮಗುವಿನ ಹತ್ತಿರ ಯಾರಿದ್ದಾರೆ.
ಓ ಗಡವ ಬೆಕ್ಕು ಇದೆ ಒಡತಿ ಕರಿಯ ನಾಯಿ ಇದೆ
ಓ ನಾಯಿ ಕಚ್ಚದೇ ಚೆನ್ನು ಬೆಕ್ಕು ಪರಚದೇ?
ಓ ಬೆಕ್ಕಿಗೆ ಭಾಷೆಯಿದೆ ಒಡತಿ ನಾಯಿಗೆ ಬುದ್ದಿಯಿದೆ
ಚೆನ್ನು ಚೆನ್ನು ಕಣೇ.. ಚೆನ್ನು ಚೆನ್ನು ಕಣೇ..
(ಮಾಹಿತಿದಾರರು – ಕುಂಬೆ, ಪೆರ್ನಡ್ಕ, ೬೭, ಕಾಸರಗೋಡು)

ಪಠ್ಯೊ ೨

ಚೆನ್ನು ಚೆನ್ನುಗಲೇ ಚೆನ್ನು ಪೋಕರೆಟ್ಟಿಗಲೇ..
ಚೆನ್ನುನ ದಟ್ಟಿಗೆಡ್ ಚೆನ್ನು ಬಿನ್ನೆರ್ ಬೈದೆರ್..
ಓ ಬಿನ್ನೇರೇರ್ಗಲೆ ಚೆನ್ನು ಬಿನ್ನೇರೇರ್ಗಲೇ..
ಓ ಅಪ್ಪೆಲ ಬೈದಿಂಡ್ ದೆತ್ತಿ ಅಮ್ಮೆಲ ಬೈದ್‌ಂಡ್‌..
ಓ ಬಾಲೆ ಪುದರ್ ಪನ್ ಚೆನ್ನು ಬಾಲೆ ಪುದರ್ ಪನ್.
ಓ ಬಾಲೆದ ಪುದರ್‌ಯೇ ದೆತ್ತಿ ಪೂವಮ್ಮ ಲಕ್ಕಮ್ಮಲೆ..
ಓ ದೂರಗೊಚ್ಚೊನು ಚೆನ್ನು ಗಿಟ್ಟಗ್ ಮಾನವೊನು..
ಓ ಬಾಲೆದಲೇರುಂಡು ಚೆನ್ನು ಬಾಲೆದಲೇರುಂಡು..
ಓ ಕಂಟ ಪುಚ್ಚೆಲುಂಡು ದತ್ತಿ ಕರಿಯ ನಾಯಿಲುಂಡು..
ಓ ಚಣ್ಣನ ನೋತಂಡಲ್ ಚೆನ್ನು ಚಂಞಣ ನಟ್ಟೊಂಡಲ್.
ಓ ಚರೆಕ್ಕ್ ನೋತಂಡಲ್ ಚೆನ್ನು ಎಣ್ಣೆ ನಟ್ಟೊಂಡಲೇ..
ಓ ಪುಚ್ಚೆ ಪರಂಕ್ಡಂದೋ ಚೆನ್ನು ನಾಯಿ ತುಚ್ಚಂದೋ..
ಓ ಪುಚ್ಚೆಗ್ ಬಾಸೆಲುಂಡು ದೆತ್ತಿ ನಾಯಿಗ್ ಬುದ್ದಿಲುಂಡು..
ಓ ಲಮ್ಮಪುದರ್ ಪನ್ ಚೆನ್ನು ಅಪ್ಪೆ ಪುದರ್ ಪನ್..
ಓ ಅಪ್ಪೆನ್ ಪುದರ್ಯೇ ದೆತ್ತಿ ಅರಂಬೋಲಿರಂಬೋಲು..
ಓ ಅಮ್ಮೆ ಪುದರ್ಯೇ ದೆತ್ತಿ ಅಮ್ಮೆ ಪುದರ್ ಯೇ..
ಓ ಅಮ್ಮೆ ಪುದರ್‌ಯೇ ದೆತ್ತಿ ಕೋಟೆದ ಬಬ್ಬುಂದ್..
ಓ ಎಡತ್ತರಿಪ್ಪಂಡ ಚೆನ್ನು ಎಡತ್ತ ಮಿರೆಕೊರು..
ಓ ಬಲತ್ತರಿಪುಂಡ ಚೆನ್ನು ಎಡತ್ತ ಮಿರೆಕೊಡು..
ಚೆನ್ನು ಚೆನ್ನುಗಲೇ ಚೆನ್ನು ಪೋಕರೆಟ್ಟಿಗಲೇ..
ಚೆನ್ನುನ ದಟ್ಟಿಗೆಡ್ ಚೆನ್ನು ಬಿನ್ನೆರ್ ಬೈದೆರ್..

ಚೆನ್ನು ಚೆನ್ನುಗಲೇ ಚೆನ್ನು ಪೋಕರೆಟ್ಟಿಗಲೇ..
ಚೆನ್ನುನ ಗುಡಿಸಲಿಗೆ ಚೆನ್ನು ನೆಂಟರು ಬಂದಿದ್ದಾರೆ
ನೆಂಟರು ಯಾರು ಕಣೇ ಚೆನ್ನು ನೆಂಟರು ಯಾರು ಕಣೇ
ತಂದೆಯು ಇದ್ದಾರೆ ಒಡತಿ ತಾಯಿಯು ಇದ್ದಾರೆ
ಮಗುವಿನ ಹೆಸರೇನು ಚೆನ್ನು ಮಗುವಿನ ಹೆಸರೇನು
ಓ ಮಗುವಿನ ಹೆಸರು ಒಡತಿ ಪೂವಮ್ಮ ಲೆಕ್ಕಮ್ಮಲೆ
ದೂರಕ್ಕೆ ತೂಗಿಕೊಳ್ಳು ಚೆನ್ನು ಹತ್ತಿರ ಬಾಮಿಸು
ಮಗುವಿನ ಹತ್ತಿರ ಯಾರಿದ್ದಾರೆ ಚೆನ್ನು ಮಗುವಿನ ಹತ್ತಿರ ಯಾರಿದ್ದಾರೆ..?
ಓ ಗಡವ ಬೆಕ್ಕು ಇದೆ ಒಡತಿ ಕರಿಯ ನಾಯಿಯಿದೆ..
ಓ ಚಣ್ಣನ ಹೊಡಕೊಂಡಳು ಚೆನ್ನು ಅನ್ನ ಪಡಕೊಂಡಳು
ಓ ತಲೆಗೆ ಹೊಡಕೊಂಡಳು ಚೆನ್ನು ಎಣ್ಣೆ ಪಡಕೊಂಡಳು
ಓ ನಾಯಿ ಕಚ್ಚದೇ ಚೆನ್ನು ಬೆಕ್ಕು ಪರಚದ?
ಓ ಬೆಕ್ಕಿಗೆ ಭಾಷೆಯಿದೆ ಒಡತಿ ನಾಯಿಗೆ ಬುದ್ದಿಯಿದೆ
ಓ ತಂದೆಯ ಹೆಸರು ಹೇಳು ಚೆನ್ನು ತಾಯಿಯ ಹೆಸರು ಹೇಳು
ಓ ತಾಯಿಯ ಹೆಸರು ಒಡತಿ ಅರಂಬೋಲಿರಂಬೋಲು
ಓ ತಂದೆಯ ಹೆಸರು ಒಡತಿ ತಂದೆಯ ಹೆಸರು
ಓ ತಂದೆಯ ಹೆಸರು ಒಡತಿ ಕೋಟೆದ ಬಬ್ಬು ಅಂತ
ಓ ಎಡದ ಜಿನುಗಿದರೆ ಚೆನ್ನು ಬಲದ ಮೊಲೆ ಉಳಿಸು
ಓ ಬಲದ ಜಿನುಗಿದರೆ ಚೆನ್ನು ಎರಡ ಮೊಲೆ ಉಣಿಸು
ಚೆನ್ನು ಚೆನ್ನುಗಲೇ ಚೆನ್ನು ಪೋಕರೆಟ್ಟಿಗಲೇ..
ಚೆನ್ನುನ ಗುಡಿಸಲಿಗೆ ಚೆನ್ನು ನೆಂಟರು ಬಂದಿದ್ದಾರೆ
ಮಾಹಿತಿದಾರರು: ಮಯ್ಯ (೬೫) ಪೆರ್ನಡ್ಕ, ಕಾಸರಗೋಡು

ಸಾರಾಂಶ

[ಬದಲಾಯಿಸಿ]

ತುಳುನಾಡಿನ ಸಂಸ್ಕೃತಿಯ ಪ್ರಮುಖ ಅಂಶವನ್ನೊಳಗೊಂಡ "ಚೆನ್ನುನಲಿಕೆ" ಜನಪದ ಪರಂಪರೆಗಳಲ್ಲಿ ಒಂದು ವಿಶೇಷ ಹಬ್ಬವಾಗಿದೆ. ಈ ಹಬ್ಬದಲ್ಲಿ ಕುಣಿತ, ಹಾಡು, ಮತ್ತು ನೃತ್ಯಗಳ ಮೂಲಕ ಚೆನ್ನುನ ಧಾರ್ಮಿಕ ಹಾಗೂ ಸಾಮಾಜಿಕ ಕಥೆಗಳನ್ನು ಸ್ಮರಿಸುತ್ತಾರೆ. ಚೆನ್ನುನಲಿಕೆಯ ಹಿನ್ನೆಲೆಯು ಪ್ರಾಮಾಣಿಕತೆ, ಶ್ರದ್ಧೆ, ಮತ್ತು ನಂಬಿಕೆಗಳ ಸುತ್ತ ಹೆಣೆಯಲ್ಪಟ್ಟಿದ್ದು, ಧರಣಿಯ ಬಡ ಮಹಿಳೆಯೊಬ್ಬಳು ತನ್ನ ಧೈರ್ಯದಿಂದ ಜಯ ಸಾಧಿಸಿದ ಕಥೆಯನ್ನು ಪ್ರತಿಪಾದಿಸುತ್ತದೆ. ಈ ನಲಿಕೆಯಲ್ಲಿ ಸಮುದಾಯದ ಒಕ್ಕೂಟ, ಸಹಕಾರ, ಮತ್ತು ಸಂಸ್ಕೃತಿಯ ಸಾರವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ. ಇಂದಿಗೂ, ಇಂತಹ ಹಬ್ಬಗಳು ಜನರ ಜೀವನದ ಹೃದಯಭಾಗವಾಗಿದ್ದು, ಆಜ್ಞೆ, ಪ್ರಾಮಾಣಿಕತೆ, ಮತ್ತು ಭಕ್ತಿಯ ಸಂಕೇತವಾಗಿವೆ.