ಚುನಾವಣೆ ಸುಧಾರಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಸುಧಾರಣೆ ಎಂಬ ಪ್ರಕ್ರಿಯೆ ಮಾನವನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಇತಿಹಾಸದಲ್ಲಿ ತಿಳಿದಿರುವಂತೆ ಸಾಮಾಜಿಕ ರಾಜಕೀಯ ಹಾಗೂ ಧಾರ್ಮಿಕ ಸುಧಾರಣೆಗಳು ಮಾನವನ ಮೇಲೆ ಎಷ್ಹ್ಟೊಂದು ಪ್ರಾಭಾವ ಬೀರಿವೆ. ಹೀಗೆ ಚುನಾವಣಾ ಸುಧಾರಣೆಗಳೂ ಸಹ ಪ್ರಭಾವ ಬೀರುತ್ತವೆ.ಚುನಾವಣೆ ಎಂದರೆ ಒಂದು ಸಮೂಹದ ಜನರು ತಮ್ಮ ಆಶೆ-ಅಭಿಲಾಷೆಗಳಿಗೆ,ಜೀವಕ್ಕೆ ಬೇಕಾಗುವ ಮೂಲ ಸೌಕರ್ಯಗಳನ್ನು ಒದಗಿಸಿ, ಸುಖ ಸಂತೋಷದಿಂದ ಜೀವಿಸಲು ಅನುವು ಮಾಡಿಕೊಡುವ, ಹಾಗೂ ಸಹಕರಿಸುವಂತಹ ಒಬ್ಬ ಜವಾಬ್ದಾರಿಯುತ ವ್ಯಕ್ತಿ ಅಥವಾ ಗುಂಪನ್ನು ಅಯ್ಕೆ ಮಾಡುವ ಪ್ರಕ್ರಿಯೆ. ಚುನಾವಣೆಯು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸಲು ಪ್ರಜೆಗಳ ಕೈಯಲ್ಲಿರುವ ಶಕ್ತಿಶಾಲಿ ಅಸ್ತ್ರವಾಗಿ ಸಂವಿಧಾನದಿಂದ ಪಡೆದವರ ಚುನಾವಣೆಯನ್ನು ಪ್ರಜಾಪ್ರಭುತ್ವದ ಆಧಾರ ಸ್ಥಂಭ ಎಂದು ಕರೆಯಲಾಗುತ್ತದೆ. ಇದು ಮುಕ್ತ್ತ ಮತ್ತು ನಿರ್ಭೀತ ಚುನಾವಣೆಗಳು ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣಾಗಳಾಗಿದ್ದು, ವ್ಯಕ್ತಿಯ ಪ್ರತಿಷ್ಟೆ ಹಾಗೂ ಮೌಲ್ಯಗಳನ್ನು ಹೆಚ್ಚಿಸುತ್ತವೆ.

ಈ ಚುನಾವಣೆಯು ಪರೋಕ್ಷಾವಾಗಿತ್ತು. ಸಂವಿಧಾನದಲ್ಲಿ ೧೫ನೇ ಭಾಗದಲ್ಲಿರುವ ೩೨೪ರಿಂದ ೩೨೯ರವರೆಗಿನ ವಿಧಿಗಳು ಚುನಾವಣೆಗೆ ಸಂಬಂಧಿಸಿದಂತೆ ಉಪಬಂಧಗಳನ್ನು ಹೊಂದಿವೆ. ಭಾರತದಲ್ಲಿ ಚುನಾವಣೆಯನ್ನು ನಡೆಸುವ ಜವಾಬ್ದಾರಿಯನ್ನು ಚುನವಣಾ ಆಯೋಗಕ್ಕೆ ನೀಡಲಾಗಿದೆ. ಪ್ರಸ್ತುತ ಭಾರತದಲ್ಲಿನ ಚುನಾವಣೆಗಳಲ್ಲಿ ಈ ಕೆಳಕಂಡಂತಹ ಸುಧಾರಣೆಗಳು ಆತ್ಯವಶ್ಯಕವಾಗಿವೆ. ನಕಲಿ ಮತದಾನ, ಹಣದ ಪ್ರಭಾವ, ಗೂಂಡಾಗಿರಿ, ಮತ ಪೆಟ್ಟಿಗೆಗಳ ಅಪಹರಣ, ಚುನಾವಣಾ ಅವ್ಯವಹಾರಗಳನ್ನು ನಿಯಂತ್ರಿಸಲು ೧೯೫೦ ಜನ ಪ್ರತಿನಿಧಿ ಕಾಯ್ದ್ದೆ ಹಾಗೂ ಚುನಾವಣಾ ಆಯೋಗವು ಅನೇಕ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತಂದಿದೆ.

೧೯೫೦ರ ಜನಪ್ರತಿನಿಧಿ ಕಾಯ್ದೆ : ಈ ಕಾಯ್ದೆಯು ಮತದಾರರ ಅರ್ಹತೆಗಳು, ಮತದಾರರ ಪಟ್ಟಿಯ ಸಿದ್ದತೆ, ಕ್ಷೇತ್ರಗಳ ಪುನರ್ವಿಂಗಡನೆ, ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಸ್ಥಾನಗಳ ಹಂಚಿಕೆ ಮುಂತಾದ ವಿಷಯಗಳೀಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿದೆ. ೧೯೫೧ರ ಜನಪ್ರತಿನಿಧಿ ಕಾಯ್ದೆ : ಈ ಕಾಯ್ದೆಯು ಚುನಾವಣೆಗಳನ್ನು ನಡೆಸುವ ಬಗ್ಗೆ , ಚುನಾವಣೆಗಳನ್ನು ನಡೆಸುವ ಆಡಳಿತ ಯಂತ್ರ, ಚುನಾವಣಾ ಅಪರಾಧಿಗಳಿಗೆ ಶಿಕ್ಷೆ, ಚುನಾವಣಾ ವಿವಾದಗಳು, ಉಪ ಚುನಾವಣೆಗಳು ಹಾಗೂ ರಾಜಕೀಯ ಪಕ್ಷಗಳ ನೊಂದಣಿ ಮುಂತಾದವುಗಳಿಗೆ ಸಂಬಂಧಿಸಿದ ನಿಯಮಗಳನ್ನು ಒಳಗೊಂಡಿದೆ.

ಭಾರತದ ಚುನಾವಣಾ ವ್ಯವಸ್ಟಯಲ್ಲಿ ಇತೀಚೆಗೆ ಈ ಕೆಳಗಿನ ಸುಧಾರಣೆಗಳನ್ನು ತರಲಾಗಿದೆ.

೧. ಮತದಾರರ ಗುರುತಿನ ಚೀಟಿಯ ಬಳಕೆ: ಮತದಾರರ ಭಾವಚಿತ್ರವಿರುವ ಗುರುತಿನ ಕಾರ್ಡುಗಳು ಈಗ ಎಲ್ಲ ನಾಗರಿಕರ ಅಸ್ತಿತ್ವವದ ಕುರುಹಾಗಿವೆ. ಮತದಾರರ ಗುರುತಿನ ಚೀಟಿಗಳನ್ನು ೧೯೯೩ರಲ್ಲಿ ಟಿ ಎನ್ ಶೇಷನ್ ರವರು ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದಾಗ ಜಾರಿಗೆ ತರಲಾಯಿತು. ೨೦೦೯ರ ಸಾವರ್ತ್ರಿಕ ಚುನಾವಣೆಯಲ್ಲಿ ೫೮೨ ದಶಲಕ್ಶ ಮತದಾರರಿಗೆ ಗುರುತಿನ ಕಾರ್ಡುಗಳನ್ನು ವಿತರಿಸಲಾಗಿತ್ತು. ೧೪ನೇ ಲೋಕಸಭೆಗೆ ಚುನಾವಣೆ ೨೦೦೪ರ ಎಪ್ರಿಲ್-ಮೇನಲ್ಲಿ ನೆಡೆಸಲಾಯಿತು. ಅದನ್ನು ಜಗತ್ತಿನ ಡೊಡ್ದ ಚುನಾವಣಾ ನಿರ್ವಹಣೆ ಎಂದು ವರ್ಣಿಸಲಾಯಿತು. ಆಗ ೮,೩೫,೦೦೦ ಮತಗಟ್ಟೆಗಳಲ್ಲಿ ೭೧೪ ದಶಲಕ್ಸ ಮತದಾರರು ೧.೨ ದಶಲಕ್ಸ ವಿದ್ಯುನ್ಮಾನ ಮತ ಯಂತ್ರಗಳ ಮೂಲಕ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಚುನಾವಣಾ ಕಾರ್ಯನಿರ್ವಹಣೆಗೆ ೧೧ ದಶಲಕ್ಷ ಚುನವಧಿಕಾರಿಗಳನ್ನು ನೇಮಿಸಲಾಗಿತ್ತು. ಜಗತ್ತಿನಲಿಯೇ ದೊಡ್ದ ಚುನಾವಣಾ ನಿರ್ವಹಣೆ ಎಂದು ಪರಿಗಣಿಸಲ್ಪಟ್ಟೈದ್ದರೂ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಕೆಲ ವರ್ಗಗಳು ಮುಖ್ಯವಾಗಿ ಯುವಜನತೆ ಪಾಲ್ಗೊಳ್ಲದೇ ಇರುವುದರ ಬಗ್ಗೆ ಆಯೋಗಕ್ಕೆ ಕಳವಳವಿದೆ . ೧೮ ವರ್ಷ ಮೇಲ್ಪಟ್ಟ ಯುವಕರ ಹೆಸರುಗಳು ಮತದಾರರ ಪಟ್ಟಿಗಳಿಂದ ಕಾಣೆಯಾಗುತ್ತಿರುವುದಕ್ಕೆ ಆಯೋಗ ಅತೃಪ್ತಿ ವ್ಯಕ್ತಪಡಿಸಿದೆ. ಯುವ ಜನತೆಯ ಪಾಲ್ಗೊಳ್ಲುವಿಕೆಯನ್ನು ಹೆಚ್ಚಿಸಲು ಆಯೋಗ ಪ್ರತಿ ವರ್ಷದ ಜನವರಿ ೧ ರಂದು ೧೮ ವರ್ಷ ಮೇಲ್ಪಟ್ಟ ಅರ್ಹ ಮತದಾರರನ್ನು ಗುರುತಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಕಾರ್ಯ ದೇಶಾದ್ಯಂತ ೮.೫ ಲಕ್ಸ ಮತಗಟ್ಟೆಗಳಲ್ಲಿ ನಡೆಯುತ್ತದೆ. ಹೊಸದಾಗಿ ನೋಂದಾಯಿಸಲ್ಪಡುವ ಈ ಮತದಾರರಿಗೆ ಭಾರತದ ನಾಗರಿಕರಾದ ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿದ್ದು ನಮ್ಮ ದೇಶದ ಪ್ರಜಾಸತ್ತಾತ್ಮಕ ಮತ್ತು ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆ ಪರಂಪರೆಯನ್ನು ಎತ್ತಿ ಹಿಡಿಯುತೇವೆ ಹಾಗೂ ಪ್ರತಿ ಸಲದ ಚುನಾವಣೆಯಲ್ಲಿ ನಿರ್ಭಯದಿಂದ, ಯಾರ ಪ್ರಭಾವಕ್ಕೆ ‌ ಒಳಗಾಗದೆ ಮುಕ್ತ್ತವಾಗಿ ಮತದಾನ ಮಾಡುತ್ತೇವೆ, ಮತದಾನ ಮಡುವಾಗ ಧರ್ಮ, ಜಾತಿ, ಸಮುದಾಯ ಭಾಷೆಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರತಿಗ್ನೆ ಮಾಡುತ್ತೇವೆ ಎಂಬ ಪ್ರತಿಗ್ನಾ ವಿಧಿಯನ್ನು ಭೋಧಿಸಲಾಗುತ್ತದೆ. ಹೊಸದ್ದಾಗಿ ನೋಂದಾಯಿಸಲ್ಪಡುವ ಮತದಾರರಿಗೆ ("proud to be a voter ready to vote") ಎಂಬ ಘೋಷ ವಾಕ್ಯವಿರುವ ಲಾಂಛನವನ್ನು ನೀಡಲಾಗುತ್ತದೆ. ೧೮ ವರ್ಷ ವಯಸ್ಸಿನ ಪ್ರತಿಯೋಬ್ಬ ಯುವಕ/ಯುವತಿಯರನ್ನು ಮತದಾರರನ್ನಾಗಿ ನೋಂದಾಯಿಸಲು ಎಲ್ಲ ರಾಜ್ಯಗಳ ಮುಖ್ಯ ಚುನಾವಣಾ ಆಯೋಗ ನಿರ್ದೆಶನ ನೀಡಿದೇ. ಮತದಾನ ಮಾಡುವ ಮೂಲಕ ಬದಲಾವಣೆಯ ಹರಿಕಾರರಾಗುವ ಯುವಜನರನ್ನು ಪ್ರೋತ್ಸಾಹಿಸಲು ಆಯೋಗವು ಸಮಗ್ರ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಪಲ್ಗೊಳ್ಳುವಿಕೆ ಆಂದೋಲನ (SVEEP-comprehensive syatamatic voters education and electoral participation campaign)ವನ್ನು ನಡೆಸುತ್ತದೆ.

೨. ವಿದ್ಯುನ್ಮಾನ ಮತಯಂತ್ರ ಬಳಕೆ : ಜೀವನದ ಪ್ರತಿಯೊಂದು ರಂಗದಲ್ಲಿ ತಂತ್ರಜ್ಞಾನ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಿದೆ. ಕದುಮೆ ಅವಧಿಯಲ್ಲಿ ಮುಕ್ತ, ನಿಷ್ಪಕ್ಷಪಾತ ಮತ್ತು ಶಾಂತಿಯುತ ಚುನಾವನಣೆ ನಡೆಸಲು ತಂತ್ರಜ್ಞಾನ ಹಲವಾರು ಉಪಕರಣಗಳನ್ನು ಒದಗಿಸಿದೆ. ಚುನಾವಣೆಗಳಲ್ಲಿ ವೆದ್ಯುನ್ಮಾನ ಮತಯಂತ್ರಗಳನ್ನು ಉಪಯೋಗಿಸುವುದಕ್ಕೆ ಅನೂಕೂಲವಾಗುವಂತೆ ೧೯೫೧ರ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ .ವಿದ್ಯುನ್ಮಾನ ಮತಯಂತ್ರಗಳನ್ನು ರಾಜಾಸ್ಥಾನ, ಮಧ್ಯಪ್ರದೇಶ ಮತ್ತು ದೆಹಲಿ ವಿಧಾನಸಭ ಚುನಾವಣೆಗಳಲ್ಲಿ ೧೯೯೮ರಲ್ಲಿ ಪ್ರಥಮ ಬಾರಿಗೆ ಬಳಸಲಾಯಿತು. ಈ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಬಳಕೆಗೆ ಸಾರ್ವಜನಿಕರು ನೀಡಿದ ಉತ್ತಮ ಪ್ರಕ್ರಿಯೆಯಿಂದ ಉತ್ಸಾಹಗೊಂಡ ಚುನಾವಣ ಆಯೋಗವು ೧೯೯೯ರ ಗೋವ ವಿಧಾನಸಭೆ ಚುನಾವಣೆಯಲ್ಲು ಈ ಯಂತ್ರಗಳನ್ನು ಬಳಸಿತು. ಇವುಗಳ ಬಳಕೆಯೆಂದ ಮತ ಎಣಿಕೆಯನ್ನು ಬೇಗ ಮುಗಿಸಿ ಫಲಿತಾಂಶಗಳನ್ನು ಶೀಘ್ರವಾಗಿ ಪ್ರಕಟಿಸಲು ಸಾಧ್ಯವಾಗುತ್ತದೆ. ಆದರೆ ಈ ಯಂತ್ರಗಳ ಬಳಕೆಗೆ ಸಂಬಂಧಿಸಿದ ತರಭೇತಿಯನ್ನು ಚುನಾವಣಾ ಸಿಬ್ಬಂದಿಗೆ ನೀಡುವುದು ಮತ್ತು ಸಾರ್ವಜನಿಕರಲ್ಲಿ ಅರಿವು ಮೂದಿಸುವುದು ಅತ್ಯಗತ್ಯ.. ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆನ್ ಲೈನ್ ಮತದಾನ ಬೇಗನೆ ಬರಲಿದೆ. ಗುಜರಾತ್ ನ ಗಾಂಧಿನಗರದಲ್ಲಿ ನಡೆಸಲಾದ ಪ್ರಯೋಗ ಯಶಸ್ವಿಯಾಗಿದೆ. ಈ ವ್ಯವಸ್ಥೆಯಡಿಯಲ್ಲಿ ಆನ್ ಲೈನ್ ಮೂಲಕವೆ ನೋಂದಾಯಿಸಿಕೊಳ್ಳುವ ಮತದಾರರು ಪ್ರತ್ಯೇಕ ಐಡಿ ಕಾರ್ಡು ಹೊಂದಿರಬೇಕು. ಅವರೊಂದಿಗೆ ಪಾಸ್ ವರ್ಡ್ ಕೂಡ ಇರುತ್ತದೆ. ಅವರ ಮೊಬೈಲ್ ನಂಬರ್ ಮೂಲಕ ಮಾನ್ಯತೆ ನೀಡಲಾಗುತ್ತದೆ. ಅವರ ಮತದಾನದ ಸಮಯವನ್ನು ಎಸ್ ಎಮ್ ಎಸ್ ಮೂಲಕ ತಿಳಿಸಲಾಗುತ್ತದೆ. ಪ್ರತಿಯೊಬ್ಬ ಮತದಾರರಿಗೆ ಮತ ಚಲಾಯಿಸಲು ಎರಡು ನಿಮಿಷಗಳ ಕಾಲಾವಕಾಶವಿರುತ್ತದೆ. ವಿದೇಶದಲ್ಲಿರುವ ಭಾರತೀಯರು ಸಹ ಚುನಾವಣಾ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಮತದಾನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಈ ಸಂಬಂಧ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ಮನಮೊಹನ್ ಸಿಂಗ್ ಅವರು ಇತ್ತಿಚೆಗೆ ೧೦ನೇ ಪ್ರವಾಸಿ ಬಾರತೀಯ ದಿವಸ ಉದ್ಘಾಟನೆ ಸಂಧರ್ಭದಲ್ಲಿ ಹೇಳಿದ್ದಾರೆ. ನಾಗರಿಕ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಐಐಒ ಮತ್ತು ಸಾಗರದಾಚೆಯ ಭಾರತೀಯ ನಾಗರಿಕರ ಯೋಜನೆ(OCIS-overseas citizen of india scheme) ಗಳನ್ನು ವೆಲೀನಗೊಳಿಸಲು ಸಂಸತ್ತಿನಲ್ಲಿ ಒಂದು ಮಸೂದೆಯನ್ನು ಮಂಡಿಸಲಾಗಿದೆ. ೩) ರಾಜ್ಯವೇ ಚುನಾವಣಾ ವೆಚ್ಚ ಭರಿಸುವ ಸುಧಾರಣೆ: ಸರ್ಕಾರವೇ ಚುನಾವಣಾ ವೆಚ್ಚವನ್ನು ಭರಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಕೆಲವು ಚುನಾವಣಾ ತ ಅಭಿಪ್ರಾಯಪಡುತ್ತಾರೆ. ಇದರಿಂದ ಚುನಾವಣಾ ವೆಚ್ಚವನ್ನು ಹಾಗೂ ಚುನಾವಣೆಗಳಲ್ಲಿ ಕಪ್ಪು ಹಣ ಚಲಾವಣೆಯಾಗುವುದನ್ನು ನಿಯಂತ್ರಿಸಬಹುದು. ಅಲ್ಲದೆ ಇದರಿಂದ ಹಣ ಬೆಂಬಲವಿಲ್ಲದ ಯೋಗ್ಯ ಮತ್ತು ಸಮರ್ಥ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ದಿಸಲು ಸಾಧ್ಯವಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸಮಿತಿಗಳ ಶಿಫಾರಸ್ಸುಗಳನ್ನು ನಾವು ಇಲ್ಲಿ ಗಮನಿಸಬಹುದು. ಚುನಾವಣಾ ಪ್ರಚಾರದ ವೆಚ್ಚವನ್ನು ಸರ್ಕಾರಗಳು ವಹಿಸಿಕೊಳ್ಳಬೇಕೇಂದು ವಾಂಚು ಸಮಿತಿ, ತಾರ್ಕುಂಡೆ ಸಮಿತಿಗಳು ಶೆಫಾರಸ್ಸು ಮಾಡಿದ್ದವು. ೧೯೯೮ರ ಮೇ ನಲ್ಲಿ ನಡೆದ ಸರ್ವಪಕ್ಷ ಸಮ್ಮೇಳನವು ಸರ್ಕಾರವೆ ಚುನಾವಣ ವೆಚ್ಚವನ್ನು ಭರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಶಿಫಾರಸ್ಸು ನೀಡಲು ಇಂದ್ರಜಿತ್ ಗುಪ್ತ ರವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು. ಈ ಸಮಿತಿಯು ೧೯೯೯ರಲ್ಲಿ ಈ ಕೆಳಗಿನ ಶಿಫಾರಸ್ಸುಗಳನ್ನು ನೀಡಿತು. -ಸರ್ಕಾರವು ಚುನಾವಣಾ ವೆಚ್ಚಕ್ಕೆಂದು ನೀಡುವ ಹಣವು ನಗದು ರೂಪದಲ್ಲಿರದೆ ವಸ್ತು ರೂಪದಲ್ಲಿರಬೇಕು. -ಕೇಂದ್ರ ಸರ್ಕಾರವು ವರ್ಷಕ್ಕೆ ರೂ ೬೦ ಕೋಟಿಗಳನ್ನು ಚುನಾವಣಾ ನಿಧಿಗೆ ನೀಡಬೇಕು. ಪ್ರತಿಯೊಂದು ರಾಜ್ಯವೂ ಕೂಡ ಅಷ್ಟೇ ಮೊತ್ತದ ಹಣವನ್ನು ನೀಡಬೇಕು. -ರಾಜಕೀಯ ಪಕ್ಷಗಳು ತಮ್ಮ ಆದಾಯ ತೆರಿಗೆ ಮತ್ತು ವೆಚ್ಚಕ್ಕೆ ಸಂಬಂದಿಸಿದಂತೆ ವಾರ್ಷಿಕ ಲೆಕ್ಕೆವನ್ನು ಆಧಾಯ ತೆರಿಗೆ ಇಲಾಕೆಗೆ ಕಡ್ಡಾಯವಾಗಿ ಒಪ್ಪಿಸವುದು. -೧೦,೦೦೦ ರೂ ಗಳಿಗೆ ಮೀರಿದ ದೇಣೀಗೆಯನ್ನು ಚೆಕ್ ಅಥವಾ ಡ್ರಾಫ್ಟ್ ರೂಪದಲ್ಲಿ ಸ್ವೀಜಕರಿಸಬೇಕು. ದೇಣಿಗೆ ನೀಡಿದ ವ್ಯಕ್ತಿಗಳ ಹೆಸರುಗಳನ್ನು ಖಾತೆಯಲ್ಲಿ ನಮೋದಿಸಬೇಕು. ಸರ್ಕಾರವು ಚುನಾವಣಾ ವೆಚ್ಚಕ್ಕೆ ಅವಶ್ಯ ಕವಾದ ಹಣವನ್ನು ಪಕ್ಷಗಳಿಗೆ ನೀಡುವ ಬದಲು ಅಭ್ಯರ್ಥಿಗಳಿಗೆ ನೀಡುವುದೇ ಉತ್ತಮ. ಏಕೆಂದರೆ ಪಕ್ಷಗಳಿಗೆ ನೀಡಿದರೆ ಎಲ್ಲ ಅಭ್ಯರ್ಥಿಗಳಿಗೆ ಸಮ ಪ್ರಮಾಣ ಹಣವನ್ನು ಖರ್ಚು ಮಾಡದೆ ತಾರತಮ್ಯ ಮಾಡುವ ಸಾಧ್ಯತೆ ಇರುತ್ತದೆ. ೪)ಅಭ್ಯರ್ಥಿಗಳ ಪೂರ್ವ ಚರಿತ್ರೆಯನ್ನು ಬಹಿರಂಗಗೊಳಿಸಲು ಕಡ್ದಾಯ ಆದೇಶ : ರಾಜಕೀಯ ಅಪರಾಧೀಕರಣವು ಎಂದು ನಮ್ಮ ರಾಜಕೀಯ ವ್ಯವಸ್ತೆಯನ್ನು ಕಾಡುತ್ತಿರುವ ಪೆಡಂಭೂತವಾಗಿದೆ. ರಾಜಕಾರಣಿಗಳಲ್ಲಿ ಕಂಡುಬರುವ ಅಪರಾಧಿಕರಣ, ಅಪರಾಧಿಗಳೊಂದಿಗಿನ ಸಖ್ಯ ,ಅಕ್ರಮ ಆಸ್ತಿ ಸಂಪಾದನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ವೋಚ್ಚ ನ್ಯಾಯಾಲಯವು ಮೇ ೨೭ ,೨೦೦೩ರಂದು ಚುನಾವಣೆಯಲ್ಲಿ ಸ್ಪರ್ಧಿಸಬಯಸುವ ಪ್ರತಿಯೊಬ್ಬ ಅಭ್ಯರ್ಥಿಯಿಂದ ನಾಮಪತ್ರದ ಜೊತೆಗೆ ಕಡ್ಡಾಯವಾಗಿ ಒಂದು ಪ್ರಮಾಣ ಪತ್ರ ಪಡೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಈ ಪ್ರಮಾಣ ಪತ್ರವು ಅಭ್ಯರ್ಥಿಯ ಅಫರಾಧದ ಹಿನ್ನೆಲೆ,ಚರ ಮತ್ತು ಸ್ಥಿರ ಆಸ್ತಿಯ ವಿವರಗಳು, ಅವಲಂಬಿತರ ವಿವರಗಳು,ಸಾಲಗಳು ಮತ್ತು ಶೈಕ್ಷಣಿಕ ಅರ್ಹತೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಹೊಂದಿರಬೇಕು. ಹೀಗೆ ಸುಪ್ರಿಂ ಕೋರ್ಟ್ ಚುನಾವಣೆಗೆ ಸ್ಪರ್ಧಿಸಬಯಸುವ ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನ ಪೂರ್ವ ಚರಿತ್ರೆ ಘೋಷಿಸುವುದನ್ನು ಕಡ್ಡಾಯಗೊಳಿಸಿದೆ. ೫) ಮತ ತಿರಸ್ಕಾರ ಹಕ್ಕು ಜಾರಿಗೆ : ಸ್ವತಂತ್ರ್ಯ ಭಾರತದ ಚುನಾವಣಾ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಮತದಾರರಿಗೆ ದೊರೆತಿದೆ. ಈ ಕುರಿತಾಗಿ ಸುಪ್ರಿಂ ಕೋರ್ಟ್ ಅಕ್ಟೋಬರ್ ೦೫, ೨೦೧೩ರಂದು ಮಹತ್ವದ ತೀರ್ಪು ನೀಡಿದೆ. ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಯಾರಿಗೂ ಮತ ಹಾಕುವುದಿಲ್ಲ ಎನ್ನುವ ಮತದಾರರಿಗೆ 'ನಿರಾಕರಣೆಯ ಮತ ಚಲಾಯಿಸುವ ಹಕ್ಕನ್ನು ಸುಪ್ರಿಂ ಕೋರ್ಟ್ ನೀಡಿದ್ದು ಶ್ಲಾಘನೀಯವಾಗಿದೆ. ವಿಧ್ಯುನ್ಮಾನ ಮತಯಂತ್ರದಲ್ಲಿ 'non of the above ' ಎಂಬ ಆಯ್ಕೆಯನ್ನು ಸೇರಿಸಲು ಚುನಾವಣಾ ಆಯೋಗ ಅಗತ್ಯ ಕ್ರಮಗಳನ್ನು ಕೈಗೊಳುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ಚುನಾವಣಾ ಸಿಬ್ಬಂದಿಗೂ ತರಬೇತಿ ನೀಡಲಾಗುತ್ತಿದೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಯಾರು ಯೋಗ್ಯರಲ್ಲ ಎಂಬ ಭಾವನೆ ಎಷ್ಟೋ ಜನರಲ್ಲಿರುತ್ತದೆ. ಹೀಗಾಗಿ ಅವರು ಮತದಾನದಿಂದ ದೂರವೆ ಉಳಿದು ಬಿಡುತ್ತಾರೆ. ಆದರೆ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ಆಯ್ಕೆ ನೀಡುವುದರಿಂದ ನಿರಾಸತ್ತ ಜನರು ಕೂಡ ಮತದಾನದಲ್ಲಿ ಹೆಚ್ಚಿನ ಸಖ್ಯೆಯಲ್ಲಿ ಫಾಲ್ಗೊಳುತ್ತಾರೆ. ಅಲ್ಲದೆ ಈ ಸೌಲಭ್ಯ ವು ಚುನಾವಣಾ ಪ್ರಕ್ರಿಯೆಯನ್ನೇ ಸ್ವಚ್ಚಗೊಳಿಸುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪಿ ಸದಾಶಿವಂ ರವರು ಹೇಳಿದ್ದಾರೆ . ಮತದಾರರಿಗೆ ಈ ಹಕ್ಕು ನೀಡುವಂತೆ ಕೋರಿ 'ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ '(PVCL) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು .