ಗೆರಾರ್ಟ್ ಹೌಪ್ಟ್‌ಮನ್
ಜನನ: | |
---|---|
ಜನನ ಸ್ಥಳ: | ಸಿಲೇಸಿಯ, ಪ್ರುಶ್ಯ |
ನಿಧನ: | June 6, 1946 Agnetendorf (Jagniątków), ಪೋಲೆಂಡ್ | (aged 83)
ವೃತ್ತಿ: | ನಾಟಕಕಾರ |
ರಾಷ್ಟ್ರೀಯತೆ: | ಜರ್ಮನಿ |
ಸಾಹಿತ್ಯ ಶೈಲಿ: | Naturalism |
ಪ್ರಮುಖ ರಚನೆಗಳು: | The Weavers, Die Ratten |
ಪ್ರಶಸ್ತಿಗಳು: | ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ (೧೯೧೨) |
ಗೆರಾರ್ಟ್ ಹೌಪ್ಟ ಮನ್(೧೮೬೨-೧೯೪೬) ೧೯೧೨ ರಲ್ಲಿ 'ನೋಬೆಲ್ ಸಾಹಿತ್ಯ ಪ್ರಶಸ್ತಿ', ಪಡೆದ 'ಜರ್ಮನಿ' ಯ 'ನಾಟಕಕಾರ', ಈಗಿನ 'ಪೋಲೆಂಡ್' ನ ಭಾಗವಾಗಿರುವ 'ಸೈಲೇಶಿಯ' ದಲ್ಲಿ 'ಗೆರಾರ್ಟ್ ಹೌಪ್ಟಮನ್' ಜನಿಸಿದರು. ಅವರೊಬ್ಬ ಸಮರ್ಥ ಲೇಖಕರಾಗಿದ್ದರು.
ಬಾಲ್ಯ ಹಾಗೂ ವಿದ್ಯಾಭ್ಯಾಸ
[ಬದಲಾಯಿಸಿ]'ಗೆರಾರ್ಟ್ ಹೌಪ್ಟ್‌ಮನ್' ರ ತಂದೆ ಮಧ್ಯಮವರ್ಗದ ಹೋಟೆಲ್-ಕೀಪರ್ ಆಗಿದ್ದರು. 'ಬ್ರೆಸ್ಲೋ' ಎಂಬ ಚಿಕ್ಕ ನಗರದಲ್ಲಿ ಶಿಲ್ಪಕಲೆಯನ್ನು ಕಲಿಸುವ ಶಾಲೆಯಲ್ಲಿ ವಿಧ್ಯಾರ್ಥಿಯಾಗಿ ಸೇರಿದ 'ಗೆರಾರ್ಟ್ ಹೌಪ್ಟ್‌ಮನ್' ನಂತರ ಸಾಹಿತ್ಯದಲ್ಲಿ ಆಸಕ್ತಿಹೊಂದಿ, 'ಜೇನಾ' ಎಂಬಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದರು. 'ಗೆರಾರ್ಟ್ ಹೌಪ್ಟ್‌ಮನ್' ಇಟಲಿಯಲ್ಲಿ ಸಾಕಷ್ಟು ಅಡ್ಡಾಡಿ ಲೋಕಾನುಭವ ಹೆಚ್ಚಿಸಿಕೊಂಡರು. ೧೮೮೫ ರಿಂದ 'ಬರ್ಲಿನ್' ನಲ್ಲಿ ನೆಲೆನಿಂತು ನಾಟಕಗಳನ್ನು ಬರೆಯತೊಡಗಿದರು. ೧೮೮೯ ನಲ್ಲಿ 'ಗೆರಾರ್ಟ್ ಹೌಪ್ಟ್‌ಮನ್' ರವರ ಮೊದಲನಾಟಕ ' ವೋರ್ ಸೊನೆನಾಫ್ ಗಾಂಗ್' ಪ್ರಕಟವಾಯಿತು. ಇದು ಜರ್ಮನಿಯಲ್ಲಿ 'ಪ್ರಾಕೃತಿಕವಾದ' 'Naturalism' ಎಂಬ ಪಂಥವನ್ನು ಪ್ರಾರಂಭಿಸಿತು.
'ಗೆರಾರ್ಟ್ ಹೌಪ್ಟ್‌ಮನ್' ರವರ ನಾಟಕಗಳು ಮುಂದೆ ನಿಯಮಿತವಾಗಿ ಪ್ರಕಟವಾಗುತ್ತಾ, ರಂಗಭೂಮಿಯಲ್ಲೂ ಪ್ರದರ್ಶನವಾಗುತ್ತ, ರಂಗಭೂಮಿಯಲ್ಲೂ ಪ್ರದರ್ಶನ ಕಾಣುತ್ತಾ ಜರ್ಮನ್ ರಂಗಭೂಮಿಯಲ್ಲಿ ಒಂದು ಹೊಸ ಅಲೆಯನ್ನು ಹುಟ್ಟುಹಾಕಿದವು. ೧೮೯೨ ರಲ್ಲಿ ಬಂದ 'ಡೀವೆಬರ್' [ನೇಕಾರ] ಎಂಬ ನಾಟಕ ಬಹಳಷ್ಟು ಪ್ರಸಿದ್ದವಾಯಿತು.
ವೈವಾಹಿಕ ಜೀವನ
[ಬದಲಾಯಿಸಿ]ಗೆರಾರ್ಟ್ ಹೌಪ್ಟ್‌ಮನ್ ರವರ ವೈವಾಹಿಕ ಬದುಕು ಸುಖಕರವಾಗಿರಲಿಲ್ಲ. ಅವರು ಹೆಂಡತಿಗೆ 'ವಿವಾಹ-ವಿಚ್ಛೇದನ' ನೀಡಿ, ನಟಿಯೊಬ್ಬಳನ್ನು ವಿವಾಹವಾದರು. ನಂತರ 'ಗೆರಾರ್ಟ್ ಹೌಪ್ಟ್‌ಮನ್' ಇನ್ನೊಬ್ಬ ಹದಿಹರೆಯದ ನಟಿಯ ಜೊತೆಗೆ, ಸಂಬಂಧ ಬೆಳೆಸಿದರು. 'ಗೆರಾರ್ಟ್ ಹೌಪ್ಟ್‌ಮನ್' ರು ಹಿಟ್ಲರ್ ನನ್ನು ವಿರೋಧಿಸದೆ, ಜರ್ಮನಿಯಲ್ಲಿ ವಾಸವಾಗಿದ್ದರು. ಅವರ 'ಮಾತೃಭೂಮಿ ಪೋಲೆಂಡ್'ನ ವಾಸಿಗಳು ಇದರಿಂದ ಬೇಸರಗೊಂಡರು. ಅದೇ ಕಾರಣದಿಂದ 'ಗೆರಾರ್ಟ್ ಹೌಪ್ಟ್‌ಮನ್' ರವರು ತೀರಿಕೊಂಡಾಗ, ಪೋಲೆಂಡ್ ಸರಕಾರ, ಅವರನ್ನು ತನ್ನ ನೆಲದಲ್ಲಿ ಮಣ್ಣುಮಾಡಲು ಅವಕಾಶಕೊಡಲು ನಿರಾಕರಿಸಿತು. 'ಗೆರಾರ್ಟ್ ಹೌಪ್ಟ್‌ಮನ್' ರವರ ಶವಸಂಸ್ಕಾರವಾದ ಒಂದು ತಿಂಗಳಿನ ನಂತರ, ಅವರ ಶವವನ್ನು ಹಳೆಯ ಎತ್ತಿನಬಂಡಿಯಲ್ಲಿ ಹಾಕಿಕೊಂಡು ಜರ್ಮನಿಗೆ ತೆಗೆದುಕೊಂಡು ಹೋಗಿ, ಅಲ್ಲಿ ಸಮಾಧಿಮಾಡಲಾಯಿತು.