ಗಂಡು ಕಾಳಿಂಗ
ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಜುಲೈ ೨೦೧೭) |
ಗ೦ಡು ಕಾಳಿ೦ಗ
[ಬದಲಾಯಿಸಿ]ಈ ಸಸ್ಯವು Kalanchoe laciniata ಎ೦ಬ ವೈಜ್ಞಾನಿಕ ಹೆಸರನ್ನು ಒಳಗೊ೦ಡಿದ್ದು Crassulaceae ಎ೦ಬ ಸಸ್ಯದ ಕುಟು೦ಬಕ್ಕೆ ಸೇರಿದೆ.
ಇತರ ಹೆಸರುಗಳು
[ಬದಲಾಯಿಸಿ]- ಕರ್ಣಬೀಜ
- ಜಕ್ಮೇಹಯಾತ್ (ಹಿ೦ದಿ)
ಸಸ್ಯ ವರ್ಣನೆ
[ಬದಲಾಯಿಸಿ]ಈ ಸಸ್ಯವು ಪುಟ್ಟಗಿಡ ಎಲ್ಲಾ ಕಡೆಗಳಲ್ಲಿಯೂ ಬೆಳೆಯುತ್ತದೆ. ಇದರ ಎಲೆಗಳ ಅ೦ಚುಗಳು ಕತ್ತರಿಯಾಕಾರದಲ್ಲಿರುತ್ತದೆ. ಇದರ ಹೂವುಗಳು ತಿಳಿ ಹಳದಿ ಮತ್ತು ಪುಷ್ಪಪಾತ್ರೆಯ ಮೇಲೆ ಸು೦ದರವಾಗಿ ಅರಳುತ್ತದೆ. ಮತ್ತು ಉದ್ದವಾಗಿರುತ್ತದೆ. ಹೂವಿನಸುತ್ತ ಉಪದಳಗಳು ಇರುತ್ತದೆ. ಪಕ್ವವಾಗಿರುವ ಬೀಜಗಳು ಗಾಳಿಯಲ್ಲಿ ತೇಲುತ್ತಿರುತ್ತವೆ.
ಕಾಯಿಲೆಗಳು
[ಬದಲಾಯಿಸಿ]ರಕ್ತಭೇದಿ, ಅತಿಸ್ರಾವ, ಕುಷ್ಠರೋಗ, ವೃಷಣಗಳ ಚಿಕಿತ್ಸೆಯಲ್ಲಿ ಈ ಸಸ್ಯವನ್ನು ಉಪಯೋಗಿಸುತ್ತಾರೆ.
ಚಿಕಿತ್ಸಾ ವಿಧಾನ
[ಬದಲಾಯಿಸಿ]ರಕ್ತಭೇಧಿಯನ್ನು ತಡೆಯಲು ಇದರ ಹಸಿ ಎಲೆಗಳ ರಸವನ್ನು ತೆಗೆದ ತಕ್ಷಣ ಅರ್ಧ ಟೀ ಚಮಚ ರಸವನ್ನು ಜೇನಿನೊಂದಿಗೆ ಸೇವಿಸುವುದರಿಂದ ತಡೆಯಲು ಸಾಧ್ಯ.
ನೋವು ನಿವಾರಣೆಗೆ
[ಬದಲಾಯಿಸಿ]ಈ ಗಿಡದ ಹಸಿ ಸೊಪ್ಪನ್ನು ನುಣ್ಣಗೆ ಅರೆದು ನೋವಿಗೆ ಲೇಪಿಸುವುದು.
ಕುಷ್ಠರೋಗ ನಿವಾರಣೆಗೆ
[ಬದಲಾಯಿಸಿ]ಒಂದು ಹಿಡಿ ಹಸಿ ಸೊಪ್ಪನ್ನು ತೆಗೆದು ನುಣ್ಣಗೆ ಅರೆದು ಗಾಯಗಳಿಗೆ ಹಾಕುವುದರಿಂದ ಮತ್ತು ಇದರ ರಸವನ್ನು ಅದೆ ಸಮಯಕ್ಕೆ ಒಂದು ಟೀ ಚಮಚದಂತೆ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ರೋಗವು ನಿವಾರಣೆಯಾಗುತ್ತದೆ