ಕ್ರೈಸ್ತರ ವಿವಾಹ ಪದ್ಧತಿ
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಭಾಷೆ ಸರಿಪಡಿಸಬೇಕು. |
ದ್ಯೆವಶಾಸತ್ರದ ಹಿನ್ನೆಲೆಯಲ್ಲಿ ವಿವಾಹ
[ಬದಲಾಯಿಸಿ]ಮದುವೆ ಒಂದು ಪ್ರೀತಿಯ ಒಡಂಬಡಿಕೆ (ಹಳೆಯ ಒಡಂಬಡಿಕೆಯಲ್ಲಿ ದೇವರು ಮತ್ತು ಧಮ೯ಸಭೆ ಇಡೀ ವಿಶ್ವಾಸಿಗಳ ಸಮೂದಾಯದ ನಡುವಿನ ಒಡಂಬಡಿಕೆ). ಮದುವೆ ಗಂಡು-ಹೆಣ್ಣು ಒಂದೇ ಶರೀರವಾಗುವ ದೇವರ ಕಲೆ. ಒಂದೆ ಶರೀರವೆಂದರೆ ದ್ಯೆಹಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ, ಬೌದ್ಧಿಕವಾಗಿರುವ ಬಿಡಿಸಲಾಗದ ಬೆಸುಗೆ .
ಅದಿಕಾಂಡದ ಸೃಷ್ಟಿಯ ಕಥನದಲ್ಲಿ ಕಂಡು ಬರುವ ಮೌಲ್ಯಗಳು
[ಬದಲಾಯಿಸಿ]ಗಂಡು-ಹೆಣ್ಣು ಸಮಾನತೆ
[ಬದಲಾಯಿಸಿ]ಗಂಡು-ಹೆಣ್ಣು ಗೌರವ ಮತ್ತು ಮೌಲ್ಯ ಉಳ್ಳವರು. ಯಾರು ಮೆಲಲ್ಲ, ಯಾರೂ ಕೀಳಲ್ಲ. ಗಂಡು-ಹೆಣ್ಣು, ಹೆಣ್ಣಿಗೆ-ಗಂಡು ಸೃಷ್ಟಿ ನಿಯಮದ ಅಗತ್ಯತೆ. ಆದಾಮನ ಪಕ್ಕೆಲುಬಿನಿಂದ ಹೆಣ್ಣಿನ ಸೃಷ್ಟಿ -ಗಂಡು ಹೆಣ್ಣುಗಳು ಸಮಾನತೆಯ ಸಂಕೇತ.
ಗಂಡುಹೆಣ್ಣುಗಳ ಪರಸ್ಪರ ಪೂರಕ ಸಂಬಂಧ
[ಬದಲಾಯಿಸಿ]ಉದಾ;- ಕುಂಟ ಮತ್ತು ಕುರುಡ ಯಾತ್ರೆಗೆ ಹೊರಟ ಹಾಗೆ. ಗಂಡು ಮತ್ತು ಹೆಣ್ಣಿನಲ್ಲಿರುವ ವಿಶಿಷ್ಟ ಶಕ್ತಿಯಾಗಿ ರೂಪುಗೊಳ್ಳುತ್ತದೆ. ಪರಸ್ಪರ ಸಂಬಂಧ ಅನಿವಾರ್ಯ, ಕುಂಟ ಯಾತ್ರೆಗೆ ನಡೆದು ಹೊಗಲಾರ, ಹಾಗೆ ಕುರುಡನಿಗೆ ಹಾದಿಯೆ ಕಾಣದು. ಕುಂಟನ ಶಕ್ತಿ ನಡಿಗೆಗೆ ಕುರುಡನ ಶಕ್ತಿ ದೃಷ್ಟಿ .
ಗಂಡು-ಹೆಣ್ಣು -ಬಾಳಸಂಗಾತಿಗಳು
[ಬದಲಾಯಿಸಿ]ಆಪ್ತತೆ, ಸಾಂಗತ್ಯ .ಉದಾ:-ಗಂಡು ಹೆಣ್ಣು ಜೀಂಕೆಗಳು ನೀರಿಗಾಗಿ ಹುಡುಕುವುದು .
ಅವಿಚ್ಚೇಧನ
[ಬದಲಾಯಿಸಿ]ದಾಂಪತ್ಯ ಜೀವನ ಸಂಗಾತಿಗಳ ಉಸಿರಿರುವವರೆಗೆ, ನಿರಂತರವಾದದ್ದು." ದೇವರು ಕೂಡಿಸಿದ್ದನ್ನು ಮನುಷ್ಯನು ವಿಚ್ಚೇದಿಸದಿರಲಿ". __ ಆದ ನಾನು ... ಆದ ನಿನ್ನನ್ನು ನನ್ನ ಪತಿ/ಪತ್ನಿಯನ್ನಾಗಿ ಸ್ವಿಕರಿಸುತ್ತೇನೆ. "ಸುಖ-ದು:ಖಗಳಲ್ಲಿ " ನಿನ್ನಲ್ಲೆ ಪ್ರಾಮಾಣಿಕನಾಗಿರುತ್ತೇನೆಂದು ವಾಗ್ಧಾನ ಮಾಡುತ್ತೇನೆ. "ಜೀವನದ ಪ್ರತಿದಿನವೂ" ನಿನ್ನನ್ನು ಪ್ರೀತಿಸಿ ಗೌರವಿಸುತ್ತೇನೆ, ಸುಖ-ದು:ಖ, ಬಡತನ ಮತ್ತು ಶ್ರೀಮಂತಿಕೆ,ಆರೊಗ್ಯ ಮತ್ತು ಅನಾರೋಗ್ಯದಲ್ಲೂ, ಜೀವನದ ಪ್ರತಿದಿನವು ಸಾಯುವವರೆಗೂ ಮರ್ಕ (೧೦:೧:೯)
ದಂಪತಿಗಳು-ಸಹಸೃಷ್ಟಿಕರ್ತರು
[ಬದಲಾಯಿಸಿ]- ಜವಾಬ್ದಾರಿಯುತ ಫೊಷಕರಾಗುವುದು- ಹೊಸ ಸೃಷ್ಟಿಗೆ ಕಾರಣಕರ್ತರು.
- ಲೈಂಗೀಕತೆ - (ಅದಿ:೧:೩೧)
- ಸಫಲತೆ -ಸಂತಾನ ಬೆಳಸುವ ಶಕ್ತಿಯುಳ್ಳವರು.
ಮದುವೆಯ ಉದ್ದೆಶ
[ಬದಲಾಯಿಸಿ]- ಸಂಗಾತಿಗಳಾಗಿ ಪರಸ್ಪರ ಸಂತಸ ,ನೆಮ್ಮದಿ,ಸಾಂತ್ವನ,ಶಕ್ತಿಯಾಗುವುದು.
- ಸಹಸವಷ್ತಿಕರ್ತರಾಗಿ ಸಂತಾನವನ್ನು ಬೆಳಸುವುದು.
ಮದುವೆಯ ಲಕ್ಶಣಗಳು
[ಬದಲಾಯಿಸಿ]ಕ್ರಿಸ್ತೀಯ ವಿವಾಹ ತನ್ನ ಮೂಲ ಭೂತ ಲಕ್ಶಣಗಳು ದೇವರು ಮತು ವಿಶ್ವಾಸಿಗಳ ಒಡಂಬಡಿಕೆಯ ಮೇಲೆ ಆಧಾರಿತವಾಗಿರುತ್ತದೆ
- ಐಕ್ಯತೆ : ಐಕ್ಯತೆಯೆಂದರೆ ಒಂದು ಗಂಡು ಮತ್ತ್ತು ಒಂದು ಹೆಣ್ಣನ ನಡುವಿನ ಅವಿನಾಸಂಬಂದ.ಏಕಪತಿ/ಎಕಪತ್ನಿ ಸಂಬಂದ.(ಅದಿ:೧ನೇ ಅದ್ಯಾಯ,ಮಾರ್ಕ ೧೦:೬-೮೦)
- ನಿಷ್ಟೆ : ನಿಷ್ಟೆಯೆಂದರೆ ತನ್ನ ಬಾಳ ಸಂಪೊರ್ಣ ನಿಷ್ತೆಯಿಂದಿರುವುದು.ಇದು ವ್ಯಕ್ತಿಯನ್ನು (ವಿವಾಹವಾದ ವ್ಯಕ್ತಿಯನ್ನು) ಪರ ಪುರುಷ ಅಧವಾ ಮಹಿಳೆಯೊಂದಿಗೆ ಆನೈತಿಕ ಸಂಬಂದವನ್ನು ಬೆಳೆಸುವುತ್ತದೆ. ಇದು ಕೆವಲ ಲೈಂಗಿಕ ಸಂಬಂಧವನ್ನು ಮಾತ್ರ ನಿಬಂಧಿಸುವುದರಲ್ಲಿ ಭಾವನತ್ಮಕ ಸಂಬಂಧವೂ ಸಹ ಹಾದರವೆ.
- ಅವಿಚ್ಛೇದನಿಯ : ದಂಪತಿಗಳು ಜೀವಂತ ಅಂದರೆ ಉಸಿರಿರುವವರೆಗೂ ವೈವಾಹಿಕ ಬಂಧನವನ್ನು ಛೇದಿಸುವಂತಿಲ್ಲ. ಅಂದರೆ ವಿಚ್ಚೇದನ ಕ್ರಿಸ್ತನ ವಾಕ್ಯ ಬಹಳ ಸ್ವಷ್ತವಾಗಿ ದೇವರು ಕೂಡಿಸಿದ್ದನ್ನು ಮನುಷ್ಯನು ವಿಚ್ಚೇದಿಸದಿರಲಿ
- ಸಂತಾನೊತ್ಪತ್ತಿಗೆ ಮುಕ್ತಮನೋಭಾವ : ಮದುವೆ ದೇವರ ಸಹ ಸೃಷ್ಟಿ ಕಾರ್ಯದಲ್ಲಿ ಭಾಗವಹಿಸುವ ವಿಶಿಷ್ಟ ಪ್ರಕ್ರಿಯೆ, ದೇವರ ಸೃಷ್ಟಿಯ ಮೂಲವಾದ ಪ್ರೀತಿ ಜೀವಪರವಾಗಿರುವುದರಿಂದ ದಂಪತಿಗಳು ಸಂತಾನೋತ್ಪ ತ್ತಿ ಕಾರ್ಯಕ್ಕೆ ತಡೆಯೊಡ್ಡಬಾರದು.
ಕ್ಯಾಥೋಲಿಕ್ ಸಂಪ್ರದಾಯದಲ್ಲಿ ಮದುವೆ ಒಂದು ಸಂಸ್ದೆ
[ಬದಲಾಯಿಸಿ]ವಿವಾಹಸಂಸ್ಕಾರವನ್ನು ನೀಡುವವರು ಗಂಡು ಮತು ಹೆಣ್ಣು. ಇವರು ಪರಸ್ಪರ ಸಂಸ್ಕಾರವನ್ನು ನೀಡುವವರಾಗಿದ್ದಾರೆತಯೆ ಹೊರತು ಗುರುಗಳಲ್ಲ. ಈ ರೀತಿಯಾಗಿ ಕ್ರಿಸ್ತನಿಂದ ಧರ್ಮಸಬೆಗೆ ಹರಿದು ಬರುವ ವರಪ್ರಸಾದಗಳು ದಂಪತಿಗಳ ಪರಸ್ಪರ ಪ್ರೀತಿ ಮತ್ತು ಸೆವೆಗೆ ಸಂಪೊರ್ಣವಾಗಿ ಲಬಿಸುವುದು.
ಕ್ಯಾಥೋಲಿಕ್ ವಿವಾಹಕ್ಕೆ ಸಂಬಂಧಿಸಿದ ಕಾನೂನುಗಳು
[ಬದಲಾಯಿಸಿ]- ವಿಘ್ನಗಳೇನೊ ಇರಬಾರದು.
- ಸಂಪೂರ್ಣಸಮ್ಮತಿ, ಒಪ್ಪಿಗೆ.
- ಧರ್ಮಸಭೆಯ ಕಾನೂನು ಪಾಲಿಸಿರಬೆಕು.
- ಒಂದು ವಿವಾಹ ಸಕ್ರಮ ಮತ್ತು ನ್ಯಾಯಸಮ್ಮತವಾಗಿರಬೆಕು.
ವಿವಾಹಕ್ಕೆ ಸಂಬಂಧಿಸಿದ ವಿಘ್ನಗಳು
[ಬದಲಾಯಿಸಿ]ಸಮ್ಮತವಾದ ವಯಸು
- ಹುಡುಗ-೧೬-ಕಾನೂನುಸಮ್ಮತ-೨೧
- ಹುಡುಗಿ-೧೪-ಕಾನೂನುಸಮ್ಮತ-೧೮
- ನಪುಂಸಕತೆ, ಬಂಜೆತನವಲ್ಲ
- ಈ ಹಿಂದೆ ಮದುವೆಯ ಬಂಧನದಲ್ಲಿದ್ಧರೆ:-ವಿವಾಹ ನ್ಯಾಯ ಸಮ್ಮತವಲ್ಲ.
- ಅಂತರ ಧರ್ಮೀಯ ವಿವಾಹ:-ಕಧೊಲಿಕ ಸಂಪ್ರದಾಯದಲಿ ದೀಕ್ಶೆ ಸ್ವೀಕರಿಸಿದ ವ್ಯಕ್ತಿ ಇತರ ಕ್ರೆಸ್ತ ಸಂಪ್ರದಾಯದ ವ್ಯಕ್ತಿಯೊಂದಿಗೆ ಆಗಲಿ,ಅಧವಾ ಅನ್ಯಧರ್ಮದ ವ್ಯಕ್ತಿಯೊಡನೆ ಅಗುವ ವಿವಾಹ. ಸಮ್ಮತ, ಆದರೆ ಧರ್ಮಸಭೆಯ ಕಾನೊನಿನಂತೆ ಸಮ್ಮತವಲ್ಲ.
- ಧರ್ಮಸಭೆಯಲ್ಲಿ ದೀಕ್ಷೆ ಸ್ವೀಕರಿಸಿದವರು:-ಜೀವನ ಪರ್ಯಂತ ಸನ್ಯಾಸ ದೀಕ್ಷೆ ಸ್ವೀಕರಿಸಿದವರು.
- ಬಲಾತ್ಕಾರದ, ಅಪಹರಣ ಮತ್ತು ಸೆರೆಯಲ್ಲಿಟ್ಟು :-ವಿವಾಹಕ್ಕೆ ಒತ್ತಾಯವನ್ನು ಹೇರುವುದು.
- ರಕ್ತ ಸಂಬಂಧ:-ನರ ರಕ್ತ ಸಂಬಂಧ-ಪರೋಕ್ಷ ಸಂಬಂಧ. ಅಕ್ಕನ ಮಗಳು, ಮಾವನ ಮಗಳು-ಇತ್ಯಾದಿ.
- ಸಂಬಂಧಗಳಲ್ಲಿ:-ಅತ್ತೆಯನ್ನು ಮದುವೆ ಆಗಂಗಿಲ್ಲ. ಹೆಂಡತಿಯ ತಂಗಿಯನ್ನು ಮದುವೆಯಾಗಬಹುದು.
- ದತ್ತು ಸ್ವೀಕಾರ:-
ಮೇಲ್ಕಂಡ ಎಲ್ಲಾ ವಿಘ್ನಗಳನ್ನು ಧರ್ಮಸಭೆಯು ಮನ್ನಿಸಬಹುದಾದರು, ನಪುಂಸಕತೆ, ಮೊದಲ ವಿವಾಹ ಬಂಧನ, ರಕ್ತ ಸಂಬಂಧದಲ್ಲಿ ನೇರ ಸಂಬಂಧ ಇತ್ಯಾದಿಗಳನ್ನು ಮನ್ನಿಸಲು ಸಾದ್ಯವಿಲ್ಲ.
ಧರ್ಮಸಭೆಯ ನಿಯಮದ -ಸಂಪ್ರದಾಯದ ರೂಪ
[ಬದಲಾಯಿಸಿ]ಒಂದು ವಿವಾಹ ನ್ಯಾಯ ಸಮ್ಮತವಾಗ ಬೇಕಾದರೆ, ಧರ್ಮಸಭೆಯ ನಿಯಮವನ್ನು ಪಾಲಿಸಬೇಕು. ಅದೇನೆಂದರೆ, ಗಂಡು ಹೆಣ್ಣ್ನು ಒಬ್ಬ ಗುರುಗಳ ಮುಂದೆ ಅಧವಾ ಗುರುಗಳ ಪ್ರತಿನಿಧಿಯ ಮುಂದೆ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ-(ಸಾಕ್ಷಿಗಳು ರಕ್ತ ಸಂಬಂಧಿಗಳಾಗಿರಬಾರದು)ಬಹಿರಂಗವಾಗಿ ಸಮ್ಮತಿಯನ್ನು ವ್ಯಕ್ತ ಪಡಿಸಬೆಕು
- ಯಾವುದೇ ಒಂದು ಮದುವೆ ಗಂಡು ಹೆಣ್ಣುಗಳ ಸಂಪೂರ್ಣ ಸಮ್ಮತಿಯಿಲ್ಲದೆ ಹೋದರೆ ಅಕ್ರಮ ಅನೂರ್ಜಿತವಾಗುತ್ತದೆ.
- ಒತ್ತಾಯದ ಮದುವೆ -ಯಾರಾದರು ಒಬ್ಬರು ತಲೆ ನೆಟ್ಟಗಿಲ್ಲದೆ ಹೋದರೆ, ಜ್ಞಾನವನ್ನು ಕಳೆದು ಕೊಂಡಿದ್ದರೆ.
- ಮದುವೆಯ ಕರ್ತವ್ಯಗಳನ್ನು ಸ್ವೀಕರಿಸದೆ ಹೋದರೆ? ಉದಾ:ಐಕ್ಯತೆ, ಅವಿಚ್ಚೇದನ,ನಿಷ್ಟೆ, ಸಂತಾನೊತ್ಪತ್ತಿ ಇತ್ಯಾದಿ.
- ಯಾರಾದರು ಒಬ್ಬರು ಮದುವೆಯ ಕರ್ತವ್ಯಗಳ ನಿಭಾಯಿಸಲು ಮಾನಸಿಕ ಸಾಮರ್ಥ್ಯವಿಲ್ಲದೆ ಹೋದರೆ.
ಛಾಯಾಚಿತ್ರಶಾಲೆ
[ಬದಲಾಯಿಸಿ]-
ಕೆಥಲಿಕ್ ವಿವಾಹ-ಭಾರತದಲ್ಲಿ
-
ಇಂಡಿಯನ್ ಕ್ರಿಸ್ಟಿಯನ್, ಮಥುರೈ,ತಮಿಳುನಾಡು
-
ಕೇರಳದಲ್ಲಿ
-
ಮಂಗಳೂರು ವಿವಾಹ ಉಡುಪುಗಳು