ವಿಷಯಕ್ಕೆ ಹೋಗು

ಕೇಂದ್ರೀಯ ಹತ್ತಿ ಪ್ರೌದ್ಯೋಗಿಕಿ ಅನುಸಂಧಾನ ಸಂಸ್ಥೆ, ಮುಂಬೈ (CIRCOT)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:SPINNING LAB.jpg
'ಮುಂಬಯಿ ನ, ಮಾಟುಂಗಾ ಉಪನಗರದಲ್ಲಿರುವ, ಟೆಕ್ನೊಲಾಜಿಕಲ್ ಲ್ಯಾಬೊರೇಟರಿ,'('ಸನ್. ೧೯೨೪ ರಲ್ಲಿ)

ಬ್ರಿಟನ್, ತನ್ನ ಕಾರ್ಖಾನೆಗಳಿಗೆ ಬೇಕಾದ ಉತ್ತಮವಾದ ಹತ್ತಿಯನ್ನು ಅಮೇರಿಕದಿಂದ ಆಮುದುಮಾಡಿಕೊಳ್ಳುತ್ತಿತ್ತು. ಆದರೆ ಅಲ್ಲಿ, 'ಸಿವಿಲ್ ಯುದ್ಧ'ದಿಂದಾಗಿ, ಹತ್ತಿಯ ಬೆಳೆಯಲ್ಲಿ ಕಮ್ಮಿಯಾಗಿದ್ದು ಒಂದಾದರೆ, ಮತ್ತೊಂದು, ಅಮೆರಿಕ ತನ್ನ ಹತ್ತಿ ಬೆಳೆಯನ್ನು ಮುಂದೆ ಮ್ಯಾಂಚೆಸ್ಟರ್ ಗೆ ಕಳಿಸಲು ಒಪ್ಪದೆ, ತನ್ನ ನೆಲದಲ್ಲೇ ಹತ್ತಿ ಕಾರ್ಖಾನೆಗಳನ್ನು ಸ್ಥಾಪಿಸಿ, ಹತ್ತಿಸಿದ್ಧವಸ್ತುಗಳನ್ನು ಅಮೆರಿಕದಲ್ಲೇ ಸಿದ್ದಪಡಿಸುವ ಕ್ರಮ, ಇಂಗ್ಲೆಂಡ್ ನ ಹತ್ತಿ ಉದ್ಯೋಗಕ್ಕೆ ಸವಾಲಾಯಿತು. ಅದಕ್ಕಾಗಿ, ಬ್ರಿಟಿಷ್ ಸರಕಾರ, 'ಮ್ಯಾಂಚೆಸ್ಟರ್' ನಲ್ಲಿನ ಅವರ ಗಿರಣಿಗಳಿಗೆ ಕಚ್ಚಾವಸ್ತುವಾದ ಹತ್ತಿಯನ್ನು ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಮಾಡಲು ಸಾಧ್ಯವಾಗದೆ, ತಮ್ಮ ಅಧೀನದಲ್ಲಿದ್ದ ಕೆಲವು ಕಾಲೋನಿಗಳಲ್ಲಿ ಹತ್ತಿಯನ್ನು ಬೆಳೆದು ಅದನ್ನು 'ಮ್ಯಾಂಚೆಸ್ಟರ್ ಗಿರಣಿ'ಗಳಿಗೆ ಒದಗಿಸುವ ನಿರ್ಧಾರ ಮಾಡಿದರು. ಭಾರತದಲ್ಲಿ ಹತ್ತಿ ಹೆಚ್ಚು ಬೆಳೆದರೂ ಅದನ್ನು ಯಂತ್ರದಲ್ಲಿ ಬಳಸಿ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ತಯಾರಿಸುವುದು ಅಸಂಭವವಾಗಿತ್ತು. ನಮ್ಮ ದೇಶದ ಕುಶಲ-ಕಾರೀಗರ್ ಗಳು 'ತಕಲಿ,' 'ಚರಖ', ಮುಂತಾದ ದೇಸಿ ಉಪಕರಣಗಳಿಂದಲೇ ಅತ್ಯಂತ ನವಿರಾದ ದಾರಗಳನ್ನು ನೂಲುತ್ತಿದ್ದರು. ಅದರಿಂದ ತಯಾರಾದ ಬಟ್ಟೆಗಳಿಗೆ ದೇಶವಿದೇಶಗಳಿಂದ ಬೇಡಿಕೆ ಬರುತ್ತಿತ್ತು. ವಿಶ್ವದಲ್ಲಿ ಹತ್ತಿಬಟ್ಟೆ, ಹಾಗೂ ಹತ್ತಿಗೆ ಸಂಬಂಧಪಟ್ಟ ವಿಧಿ-ವಿಧಾನಗಳಲ್ಲಿ ಮಂಚೂಣಿಯಲ್ಲಿದ್ದ ಭಾರತವನ್ನು ಉತ್ತಮ ಹತ್ತಿತಳಿಗಳನ್ನು ಬೆಳೆಸಲು, ತಯಾರುಮಾಡಲು ಪ್ರಯತ್ನಿಸಿ ಕೈಗೊಂಡ ಕಾರ್ಯವಿಧಿಗಳಲ್ಲಿ ಮುಂಬಯಿನಲ್ಲಿ ಸ್ಥಾಪಿಸಿದ ಇಂಡಿಯನ್ ಸೆಂಟ್ರೆಲ್ ಕಾಟನ್ ಕಮಿಟಿ (ICCC ) (Indian Central Cotton Committee, Bombay), ಇದುವರೆವಿಗೂ ಬಹು ಮುಖ್ಯವಾದ ಭೂಮಿಕೆಯನ್ನು ನಿಭಾಯಿಸುತ್ತಿದೆ. ಬ್ರಿಟಿಷರು ಮೊದಲು ಇದರ ರೂಪರೇಖೆಗಳನ್ನು ಭದ್ರವಾಗಿಯೂ ಸುನಿಶ್ಚಿತವಾಗಿಯೂ ಸ್ಥಾಪಿಸಿದ್ದು, ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೂ ಸಾಧಿಸಬೇಕಾದ ಗುರಿಯ ಸ್ಪಷ್ಟಕಲ್ಪನೆ ಇದೆ. ಅಮೇರಿಕ ಸರ್ಕಾರ, ಆ ಸಮಯದಲ್ಲಿ, ತಮ್ಮ 'ಪಿ.ಎಲ್-೪೮೦ ಯೋಜನೆ'ಯ ಪ್ರಕಾರ, ಅನುದಾನದ ಸಹಾಯವನ್ನು ಮಾಡಿ ಸಂಶೋಧನೆಗೆ ಸಹಕಾರನೀಡುತ್ತಿತ್ತು.

ಚಿತ್ರ:CIRCOT.JPG
'ಕೇಂದ್ರೀಯ ಹತ್ತಿ ಪ್ರೌದ್ಯೋಗಿಕಿ ಅನುಸಂಧಾನ ಸಂಸ್ಥೆ,ಮುಂಬಯಿ (CIRCOT)'

ಭಾರತದ ದೇಸಿಹತ್ತಿಯ ಗುಣ ಸಂವರ್ಧನೆ

[ಬದಲಾಯಿಸಿ]

ಈಗ, 'ಕೇಂದ್ರೀಯ ಹತ್ತಿ ಪ್ರೌದ್ಯೋಗಿಕಿ ಅನುಸಂಧಾನ ಸಂಸ್ಥೆ, ಮುಂಬಯಿ (CIRCOT) The Central Institue for Research on Cotton Technology, CIRCOT) , ಎಂದು ಕರೆಯಲಾಗುತ್ತಿರುವ, ಆಗಿನ 'ಮುಂಬಯಿ' ನಗರದ 'ಮಾಟುಂಗಾ ಉಪನಗರ'ದಲ್ಲಿ, ೧೯೨೪ ರಲ್ಲಿ ಸ್ಥಾಪಿಸಲ್ಪಟ್ಟ, ಟೆಕ್ನೊಲಾಜಿಕಲ್ ಲ್ಯಾಬೊರೇಟರಿಯಲ್ಲಿ (Technological Laboratory) ಭಾರತದ ಹತ್ತಿ ತಳಿಗಳ ಗುಣವತ್ತೆಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಬ್ರಿಟಿಷ್ ಸರಕಾರ, 'ಭಾರತದ ದೇಸಿಹತ್ತಿಯ ಗುಣವನ್ನು ಉತ್ತಮಪಡಿಸುವ ಯೋಜನೆ,'ಯನ್ನು ಕೈಗೊಂಡಿತು. ಸ್ಥಾಪನೆಯ ಸಮಯದಲ್ಲಿ 'ಸೆಂಟ್ರೆಲ್ ಕಾಟನ್ ಕಮಿಟಿ'ಯೆಂದು ಹೆಸರಿಸಲಾದ ಸಂಸ್ಥೆ, ತನ್ನದೇ ಆದ ಒಂದು 'ಲ್ಯಾಬೊರೇಟೊರಿ'ಯ ಅಗತ್ಯವನ್ನು ಮನಗಂಡು, ಸ್ಥಾಪಿಸಲಾಯಿತು. ಭಾರತದ ಎಲ್ಲ ರಾಜ್ಯಗಳಿಂದ ಹತ್ತಿ ತಳಿಗಳನ್ನು ತರಿಸಿ, ಅದರಿಂದ ದಾರವನ್ನು ತಯಾರಿಸಿ, ಅದರ ಗುಣಮಟ್ಟವನ್ನು ನಿರ್ಧರಿಸಲಾಗುತ್ತದೆ. (ICCC) ಭಾರತೀಯ ಹತ್ತಿಯ ಗುಣಸಂವರ್ಧೆನೆಗಾಗಿಯೇ ಪ್ರಪ್ರಥಮವಾಗಿ ಕೆಲಸಮಾಡಿದ ಮೂಲ-ಸಂಸ್ಥೆ ಇದು. ಇದರ ಲ್ಯಾಬೋರೇಟರಿ, ಬೊಂಬಯಿನಲ್ಲಿ, ಹತ್ತಿ ವಸ್ತ್ರೋದ್ಯಮದ ಕೇಂದ್ರದಲ್ಲಿ ಇದ್ದು, ಸುಸ್ಥಿರವಾಗಿ ಸ್ಥಾಪಿಸಲ್ಪಟ್ಟು ಸುಮಾರು ೪೩ ವರ್ಷಗಳ ಕಾರ್ಯಾವಧಿಯಲ್ಲಿ ಮಾಡಿದ ಕೆಲಸ ಅಮೋಘ. ಭಾರತದ ಹತ್ತಿಬೆಳೆಯುವ ರಾಜ್ಯಗಳ ಕೃಷಿ ಕೇಂದ್ರಗಳಲ್ಲಿ, ಮತ್ತು ಕೃಷಿ ಹೊಲಗಳಲ್ಲಿ ವೈಜ್ಞಾನಿಕ ಪದ್ಧತಿಗಳಿಂದ ಬೆಳೆಸಿದ ಸುಧಾರಿತ ಹತ್ತಿ ತಳಿಗಳನ್ನು ಮುಂಬಯಿನ,ಯಲ್ಲಿ ಹವಾನಿಯಂತ್ರಿತ ಪರಿಸರದಲ್ಲಿ ಅತ್ಯಂತ ನವೀನ ಯಂತ್ರಗಳಸಹಾಯದಿಂದ 'ಮೂಲ್ಯಾಂಕನ' ಮಾಡಿ ಅದರ "ಸೂತ್ರಂಕ,"ವನ್ನು ಕಂಡುಹಿಡಿದು, ಪ್ರತಿವರ್ಷವೂ ಇದೇ ಪದ್ಧತಿಯಲ್ಲಿ ವಿಶ್ಲೇಶಣೆಮಾಡಿ ಗುಣಮಟ್ಟವನ್ನು ನಿರ್ಧರಿಸಿ, ವರದಿಯನ್ನು ಪ್ರಕಟಿಸಲಾಗುತ್ತಿದೆ. ಇದರಿಂದ ಕೃಷಿವಿಜ್ಞಾನಿಗಳಿಗೆ ಸಹಾಯವಾಗುತ್ತಿದೆ. ಕಾಲಾನುಕ್ರಮದಲ್ಲಿ ಹತ್ತಿಯ 'ಮೂಲ್ಯಾಂಕನ'ದಲ್ಲಿ ಹಲವಾರು ಹೊಸಹೊಸ ಯಂತ್ರಗಳು, ಮತ್ತು 'ಕಂಪ್ಯೂಟರ್ ತಂತ್ರಜ್ಞಾನ'ದಿಂದ ಸಿದ್ಧಪಡಿಸಲ್ಪಟ್ಟ, 'ಹೈ ವಾಲ್ಯೂಮ್ ಉಪಕರಣ' (High Volume Testing Instrument), ಬಂದಮೇಲೆ, 'ಹತ್ತಿ ತಂತುಗಳ ಗುಣದ ಮೂಲ್ಯಾಂಕನ'ವನ್ನು ಅತ್ಯಂತ ಸಮರ್ಥವಾಗಿಯೂ ನಿಖರವಾಗಿಯೂ, ಹಾಗೂ ಅತಿ ಕಡಿಮೆ ಸಮಯದಲ್ಲಿ ಅಳೆಯಲು ಸಾಧ್ಯವಾಗಿದೆ. ಮತ್ತೊಂದು ಮುಖ್ಯವಾದ ಸೌಲತ್ತೆಂದರೆ, 'ಪರೀಕ್ಷಣ'ವನ್ನು ಪದೇ-ಪದೇ ನಡೆಸಿ, ಮನಸ್ಸಿಗೆ ಖಾತ್ರಿಮಾಡಿಕೊಳ್ಳಲು ಪ್ರಾವಧಾನವಿದೆ.

'ಈಗಿನ ಸಿರ್ಕಾಟ್ ಹತ್ತಿ ಸಂಶೋಧನಾಲಯ,(ಹಸಿರುಬಣ್ಣ ಬಳಿಯಲಾಗಿದೆ)'

ICAR ನ ಮೇಲ್ಜವಾಬ್ದಾರಿಯಲ್ಲಿ ಸಿರ್ಕಾಟ್

[ಬದಲಾಯಿಸಿ]

'ICAR ನ ಕಾರ್ಯಾಡಳಿತ'ದ ಅವಧಿಯಲ್ಲಿ ಹಲವಾರು ಮಹತ್ವದ ಸುಧಾರಣೆಗಳು ಹತ್ತಿ ಸಂಶೋಧನೆಯ ವಲಯದಲ್ಲಿ ಬೆಳಕು ಕಂಡವು. ಹತ್ತಿ ಸಂಶೋಧನೆಗೆ ನೆರವಾಗುವ ಎಲ್ಲಾ ತಂತ್ರಜ್ಞಾನಗಳ ಸದುಪಯೋಗವನ್ನು ಬಳಸುತ್ತಿರುವುದರಿಂದ ವಿಶ್ವದ ಯಾವುದೇ ಹೊಸ ಆವಿಷ್ಕಾರ ಈ ವಲಯಕ್ಕೆ ತಕ್ಷಣ ಲಭ್ಯವಾಗುವಂತೆ ಕಾರ್ಯಕ್ರಮಗಳನ್ನು ಹೆಣೆದಿರುವುದೇ ಒಂದು ಮಹತ್ವದ ಸಂಗತಿಯಾಗಿದೆ. ಹೀಗೆ 'Indian Cotton Committee' ಯವರು ನಡೆಸಿದ ಹತ್ತಿಸಂಶೋಧನಾ ಕಾರ್ಯಾವಧಿಯಲ್ಲಿ, ಸುಮಾರು ೬೦ ಕ್ಕೂ ಹೆಚ್ಚು ಸುಧಾರಿತ ತಳಿಗಳನ್ನು ಗುರುತಿಸಿಸಲಾಗಿತ್ತು. ೧೯೬೬ ರಲ್ಲಿ " Indian Cotton Committee," ಕಾರ್ಯಾವಧಿ ಮುಗಿದು, ಇದರ ಕಾರ್ಯಾಡಳಿತವನ್ನು 'ಹೊಸ ದೆಹಲಿಯ', 'ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ, ನವದೆಹಲಿ.' (ICAR) ವಹಿಸಿಕೊಂಡಿತು. ಈ ಬದಲಾವಣೆಯಿಂದ ಹತ್ತಿ ಸಂಶೋಧನಾ ಕೇಂದ್ರಗಳಿಗೆ ಹೆಚ್ಚಿನ ಆರ್ಥಿಕ ಸಹಾಯ, ಯಂತ್ರಗಳ ಹಂಚಿಕೆ,(Testing Instruments and Processing Machines) ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹೆಚ್ಚಿನ ಒತ್ತುಕೊಟ್ಟಿದ್ದರಿಂದ ಅನುಸಂಧಾನ ಕಾರ್ಯಗಳಲ್ಲಿ ವಿಳಂಬವಾಗದೆ ಅನುಕೂಲವಾಯಿತು. ವಿಜ್ಞಾನದ ಹಲವು ಶಾಖೆಗಳಲ್ಲಿ ಕೆಲಸಮಾಡುವ ತಜ್ಞರುಗಳು ಈ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ. ಹರಿಕ್ರಾಂತಿಯ ಸಂದರ್ಭದಲ್ಲಿ, ನಮ್ಮ ರೈತರು, ತಮಗೆ ದೊರಕಿದ 'ಉತ್ತಮ ಬೀಜಗಳು', 'ಊರ್ವರಕ್', ಮತ್ತು 'ಬೆಳೆನಿಯಂತ್ರಣ-ಖಾದ್ಯ'ಗಳಿಂದಾಗಿ, ಹತ್ತಿ ಬೆಳೆಯೂ ಸೇರಿದಂತೆ ದೇಶದ ಬೆಳೆಗಳ ಇಳುವರಿಯಲ್ಲಿ ಗಮನಾರ್ಹ ಹೆಚ್ಚುವರಿಯನ್ನು ಪಡೆಯಲಾಯಿತು. * ಮೂಲ :