ವಿಷಯಕ್ಕೆ ಹೋಗು

ಕೃಂಬಿಗಲ್ ರಸ್ತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



'ಜಿ.ಎಚ್.ಕೃಂಬಿಗಲ್'' ರ ಗೌರವಾರ್ಥವಾಗಿ ಇಟ್ಟ ಹೆಸರಿನ ರಸ್ತೆ.[] ಇದು, 'ಬೆಂಗಳೂರು ಲಾಲ್ ಬಾಗಿನ ದ್ವಾರ'ದ ಬದಿಯಲ್ಲೇ ಇದೆ. ಈ ರಸ್ತೆ, 'ಲಾಲ್ ಬಾಗ್ ಪಶ್ಚಿಮ ದ್ವಾರ'ದಿಂದ ಆರಂಭವಾಗಿ, 'ಲಾಲ್ ಬಾಗ್' ಪ್ರಮುಖ ದ್ವಾರದಿಂದ ಮುಂದೆ ಸಾಗಿ, ಹೆಸರುವಾಸಿಯಾದ 'ಮಾವಳ್ಳಿ ಟಿಫಿನ್ ರೂಮ್ಸ್' ಮುಂಭಾಗದ ಮೂಲಕ ಮುಂದುವರೆಯುತ್ತದೆ.'ಕೃಂಬಿಗಲ್', ಹಿಂದೆ, ಲಾಲ್ ಬಾಗ್ ನ ಅತ್ಯಂತ ಪ್ರಭಾವಿ ಕ್ಯೂರೇಟರ್ ಆಗಿದ್ದವರು. ಅನೇಕ ಹೊಸ ಹೊಸ ಸಸ್ಯಗಳು, ಹಣ್ಣು-ಹಂಪಲುಗಳು ಮತ್ತು ತರಕಾರಿಗಳನ್ನು ವಿದೇಶದಿಂದ ತಂದು ಲಾಲ್ ಬಾಗಿನಲ್ಲಿ ಬೆಳೆದು, ರೈತರಿಗೆ ಪರಿಚಯಿಸಿದರು, ಮತ್ತು ಅವನ್ನು ಬೇಸಾಯಮಾಡಲು ಪ್ರೋತ್ಸಾಹಿಸಿದರು. ಸೀಮೆಬದನೇಕಾಯಿ ತರಕಾರಿಯನ್ನು 'ಸಿಲೋನ್' ನಿಂದ ತಂದು ಬೆಂಗಳೂರಿನ ರೈತ ಬಾಂಧವರಿಗೆ ಬೀಜಗಳನ್ನು ಉಚಿತವಾಗಿ ವಿತರಣೆಮಾಡಿದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. https://www.deccanherald.com/entertainment/documentary-tracing-krumbiegel-s-botanical-feat-to-release-on-november-29-1054269.html?documentary-tracing-krumbiegel-s-botanical-feat-to-release-on-november-29]