ಕಾಶ್ಮೀರದ ಬಿಕ್ಕಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಶ್ಮೀರದ ಬಿಕ್ಕಟ್ಟು ಭಾರತದ ರಾಷ್ಟೀಯ ವಿವಾದಗಳಲ್ಲಿ ಒ೦ದಾಗಿದೆ.

ಇಂಡೋ ಪಾಕಿಸ್ತಾನದ ಘರ್ಷಣೆ[ಬದಲಾಯಿಸಿ]

ಕಾಶ್ಮೀರಿ ದಂಗೆಕೋರರು ಮತ್ತು ಪಾಕಿಸ್ತಾನ ಸರ್ಕಾರವು ಕಾಶ್ಮೀರಿ ಪ್ರಾಂತ್ಯದ ಮೇಲೆ ನಿಯಂತ್ರಣವನ್ನು ಹೊಂದಲು ಹವಣಿಸುತ್ತಿದೆ.ಅಂತರಾಜ್ಯ ಸಮಸ್ಯೆಗಳ೦ತೆ, ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರದ ಬಿಕ್ಕಟ್ಟು ೧೯೪೭ ರಿಂದ ಉದ್ಬವಿಸಿದ ಸಮಸ್ಯೆಯಾಗಿದೆ. ಕಾಶ್ಮೀರದಲ್ಲಿನ ಕೆಲವು ಕೋಮುವಾದಿಗಳು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವಂತೆಯು,ಕೆಲವು ಕಾಶ್ಮೀರಿಗಳೂ ತಾವೇ ಸ್ವತಂತ್ರರಾಗಲು ಹವಣಿಸುತಿದ್ದರು . ಆದ ಕಾರಣ ಭಾರತ ಸರ್ಕಾರ ೨೦೦೨ ರಲ್ಲಿ ಕಾಶ್ಮೀರದ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿಯೇ ಹಲವು ಕಾನೂನು ನಿಯಮಗಳನ್ನು ಜಾರಿಗೆ ತಂದಿದೆ.

ಕಾಶ್ಮೀರಕ್ಕಾಗಿಯೇ ಭಾರತ ಮತ್ತು ಪಾಕಿಸ್ತಾನ ಹಲವಾರು ಯುದ್ದಗಳನ್ನು ಕೈಗೊ೦ಡಿದ್ದು, ಪ್ರಮುಖವಾದುದೆಂದರೆ ಇಂಡೋ -ಪಾಕಿಸ್ತಾನದ ಸಂಗ್ರಾಮ ೧೯೪೭,೧೯೬೫ ಮತ್ತು ೧೯೯೯,೧೯೮೪ ರಿಂದ ಈ ಎರಡು ದೇಶಗಳು ಈ ಬಿಕ್ಕಟ್ಟಿಗೆ ಸ೦ಬ೦ದಿಸಿದ೦ತೆ,ಸಿಯಾಚಿನ್ ಪ್ರಾ೦ತ್ಯಕ್ಕೂ ಸ೦ಭದಿಸಿದ೦ತೆ ಹಲವು ಕದನಗಳನ್ನು ನಡೆಸಿದೆ.ಭಾರತವು ಸುಮಾರು ಶೇಕಡಾ ೪೩ ರಷ್ಟು ಕಾಶ್ಮೀರಿ ಪ್ರಾ೦ತ್ಯಗಳು ಎ೦ದರೆ, ಜಮ್ಮು ಮತ್ತು ಕಾಶ್ಮೀರಿ ಕಣಿವೆ,ಲಡಕ್ ಮತ್ತು ಸಿಯಾಚಿನ್ ಭಾರತದ ನಿಯ೦ತ್ರಣಕ್ಕೆ ಒಳಪಟ್ಟ ಪ್ರದೇಶಗಳಾಗಿವೆ.೧೯೭೦ ರಿಂದ ಎರಡು ದೇಶಗಳು ಕಾಶ್ಮೀರದ ಮೇಲೆ ಸ್ವಾಯತ್ತತೆಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ.ಭಾರತ ಸರ್ಕಾರವು ಇದಕ್ಕಾಗಿಯೇ ಹಲವು ಸಧಾರಣ ಕ್ರಮಗಳನ್ನು ಜಾರಿಗೆ ತ೦ದಿದೆ.ಪಾಕಿಸ್ತಾನ ವಶದಲ್ಲಿನ ಶೇಕಡ ೩೭ ಭಾಗದಲ್ಲಿನ ಪ್ರಾಂತ್ಯವನ್ನು ಪಾಕಿಸ್ತಾನವು ಅಜದ್ ಕಾಶ್ಮೀರ ಎಂದು ಹೆಸರು ನೀಡಿದೆ.ಭಾರತ ಸರ್ಕಾರ ಮತ್ತು ಕಾಶ್ಮೀರ ಭದ್ರತಾ ಸಿಬ್ಬ೦ದಿಗಳು ಅಲ್ಲ್ಲಿನ ನಿವಾಸಿಗಳ ಮೇಲೆ ಸ್ವಾಯತ್ತತೆಯ ಅಧಿಕಾರವನ್ನು ಹೇರಲು ಮು೦ದಾಗುತ್ತಿದೆ.೧೯೭೦ರ ವರೆಗೂ ಪ್ರಜಾಪ್ರಭುತ್ವದ ಬೆಳವಣಿಗೆಯ ಸ್ವಲ್ಪಪ್ರಮಾಣದಲ್ಲಿದ್ದು ೧೯೮೮ರ ನಂತರ ಹಲವಾರು ಸುಧಾರಣ ಕಾರ್ಯಕ್ರಮಗಳನ್ನು ಜಾರಿಗೆ ತ೦ದಿದೆ.

ಈ ಸಮಸ್ಯೆಯಿ೦ದಾಗಿ ಹಲವಾರು ಸಾವು-ನೋವುಗಳು ಸ೦ಭವಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅದು ಮತ್ತಷ್ಟು ಅಧಿಕವಾಗಿದೆ.ಇದರಿಂದ ಅಲ್ಲಿನ ಸಿನಿಮಾಗಳು ಭಾರತ ಸರ್ಕಾರದ ವಿರುದ್ದ ದ್ವನಿ ಎತ್ತುವ೦ತಾಗಿದೆ.೨೦೦೮ರಲ್ಲಿ ನಿರಾಶ್ರಿತರ ರಕ್ಷಣೆಗಾಗಿಯೇ ಅ೦ತರಾಷ್ಟೀಯ ನಿರಾಶ್ರಿತರ ಒಕ್ಕುಟದ ಆಶಯದ೦ತೆ ಕಾಶ್ಮೀರದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಷ್ಟೀಯ ಸ೦ಘ ಸರ್ಕಾರವನ್ನು ರಚಿಸುವ೦ತೆ ಚುನಾವಣೆಯನ್ನು ನಡೆಸಲಾಗಿತ್ತು.ಅಮೇರಿಕಾದ ಅಭಿಪ್ರಾಯದ೦ತೆ ಕಾಶ್ಮೀರದ ನಿವಾಸಿಗಳು ಭಾರತ ಪ್ರಜಾಪ್ರಭುತ್ವದ ನಿಯಮಗಳಿಗೆ ಹೆಚ್ಚು ಉತ್ಸುಕರಾಗಿದ್ದು ,ಭಾರತದ ಅಧೀನಕ್ಕೆ ಬರಲು ಅಲ್ಲಿನ ನಿವಾಸಿಗಳು ದೃಡೀಕರಿಸಿದ್ದಾರೆ ಎಂದು ಹಲವು ಚಿ೦ತಕರುಗಳ ಅಭಿಪ್ರಾಯವಾಗಿದೆ ಎಂದು ತಿಳಿಸಿದೆ.


ಕಾಶ್ಮೀರದ ಇತಿಹಾಸ[ಬದಲಾಯಿಸಿ]

ಜಾನಪದ ಕತೆಗಳ ಪ್ರಕಾರ ಕಾಶ್ಮೀರ ಪದದ ಅರ್ಥ ತೇವಾ೦ಶದಿ೦ದ ಕೂಡಿದ ಪ್ರದೇಶ(ಸ೦ಸ್ಕೃತದಲ್ಲಿ 'ಕ' ಎಂದರೆ ನೀರು ಎಂದರ್ಥ ಮತ್ತು 'ಶ್ಮೀರ' ಎಂದರೆ ತೇವ ಎಂದರ್ಥ, ಕಲ್ಹಣನ ರಾಜತರಂಗಿಣಿ ಕಾಶ್ಮೀರವು ೧೨ನೆಯ ಶತಮಾನದಲ್ಲಿದ್ದ ಉಲ್ಲೇಖವನ್ನು ನೀಡುತ್ತದೆ.ಹಿಂದೂ ದಂತ ಕಥೆಗಳ ಪ್ರಕಾರ 'ಸಪ್ತಋಷಿ' ಎಂಬ ಸಾದು ಕಶ್ಯಪನ ಮಗ ಅವನು ವಾಸಿಸುತ್ತಿದ್ದ ಸ್ತಳದಲ್ಲಿ ನೀರಿನ ಅಭಾವವಾಗಿ ಆತ ಬ್ರಹ್ಮನನ್ನು ನೀರಿನ ಅಭಾವ ತೀರಲು ಅಲ್ಲಿಯೆ ನೆಲೆಸುವುದಾಗಿ ಬ್ರಹ್ಮನಲ್ಲಿ ಕೇಳಿಕೊಂಡ ಎಂಬ ಪ್ರತೀತಿಯಿದೆ.ಕಶ್ಯಪ ಎಂಬ ಹೆಸರು ಇತಿಹಾಸ ಮತ್ತು ಪದ್ದತಿಗಳನ್ನು ಏಕೆಂದರೆ ಕಶ್ಯಪನು ವಾಸಿಸುತ್ತಿದ್ದ ಗುಹೆಗಳ ಕಣಿವೆಗಳನ್ನು'ಕಶ್ಯಪಪುರ' ಎಂದು ಕರೆಯಲಾಗುತ್ತಿತ್ತು.ಹೇರೋಡಟಸ್ ನ(೩.೧೦೨,೪.೪೪),ಕೃತಿಯಲ್ಲಿ ಉಲ್ಲೇಖ ನೀಡುತ್ತಾನೆ. ಬೌದ್ದ ಸನ್ಯಾಸಿಗಳ ಪ್ರಕಾರ ೬ನೇ ಶತಮಾನದಲ್ಲಿ ಕಾಶ್-ಮಿ-ಲೊ ಎಂಬ ಐತಿಹಾಸಿಕ ಸ್ಥಳ ಇತ್ತೆಂದು ಇಸಿಯಾನ್ ಸ್ಯಾಂಗ್ ತಿಳಿಸುತ್ತದೆ .ಇನ್ನು ಕೆಲವು ಪುರಾವೆಗಳು ೧೮ನೇ ಶತಮಾನದಲ್ಲಿ ಕಾಶ್ಮೀರವನ್ನು ಆಳುತ್ತಿದ್ದ 'ಪಾಶ್ತುನ್-ದುರಣಿ' ಎಂಬ ರಾಜ ೧೯೧೮ ರಲ್ಲಿ ಸಿಖ್ನ ದೊರೆ ರಣಜಿಥ್ ಸಿಂಗ್ ನಿಂದ ಪಡೆದ ಎಂಬ. ಸಾಕ್ಶಿಗಳಿವೆ. ೧೯೪೫-೪೬ ರಲ್ಲಿ ಕಾಶ್ಮೀರವು ಲಾಹೋರದ ಒಪ್ಪಂದಂತೆ ಈಸ್ಟ್ ಇಂಡಿಯಾ ಕಂಪನಿಯ ಆಡಳೀತಕ್ಕೆ ಒಳಪಟ್ಟಿತು.

ಭಾರತವು ಜಮ್ಮು ಕಾಶ್ಮೀರದಲ್ಲಿ ಸಿಂಹಾದ್ರಿರೂಡನಾದ ಹರಿಸಿಂಗನಿಂದ ೨೫ ಅಕ್ಟೋಬರ್ ೧೯೪೭ ರಲ್ಲಿ ೧೯೩೫ ಭಾರತ ಸರ್ಕಾರ ಕಾಯ್ದೆ ೧೯೪೭ ಭಾರತೀಯ ಸ್ವತಂತ್ರ ಕಾಯ್ದೆಯಡಿ ಸರ್ಕಾರದ ರಚನೆಗೆ ಕಾನೂನಿನ ಸಮ್ಮತಿ ನೀಡಿತು. United nations security council resolution 1172


ವಿಭಜನೆ ಮತ್ತು ಗೊಂದಲ[ಬದಲಾಯಿಸಿ]

೧೯೪೭ರಲ್ಲಿ ಹೊಸ ರಾಜ್ಯದ ಉಗಮದೊಂದಿಗೆ ಬ್ರಿಟೀಷ್ ರೂಲ್ ಕಾಯಿದೆ ಕೊನೆಗೊ೦ಡಿತು.ಪಾಕಿಸ್ತನದ ಭೂಸ್ವಾಯತ್ತತೆ ಮತ್ತು ಬ್ರಿಟಿಷ್ ಈಸ್ಟ ಇಂಡಿಯಾ ಒಕ್ಕೂಟಗಳ ಸಂದರ್ಭದಲ್ಲಿ ೫೬೨ ಭಾರತದಲ್ಲಿನ ರಾಜರ ಸ್ವಾಮ್ಯದಲ್ಲಿನ ಪ್ರಾಂತ್ಯಗಳು ಕೊನೆಗೊಂಡವು.೧೯೪೭ ರ ಭಾರತ ಸ್ವತ೦ತ್ರ ಕಾಯ್ದೆಯ ಪ್ರಕಾರ ಈ ೫೬೨ ಪ್ಪ್ರಾಂತ್ಯ ಗಳ್ನು ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡಿತು. ಹಲವು ಕರಾರು ಮತ್ತು ಒಪ್ಪಂದಗಳು ಪ್ರಾಂತ್ಯಗಳ ಘನತೆ ಮತ್ತು ಭಾರತದಲ್ಲಿನ ರಾಜ್ಯಗಳೂ ಭಾರತ ಮತ್ತು ಪಾಕಿಸ್ತಾನದ ನಡುವೆ ಹಂಚಲ್ಪಟ್ಟಿದ್ದವು. ಜಮ್ಮು ಮತ್ತು ಕಾಶ್ಮೀರ ಅತಿದೊಡ್ಡ ಪ್ರಾಂತ್ಯವಾಗಿದ್ದು ಮುಸ್ಲಿ೦ರ ಜನಸ೦ಖ್ಯೆ ಅಧಿಕವಾಗಿತ್ತು. ಈ ಸ೦ದರ್ಭದಲ್ಲಿ ಹಿಂದೂ ರಾಜ ಹರಿಸಿ೦ಗ್ ಇದರ ಆಳ್ವಿಕೆಯನ್ನು ವಹಿಸಿಕೊಂಡ.

ಈ ಸಂಗತಿ ಪಾಕಿಸ್ತಾನದಲ್ಲಿ ಕಾಶ್ಮೀರಿ ಬುಡಕಟ್ಟುಗಳು ಮುಸ್ಲಿ೦ಮರು ದೋಗ್ರ ಕಾಯಿದೆಯಡಿ ಸ್ವ್ತ೦ತ್ರಗೊಳಿಸಬೇಕೆ೦ದು ಹಲವು ಕ್ರಾಂತಿಗಳನ್ನು ಕೈಯಗೊಂಡ.


೧೯೪೭ ರ ಇ೦ಡೊ-ಪಾಕ್ ಕದನ[ಬದಲಾಯಿಸಿ]

ಹಲವು ಗೊದಲಗಳ ನಡುವೆ ಮಹರಾಜ ಹರಿಸೊ೦ಗನು ಕಾಶ್ಮೀರವನ್ನು ಭಾರತದ ಆಳ್ವಿಕೆಗೆ ಒಳಪಡಿಸಿಕೊ೦ಡ ನಂತರ ಉಗ್ರ ಮುಸ್ಲಿ೦ರು ಪಾಕಿಸ್ತಾನಿ ಬುಡಕಟ್ಟುಗಳು ಬಾರಮುಲ್ಲ ಎನ್ನುವ೦ತಹ ಪ್ರದೇಶದಲ್ಲಿ ತ್ವರಿತ ಕಾರ್ಯಾಚರಣೆಗಳನ್ನು ನಡೆಸಿತು.ರಾಜ ಹರಿ ಸಿ೦ಗ್ ನ ಆಳ್ವಿಕೆಯಲ್ಲಿದ್ದ ಕಾಶ್ಮೀರವು ಇ೦ಡೋ ಪಾಕಿಸ್ತಾನ ಒಪ್ಪ೦ದಳಿಗೆ ಸಾಕ್ಶಿಯಾಗಿದ್ದರು.ಪಾಕಿಸ್ತಾನದ ಬುಡಕಟ್ಟು ಕ್ರಾ೦ತಿಕಾರಿಗಳು ಜಮ್ಮು ಕಾಶ್ಮೀರದ ಮೇಲೆ ಆಕ್ರಮಣಗಳನ್ನು ನಡೆಸ್ತ್ತಿತ್ತು.ಈ ಆಕ್ರಮಣಗಳನ್ನು ತಪ್ಪಿಸಲು ಮಹಾರಾಜನು ಸೇನಾಡಳಿತದ ಸಹಾಯವನ್ನು ಬಯಸಿದ. ಈ ಸ೦ದರ್ಬದಲ್ಲಿ ಪಾಕಿಸ್ತಾನಿ ಬುಡಕಟ್ಟು ಜನಾ೦ಗಗಳು ಶ್ರೀನಗರವನ್ನು ಆವರಿಸಿತ್ತು.ಆದ್ದರಿಂದ ಭಾರತ ಸರ್ಕಾರವು ಒಪ್ಪ೦ದದ೦ತೆ ಸೈನ್ಯವನ್ನು ಕಳುಹಿಸಿತು.ಮತ್ತು ಜಮ್ಮು ಕಾಶ್ಮೀರವು ಭಾರತದ ಆಳಿಕೆಗೆ ಒಳಪಡುವ೦ತೆ ಸಹಿ ಹಾಕಿದ .ಅಲ್ಲದೆ ವೊಕ್ಕಟದ ಹಲವು ಸ್ವಯ೦ಸೇವಕರು ಭಾರತದ ಸೈನ್ಯದಲ್ಲಿ ಪಾಕಿಸ್ತನದ ಆಕ್ರಮಣವನ್ನು ನಿಯ೦ತ್ರಿಸಲು ಪ್ರಾಣವನ್ನು ತೆತ್ತರು.


ಯುದ್ದದ ಪರಿಣಾಮಗಳು[ಬದಲಾಯಿಸಿ]

೧೯೪೮ರಲ್ಲಿ ಮೊದಲನೆ ಕಾಶ್ಮೀರ ಕದನ ಕೊನೆಗೊ೦ಡಿತು.ಭಾರತ ಈ ಕಾಶ್ಮೀರಿ ಸಮಸ್ಯೆಯನ್ನು ರಾಷ್ಟ್ರಗಳ ಒಕ್ಕೂಟ ಬದ್ರತ ಸಮಿತಿಗೆ ತಿಳಿಸಿತು. ಆದರೆ ಶೇಕ್ ಅಬ್ದುಲ್ಲಾ ಭಾರತದ ನಡೆಯನ್ನು ವಿರೋದಿಸಿದ. ಏಕೆ೦ದರೆ ಭಾರತೀಯ ಸೈನ್ಯವು ಕಾಶ್ಮೀರವನ್ನು ಆವರಿಸಿತ್ತು.ಯು ಎನ್ ಸಮುದಾಯವು ಈ ಸಮಸ್ಯ್ರಯನ್ನು ತನ್ನ ನಿಯ೦ತ್ರಣಕ್ಕೆ ತೆಗೆದುಕೊ೦ಡು ಯುನೈಟೆಡ್ ನೇಷನ್ಸ್ ಅಬ್ಸರ್ವರ್ ಗ್ರೂಪ್ ಇನ್ ಇ೦ಡಿಯ ಅ೦ಡ್ ಪಾಕಿಸ್ತಾನ್ಎ೦ಬರೆಸುಲೂಶನ್ ೪೭ ರ ಕಾನೂನಿನ೦ತೆ ೨೧ ಏಪ್ರಿಲ್ ೧೯೪೮ ರಲ್ಲಿ ಜಾರಿಗೊಳಿಸಿತು.ಈ ರೆಸುಲೂಶನ್ ನ೦ತೆ ಪಾಕಿಸ್ತಾನವು ತನ್ನ ಪ್ರತಿಭಟನಾಕಾರರನ್ನು ಕಾಶ್ಮೀರದಿ೦ದ ಹಿ೦ಪಡೆಯ ಬೇಕಾಯಿತು. ನಂತರ ೧೯೪೮ ನವೆ೦ಬರ್ ನಲ್ಲಿ ಭಾರತ ಮತ್ತು ಪಾಕಿಸ್ತಾನವು ಜನರ ಅಭಿಮತವನ್ನು ಪ್ಡೆಯಲು ಮು೦ದಾಯಿತು ಆದರೆ ಪಾಕಿಸ್ತಾನವು ತನ್ನ ಆಕ್ರಮಣ ಧೋರಣೆಯನ್ನು ಮು೦ದುವರೆಸಿತು.ಇದನ್ನು ಭಾರತ ಸರ್ಕಾರವು ವಿರೋದಿಸಿ ತನ್ನ ಪ್ರತಿಭಟನಾಕಾರಿ ರೀತಿಯನ್ನು ಹಿ೦ಪಡೆಯುವ೦ತೆ ಪಾಕಿಸ್ತಾನಕ್ಕೆ ಆದೇಶಿಸಿತು. ಪಾಕಿಸ್ತಾನವು ಕಾಶ್ಮೀರಿಗಳು ಭಾರತೀಯ ಸೈನ್ಯದ ಮುಂದೆ ಪ್ರಾಮಾಣಿಕ ಮತಾಭಿಪ್ರಾಯವನ್ನು ಪಡೆಯಲಾಗುವುದಿಲ್ಲ ಎಂದು ಭಾರತ ಸರ್ಕಾರವು ಆರೋಪಣೆಯನ್ನು ನೀಡಿ ತಳ್ಳಿಹಾಕಿತು. ಈ ಗೊ೦ದಲಗಳ ನಡುವೆ ರೆಸೂಲ್ಯೂಶನ್ ೪೭ ರ ಶಾಸನದ೦ತೆ ಹೊಸದಾದ ನಾಲ್ಕು ಕಾನೂನುಗಳನ್ನು ಜಾರಿಗೊಳಿಸಿತು ಅದರ೦ತೆ ಯು ಎನ್ ಸೆಕ್ಯುರಿಟಿ ಕೌನ್ಸಿಲ್ ಜಾರಿಗೆ ತ೦ದಿತು, ಆದರೆ ಭಾರತ ಸರ್ಕಾರ ಇದನ್ನ್ನು ವಿರೋದಿಸಿತು.


೧೯೬೫ ಮತ್ತು ೧೯೭೧ರ ಕದನಗಳು[ಬದಲಾಯಿಸಿ]

ಈ ಕದನಗಳಲ್ಲಿ ಭಾರತ ಮತ್ತು ಪಾಕಿಸ್ತಾನದ್ ನಡುವೆ ದೊಡ್ಡದಾದ ಬಿರುಕನ್ನು ಕಾಣಬಹುದು. ೧೯೭೧ ರ ಇ೦ಡೋ ಪಾಕಿಸ್ತಾನದ ಕದನದಲ್ಲಿ ಪಾಕಿಸ್ತಾನವು ಸೋಲು೦ಡು ಪಾಕಿಸ್ತಾನ ಸೈನ್ಯವು ಪಶ್ಚಿಮ ಪಾಕಿಸ್ತಾನದಲ್ಲಿ ಶರಣಗತವಾಯಿತು. ನಂತರ ೧೯೭೨ ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಮ್ಲಾ ಒಪ್ಪ೦ದವಾಯಿತು.ಈ ಒಪ್ಪ೦ದದ೦ತೆ ಎರಡು ರಾಸ್ತ್ರಗಳು ಶಾ೦ತಿಯನ್ನು ಕದಡದ೦ತೆ ಆದೇಶಿಸಲಾಯಿತು..


ಆಲ್ ಖೈದಾದ ಕಾರ್ಯಾಚರಣೆ[ಬದಲಾಯಿಸಿ]

ಒಸಾಮ ಬಿನ್ ಲಾಡೆನ್ ೨೦೦೨ರಲ್ಲಿ ಅಮೇರಿಕಾದ ಜನರಿಗೆ ಬಹಿರ೦ಗ ಪತ್ರವನ್ನು ಬರೆದಿದ್ದು,ಅಮೇರಿಕಾ ಕಾಶ್ಮೀರದ ಸಮಸ್ಯೆಯಲ್ಲಿ ಭಾರತಕ್ಕೆ ನೆರವನ್ನು ನೀಡುತ್ತಿರುವುದರಿಂದ ಅಮೇರಿಚಾದ ಮೇಲೆ ದಾಳಿ ನಡೆಸುವುದಾಗಿ ಪತ್ರದಲ್ಲಿ ತಿಳಿಸಿದ್ದನು. ಅಲ್ಲದೆ ೨೦೦೨ರಲ್ಲಿ ಯು ಎಸ್ ನ ತ೦ಡವೊ೦ದು ಆಲ್ ಖೈದಾ ಉಗ್ರರು ಕಾಶ್ಮೀರದಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾರೆ೦ದು ವರದಿಯನ್ನು ನೀಡಿತ್ತು. ಆದ್ದ್ರಿಂದ ಈ ಕಾರನ್ದಿ೦ದಾಗಿ ಅಮೇರಿಕಾವು ವಿಶೇಷ ತ೦ಡ ಒ೦ದನ್ನು ಬಿನ್ ಲಾಡೆನ್ ನನ್ನು ಬ೦ದಿಸಲು ಭಾರತಕ್ಕೆ ಕಳುಹಿಸಿತು. ಯು ಎಸ್ ಗೆ ತಿಳಿದ ಮಾಹಿತಿಯ೦ತೆ ಈ ಮುಜಾಯಿನ್ ತ೦ಡವು ಕಾಶ್ಮೀರದಲ್ಲಿ ಶಾ೦ತಿಯನ್ನು ಕದಡುವ ಉದ್ದೇಶವನ್ನು ಹ೦ದಿದೆ ಎಂದು ತಿಳಿಯಿತು. ಆಲ್ಖೈದ ತ೦ಡವು ತನ್ನ ಮೇಲಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪಾಕಿಸ್ತಾನಕ್ಕೆ ಭಾರತದ ಒಳಗೆ ನುಸುಳಲು ಒತ್ತಡವನ್ನು ಹೇರಿತು. ಯು ಎಸ್ ನ ವಿಶ್ಲೆಶಣೆಯ೦ತೆ ಆಲ್ಖೈದಾ ಮತ್ತು ತಾಲಿಭಾನ್ ಎ೦ಬ ಎರಡು ಉಗ್ರ ಗು೦ಪುಗಳು ಅಫ್ಘನಿಸ್ತಾನದಿ೦ದ ವಿಶೇಷ ತರಬೇತಿಯನ್ನು ಪಡೆದ ಗು೦ಪುಗಳಾಗಿದ್ದವು.೧೯೯೮ರಲ್ಲಿ ಅರ್ಕಾತವುಲ್ಲ ಮುಜಾವುದ್ದೀನ್ ನಾಯಕ ಫಜಲೂರ್ ರೆಹಮಾನ್ ಕಲೀಲ್ ಮುಸ್ಲಿ೦ಮರ್ರಿಗೆ ಅಮೇರಿಚ ಮತ್ತು ಅದರ ಸಹಪಡೆಯ ಮೇಲೆ ದಾಳಿ ನಡೆಸಲು ಉತ್ತೇಜನ ನೀಡಿದನು.ಈ ಕಾರ್ಯಾಚರಣೆಯಲ್ಲಿ ಲಶ್ಕರ-ಇ-ತೊಯಿಬಾ ಮತ್ತು ಮೊಹಮದ್ ತೈಬಾ ಉಗ್ರ ಸ೦ಘಟನೆಗಳು ಉಗ್ರರಿಗೆ ನೆರವು ನೀಡುತ್ತಿರುವ ಮಾಹಿತಿ ದೊರೆಯಿತು.

ಕಾರ್ಗಿಲ್ ಸಮಸ್ಯೆ[ಬದಲಾಯಿಸಿ]

೧೯೯೯ರಲ್ಲಿ ಪಾಕಿಸ್ತಾನದ ನಿವಾಸಿಗಳು ಮತ್ತು ಸೈನಿಕರು ಚಳಿಗಾಲದಲ್ಲಿ ಕಾರ್ಗಿಲ್ ಪರ್ವತಗಳನ್ನು ಆವರಿಸಿದರು.ಈ ಪ್ರಾಕೃತಿಕ ವೈಪರಿತ್ಯದ ಸಹಾಯದಿ೦ದ ಲಡಕ್ ಮತ್ತು ಕಾಶ್ಮಿರದ ಕಣಿವೆಗೆ ಸ೦ಪರ್ಕವನ್ನು ಹೊ೦ದಿದ್ದ ಶ್ರಿನಗರ ಮತ್ತು ಲೇಹಾವನ್ನು ತನ್ನ ನಿಯ೦ತ್ರಣಕ್ಕೆ ತೆಗೆದುಕೊ೦ಡರು.ಈ ಒಂದು ನಡೆಯು ಭಾರತ ಮತ್ತು ಪಾಕಿಸ್ತಾನದ ನಡೆವೆ ಸಮಸ್ಯೆಯನ್ನು ಹೆಚ್ಚಿಸಿತು,ಆದರೆ ಕಾರ್ಗಿಲ್ ಕದನವು ಮುಂದೆ ನ್ಯೂಕ್ಲಿಯರ್ ಕದನ ಸ೦ಭ್ವಿಸುವ ವತಾವರಣ ಎರ್ಪಟ್ಟು ಅಮೇರಿಕಾದ ಅದ್ಯಕ್ಶ ಬಿಲ್ ಕ್ಲಿ೦ಟನ್ ಪಾಕಿಸ್ತಾನದ ಮೇಲೆ ಒತ್ತಡವನ್ನು ತ೦ದಾಗ ಕಾರ್ಗಿಲ್ ಕಣಿವೆಗಳನ್ನು ಆವರಿಸಿದ್ದ ಉಗ್ರರು ತನ್ನ ದೇಶಕ್ಕೆ ಹಿ೦ತಿರುಗಿದರು.


ಕಾಶ್ಮೀರ ಬಿಕ್ಕಟ್ಟಿಗೆ ಕಾರಣಗಳು

೧೯೪೭ ರ ಭಾರತದ ವಿಭಜನೆ ಈ ಕಾಶ್ಮೀರ ಸಮಸ್ಯೆಗೆ ಕಾರಣವಾಯಿತು.ಎಕೆ೦ದರೆ ಎರಡು ದೇಶಗಳು ಕಾಶ್ಮೀರದ ಮೇಲೆ ಐತಿಹಾಸಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಹೊ೦ದಿದ್ದವು.ಅಲ್ಲದೆ ಬೌಗೋಳಿಕವಾಗಿ ಉತ್ತರ ಪಶ್ಚಿಮಕ್ಕೆ ಹೊ೦ದಿಕೊ೦ಡಿದ್ದ ಜಮ್ಮು ಕಾಶ್ಮೀರದ ಹಲವಾರು ಉಪ ಖ೦ಡಗಳು ಅಫಘನಿಸ್ತಾನ ಮತ್ತು ಚೈನಾದ ಗಡಿಯಲ್ಲಿ ಸೇರಿತ್ತು. ಅಲ್ಲದೆ ಈ ಪ್ರದೇಶವು ರಾಜಾದಿಕಾರವನ್ನ ಹೊ೦ದಿದ್ದು ಹರಿ ಸಿ೦ಗನು ಬ್ರಿಟಿಶ್ ಇ೦ಡಿಯಾ ಆಳ್ವಿಕೆಯಡಿ ನಿಯ೦ತ್ರಣ ಹೊ೦ದಿದ್ದನು.ಅ೦ಕಿ ಅ೦ಶಗಳ ಪ್ರಕಾರ ಕಾಶ್ಮೀರ ಕಣಿವೆಯಲ್ಲಿ ೪ ಮಿಲಿಯನ್ ಜನಸ೦ಖ್ಯೆ ಇದೆ. ಬಿ ಬಿ ಸಿ ನೀಡಿರುವ ವರದಿಯ೦ತೆ ೧.೫ ಮಿಲಿಯನ್ ನಿರಾಶ್ರಿತರು ೨ ದೇಶಗಳ ನಿಯ೦ತ್ರಣಕ್ಕೆ ಒಳಪಡುತ್ತಿದ್ದಾರೆ. ಪೂ೦ಜಾ, ರಾಚೋರಿ,ಮತ್ತು ದೋಡಾ ಪ್ರಾ೦ತ್ಯಗಳಲ್ಲಿ ಮುಸ್ಲಿ೦ಮರು ಬಹುಸ೦ಖ್ಯಾತರಾಗಿದ್ದು ಲಡಕ್ ಪ್ರಾ೦ತ್ಯದಲ್ಲಿನ ಕಾರ್ಗಿಲ್ ಜಿಲ್ಲೆಯಲ್ಲಿ ಶಿಯ ಮುಸ್ಲಿ೦ಮರು ಬಹುಸ೦ಖ್ಯಾತರಾಗಿದ್ದಾರೆ. ಆದರೂ ಭಾರತ ಎರಡು ದೇಶಗಳ ಸಿದ್ದಾ೦ತಕ್ಕೆ ಒಳಪಡದೆ ಮುಸ್ಲಿ೦ಮರು ಬಹುಸ೦ಖ್ಯಾತ ರಾಜ್ಯವಾಗಿದ್ದ್ರು. ಜಮ್ಮು ಕಾಶ್ಮೀರ ಭಾರತದ ಜಾತ್ಯಾತೀತತೆಯ ಅವಿಭಾಜ್ಯ ಅ೦ಗವಾಗಿದೆ.


ಭಾರತಿಯ ದೃಷ್ಟಿಕೋನ[ಬದಲಾಯಿಸಿ]

ಮಹಾರಾಜ ಹರಿಸಿಂಗನುಅಕ್ಟೋಬರ್ ೧೯೪೭ ರಲ್ಲಿ ಜಮ್ಮು ಕಾಶ್ಮೀರವನ್ನು ಭಾರತದ ಒಕ್ಕೂಟಕ್ಕೆ ಸೇರುವಂತೆ ಸಹಿ ಹಾಕಿದ. ಭರತವು ವ್ಯವಹಾರಿಕವಾಗಿ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಘೋಷಿಸಿತು,ಅಲ್ಲದೆ ಭಾರತದ ಫ್ರಧಾನಮಂತ್ರಿ ಮನಮೋಹನ ಸಿಂಗ್ ಭಾರತ ಸಂವಿಧಾನದಡಿ ಅಲ್ಲಿನ ಸರ್ಕಾರಕ್ಕೆ ಒಮ್ಮತದಿಂದ ಅಧಿಕಾರ ನಡೆಸುವಂತೆ, ಅಲ್ಲಿನ ನಿವಾಸಿಗಳ ಕಾಳಜಿಯಂತೆ ಸರ್ಕಾರದ ರಚನೆಗೆ ಅನುವು ಮಾಡಿಕೊಟ್ಟರು ಭಾರತದ ದೃಷ್ಟಿಕೋನದಲ್ಲಿ ಈ ಕೆಳಕಂಡ ಕ್ರಮಗಳು ಜಮ್ಮು ಕಾಶ್ಮೀರಕ್ಕೆ ಸಂಬಂದಿಸಿದಂತೆ ಸಂಕ್ಷಿಪ್ತಿಕರಿಸಲಾಯಿತು.

  • ಭಾರತವು ಜಮ್ಮು ಕಾಶ್ಮೀರದಲ್ಲಿ ಸಿಂಹಾದ್ರೀರೂಡನಾದ ಹರಿಸಿಂಗನಿಂದ ೨೫ ಅಕ್ಟೋಬರ್ ೧೯೪೭ ರಲ್ಲಿ ೧೯೩೫ ಭಾರತ ಸರ್ಕಾರ ಕಾಯ್ದೆ ೧೯೪೭ ಭಾರತೀಯ ಸ್ವತಂತ್ರ ಕಾಯ್ದೆಯಡಿ ಸರ್ಕಾರದ ರಚನೆಗೆ ಕಾನುನಿನ ಸಮ್ಮತಿ ನೀಡಿತ್ತು.
  • United Nations Security Council Resolution 1172 ಕಾಯ್ದೆಯಡಿ ಭಾರತ ಪಾಕಿಸ್ತಾನದ ನಡುವಿನ ಬಹುಮುಖ್ಯ ಸಮಸ್ಯೆಗಳನ್ನು ಸಾವ‌‌‌‌‌‌‌‌‌‌‌‌‌‌‌‌‌‌‌‌‌‌‍೯ಜನಿಕ ಚಚೆ೯ಗೆ ಬಿಡದೆ ಪರಸ್ಪರ ಸಹಕಾರದಿಂದ ಪರಿಹರಿಸಿಕೊಲ್ಲುವಮತೆ ಆದೇಶಸಿತು
  • United Nations Security Council Resolution ರ ಕಾಯ್ದೆಯಡಿ ಕಾಶ್ಮೀರದ ಮೇಲಿನ ಪಅಕಿಸ್ತಾನದ ಒತ್ತಡವನ್ನು ನಿಯಂತ್ರಿಸುವಅಲ್ಲಿ ಕ್ರಾಂತಿಯನ್ನು ಶಮನಗೋಳಿಸುವಅಲ್ಲಿ ವಿಪಲವಾಯಿತು.
  • ಭಾರತವು ಎರಡು ರಾಷ್ಟ್ರಗಳ ಸಿದ್ದಾಂತವನ್ನು ವಿರೊದಿಸಿ ಕಾಶ್ಮೀರದಲ್ಲಿ ಮುಸ್ಲೀಮರು ಬಹುಸಂಖ್ಯಾತರಿದ್ದರು ಅದು ಜಾತ್ಯತೀತ ಭಾರತದ ಅವಿಭಾಜ್ಯ ಅಂಗ.
  • ಭಾರತ ಸಂವಿದಾನ ಅನುಚ್ಚೇದ ೩೭೦ ರ ಪ್ರಕಾರ ಜಮ್ಮು ಕಾಶ್ನೀರ ಮಹತ್ವ ಪೂಣ೯ ಸ್ವಯಂ ಆಡಳಿತವನ್ನು ಪಡೆಯಿತು.


ಅನೈತಿಕವಾಗಿ ಗಡಿರೇಖೆ ದಾಟುವ ಸಮಸ್ಯೆ[ಬದಲಾಯಿಸಿ]

ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿರೇಖೆಗೆ ಸಂಭದಿಸಿದಂತೆ ಇಡೀ ವಿಶ್ವದಲ್ಲೆ ಅತೀ ಹೆಚ್ಚು ಕದನಗಳು ಸಿಯಾಚಿನ ಪ್ರಾಂತ್ಯದಲ್ಲಿ ನಡೆದಿವೆ. ಭಾರತವು ಎಲ್ಲಾ ರೀತಿಯ ತುಕಡಿಗಳು ಸೇರಿದಂತೆ ೨೦೦೦೦೦ ಸೈನಿಕರನ್ನ ಎಲ್ಲಾ ಹವಾಮಾನದಲ್ಲಿ ಗಡಿರಕ್ಷಣೆಗೆಂದು ನೇಮಿಸಿತ್ತು. ಆದರೆ ಪಾಕಿಸ್ತಾನವು ಗಡಿರೇಖೆ ದಾಟುವ ಭಯೋತ್ಪಾದನೆಯನ್ನು ಮುಂದುವರಿಸಿತು. ಆದ ಕಾರಣ ಭಾರತವುಗಡಿರೇಖೆ ಉದ್ದಕ್ಕೂ ತಂತಿಗಳನ್ನು ಹಾಕುವ ಮೂಲಕ ಕಾಶ್ಮೀರವನ್ನು ಪಾಕಿಸ್ತಾನದ ಉಪಟಳದಿಂದ ರಕ್ಷಿಸಲು ಮುಂದಾಯಿತು.೨೦೦೨ ರಲ್ಲಿ ಪಾಕಿಸ್ತಾನದ ರಾಷ್ಟ್ರಪತಿಬ ಪವೆ೯ಸ್ ಮುಷರಪ್ ಗಡಿಯ ಒಳನುಗ್ಗುವಿಕೆಯನ್ನು ನಿಯಂತ್ರಿಸುವಂತೆ ತಿಳಿಸಿದರು.

ನೀರಿನ ಸಮಸ್ಯೆ[ಬದಲಾಯಿಸಿ]

ಕಾಶ್ಮೀರವು ಎರಡು ರಾಷ್ಟ್ರಗಳ ಕದನಕ್ಕೆ ನೀರು ಸಹ ಪ್ರಮುಖ ಕಾರಣವಾಹಿತು ಕಾಶ್ಮೀರವು ಹಲವು ನದಿಗಳ ಉಗಮಕ್ಕೆ ಕಾರಣವಾಗಿದ್ದು ಈ ನದಿಗಳು ಹರಿವು ಪಾಕಿಸ್ತಾನದಲ್ಲಿ ೬೦% ಭಅರತದಲ್ಲಿ ೨೦% ಅಫಘಾನಿಸ್ತಾನದಲ್ಲಿ ೫% ಚೀನಾದಲ್ಲಿ ೧೫% ರಷ್ಟು ಇದ್ದಿತು. ಈ ನದಿಗಳಲ್ಲಿ ಪ್ರಮುಖವಾದ ನದಿಗಳೆಂದರೆ ಜೀಲಂ &ಚೀನಾಬ್ ಮತ್ತು ಇದರ ಉಪನದಿಗಳು ರಾವಿ, ಬಿಯಾಸ್,ಸಟ್ಲೆಜ್ ಇವು ಪಅಕಿಸ್ತಾನದ ಪ್ರಮುಖ ನೀರಿನ ಮೂಲಗಳಾಗಿದ್ದವು. ಸಿಂಧೂ ನದಿಯು ಭಾರತ & ಪಾಕಿಸ್ತಾನದ ನಡುವೆ ಹರಿಯುತ್ತಿದ್ದು ಈ ನದಿಯು ಎರಡು ದೇಶಗಳ ಕೃಷಿ ಮತ್ತು ಜಲವಿದ್ಯುತ್ ಉತ್ಪಾದನೆಗೆ ಪ್ರಮುಖ ಪಾತ್ರವನ್ನು ವಹಿಸಿತ್ತು ಆದರೆ LOC(line of control) ತಿಳಿಸುವಂತೆ ಈ ನದಿಯು ಎರಡು ರಾಷ್ಟ್ರಗಳ ನಿಯಂತ್ರಣಕ್ಕೆ ಬಾರದೆ ಸಿಂಧೂ ನದಿಯ ಉಪಯೋಗವನ್ನು ೨ ದೆಶಗಳ ನಡುವೆ ಹಂಚಿಕೆ ಮಾಡಲ್ಪಟ್ಟಿತ್ತು. ೧೯೬೦ ಸೆಪ್ಟಂಬರ್ ಸಿಂಧೂ ನದಿಯು ಒಪ್ಪಂದದಂತೆ ಪಶ್ಚಿಮಕ್ಕೆ ಹರಿಯುವ ಸಿಂದೂ ನದಿಯ ಉಪನದಿಗಳಾದ ಜೀಲಂ.ಜಿನಾಚ್, ಸಿಂದೂ ಈ ೩ ಉಪನದಿಗಳೂ ಪಾಕಿಸ್ತಾನಕ್ಕೆ ಸೆರುವಂತೆ ಪೂವ೯ಕ್ಕೆ ಹರಿಯುವ ಉಪನದಿಗಳಾದ ಸಟ್ಲೆಜ್, ರಾವಿ, ಬಿಯಾಸ್, ಭಅರತಕ್ಎ ಸೆರುವಂತೆ ಎರಡು ರಅಷ್ಟ್ರಗಳ ನಡುವೆ ಒಪ್ಪಂದವಾಹಿತು


ಉಗ್ರರ ಜೊತೆಗಿನ ಪಾಕಿಸ್ತಾನದ ಸಂಬಂಧ[ಬದಲಾಯಿಸಿ]

ಭಾರತವು ಈ ಮೇಲಿನ ಉಗ್ರರ ಜೊತೆಗಿನ ಪಾಕಿಸ್ತಾನದ ಸಂಬಂದವನ್ನ ಸಾಕ್ಷಿ ಪುರಾವೆಗಳೊಂದಿಗೆ ಪಾಸ್ಚಿಮಾತ್ಯ ರಾಷ್ಟ್ರಗಳಿಗೆ ಮಾಹುತಿಯನ್ನು ನೀಡಿತ್ತು ಪಾಕಿಸ್ತಾನದ ಅದ್ಯಕ್ಷ ಮಾಜಿ ಮಿಲಿಟರಿ ಮುಖ್ಯಸ್ತ ಪವೆ೯ಜ್ ಮುಷರಪ್ ಲಂಡನ್ ಒಂದರ ಸಂದಶ೯ನದಲ್ಲಿ ಪಾಕಿಸ್ತಾನ ಸಕಾ೯ರವುಉಗ್ರತಂಡಗಳಿಗೆ ಪ್ರತ್ಯಕ್ಷವಾಗಿ ಸಹಅಯವನ್ನು ನೀಡುತ್ತಿರುವುದಾಗಿ ಸಅವ೯ಜನಿಕವಾಗಿ ಸ್ಪಷ್ಟಪಡಿಸಿದರು ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರವರ ಪ್ರಕಾರ ಭಾರತ ಮತ್ತು ಪಅಕಿಸ್ತಾನದ ನಡುವಿನ ಗೊಂದಲಗಳಿಗೆ ಪ್ರಮುಖವಾದ ಕಾರಣ ಪಾಕಿಸ್ತಾನವು ಉಗ್ರರಿಗೆ ಪ್ರೆರೆಪಣೆಯನ್ನು ನಿಡುತ್ತಿದ್ದಿದ್ದು ಎಂದು ತಿಳಿಸಿದರು ಮಅತ್ತು ಬರಾಕ್ ಒಬಾಮ ಮಅತ್ತು ಮನಮೋಹನ್ ಸಿಂಗ್ರ ಜಂಟಿ ಸಂದಶ೯ನದಲ್ಲಿ ಸಿಂಗರು ಭಾರತವು ಈ ಉಗ್ರರಿಗೆ ಯಾವುದೆ ರೀತಿ ಹೆದರುವುದಿಲ್ಲ ಪಾಕಿಸ್ತಾನಕ್ಕೆ ನಮ್ಮ ವಿನಂತಿಯೆನೆಂದರೆ ಈ ಉಗ್ರರನ್ನ ಪ್ರೆರೆಒಇಸುವ ಕಾಯ೯ದಿಂದ ಪಾಕಿಸ್ತಾನವು ಹಿನ್ನಡೆಯಾದರೆ ೨ ರಾಷ್ಟ್ರಗಳ ನಡುವಿನ ಸ್ಹೆಹಯುತ ಸಂಬಂದಕ್ಕೆ ಕಾರಣವಾಗಲಿದೆ ಎಂದು ತಿಲಿಸಿದರು. ಪಾಕಿಸ್ತಾನದ ಅದ್ಯಕ್ಷ ೨೦೦೯ ಇಸ್ಲಾಮಾಬಾದ್ ಸಂದಶ೯ನದಲ್ಲಿ ಪಾಕಿಸ್ತಾನವು ಇಸ್ಲಾಮಿಕ್ ಉಗ್ರರನ್ಮ ಹೊಸ ತಂತ್ರದೊಂದಿಗೆ ತರಬೇತಿಯನ್ನು ನೀಡುತ್ತೀದ್ದು ಇದರ ಪ್ರಮುಖವಾದ ಗುರಿ ಜಮ್ಮು ಕಾಶ್ಮೀರದಲ್ಲಿನ ಭಾರತೀಯರ ಮೇಲೆ ದಾಳಿಮಾಡುವುದೆಂದು ತಿಳಿಸಿದ್ದನು ಮತ್ತೊಬ್ಬ ಪಾಕಿಸ್ತಾನಿ ಅದ್ಯಕ್ಷ ಪವೆ೯ಜ್ ಮುಷರಪ್ ಸಹ ಪಾಕಿಸ್ತಾನ ಸಕಾ೯ರವು ಉಗ್ರರ ತರಬೇತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದ್ದನು. ಅಲ್ಲದೆ ಬ್ರಿಟಿಷ್ ಸಕಾ೯ರದ ವರದಿಯಂತೆ ಪಾಕಿಸ್ತಾನವು ಲಷ್ಕರ-ಇ-ತೊಯ್ಬಾ, ಜಯಿಷ್-ಇ-ಮೊಹಮ್ಮದ್ ಮಅತ್ತು ಅಕಾ೯ತ್-ವುಲ್-ಮುಜಾಯಿದ್ದೀನ್ ಈ ಮೂರು ಉಗ್ರರ ತಂಡಗಳಿಗೆ ಪ್ರತ್ಯಕ್ಷವಾಗಿ ಸಹಾಯಮಾಡುತ್ತಿದೆ ಎಂದು ತಿಲಿಸಿತ್ತು. ಸರಿಸುಮಾರು ೨೪ ಮಿಲಿಯನ್ ಹಣವನ್ನು ಪಾಕಿಸ್ತಾನ ಸಕಾ೯ರವು ಜಮ್ಮು ಕಾಶ್ಮೀರದ ಮೇಲಿನ ಅತಿಕ್ರಮಣ ದಾಳಿಗೆ ಬಳಸುತ್ತಿತ್ತೆಂದು ತಿಳಿದುಬರುತ್ತದೆ.


ಮಾನವ ಹಕ್ಕುಗಳ ಉಲ್ಲಂಘನೆ[ಬದಲಾಯಿಸಿ]

ಮಅನವ ಹಕ್ಕುಗಳ ಉಲ್ಲಂಘನೆಯಾಗಿದೆಯೆಂದು ಭಾರತಿಯ ಸಶಸ್ತ್ರದಳ ಮತ್ತು ಸಶಸ್ತ್ರ ಕ್ರಾಂತಿಕಅರಿಗಳ ಮೆಲೆ ದೂರು ಮಾಡಾಲಾಗಿದೆ ಏಕೆಂದರೆ ೧೯೮೯ ರಿಂದ ಸುಮಾರು ೫೦ ಸಾವಿರ ವರದಿಗಳಂತೆ ೧ ಲಕ್ಷ ಕಾಶ್ಮೀರಿ ನಿವಾಸಿಗಳು ಹತರಾಗಿದ್ದಾರೆ ಎಂದು ತಿಲಿಸಿದೆ. ಅಲ್ಲದೆ ಕೆಲವೊಂದು ಮಾನವ ಹಕ್ಕು ಸಂಘಗಳು ಭಾರತೀಯ ರಕ್ಷಣಾ ಸಿಬ್ಬಂದಿಗೈ ಮೇಲೆ ಆರೊಪವನ್ನು ಮಾಡಲಾಗಿದೆ. ಏಕೆಂದರೆ ನೂರಾರು ನಿವಾಸಿಗಳನ್ನ ಅಮಾನುಷವಾಗಿ ಕೊಲ್ಲಲಅಗಿದೆ ಎಂದು ತಿಳಿಸಿದೆ.

ಮಾನವ ಹಕ್ಕು ವರದಿಯಂತೆ ಕಾಶ್ಮಿರದಲ್ಲಿ ೩೦೦ ಕ್ಕೂ ಹೆಚ್ಚು ನಿವಾಸಿಗಳು ೧೯೯೦ ರಲ್ಲಿ ಕಣ್ಮರೆಯಾಗಿದ್ದಾರೆ ಎಂದು ತಿಳಿಸಿದೆ. SHRC ನೀಡುವ ವರದಿಯಂತೆ ೨೭೩೦ ಶವಗಳನ್ನು ಅನೈತಿಕವಾಗಿ ಎಲ್ಲೆಂದರಲ್ಲಿ ಭಾರತೀಯ ಶಿಕ್ಷಣ ಸಿಬ್ಬಂದಿಗಳು ಸುಟ್ಟಿದ್ದಾರೆ ಅದರಲ್ಲಿ ೫೭೪ ಶವಗಳು ಅಲ್ಲಿನ ನಿವಾಸಿಗಳೆ ಎಂದು ಪತ್ತೆಯಾಗಿದೆ ವಿಕಿಲಿಕ್ಸನ ವರದಿಯಂತೆ ಭಾರತೀಯ ರಕ್ಷಣ ಸಿಬ್ಬಂದಿಗಳು ಅಮಾನವೀಯವಾಗಿ ನಡೆದುದಷ್ಟೆ ಅಲ್ಲದೆ ಅನೈತಿಕವಾಗಿ ಅಲ್ಲಿನ ನಿವಾಸಿಗಳ ಮೆಲೆ ಬಲಾತ್ಕಅರವನ್ನು ಮಾಡಲಅಗಿದೆ ಎಂದು ತಿಳೀಸಿದೆ ಅಲ್ಲದೆ ಕೇಬಲ್ ನ ವರದಿಯಂತೆ ಭಾರತ ಸಕಾ೯ರವು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡಿದೆ. ಇದಕ್ಕೆ ಸಂಬಂದಿಸಿದಂತೆ ಸ್ಟೆಟ್ ಇನಪರ್ಮೆಷನ್ ಕಮಿಷನ್ಗೆ ವರದಿಯನ್ನು ನೀಡಬೇಕೆಂದು ಸಕಾ೯ರ ತಿಳಿಸಿತು


ಅಜಾದ್ ಕಾಶ್ಮೀರ್[ಬದಲಾಯಿಸಿ]

ಮಾನವ ಹಕ್ಕುಗಳ ಉಲ್ಲಂಘನೆ ಭಾರತವು ಮಾಡಿದಂತೆ ಪಾಕಿಸ್ತಾನವು ಸಹ ಕಾಶ್ಮೀರಿ ನಿವಾಸಿಗಳ ಮೆಲೆ ಕಟ್ಟುನಿಟ್ಟಿನ ಧಮ೯ದ ಆಚರಣೆ ಮತ್ತು ಮತಾಂದತೆಯನ್ನು ಪಾಕಿಸ್ತಾನವು ಸಹ ನಿವ೯ಹಿಸಿತು. ರಾಷ್ಟ್ರೀಯ ಒಕ್ಕೂಟಗಳ ಮಾನವ ಹಕ್ಕು ಸಮಿತಿ ನೀಡಿದ ವರದಿಯಂತೆ ಆಲ್ಖೈಧಾವು ಸೇರಿದಂತೆ ಹಲವು ಇಸ್ಲಾಮಿಕ್ ಉಗ್ರ ಗುಂಪುಗಳು ಮತಭೊಧನೆ ಮಾಡಿದ ಆರೋಪವನ್ನ ಮಾಡಿದೆ. ೨೦೦೬ ರಲ್ಲಿ ಪಾಕಿಸ್ತಾನವು ರಾಜಕಾರಣಗಳನ್ನ ರಾಜಕೀಯದಲ್ಲಿ ತೋಡಗಿದವರನ್ನ ಮತ್ತು ಪತ್ರಿಕೋದ್ಯಮದಲ್ಲಿ ತೋಡಗಿದವರನ್ನ ಅಮಾನುಷವಅಗಿ ಅಜದ ಕಾಶ್ಮೀರದಲ್ಲಿ ಪಾಕಿಸ್ತಾನಿ ಇಂಟಲಿಜೆನ್ಸ್ ಏಜೆನ್ಸಿ ಅಪಾರ ಸಾವು ನೋವಿಗೆ ಕಾರಣವಾಹಿತು ಎಂದು ವರದಿ ಮಾದಿದೆ.

ಪಾಕಿಸ್ತಾನಿ ಮಾನವ ಹಕ್ಕುಗಳ ಸಮಿತಿ ಪ್ರಕಾರ ಪಾಕಿಸ್ತಾನದ ಇಂಟರ್ ಸವಿ೯ಸಸ್ ಇಂಟಲಿಜೆನ್ಸ್ ಹಲವು ನಿವಾಸಿಗಳ ಬಂಧಿಯಲ್ಲಿ ಶೋಷಣೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಲಿಸಿದೆ. 2008 ರ United nations high comitioner ವರದಿಯಂತೆ ಪಾಕಿಸ್ತಾನದ ನಿಯಂತ್ರಣದಲ್ಇನ ಕಾಶ್ಮೀರ ಎಂದಿಗೂ ಸ್ವತಂತ್ರವಾಗುವುದಿಲ್ಲ. ಎಂದು ತಿಳಿಸಿದೆ ಅಲ್ಲದೆ ೨೦೧೧ ರ ಚುನಾವಣೆಯ ನಂತರ ಅಜದ ಕಾಶ್ಮೀರದ ಪ್ರಧಾನಮಂತ್ರಿ ಸದಾ೯ರ್ ಅಹಮದ್ ಖಾನ್ ಸಕಾ೯ರದ ವಿರುದ್ದ ಪ್ರಶ್ನೆ ಎತ್ತಿದ್ದು ನಿವಾಸಿಗಳ ಃಎಸರನ್ನ ಮತಹಾಕುವುದರಿಂದ ದೂರ ಇರಿಸಲಾಗಿದೆ ಎಂದು ತಿಳಿಸಿದೆ.


ಗಿಲ್ಜಿಟ್ ಬಲುಚಿಸ್ತಾನ್[ಬದಲಾಯಿಸಿ]

ಬಲುಚಿಸ್ತಾನದ ಜನರ ಮುಖ್ಯ ಬೇಡಿಕೆಯೆಂದರೆ ಸಂವಿಧಾನಾತ್ಮಕ ಸ್ಥಾನಮಾನವನ್ನು ನಿಡಬೇಕೆಂದು ಏನೆ ಆದರೂ ಪಾಕಿಸ್ತಾನ ಈ ಸ್ತಾನವನ್ನು ನೀಡಲಾಗುವುದಿಲ್ಲ ಎಂದು ತಿಳಿಸಿತ್ಉ ಏಕೆಂದರೆ ೧೯೪೮ ರಲ್ಲಿ UN ಜೊತೆಯಲ್ಲಿ ಒಪ್ಪಂದವನ್ನು ಮಾಡಿಕೋಂಡಿತು ೨೦೦೭ ರಲ್ಲಿ ಅಂತರಅಷ್ಟ್ರಿಯ ಸಮಸ್ಯೆಗಳ ಒಕ್ಕೂಟದ ಪ್ರಕಾರ ಸ್ವತಂತ್ರ ಪಾಕಿಸ್ತಾನದ ೬೦ ವಷ೯ಗಳಾದರು ಅದರ ಉತ್ತಾರಾಧ೯ ಪ್ರದೆಶಗಳಿಗೆ (ಗಿಲ್ಜಟ್ ಬಲುಚಿಸ್ತಅನ) ಸಂವಿಧಾನಾತ್ಮಕ ಸ್ಯಾಯುಕ್ತತೆಯನ್ನು ನೀಡಲಾಗುವುದಿಲ್ಲ. ಅಲ್ಲದೆ ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೆಶಗಳು ಪಾಕಿಸ್ತಾನದಲ್ಲಿದ್ದರು ಈ ಪ್ರಾಂತ್ಯಗಳು ಸಂವಿಧಾನದ ಸ್ಥಾನಮಾನ ಪಡೆಯುವುದು ಕನಸು ಮತ್ತು ಈ ಪ್ರಾಂತ್ಯದ ಪೂವ೯ಜರುಗಳು ಇಸ್ಲಾಮಾಬಾದ್ ಮನಸಿಲ್ಲದ ರಾಷ್ಟ್ರೀಯ ಚಳುವಳಿಗಳು ಮತ್ತು ಅದರ ಪ್ರತಿನಿದಿಗಳಿಂದ ಸ್ವತಂತ್ರರಾಗುವ ಉದ್ರೇಕತನವನ್ನ ಬೆಳೆಸಿಕೊಂಡಿದೆ. ಎಂದು ಈ ವರದಿ ತಿಳಿಸಿದೆ ೨೦೦೮ ರ ಏಪ್ರಿಲ್ ೮ & ೯ ರಂದು ಯುರೋಪಿನ ಪಾಲಿ೯ಮೆಂಟಿನಲ್ಲಿ ಈ ಕುರಿತು ಚಚೆ೯ ನಡೆದು ಈ ಪ್ರದೇಶಗಳಲ್ಲಿ ನಿವಾಸಿಗಳಿಗೆ ಸಂವಿಧಾನಾತ್ಮಕ ಸ್ಥಾನಮಾನವನ್ನು ನೀಡದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆಯೇಂದು ನಿದ೯ರಿಸಲಾಯಿತು ೨೦೦೯ ರಲ್ಲಿ ಪಾಕಿಸ್ತಾನ ಸಕಾ೯ರವು ಕೆಲವೊಂದು ಹಕ್ಕುಗಳನ್ನ ಈ ಭಾಗದ ಜನರಿಗೂ ಇದನ್ನ ಇಸ್ಲಾಂಮಾಬಾದ್ನ ಮುಖ್ಯಮಂತ್ರಿಯು ಇದರ ಅದಿಕಾರ ನಿವ೯ಹಣೆ ಮಾಡುವಂತೆ ಆಯಿತು.


ನಕ್ಷೆಯ ಗೊಂದಲ

ಕಾಶ್ಮೀರ ಪ್ರಾಂತ್ಯವು ನಕ್ಷೆಯಲ್ಲಿ ಯಾವ ದೇಶಕ್ಕೆ ಸೇರಬೇಕೆಂಬುದು ಒಂದು ಸಮಸ್ಯೇಯಾಗಿದೆ ಏಕೆಂದರೆ ಭಾರತದ ಕ್ರಿಮಿನಲ್ ಕಾನುನಿನ ಆದೇಶದ ಪ್ರಕಾರ ಭಾರತವು ಸವೆ೯ ಅಪ್ ಇಂಡಿಯಾ ಪ್ರಕಟಿದ ನಕ್ಷೆಯ ಸಾಮಾನ್ಯ ನಕ್ಷೆಗಿಂತ ಭಿನ್ನವಾಗಿದ್ದು ಭಾರತವು ಕಾಶ್ಮೀರದ ಕೆಲವು ಭಾಗಗಳನ್ನು ನಕ್ಷೆಯಲ್ಲಿ ಸೇರಿಸಿಲ್ಲ ಆದರೆ ಪಾಕಿಸ್ತಾನವು ರಾಷ್ಟ್ರಗಳ ಒಕ್ಕೂಟದ ಅನುಮತಿಯಂತೆ ಜಮ್ಮು ಕಾಶ್ಮೀರವನ್ನ ತನ್ನ ನಕ್ಷೆಯಲ್ಲಿ ಪ್ರತಿನಿದಿಸಿತ್ತು ವಿಂಡೋಸ್ ೯೫ ಮತ್ತು ೨೦೦೨ ರ ಮೈಕ್ರೊಸಾಪ್ಟ್ ನಕ್ಷೆಯಂತೆ ಕಾಶ್ಮೀರದ ಎಲ್ಲಾ ಬಾಗಗಳು ಭಾರತದ ನಕ್ಷೆಗೆ ಸೆರಿಸಿಲ್ಲದಿರುವುದು ವಿವಾದಕ್ಕೆ ಕಾರಣವಅಹಿತು ಆದರೆ ಪಾಕಿಸ್ತಾನದ ನಿವಾಸಿಗಳು UN ಮ್ಯಾಪ್ & ಪಅಕಿಸ್ತಾನದ ೯೦% ರಷ್ಟು ನಕ್ಷೆಗಳು ಜಮ್ಮು ಕಾಶ್ಮೀರ ಒಳಗೊಂಡಂತೆ ಇವೆ.


ಇತ್ತೀಚಿನ ಬದಾಲಾವಣೆಗಳು[ಬದಲಾಯಿಸಿ]

ಪಾಕಿಸ್ತಾನದಲ್ಲಿ ಪ್ರತಿವಷ೯ ಪೆಬ್ರವರಿ ೫ ರಂದು ಕಾಶ್ಮೀರೊಕ್ಕೂಟ ದಿನ ವೆಂದು ಆಚರಿಸಲಾಗುತ್ತದೆ. ಕಾಶ್ಮೀರವು ವಿವಾದಿತ ಪ್ರದೇಶವಅಗಿದ್ದರು ಭಾರತವು ಕಾಶ್ಮೀರದ ಮೇಲೆ ತನ್ಬ ಪರಮಾದಿಕಾರವನ್ನು ಹೋದಿದೆ. ಆದರೆ ಪಾಕಿಸ್ತಾನವು ತನ್ನ ಪರಮಾದಿಕಅರವನ್ನು ಹಜದ ಕಾಶ್ಮೀರ ದಿಂದ ಕಾಶ್ಮೀರದ ಕಣಿವೆ ವರೆಗೂ ವಿಸ್ತರಿಸಬೇಕು ಎಂದು UN ಮುಂದೆ ಭೆಡಿಕೆಯನ್ನು ಇಟ್ಟಿತ್ತು. ನಿಜವಾದ ಸಮಸ್ಯೆಯೆಂದರೆ ಪಾಕಿಸ್ತಾನದ ನಿಯಂತ್ರಣದಲ್ಲಿನ ಕಾಶ್ಮೀರದ ಕೆಲವು ಭಗಗಳು ಸಾಂಸ್ಕ್ಋತಿಕವಾಗಿ ಆಚರಣೆಯಲ್ಲಿ ಭಷೆಯಲ್ಲಿ ಭರತ ನಿಯಂತ್ರಣದಲ್ಲಿನ ಕಾಶ್ಮೀರದ ಭಗಕ್ಕೆ ಭಿನ್ನವಾಗಿದೆ ಚನಅದ ಪ್ರದೇಶದ ವಭಜನೆಯನ್ನು ಕೆಲವು ಕಾಶ್ಮೀರಿ ರಾಜಕಾರಣಿಗಳು ವಿರೊದಿಸಿದ್ದು ಸಜದ್ಲಾನ ಎಂಬುವವರು ಈ ಪ್ರದೆಶವು ಮುಸ್ಲಿಂ ರಹಿತ ಪ್ರಾಂತ್ಯವಾಗಿದ್ದು ಭಾರತಕ್ಕ ಸೇರಿಸಬೇಕೆಂದು ತಿಳಿಸಿದರು. ಪಾಕಿಸ್ತಾನದ 9/11 ಆಕ್ರಮನ ಕಾಗಿ೯ಲ್ ವಾರ್ ನಲ್ಲಿ ಹಿನ್ನಡೆ ಈಎಲ್ಲಾ ಸಂಧಭ೯ಗಳು ಪಾಕಿಸ್ತಾನದ ಭಯೊತ್ಪಾದನೆ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡುತ್ತಿದೆ ಇತ್ತೀಚನ ಭಾರತದ ಮುಖ್ಯ ಆಮಿ೯ಜನರಲ್ VK ಸಿಂಗ್ ಬಹಿರಂಗ ಪಡಿಸಿರುವಂತೆ ವಿಭಜನೆಯಾದಗಿನಿಂದಲೂ ಜಮ್ಮು ಕಾಶ್ಮಿರದ ರಾಜಕಾರಣಿಗಳು ಅಲ್ಲಿನ ಶಾಂತಿ ಕಾಪಾಡುವುದಕ್ಕಾಗಿಯೆ ಹೆಚ್ಚು ಹಣವನ್ನು ರಕ್ಷಣೆಗೆಂದು ವ್ಯಯಿಸುತ್ತದೆ. "Freedom in the world 2006" ವರದಿಯ ಪ್ರಕಾರ ಭಾರತದ ನಿಯಂತ್ರಣದಲ್ಲಿನ ಕಾಶ್ಮೀರ ಸ್ವಭಾವತ: ಸ್ವತಂತ್ರವಾಗಿದೆ ಅದೆ ರೀತಿ ಪಅಕಿಸ್ತಾನ ನಿಯಂತ್ರಣದಲ್ಲಿನ ಕಾಶ್ಮೀರದ ಕೆಲವು ಭಗವು ಇನ್ನೂ ಸ್ವತಂತ್ರಗೊಂಡಿಲ್ಲ ಎಂದು ತಿಳಿಸಿದೆ ಭಾರತದ ಇಚ್ಚೆಯಂತೆ ಅಲ್ಲಿನ ನಿವಾಸಿಗಳು ಸಹ ಭಾರತಕ್ಕೆ ತಮ್ಮ ಬಲವನ್ನ ತೋರಿಸಿದ್ದಅರೆ ಮೋರಿಯವರ ವಿಶ್ಲೆಷಣೆಯಂತೆ ೬೧% ಭಾರತದ ನಾಗರಿಕತೆಯನ್ನ ಪಡಯಲು ಉತ್ಸುಕರಅಗಿದ್ದಾರೆ ೩೩% ಜನರು ಯಾವುದಕ್ಕು ಬಲವನ್ನು ತೋರಿಸದೆ ಉಳಿದ ೬% ಜನರು ಪಾಕಿಸ್ತಾನಕ್ಕೆ ಸೇರಲು ಒಲವನ್ನು ವ್ಯಕ್ತಪಡಿಸಿದ್ದಾರೆ. ಲಡಕ ಮತ್ತು ಜಮ್ಮು ಪ್ರಾಂತ್ಯದ ಜನರು ಪ್ರಮುಖವಾಗಿ ಭಾರತವನ್ನ ಇಚ್ಚಿಸುತ್ತಿದ್ದು ಕಾಶ್ಮೀರ ಕಣಿವೆಯ ಜನರು ಭಾರತವನ್ನು ಇಚ್ಚಿಸುತ್ತಾರೆ

2007 ರ 'center for the study of developing societies' ಡೆಲ್ಲಿಯಲ್ಲಿ ನೀಡಿದ ವರದಿಯಂತೆ ೮೭% ಕಾಶ್ಮೀರ ಕಣಿವೆಯ ನಿವಾಸಿಗಳು ಭಾರತ or ಪಾಕಿಸ್ತಾನಕ್ಕೆ ಸೇರಿಸುವಂತೆ ಪ್ರತಿದಾಹವನ್ನು ಒಡ್ಡಿದ್ದಾರೆ. 2008 ರ ಆಕ್ರಮಣ: ಮಾಚ್೯ ೧೦,೨೦೦೮ ರಲ್ಲಿ ಜಮ್ಮು ಕಾಶ್ಮೀರದ ಪ್ರದೆಶದಲ್ಲಿನ ೧೭ ನಿವಾಸಿಗಳು ಗಾಯಕ್ಕೆ ತುತ್ತಾಗಿದ್ದರು ಭಾರತ ಮತ್ತು ಪಾಕಿಸ್ತಾನದ ನಡುವೆ ಪಿಸ್ತೂಲಿನ ಕದನಗಳು ಆಗಾಗ ನಡೆಯುತ್ತಿದ್ದು ೨೦೦೮ ರ ಈ ಕಾಳಗದಲ್ಲಿ ಭಾರತದ ೫ ಜನರು ಮರಣ ಹೋಂದಿದ್ದು ಇಬ್ಬರು ತೀವ್ರವಾಗಿ ಗಾಯಗೊಂಡರು. ಈ ಕದನಗಳು ಹಚ್ಚಾಗಿ ಶ್ರಿನಗರದ ಸೈನಿಕ ಬಿಡಾರಗಳ ಮೇಲೆ ನಡೆಯುತ್ತಿದೆ ಆದರೆ ಇಂಡಿಯಾದ ಆಡಳಿತದಲ್ಲಿನ ಕಾಶ್ಮೀರದ ಅಹಿಂಸೆಯನ್ನು ತೊಡೆದು ಹಾಕಲು ಭಾರತ ಹಲವು ಆಪರೆಷನ್ ಗಳನ್ನ ಕೈಗೊಂಡಿದ್ದರು ಪಾಕಿಸ್ತಾನದ ಆಕ್ರಮಣದಿಂದಾಗಿ ಇದುವರಗೆ ೪೩ ಸಾವಿರ ಜನರ ಆಹುತಿಯಾಗಿದೆ.

ಭಾರತದ ಗೃಹ ಇಲಾಖೇಯ ವರದಿಯಂತೆ ೨೦೦೮ ರಲ್ಲಿ ಅತೀ ಕಡಿಮೆ ಸಾವು ನೋವುಗಳು ಸಂಭವಿಸಿದ್ದು ೧೯೯೬ ರಲ್ಲಿ ೧೪೧೩ ಸಾವು ಸಂಭವಿಸಿತ್ತು ೨೦೦೧ ರಲ್ಲಿ ೬೧೩ ಕ್ಕೆ ಇಳಿಮುಖವಾಯಿತು ಎಂದು ತಿಳಿಸಿದೆ.


೨೦೦೮ ರ ಕಾಶ್ಮೀರ ಚುನಾವಣೆ[ಬದಲಾಯಿಸಿ]

೭ ಹಂತಗಳಲ್ಲಿ ೧೭ ನವಂಬರ್ ರಿಂದ ೨೪ ಡಿಸೆಂಬರ ವರೆಗೂ ೨೦೦೮ ರಲ್ಲಿ ರಾಜ್ಯ ಚುನಾವಣೆಯನ್ನ ಜಮ್ಮು ಕಾಶ್ಮೀರದಲ್ಲಿ ನಡೆಸಲಾಯಿತು ಇದರಲ್ಲಿ ೫೦% ದಾಖಲೆಯ ಮತದಾನವಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಾಟಿ೯ ಮತ್ತು ನ್ಯಾಷನಲ್ ಕಾನ್ಪರೆನ್ಸ ಜಂಟಿಯಾಗಿ ಸಕಾ೯ರವನ್ನ ರಚಸಿ ಒಮರ್ ಅಬ್ದುಲ್ಲಾ ೧೧ ನೇ ಮಂತ್ರಿಯಾಗಿ ಅದಿಕಾರದ ಚುಕ್ಕಾಣಿ ಹಿಡಿದನು.


೨೦೦೯ ರ ಕಾಶ್ಮೀರದ ಪ್ರತಿಭಟನೆ[ಬದಲಾಯಿಸಿ]

೨೦೦೯ ರಲ್ಲಿ ದಕ್ಷಿಣ ಕಾಶ್ಮೀರಕ್ಕೆ ಸೇರಿದ ಶಾಪಿಯನ ಎಂಬ ಪ್ರಾಂತ್ಯದಲ್ಲಿ ಇಬ್ಬರು ಯುವತಿಯರ ಮೇಲೆ ಅತ್ಯಾಚಾರವೆಸಗಿ ಕೊಲೆಯನ್ನು ಮಾಡಲಅಯಿತು. ಈ ಕಾಯ೯ವನ್ನು ಅಲ್ಲಿನ ಪೋಲಿಸ್ ಸಿಬ್ಬಂದಿಗಳೇ ನಿವ೯ಹಿಸುತ್ತಿದ್ದು ಹೈಕೊಟ್೯ನಲ್ಲಿ ಅದು ಸಾಬೀತಾಯಿತು ಇದು ಅಲ್ಲಿನ ನಿವಾಸಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಭಅರದ ವಿರುದ್ದ ತೀವ್ರವಾದ ಬೇಸರವಾಗಲು ಕಾರಣವಅಹಿತು.

೨೦೧೦ ರಲ್ಲಿ ಕಾಶ್ಮೀರದಲ್ಲಿನ ಆಶಾಂತಿ[ಬದಲಾಯಿಸಿ]

ಕಾಶ್ಮೀರದಲ್ಲಿ ದಂಗೆಗಳು ಸರನಿಯಾಗಿ ನಡೆದವು ಇದು ಹೆಚ್ಚಾಗಿ ಮುಸ್ಲಿಂ ಬಹುಸಂಖ್ಯಾತರಾಗಿದ್ದ ಕಾಶ್ಮೀರದ ಕಣಿವೆಯಲ್ಲಿ ನಡೆದವು. ಈ ದಂಗೆಗಳು ಪ್ರಮುಖ ಉಸ್ತವಾರಿಯನ್ನು ಸಯ್ಯಾದ್ ಅಲಿ ಷಾ ಗಿಲಾನಿ ಮತ್ತು ಮಿವೆ೯ಸ್ ಉಮರ್ ಫರುಖ್ ವಹಿಸಿಕೊಂಡಿದ್ದು quite jammu kashmir movement ಎಂಬ ಕ್ರಾಂತಿಯನ್ನ ನಡೆಸಿದರು ಇದರ ಪ್ರಮುಖ ಉದ್ದೆಶ ಜಮ್ಮು ಕಾಶ್ಮೀರದಲ್ಲಿ ಸೈನಿಕರ ನಿಶ್ಯಸ್ತ್ರಿಕರಣಗೊಳಿಸುವುದು. ಈ ಪ್ರತಿಭಟನೆಯ ಅನೇಕ ಘೊಷಣೆಗಳನ್ನು ಆಕ್ರಮಣಗಳನ್ನು ಕಪ್ಯೂ೯ಗಳನ್ನು ಒಳಗೊಂಡಿದ್ದು ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲನ್ನು ತೂರುವುದು ವಾಹನಗಳ ಮೇಲೆ ಮತ್ತು ಸಕಾ೯ರಿ ಕಟ್ಟಡಗಳ ಮೇಲೆ ಬೇಂಕಿಯನ್ನು ಹಾಯಿಸುವುದು ನಡೆಯಿತು ಈ ಪ್ರತಿಭಟನೆಯಲ್ಲಿ ೧೧೨ ಮಂದಿ ಯುವಕರು ಸೇರಿದಂತೆ ಸಾವನ್ನಪ್ಪಿದ್ದರು.

ಅಮೇರಿಕಾದ ಅದ್ಯಕ್ಷ ಒಬಾಮಾರ ದ್ವಂದ್ವ[ಬದಲಾಯಿಸಿ]

time magazine ಅಕ್ಟೋಬರ್ ೨೦೦೮ ರಲ್ಲಿ ಜೋಯ್ ಕ್ಲೀನ್ ನಡೆಸಿದ ಸಂದಶ೯ನದಲ್ಲಿ ಒಬಾಮರಿಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಈ ಗೋಂದಲ ಕುರಿತು ಅಭಿಪ್ರಾಯವನ್ನು ಕೇಳಿದಾಗ ಅವರು ಈ ಸಮಸ್ಯೆಯ ಬಗ್ಗೆ ಮಾತನಾಡಲು ಬಿಲ್ ಕ್ಲಿಂಟನ್ ಸರಿಯಾದ ವ್ಯಕ್ತಿ ಅವರಿಗೆ ಮದ್ಯಸ್ತಿಕೆ ಮಾಡುವ ಅನುಭವವನ್ನ ಚೇನ್ನಾಗಿ ಹೋಂದಿದ್ದಾರೆ ಎಂದು ಖಾರವಾಗಿ ಉತ್ತರಿಸಿದರು the washington post ವರದಿಯಂತೆ ಭಾರತ ಪಾಕಿಸ್ತಾನದ ನಡುವಿನ ಸಮಸ್ಯೆ ಕುರಿತು eliminating kashmir from his job description ದೆಸಚರಿಪತಿಒನ ಈ ಎರಡು ದೇಶಗಳ ನಡುವೆ ಬಗೆಹರಿಯದ ಸಮಸ್ಯೆಯಾಗಿದೆಯೇಂದು ವರದಿ ಮಾಡಿದೆ.

ನೋಡಿ[ಬದಲಾಯಿಸಿ]

ಪೂರಕ ಓದಿಗೆ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]