ವಿಷಯಕ್ಕೆ ಹೋಗು

ಕಲ್ಪನಾ ನಾಗನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲ್ಪನಾ ನಾಗನಾಥ್, ಕಿರು-ತೆರೆ ಬೆಳ್ಳಿ-ತೆರೆ, ರಂಗಭೂಮಿಗಳಲ್ಲಿ ಸಕ್ರಿಯವಾಗಿರುವ ಕಲಾವಿದೆ. ಮೈಸೂರ್ ಬ್ಯಾಂಕ್ ನ ಉದ್ಯೋಗಿ. ನಾಟಕ ಅಕ್ಯಾಡಮಿ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಹಲವಾರು ಉತ್ಸವಗಳಲ್ಲಿ ದೇಶದುದ್ದಕ್ಕೂ ಭಾಗವಹಿಸಿದ್ದಾರೆ. ಕರ್ನಾಟಕದಾದ್ಯಂತ ರಂಗಗೀತೆ, ರಂಗ ಶಿಬಿರಗಳಲ್ಲಿ ಶಿಬಿರಾರ್ಥಿಗಳಿಗೆ ತರಬೇತಿ ನೀಡುವುದರಲ್ಲಿ ಅವರು ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಅವರ ಕನ್ನಡಪರ ಕಾರ್ಯಚಟುವಟಿಕೆಗಳನ್ನು ಹಾಗೂ ಕನ್ನಡ ರಂಗಭೂಮಿಗೆ ಮಾಡುತ್ತಿರುವ ಸೇವೆಯನ್ನು ಗುರುತಿಸಿ, ಅವರಿಗೆ, " ಸುವರ್ಣ ರಂಗ ಸಮ್ಮಾನ್ " ಪ್ರಶಸ್ತಿಯನ್ನು ನೀಡಲಾಗಿದೆ. ಮಧ್ಯಪ್ರದೇಶದವರಾದ, ಕಲ್ಪನಾರವರ ಮನೆಮಾತು ಹಿಂದಿ.

ಬಾಲ್ಯ ಹಾಗೂ ವಿದ್ಯಾಭ್ಯಾಸ :

[ಬದಲಾಯಿಸಿ]

ಮಧ್ಯಪ್ರದೇಶದ "ಬಾಲಾಘಾಟ್," ನಲ್ಲಿ ಜನಿಸಿದ ಕಲ್ಪನಾ ನಾಗನಾಥ್, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು. ಆವರ ಮನೆಯಮಾತು ಹಿಂದಿ. ೧೯೭೮ ರಲ್ಲಿ ಹವ್ಯಾಸಿ ಕನ್ನಡ ರಂಗಭೂಮಿಗೆ ಪಾದಾರ್ಪಣೆಮಾಡಿದ ಶ್ರೀಮತಿ ನಾಗನಾಥ್, ಹಂತ ಹಂತವಾಗಿ ರಂಗಕಲೆಯಲ್ಲಿ ಮೇಲೇರಿದರು. ಮೈಸೂರು ಬ್ಯಾಂಕ್ ನಲ್ಲಿ ನೌಕರಿ ದೊರೆಯಿತು. ಅಲ್ಲಿ ಸೇರಿದ ಕೂಡಲೇ ಅಲ್ಲಿನ ಸಹೋದ್ಯೋಗಿಗಳನ್ನು ಪ್ರೇರೇಪಿಸಿ, "ಮೈಸೂರ್ ಬ್ಯಾಂಕ್ ಕಲಾ ಸಂಘಟನೆ," ಯ ಜನನಕ್ಕೆ ಕಾರಣರಾದರು. ಇದನ್ನು ಅವರು, 'ಮಾತೃ ಸಂಸ್ಥೆ,' ಯೆಂದು ಕರೆದರು. ಇತರ ಕನ್ನಡ ಸಂಘ ಸಂಸ್ಥೆಗಳ ಜೊತೆಗೆ ನಿಕಟವಾಗಿ ವರ್ತಿಸಿದರು. ಅವರು 'ರಂಗಗಾಯಕಿಯಾಗಿ,' ಹಾಗೂ 'ನಟಿ,' ಯಾಗಿ ಈಗಾಗಲೇ ಕನ್ನಡಿಗರ ಮನದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.. ಹಲವಾರು ನಾಟಕಗಳಲ್ಲಿ ರಂಗಗಾಯಕಿಯಾಗಿ, ನಟಿಯಾಗಿ ಮೆರೆದವರು ಭಾರತ ದೇಶದಾದ್ಯಂತ ಅಲ್ಲದೆ ವಿದೇಶದಲ್ಲೂ ಪ್ರದರ್ಶನಗಳನ್ನು ಕೊಟ್ಟಿದ್ದಾರೆ. ಅವರು ಭಾಗವಹಿಸಿದ ಕೆಲವು ನಾಟಕಗಳ ವಿವರ ಹೀಗಿವೆ.

೧. ಸತ್ತವರ ನೆರಳು

೨. ಅಲಿಬಾಬಾ,

೩. ಜೋಕುಮಾರಸ್ವಾಮಿ

೪. ಹಯವದನ,

೫. ನಾಯಿಕತೆ,

೬. ಗೋಕುಲನಿರ್ಗಮನ,

೭. ನಾಗಮಂಡಲ,

೮. ಸಂಗ್ಯಾಬಾಳ್ಯ,

೯. ಘಾಷೀರಾಂ ಕೋತ್ವಾಲ್,

೧೦. ಇಸ್ಪೀಟು ರಾಜ್ಯ,

೧೧. ಸುಲ್ತಾನ್ ಟಿಪ್ಪು,

೧೨. ಕದಡಿದ ನೀರು,

೧೩. ದೊಡ್ಡಪ್ಪ,

೧೪. ಶೇಕ್ಸ್ ಪಿಯರ್ ಸ್ವಪ್ನ ನೌಕೆ,

೧೫. ಯಯಾತಿ,

೧೬. ಕಾಕನ ಕೋಟೆ,

೧೭. ಅಕಾಶಬುಟ್ಟಿ,

೧೮. ನೀನಾನಾದ್ರೆನಾನೀನೇನಾ,

೧೯. ಸಂಕ್ರಮಣ

೨೦. ತಬರನ ಕಥೆ,

೨೧. ಮುಖ್ಯಮಂತ್ರಿ

೨೨. ಮಂದ್ರ

೨೩. ಅರಹಂತ

೨೪. ರೋಮಿಯೋ ಜೂಲಿಯೆಟ್

೨೫. ಮೈ ಮನಗಳ ನಡುವೆ

೨೬. ಮೇಘದೂತ

೨೭. ಅಂತಿಗೊನೆ

೨೮. ಹರಕೆಯ ಕುರಿ

೨೯. ಆಸ್ಫೋಟ

೩೦. ಮುಖಾಮುಖಿ

೩೧. ಕಣ್ಣಾ ಮುಚ್ಚಾಲೆ

೩೨. ಛಿದ್ರ

೩೩. ಅಕ್ಷಯ

೩೪. ಆಕಾಂಕ್ಷೆ

೩೫. ಕಳವು

೩೬. ನರಿಗಳಿಗೇಕೆ ಕೋಡಿಲ್ಲ

೩೭. ಹೆಲೋ

೩೮. ಕಾಕನ ಕೋಟೆ

ಕಲ್ಪನಾ ನಾಗನಾಥ್ ಭಾಗವಹಿಸಿದ, ರಂಗೋತ್ಸವಗಳು

[ಬದಲಾಯಿಸಿ]

ಹಂಪಿ ಉತ್ಸವ, ದಸರಾ ಉತ್ಸವ, ತುಂಗೋತ್ಸವಗಳು, ಹೈದರಾಬಾದ್, ಮುಂಬಯಿ, ಕೊಲ್ಕೊತ್ತಾ, ಚೆನ್ನೈ, ದೆಹಲಿಯಲ್ಲದೆ, ಹೊರ ದೇಶಗಳಾದ ಅಮೇರಿಕ, ಲಂಡನ್ ಹಾಗೂ ಆಸ್ಟ್ರೇಲಿಯದಲ್ಲಿಯೂ ಪ್ರದರ್ಶನ ಕಂಡಿವೆ.

ಪ್ರಮುಖ ರಂಗ ತಂಡಗಳೊಂದಿಗೆ ಸಂಪರ್ಕ

[ಬದಲಾಯಿಸಿ]
  • ಬೆನಕ,
  • ಬೆನಕ ಮಕ್ಕಳ ನಾಟಕ ಕೇಂದ್ರ,
  • ಸ್ಪಂದನ,
  • ರಂಗಸಂಪದ,
  • ಸೂತ್ರಧಾರ,
  • ಸಂಕೇತ್,
  • ರಂಗನಿರಂತರ (ನಟನೆ ಮತ್ತು ಸಂಗೀತಕ್ಕೆ)
  • ಕಲಾಗಂಗೋತ್ರಿ,
  • ನಾಟ್ಯದರ್ಪಣ,
  • ನಟ ರಂಗ,
  • ಅನೇಕ
  • ಸಂಚಾರಿ

ಹಾಗೂ, ಮೈಸೂರ್ ಬ್ಯಾಂಕ್ ನ ಸಾಂಸ್ಕೃತಿಕ ಪರಿಷತ್ತು,

ರಂಗನಿರ್ದೇಶಕರ ಜೊತೆ ಪರಿಶ್ರಮ

[ಬದಲಾಯಿಸಿ]
  • ಬಿ. ವಿ. ಕಾರಂತ್,
  • ಶಂಕರ್ ನಾಗ್,
  • ಪ್ರೇಮಾ ಕಾರಂತ್,
  • ಆರ್. ನಾಗೇಶ್,
  • ಟಿ.ಎಸ್. ನಾಗಾಭರಣ,
  • ಸಿ.ಜಿ.ಕೆ,
  • ಬಿ. ಜಯಶ್ರೀ,
  • ರಣಜಿತ್ ಕಪೂರ್,
  • ಬಸವಲಿಂಗಯ್ಯ,
  • ವಿಕ್ರಮ್ ಕಾಪಾಡಿಯ,

ಮತ್ತಿತರ ಖ್ಯಾತ ರಂಗ ನಿರ್ದೇಶಕರಜೊತೆ,

ಹಾಗೂ, ಶ್ರೇಷ್ಠ ಸಂಗೀತಕಾರರ ಜೊತೆ ಪರಿಶ್ರಮಿಸಿದ ಅನುಭವವಿದೆ

[ಬದಲಾಯಿಸಿ]
  • ಬಿ.ವಿ.ಕಾರಂತ್
  • ಸಿ. ಅಶ್ವಥ್,
  • ಪಂ. ರಾಜೀವ್ ತಾರಾನಾಠ್,
  • ಶ್ಯಾಮಲ. ಜಿ. ಭಾವೆ,
  • ಸುಭಾಷ್ ಮೂಕೀಹಾಳ್
  • ವಿ.ರಾಮಮೂರ್ತಿ

ಕನ್ನಡ ಟಿ ವಿ ಧಾರಾವಾಹಿಗಳು

[ಬದಲಾಯಿಸಿ]
  • ಸಿಹಿ-ಕಹಿ,
  • ಮಾಯಾಮೃಗ,
  • ಮನ್ವಂತರ,
  • ಮುಕ್ತ,
  • ಕತೆಗಾರ,
  • ಮಳೆಬಿಲ್ಲು,
  • ಕಣ್ಣುಗಳು,
  • ಗರ್ವ,

ಹಿಂದಿ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಹಿಂದಿ ಟಿ ವಿ

[ಬದಲಾಯಿಸಿ]
  • ಕೃಷ್ಣಾವತಾರ್,
  • ಅಂತರಾಳ್,
  • ಕಾನೂರ್ ಕಿ ಮಾಲ್ಕಿನ್,
  • ಸಂಸ್ಮರಣ್,
  • ಮಾಲ್ಗುಡಿ ಡೇಸ್,

ಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಚಲನಚಿತ್ರಗಳು

[ಬದಲಾಯಿಸಿ]
  • ಮಲಯಮಾರುತ,
  • ವಿಮೋಚನೆ,
  • ಕಾನೂರು ಹೆಗ್ಗಡತಿ,
  • ಅತಿಥಿ

ಕನ್ನಡ ಭಾಷೆಯ ಸಿ. ಡಿ ಗಳು

[ಬದಲಾಯಿಸಿ]
  • ಹಾರೋಣ ಬಾ-ಬಿ. ವಿ ಕಾರಂತ
  • ನೇಸರ ನೋಡು-ಸಿ. ಅಶ್ವಥ್
  • ಬಂದಾನೋ ಬಂದ ಸವಾರ -ಬಿ.ವಿ.ಕಾರಂತ

ರಂಗ-ಸಂಗೀತಕ್ಕೆ ಪ್ರಾಧಾನ್ಯತೆ ದೊರಕಿಸುವುದು, ಇವರ ಜೀವನದ ಧ್ಯೇಯಗಳಲ್ಲೊಂದು.

  • ಖ್ಯಾತ ರಂಗಕರ್ಮಿ, ಸದಾನಂದ ಸುವರ್ಣರು ಸ್ಥಾಪಿಸಿದ, 'ಕಾಂತಾವರ ಕನ್ನಡ ಸಂಘ', ದ ವತಿಯಿಂದ, 'ಸುವರ್ಣ ರಂಗ ಸಮ್ಮಾನ್,' ಪ್ರಶಸ್ತಿ ಲಭಿಸಿದೆ. ಮಾರ್ಚ್ ೨೭ ರಂದು ರಂಗಭೂಮಿದಿನಾಚರಣೆಯ ದಿನ, ಪ್ರತಿವರ್ಷವೂ ಆ ದಿನ, ಪ್ರಶಸ್ತಿನೀಡುವ ಪರಿಪಾಠವಿದೆ. ಈ ಹಿನ್ನೆಲೆಯಲ್ಲಿ. ಶ್ರೇಷ್ಠ ರಂಗ-ಕರ್ಮಿಗಳಿಗೆ, ೧೦, ೦೦೦ ರೂಪಾಯಿ ನಗದು ಹಣ, ಹಾಗೂ ಪ್ರಶಸ್ತಿ-ಪತ್ರವನ್ನು ವಿತರಿಸಲಾಗುವುದು. ಉಡುಪಿ ಜಿಲ್ಲೆಯ ಕಾಂತಾವರದ, 'ಕೆ. ಬಿ. ಬಸವರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ,' ದಲ್ಲಿ, ಗುರುವಾರ, ೨೭ ರಂದು, ಮಧ್ಯಾನ್ಹ ೩ ಘಂಟೆಗೆ, " ಪ್ರಶಸ್ತಿಪ್ರದಾನ ಸಮಾರಂಭ," ದ ಆಯೋಜನೆಯಾಗಿದೆ.
  • ೨೦೧೧ ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿ ಲಭಿಸಿದೆ.

ಕಲ್ಪನಾ ನಾಗನಾಥ್ ಅವರು ಅಭಿನಾಯಿಸಿದ ನಾಟಕ, ರಂಗಗೀತೆ ಮತ್ತು ಪ್ರಶಸ್ತಿ ಸಮಾರಂಭದ ಕೆಲವು ಭಾವಛಿತ್ರಗಳು

[ಬದಲಾಯಿಸಿ]