ಎ. ವಿ. ನಾವಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೊ. ಎ. ವಿ. ನಾವಡ
ಜನನಏಪ್ರಿಲ್ ೨೮, ೧೯೪೬
ಮಂಗಳೂರು ಸಮೀಪದ ಕೋಟೆಕಾರು
ವೃತ್ತಿಪ್ರಾಧ್ಯಾಪಕರು
ಪ್ರಕಾರ/ಶೈಲಿಜನಪದ,
ವಿಷಯಭೂತಾರಾಧನೆ ಮತ್ತು ತುಳು ಜನಪದ

ಪ್ರೊ. ಎ. ವಿ. ನಾವಡ[೧] (ಏಪ್ರಿಲ್ ೨೮, ೧೯೪೬) ಕನ್ನಡನಾಡಿನ ಪ್ರಾಧ್ಯಾಪಕರಾಗಿ, ವಿದ್ವಾಂಸರಾಗಿ, ಭಾಷಾ ಶಾಸ್ತ್ರಜ್ಞರಾಗಿ ಮಹತ್ವದ ಕಾಯಕ ಮಾಡಿದವರಾಗಿದ್ದಾರೆ.

ಬಾಲ್ಯ[ಬದಲಾಯಿಸಿ]

ಎ.ವಿ. ನಾವಡ ಅವರು ಏಪ್ರಿಲ್ ೨೮, ೧೯೪೬ರಂದು ಮಂಗಳೂರು[೨] ಸಮೀಪದ ಕೋಟೆಕಾರು ಎಂಬಲ್ಲಿ ಜನಿಸಿದರು. ತಂದೆ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ ಮತ್ತು ತಾಯಿ ಪಾರ್ವತಿ.ಪ್ರಾಥಮಿಕ ಶಿಕ್ಷಣವನ್ನು ಕೋಟೆಕಾರಿನ ಸ್ವೆಲ್ಲಾ ಮೇರಿಸ್ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ವ್ಯಾಸಂಗಮಾಡಿ, ಬಳಿಕ ಆನಂದಾಶ್ರಮದ ಶಾಲೆಯಲ್ಲಿ ನಡೆಸಿದ ನಾವಡರು ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನಲ್ಲಿ ಪದವಿಯನ್ನೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನೂ ಪಡೆದರು.

ಉದ್ಯೋಗ[ಬದಲಾಯಿಸಿ]

ನಾವಡರು ಉದ್ಯೋಗಕ್ಕಾಗಿ ಸೇರಿದ್ದು ಕುಂದಾಪುರದ ಭಂಡಾರ್‌ಕರ್ಸ್‌ ಕಾಲೇಜು. ೧೯೭೦ರಿಂದ-೯೪ರವರೆಗೆ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ೨೪ ವರ್ಷ ಸೇವೆ ಸಲ್ಲಿಸಿದರು.

ಸಾಧನೆ[ಬದಲಾಯಿಸಿ]

೧೯೯೪ರಿಂದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಪುರಂದರದಾಸ ಅಧ್ಯಯನ ಪೀಠದ ಅಧ್ಯಕ್ಷರಾಗಿ, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಜಾನಪದ ರಂಗಕಲೆಗಳ[೩] ಅಧ್ಯಯನ ಕೇಂದ್ರದಲ್ಲಿ ಸಂಶೋಧಕರಾಗಿ[೪], ಉಡುಪಿಯ ಗೋವಿಂದಪೈ ಸಂಶೋಧನ ಕೇಂದ್ರದ ತುಳು ನಿಘಂಟು ಯೋಜನೆಯ ಮುಖ್ಯ ಸಂಪಾದಕರಾಗಿ ಸೇವೆ ಸಲಲ್ಲಿಸಿದ್ದಾರೆ.

ಕೃತಿಗಳು[ಬದಲಾಯಿಸಿ]

ಮಕ್ಕಳ ಸಾಹಿತ್ಯ[ಬದಲಾಯಿಸಿ]

  1. ರಾಜಹಂಸ(೧೯೭೦)
  2. ಮಧುಚಂದ್ರ(೧೯೭೧)
  3. ಪೇಟೆಗೆ ಬಂದ ಪುಟ್ಟಿ(೧೯೭೧)
  4. ಅಕ್ಕೆರಸು ಸಿರಿ(೨೦೦೦)

ಸಂಶೋಧನಕೃತಿಗಳು[ಬದಲಾಯಿಸಿ]

  1. ವಿವೆಕ್ಷೆ(೧೯೮೪)
  2. ಒಂದು ಸೊಲ್ಲು ನೂರು ಸೊರ
  3. ಜಾನಪದ-ವೈದ್ಯರ ಹಾಡುಗಳು
  4. ತುಳು ಜಾನಪದ ಗೀತೆಗಳು
  5. ಸಂಪಾದಿತ-ವಾಙ್ಞಯ ತಪಸ್ವಿ
  6. ನೇತ್ರಾವತಿ
  7. ತುರಾಯಿ
  8. ಬೆಳ್ಳಿ
  9. ಮಿನುಗು,
  10. ಹರಿದಾಸರ ಕೀರ್ತನೆಗಳಲ್ಲಿ-ಸಾವಿರ ಕೀರ್ತನೆಗಳು,
  11. ಸಾವಿರಾರು ಕೀರ್ತನೆಗಳು(೨೦೦೦)
  12. ಶ್ರೀ ವಾದಿರಾಜರ ಶ್ರೀಕೃಷ್ಣ ಬಾಲಲೀಲೆ
  13. ದಾಸರು ಕಂಡ ಪಾಂಡುರಂಗ ವಿಠಲ,
  14. ಈಸಬೇಕು ಇದ್ದು ಜೈಸಬೇಕು
  15. ಸಿರಿಪಾಡ್ದನ.
  16. ಕೊರಗ
  17. ಗೋವಿಂದ ಪೈ ಪದಪ್ರಯೋಗ ಕೋಶ(೧೯೮೭).
  18. ತುಳುವ ದರ್ಶನ(೧೯೮೮)
  19. ಕುಡುಬಿಯರು(೧೯೮೮)
  20. ಕಡೆಂಗೋಡ್ಲು ಶಂಕರಭಟ್ಟ(೧೯೮೬)
  21. ಸಿರಿ ಜಾತ್ರೆ(೧೯೯೧)
  22. ಕಾಡ್ಯನಾಟ ಪಠ್ಯ ಮತ್ತು ಪ್ರದರ್ಶನ(೧೯೮೬)
  23. ಕನ್ನಡ ವಿಮರ್ಶೆಯ ಮೊದಲ ಹೆಜ್ಜೆಗಳು(೧೯೯೨)
  24. ಜಾನಪದ ಸಮಾಲೋಚನೆ(೧೯೯೩)
  25. ಕಾಡ್ಯನಾಟದ ಕಥೆಗಳು(೧೯೯೨)
  26. ಜಾನಪದ ಕೈಪಿಡಿ ಇತರೊಂದಿಗೆ(೧೯೯೮)
  27. ಒಂದು ಸೊಲ್ಲು ನೂರು ಸೊರ(೧೯೯೯)
  28. ಅಕ್ಕೆರಸು ಸಿರಿ(೧೯೯೯)
  29. ಕಡೆಂಗೋಡ್ಲು ಶಂಕರ ಭಟ್ಟ ಬದುಕು ಬರಹ(೨೦೦೩)
  30. ಮೌಖಿಕ ಕಾವ್ಯಸಂಯೋಜನೆ ಪ್ರಕ್ರಿಯೆ(೨೦೦೨)
  31. ತುಳು ಪಾಡ್ದನ ಬಂಧ ಮತ್ತು ರಚನೆ[೫](೨೦೦೩)
  32. ದಾಸಮಾರ್ಗ(೨೦೦೪)
  33. ಅರಿನವ ಕುರುಹು(೨೦೦೯)
  34. ಕನ್ನಡ ದೈವಾರಾಧನೆ:ಪಾನಾರಾಟ(೨೦೦೭)
  35. ಕೊಂಕಣ ಕುಡುಬಿಯರು.
  36. ಜಾನಪದ ಸ್ವರೂಪ ಮತ್ತು ವ್ಯಾಖ್ಯೆ(೨೦೧೨)
  37. ಗೋವಿಂದ ಪೈ ನಿಘಂಟು(೨೦೧೧)
  38. ತುಳುಪೊಲಿ(೨೦೧೬)
  39. ಹರಿದಾಸರು ನಡೆದ ಹಾದಿಯಲ್ಲಿ(೨೦೧೩)

ಸಂಪಾದನೆಗಳು[ಬದಲಾಯಿಸಿ]

  1. ವಾದಿರಾಜರ ಸಮಗ್ರ ಕನ್ನಡ ರಚನೆ.
  2. ಪೇಜಾವರ ಸದಾಶಿವರಾವ್ ಸಮಗ್ರ ಬರಹಗಳು
  3. ತುಳು ನಿಘಂಟು
  4. ತುಳುವ ದರ್ಶನ
  5. ಕರ್ನಾಟಕ ಸಂಶೋಧನ ಜಾನಪದ.
  6. ವಾಙ್ಮಯ ತಪಸ್ವಿ(೧೯೭೭)
  7. ಕುಂದ ದರ್ಶನ(೧೯೭೮)
  8. ವೈಧ್ಯರ ಹಾಡುಗಳು(೧೯೮೫)
  9. ರಾಮಕ್ಕ ಮುಗೇರ್ತಿ ಕಟ್ಟಿದ ಸಿರಿಪಾಡ್ದನ(೧೯೯೮)
  10. ನೇತ್ರಾವತಿ(೧೯೮೫)
  11. ತುರಾಯಿ(೧೯೮೬)
  12. ಬೆಳ್ಳಿಮಿನುಗು(೧೯೭೫)
  13. ತುಳು ಜನಪದಗೀತೆ ಸಂಕಲನ(೨೦೦೯)
  14. ದಾಸವಾಙ್ಮಯ(೧೯೮೯)
  15. ಕನಕನ ಕಿಂಡಿ.
  16. ಕನಕ ಪದಕೋಶ
  17. ಕಡೆಂಗೋಡ್ಲು ವಾಚಿಕೆ(೧೯೯೫)
  18. ಶಬ್ದಪುರುಷ(೧೯೯೫)
  19. ಸಾವಿರ ಕೀರ್ತನೆಗಳು(೨೦೦೦)
  20. ಸಾವಿರಾರಿ ಕೀರ್ತನೆಗಳು(೨೦೦೩)
  21. ಕನ್ನಡ ಸಿರಿ(೨೦೦೩)
  22. ಹಸ್ರಪ್ರತಿ ವ್ಯಾಸಂಗ(೨೦೦೩)
  23. ವಾದಿರಾಜರ ಶ್ರೀ ಕೃಷ್ನ ಬಾಲಲೀಲೆ(೨೦೦೫)
  24. ಕರಾವಳಿ ಜಾನಪದ(೨೦೦೭)
  25. ತುಳು ಸಾಹಿತ್ಯ ಚರಿತ್ರೆ(೨೦೦೭)
  26. ಸಿರಿಗನ್ನಡ(೨೦೧೩)
  27. ಕನಕಕಾವ್ಯ ಸಂಪುಟ(೨೦೧೧)
  28. ಮುಂಬೆಳಗು
  29. ನಾಗರಾಧನೆಯ ಹಾಡುಗಳು[೬]
  30. ಪಾಣಾರಾಟ
  31. ಕನಕ ಪದಕೋಶ
  32. ಕಡೆಂಗೋಡ್ಲು ಶಂಕರ ಭಟ್ಟ.
  33. ಹೆರ್ಮನ್ ಮೋಂಗ್ಲಿನ್, ನೂರರ ನೆನಪು[೭]

ಪ್ರಶಸ್ತಿ ಗೌರವಗಳು[ಬದಲಾಯಿಸಿ]

  1. ‘ವಿವಕ್ಷೆ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ
  2. ಕಾಡ್ಯನಾಟ ಪಠ್ಯ ಮತ್ತು ಪ್ರದರ್ಶನ’ ಕೃತಿಗೆ ಆರ್ಯಭಟ ಪ್ರಶಸ್ತಿ.
  3. ಗುಂಡ್ಮಿ ಜಾನಪದ ಪ್ರಶಸ್ತಿ,
  4. ಫಿನ್‌ಲ್ಯಾಂಡಿನ ಅಂತಾರಾಷ್ಟ್ರೀಯ ಜಾನಪದ ಸಂಘದ ಗೌರವ ಸದಸ್ಯತ್ವ
  5. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಜಾನಪದ ತಜ್ಞ ಪ್ರಶಸ್ತಿ
  6. ಕು.ಶಿ. ಹರಿದಾಸಭಟ್ಟರ ಜಾನಪದ ಪ್ರಶಸ್ತಿ,
  7. ಸಾಹಿತ್ಯ ದಂಪತಿ ಪುರಸ್ಕಾರ[೮]
  8. ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ,
  9. ವರ್ಧಮಾನ ಸಾಹಿತ್ಯ ಪ್ರಶಸ್ತಿ,
  10. ಕನಕಶ್ರೀ ಪ್ರಶಸ್ತಿ.
  11. ಆರ್ಯಭಟ ಸಾಹಿತ್ಯ ಪ್ರಶಸ್ತಿ.
  12. ಪರಶುರಾಮ ಪ್ರಶಸ್ತಿ.
  13. ಸಂದೇಶ ಪ್ರಶಸ್ತಿ.
  14. ವಿಜಯ ವಿಠ್ಠಲ ಪ್ರಶಸ್ತಿ.
  15. ಗುರುಗೋವಿಂದ ವಿಠಲ ಪ್ರಶಸ್ತಿ.
  16. ಉಡುಪಿ ಸೋದೆ ಮಠ ಪುರಸ್ಕಾರ.
  17. ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ.
  18. ಕಲಬುರ್ಗಿ ಜಗನ್ನಾಥ ಸಂಶೋಧನ ಪ್ರಶಸ್ತಿ.
  19. ಜಾನಪದ ವಿಶ್ವ ಪ್ರತಿಷ್ಠಾನದ ದೀಪ ಪ್ರಶಸ್ತಿ.

ಮಾಹಿತಿ ಆಧಾರ[ಬದಲಾಯಿಸಿ]

ಕಣಜ Archived 2016-05-20 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2023-03-05. Retrieved 2018-11-21.
  2. http://www.sallapa.com/2013/08/blog-post_7862.html
  3. http://shodhganga.inflibnet.ac.in/bitstream/10603/106753/15/15_bibliography.pdf
  4. http://kannadajaanapada.blogspot.com/2013/01/blog-post_26.html
  5. http://kannadapustakapradhikara.com/books.php?page=9&discounts=50
  6. https://m.dailyhunt.in/Ebooks/kannada/naagaaraadhaneya-haadugalu-book-104203
  7. http://m.varthabharati.in/article/2018_07_23/144317
  8. "ಆರ್ಕೈವ್ ನಕಲು". Archived from the original on 2017-12-24. Retrieved 2018-11-21.