ಎಲಿಜ಼ಬೆತ್ ಟೇಲರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಲಿಜಬೆತ್ ಟೇಲರ್

Taylor in 1958
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಎಲಿಜಬೆತ್‌ ರೋಸ್‌ಮಂಡ್‌ ಟೇಲರ್
(೧೯೩೨-೦೨-೨೭)೨೭ ಫೆಬ್ರವರಿ ೧೯೩೨
ಹ್ಯಾಂಪ್‍ಸ್ಟೆಡ್, ಲಂಡನ್, ಇಂಗ್ಲೆಂಡ್
ನಿಧನ March 23, 2011(2011-03-23) (aged 79)
ಲಾಸ್ ಏಂಜಲೀಸ್, ಕ್ಯಾಲಿಫ಼ೋರ್ನಿಯ, ಅಮೇರಿಕ ಸಂಸ್ಥಾನ
ಬೇರೆ ಹೆಸರುಗಳು ಲಿಜ್ ಟೇಲರ್
ವೃತ್ತಿ ನಟಿ
ವರ್ಷಗಳು ಸಕ್ರಿಯ ೧೯೩೩೨–೨೦೧೧
ಪತಿ/ಪತ್ನಿ ಕಾನ್ರೆಡ್ ಹಿಲ್ಟನ್ ಜೂ. (೧೯೫೦–೧೯೫೧)
ಮೈಕಲ್ ವೈಲ್ಡಿಂಗ್ (೧೯೫೨–೧೯೫೭)
ಮೈಕ್ ಟಾಡ್ (೧೯೫೭–೧೯೫೮)
ಎಡ್ಡಿ ಫ಼ಿಶರ್ (೧೯೫೯–೧೯೬೪)
ರಿಚರ್ಡ್ ಬರ್ಟನ್ (೧೯೬೪–೧೯೭೪; ೧೯೭೫–೧೯೭೬)
ಜಾನ್ ವಾರ್ನರ್ (೧೯೭೬–೧೯೮೨)
ಲ್ಯಾರಿ ಫ಼ೋರ್ಟೆನ್ಸ್ಕಿ (೧೯೯೧–೧೯೯೬)

ಡೇಮ್‌‌ ಎಲಿಜಬೆತ್‌ ರೋಸ್‌ಮಂಡ್‌ ಟೇಲರ್, DBE (೨೭ ಫೆಬ್ರವರಿ ೧೯೩೨ - ೨೩ ಮಾರ್ಚ್ ೨೦೧೧), ಲಿಜ್‌ ಟೇಲರ್ ಎಂಬ ಹೆಸರನ್ನೂ ಹೊಂದಿದ್ದು, ಓರ್ವ ಆಂಗ್ಲೋ-ಅಮೇರಿಕನ್‌ ನಟಿಯಾಗಿದ್ದಾರೆ.[೧] ಅವರು ತಮ್ಮ ನಟನಾ ಚಾತುರ್ಯ ಹಾಗೂ ಸೌಂದರ್ಯ ಮಾತ್ರವಲ್ಲ, ತಮ್ಮ ಅನೇಕ ಮದುವೆಗಳೂ ಸೇರಿದಂತೆ ಅವರ ಹಾಲಿವುಡ್‌‌ ಜೀವನಶೈಲಿಗಳಿಗಾಗಿ ಅವರು ಹೆಸರುವಾಸಿಯಾಗಿದ್ದಾರೆ. ಟೇಲರ್ ಅವರು ಹಾಲಿವುಡ್‌'ನ ಸುವರ್ಣ ವರ್ಷಗಳ ಶ್ರೇಷ್ಠ ನಟಿಯರಲ್ಲಿ ಒಬ್ಬರಾಗಿ ಹಾಗೂ, ಅತ್ಯಂತ ಉತ್ಪ್ರೇಕ್ಷಿತ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದಾರೆ. ಅಮೇರಿಕನ್‌ ಫಿಲ್ಮ್‌‌ ಇನ್‌ಸ್ಟಿಟ್ಯೂಟ್‌‌ ಟೇಲರ್‌ರನ್ನು ತಮ್ಮ ಮಹಿಳಾ ದಂತಕಥೆಗಳ ಪಟ್ಟಿಯಲ್ಲಿ ಏಳನೆಯವರಾಗಿ ಹೆಸರಿಸಿದೆ.

ಮುಂಚಿನ ವರ್ಷಗಳು (೧೯೩೨–೧೯೪೨)[ಬದಲಾಯಿಸಿ]

ಟೇಲರ್‌ರು ವಾಯುವ್ಯ ಲಂಡನ್‌ನ ಶ್ರೀಮಂತ ಜಿಲ್ಲೆಯಾದ ಹ್ಯಾಂಪ್‌ಸ್ಟೆಡ್‌ನಲ್ಲಿ, ಇಂಗ್ಲೆಂಡ್‌ನಲ್ಲಿ ನೆಲೆಸಿದ್ದ ಅಮೇರಿಕನ್ನರಾಗಿದ್ದ ಫ್ರಾನ್ಸಿಸ್‌ ಲೆನ್ನ್‌ ಟೇಲರ್‌ (೧೮೯೭–೧೯೬೮) ಹಾಗೂ ಸಾರಾ ವಯೊಲಾ ವಾರ್ಮ್‌ಬ್ರಾಡ್ಟ್‌‌‌ (೧೮೯೫–೧೯೯೪) ದಂಪತಿಗಳ ಎರಡನೆಯ ಮಗುವಾಗಿ ಜನಿಸಿದರು. ಟೇಲರ್‌'ರ ಹಿರಿಯ ಸಹೋದರ,ಹೋವರ್ಡ್‌‌ ಟೇಲರ್‌ರು, ೧೯೨೯ರಲ್ಲಿ ಜನಿಸಿದ್ದರು. ಆಕೆಯ ಪೋಷಕರಿಬ್ಬರೂ ಕನ್ಸಾಸ್‌ನ ಅರ್ಕನ್ಸಾಸ್‌ ನಗರ ಮೂಲದವರು. ಆಕೆಯ ತಂದೆಯವರು ಓರ್ವ ಕಲಾಕೃತಿಗಳ ವಿತರಕರಾಗಿದ್ದರು ಹಾಗೂ ಸಾರಾ ಸೋಥರ್ನ್‌‌ ಎಂಬ ಹೆಸರನ್ನು ರಂಗನಾಮವನ್ನಾಗಿ ಹೊಂದಿದ್ದ ಆಕೆಯ ತಾಯಿಯು ಮಾಜಿ ನಟಿಯಾಗಿದ್ದರು. ೧೯೨೬ರಲ್ಲಿ ನ್ಯೂಯಾರ್ಕ್‌ ಮಹಾನಗರದಲ್ಲಿ ಆಕೆ ಮತ್ತು ಫ್ರಾನ್ಸಿಸ್‌ ಟೇಲರ್‌ ಮದುವೆಯಾದ ನಂತರ ಸಾರಾ ರಂಗದಿಂದ ನಿವೃತ್ತಿ ಪಡೆದರು. ಟೇಲರ್‌'ರ ಎರಡು ಪ್ರಥಮ ನಾಮಗಳನ್ನು, ಆಕೆಯ ತಂದೆಯ ಕಡೆಯಿಂದ ಅಜ್ಜಿಯಾದ ಎಲಿಜಬೆತ್‌ ಮೇರಿ (ರೋಸ್‌ಮಂಡ್‌) ಟೇಲರ್‌ರ ಗೌರವಾರ್ಥ ಇಡಲಾಗಿತ್ತು. UK ಹಾಗೂ U.S.ಗಳ ಉಭಯ ನಾಗರೀಕತ್ವ ಹೊಂದಿದ್ದ, ಟೇಲರ್‌ರು ಜಸ್‌ ಸೋಲಿ ಯವರ ನಿಯಮಗಳ ಪ್ರಕಾರ ಬ್ರಿಟಿಷ್‌ ನೆಲದಲ್ಲಿ ಹುಟ್ಟಿದ ಕಾರಣ ಬ್ರಿಟಿಷ್‌ ಪೌರತ್ವ, ಹಾಗೂ ಜಸ್‌ ಸ್ಯಾಂಗ್ವಿನಿಸ್‌ ರ ನಿಯಮಗಳಡಿ ಪೋಷಕರ ಕಡೆಯಿಂದಾಗಿ ಅಮೇರಿಕನ್‌ ನಾಗರಿಕರಾಗಿ ಜನಿಸಿದ್ದರು. ಮೂರು ವರ್ಷದ ವಯಸ್ಸಿನಲ್ಲಿಯೇ, ಟೇಲರ್‌ ವಕ್ಕಾನಿಯವರಿಂದ ಬ್ಯಾಲೆಯ ತರಬೇತಿಯನ್ನು ಪಡೆಯಲು ಆರಂಭಿಸಿದ್ದರು. ವಿಶ್ವ ಸಮರ II ಆರಂಭಗೊಳ್ಳುವುದಕ್ಕೆ ಸ್ವಲ್ಪ ಸಮಯದ ಮುನ್ನ, ಯುದ್ಧದ ಸಮಸ್ಯೆಗಳಿಂದ ಪಾರಾಗಲು ಆಕೆಯ ಪೋಷಕರು ಯುನೈಟೆಡ್‌‌ ಸ್ಟೇಟ್ಸ್‌ಗೆ ಹಿಂದಿರುಗಲು ನಿರ್ಧರಿಸಿದರು. ಆಕೆಯ ತಾಯಿಯು ಮಕ್ಕಳನ್ನು ಕರೆದುಕೊಂಡು ಮೊದಲಿಗೆ ನ್ಯೂಯಾರ್ಕ್‌ಗೆ ಏಪ್ರಿಲ್‌ ೧೯೩೯ರಲ್ಲಿ ಆಗಮಿಸಿದರೆ,[೨] ಆಕೆಯ ತಂದೆಯು ಕಲಾಕೃತಿಗಳ ವ್ಯವಹಾರಗಳನ್ನು ಅಂತಿಮಗೊಳಿಸಲು ಲಂಡನ್‌‌ನಲ್ಲಿಯೇ ಉಳಿದುಕೊಂಡು ನವೆಂಬರ್‌ನಲ್ಲಿ ಆಗಮಿಸಿದರು.[೩] ಸಾರಾ'ರ ಕುಟುಂಬವಾದ ವಾರ್ಮ್‌ಬ್ರಾಡ್ಟ್ಸ್‌ನವರು ಆಗ ಅಲ್ಲಿ ನೆಲೆಸಿದ್ದ, ಕಾರಣ ಅವರು ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲೀಸ್‌ನಲ್ಲಿ ನೆಲೆಗೊಂಡರು. ಹಾಪ್ಪರ್‌ರ ಮೂಲಕ, ಟೇಲರ್‌ ಕುಟುಂಬವು ಓರ್ವ ಶ್ರೀಮಂತ ಆಂಗ್ಲ ಪ್ರಮುಖ ಹಾಗೂ ಹಾಲಿವುಡ್‌ನಲ್ಲಿನ ಯೂನಿವರ್ಸಲ್‌ ಪಿಕ್ಚರ್ಸ್‌ ಸಂಸ್ಥೆಯ ಅಧ್ಯಕ್ಷ ಹಾಗೂ ಪ್ರಮುಖ ಷೇರುದಾರರಾಗಿದ್ದ ಚೀವರ್‌ ಕೌಡೆನ್‌ರ ಭಾವೀಪತ್ನಿಯೂ ಆಗಿದ್ದ ಆಂಡ್ರಿಯಾ ಬೆರೆನ್ಸ್‌ರ ಪರಿಚಯವನ್ನು ಹೊಂದಿತು. ಸಾಧಾರಣವಾಗಿ ವಿಚಲಿತರಾಗದ ಆದರೆ ಎಲಿಜಬೆತ್‌ರ ಉಸಿರು ಬಿಗಿಹಿಡಿಯುವಂತೆ ಮಾಡುವ ದಟ್ಟ ಸೌಂದರ್ಯದಿಂದ ಮೈಮರೆಯಬಹುದಾದ ಕೌಡೆನ್‌ರನ್ನು ಭೇಟಿ ಮಾಡಲು ಎಲಿಜಬೆತ್‌ಳನ್ನು ಕರೆದುತರುವಂತೆ ಬೆರೆನ್ಸ್‌ ಸಾರಾರಿಗೆ ಒತ್ತಾಯಿಸಿದರು. ಮೆಟ್ರೋ-ಗೋಲ್ಡ್‌ವಿನ್‌-ಮೇಯರ್‌ ಕೂಡಾ ಅಲ್ಪ ಸಮಯದಲ್ಲೇ ಬ್ರಿಟಿಷ್‌ ಯುವತಿಯ ಮೇಲೆ ಆಸಕ್ತಿ ತೋರಿದರೂ ನಿರ್ಮಾಪಕ ಜಾನ್‌ ಕಾನ್ಸಿಡೈನ್‌ರೊಂದಿಗಿನ ಅನೌಪಚಾರಿಕ ಪ್ರತಿಭಾಪರೀಕ್ಷೆಯಲ್ಲಿ ಆಕೆಗೆ ಹಾಡಲು ಬರುವುದಿಲ್ಲವೆಂಬುದು ಸಿದ್ಧವಾದ ಕಾರಣ ಆಕೆ ಅವರೊಂದಿಗಿನ ಒಪ್ಪಂದ ಪಡೆದುಕೊಳ್ಳಲು ವಿಫಲರಾದರು. ಆದಾಗ್ಯೂ, ೧೮ ಸೆಪ್ಟೆಂಬರ್‌ ೧೯೪೧ರಂದು, ಯೂನಿವರ್ಸಲ್‌ ಪಿಕ್ಚರ್ಸ್‌ ಸಂಸ್ಥೆಯು ಎಲಿಜಬೆತ್‌ರೊಂದಿಗೆ ಆರು ತಿಂಗಳ ನವೀಕರಿಸಬಹುದಾದ ಒಪ್ಪಂದವನ್ನು ಪ್ರತಿ ವಾರಕ್ಕೆ $೧೦೦ರಂತೆ ಸಹಿ ಹಾಕಿತು. ಟೇಲರ್‌ ತನ್ನ ಪ್ರಥಮ ಚಲನಚಿತ್ರ ಹಾಗೂ ಯೂನಿವರ್ಸಲ್‌ ಪಿಕ್ಚರ್ಸ್‌ ಸಂಸ್ಥೆಗೆಂದು ಮಾಡಿದ ಆಕೆ ಮಾಡಿದ ಏಕೈಕ ದೆರ್‌ ಈಸ್‌ ಒನ್‌ ಬಾರ್ನ್‌‌ ಎವ್ವೆರಿ ಮಿನಟ್‌ ಎಂಬ ಚಿತ್ರದಲ್ಲಿ ಒಂಬತ್ತು ವರ್ಷದ ವಯಸ್ಸಿನಲ್ಲಿ ಕಾಣಿಸಿಕೊಂಡಳು. ಯೂನಿವರ್ಸಲ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಆರು ತಿಂಗಳಿಗೂ ಮುಂಚೆಯೇ ಸ್ಟುಡಿಯೋದ ನಿರ್ಮಾಣ ಮುಖ್ಯಸ್ಥ ಎಡ್ವರ್ಡ್‌ ಮಹ್ಲ್‌ ಆಕೆಯ ಒಪ್ಪಂದವನ್ನು ಮರುಪರಿಶೀಲನೆ ಮಾಡಿದರು. ಟೇಲರ್‌'ರ ಪ್ರತಿನಿಧಿ, ಮೈರೊನ್‌ ಸೆಲ್ಜ್‌ನಿಕ್‌ (ಡೇವಿಡ್‌ರ ಸಹೋದರ) ಹಾಗೂ ಚೀವರ್‌ ಕೌಡೆನ್‌ರೊಂದಿಗೆ ಮಹ್ಲ್‌ ಭೇಟಿ ಮಾಡಿದರು. ಮಹ್ಲ್‌ ಸೆಲ್ಜ್‌ನಿಕ್‌ ಹಾಗೂ ಕೌಡೆನ್‌ರವರುಗಳ ಟೇಲರ್‌ಗೆ ನೀಡಲಾದ ನಿರಂತರ ಬೆಂಬಲವನ್ನು ಪ್ರಶ್ನಿಸಿದರು : "ಅವಳಿಗೆ ಹಾಡಲು ಬರುವುದಿಲ್ಲ, ಅವಳಿಗೆ ಕುಣಿಯಲು ಬರುವುದಿಲ್ಲ ಅವಳಿಗೆ ನಟಿಸಲು ಬರುವುದಿಲ್ಲ. ಇಷ್ಟಲ್ಲದೇ ಮತ್ತೇನು, ಇದು ಆಕೆಯ ತಾಯಿಗೆ ಬಹುಶಃ ದುಸ್ಸಹನೀಯವಾಗಿರಬಹುದು. ಆಕೆಯನ್ನು ಭೇಟಿ ಮಾಡಬೇಕಾಗಿರುವುದು ನನಗೆ ಅತೀವ ಅಸಮಾಧಾನ ತಂದಿದೆ."[೪] ಫೆಬ್ರವರಿ ೧೯೪೨ರಲ್ಲಿ ಆಕೆಯ ಹತ್ತನೇ ಹುಟ್ಟಿದಹಬ್ಬಕ್ಕೆ ಕೆಲವೇ ದಿನಗಳ ಮುಂಚೆ ಯೂನಿವರ್ಸಲ್‌ ಸಂಸ್ಥೆಯು ಟೇಲರ್‌ರೊಂದಿಗಿನ ಒಪ್ಪಂದವನ್ನು ರದ್ದುಮಾಡಿತು. ಆದಾಗ್ಯೂ ೧೫ ಅಕ್ಟೋಬರ್‌‌ ೧೯೪೨ರಂದು ಮೆಟ್ರೋ-ಗೋಲ್ಡ್‌ವಿನ್‌-ಮೇಯರ್‌ ಲ್ಯಾಸ್ಸೀ ಕಮ್‌ ಹೋಮ್‌ ಚಿತ್ರದಲ್ಲಿ ಪ್ರಿಸಿಲ್ಲಾಳ ಪಾತ್ರ ಮಾಡಲು ಟೇಲರ್‌ರೊಂದಿಗೆ ವಾರಕ್ಕೆ $೧೦೦ರಂತೆ ಮೂರು ತಿಂಗಳ ಕಾಲದ ಒಪ್ಪಂದಕ್ಕೆ ಸಹಿ ಹಾಕಿತು.

ವೃತ್ತಿ ಜೀವನ[ಬದಲಾಯಿಸಿ]

ಹರೆಯದ ತಾರೆ[ಬದಲಾಯಿಸಿ]

ಲ್ಯಾಸ್ಸೀ ಕಮ್‌ ಹೋಮ್‌ ನ ಪಾತ್ರವರ್ಗದಲ್ಲಿ ಟೇಲರ್‌ಳ ಆಜೀವಪರ್ಯಂತ ಸ್ನೇಹಿತನಾಗಿ ಮಾರ್ಪಟ್ಟ ಬಾಲ ತಾರೆ ರಾಡ್ಡಿ ಮೆಕ್‌ಡವಲ್‌ ಇದ್ದನು. ೧೯೪೩ರಲ್ಲಿ ಅದರ ಬಿಡುಗಡೆಯ ನಂತರ ಅದರಲ್ಲಿನ ಮೆಕ್‌ಡವಲ್‌ ಹಾಗೂ ಟೇಲರ್‌ರ ಇಬ್ಬರ ನಟನೆಗಾಗಿಯೂ ಚಿತ್ರವು ಉತ್ತಮ ಪ್ರತಿಕ್ರಿಯೆಯನ್ನೇ ಪಡೆಯಿತು. ಲ್ಯಾಸ್ಸೀ ಕಮ್‌ ಹೋಮ್‌ ನಲ್ಲಿ ಆಕೆ ತೋರಿದ ಸಾಧನೆಯ ಮೇರೆಗೆ MGM ಸಂಸ್ಥೆಯು ಟೇಲರ್‌ರೊಂದಿಗೆ ಸಾಂಪ್ರದಾಯಿಕ ರೀತಿಯ ಏಳು ವರ್ಷಗಳ ಪ್ರತಿ ವಾರಕ್ಕೆ $೧೦೦ರ ಹಾಗೆ ಆದರೆ ನಂತರ ಏಳನೆಯ ವರ್ಷದ ವೇಳೆಗೆ $೭೫೦ನಷ್ಟು ಭಾರಿ ಮೊತ್ತವನ್ನು ತಲುಪುವವರೆಗೆ ನಿಯಮಿತ ಅವಧಿಗೆ ಹೆಚ್ಚುತ್ತಾ ಹೋಗುವಂತಹಾ ಒಪ್ಪಂದಕ್ಕೆ ಸಹಿ ಹಾಕಿತು. MGM ಸಂಸ್ಥೆಯೊಂದಿಗಿನ ಹೊಸ ಒಪ್ಪಂದದಡಿ ಆಕೆಯ ಪ್ರಥಮ ಕಾರ್ಯಭಾರವು ಎರವಲು-ಸೇವೆಯ ಮೇರೆಗೆ 20th/ತ್‌ ಸೆಂಚುರಿ ಫಾಕ್ಸ್‌ ಸಂಸ್ಥೆ ನಿರ್ಮಿತ ಚಾರ್ಲೊಟ್‌ ಬ್ರಾಂಟ್‌ರ ಕಾದಂಬರಿ ಜೇನ್‌ ಐರ್‌ ನ (೧೯೪೪) ಚಲನಚಿತ್ರ ಆವೃತ್ತಿಯಲ್ಲಿ ಹೆಲೆನ್‌ ಬರ್ರೋಸ್‌ನ ಪಾತ್ರ ವಹಿಸುವುದಾಗಿತ್ತು. ಈ ಅವಧಿಯಲ್ಲಿ MGMನ ಪರವಾಗಿ ಮತ್ತೊಂದು ರಾಡ್ಡಿ ಮೆಕ್‌ಡವಲ್‌ರ ಚಿತ್ರ ದ ವೈಟ್‌ ಕ್ಲಿಫ್ಸ್‌ ಆಫ್‌ ಡೊವರ್‌ (೧೯೪೪)ನಲ್ಲಿ ಕಾಣಿಸಿಕೊಳ್ಳುವುದಕ್ಕಾಗಿ ಇಂಗ್ಲೆಂಡ್‌‌ಗೆ ಕೂಡಾ ಮರಳಿದ್ದರು. ಆದರೆ MGM'ನ ನ್ಯಾಷನಲ್‌ ವೆಲ್ವೆಟ್‌ ಚಿತ್ರದಲ್ಲಿನ ವೆಲ್ವೆಟ್‌ ಬ್ರೌನ್‌ಳ ಪಾತ್ರಕ್ಕಾಗಿ ಟೇಲರ್‌'ರ ನಡೆಸಿದ ಸತತ ಪ್ರಯತ್ನ ಹಾಗೂ ತಯಾರಿಯೇ ಟೇಲರ್‌ರನ್ನು ೧೨ರಷ್ಟು ಎಳೆಯ ವಯಸ್ಸಿನಲ್ಲಿಯೇ ತಾರೆಯ ಪಟ್ಟಕ್ಕೆ ಕರೆದೊಯ್ಯಿತು. ಟೇಲರ್‌'ಳದು ಅದರಲ್ಲಿ ವೆಲ್ವೆಟ್‌ ಬ್ರೌನ್‌ ಎಂಬ ಹೆಸರಿನ ಗ್ರಾಂಡ್‌ ನ್ಯಾಷನಲ್‌ ಪಂದ್ಯದಲ್ಲಿ ಗೆಲ್ಲಲು ತನ್ನ ಪ್ರೀತಿಯ ಕುದುರೆಗೆ ತರಬೇತಿ ನೀಡಲಿಚ್ಛಿಸುವ ಓರ್ವ ಚಿಕ್ಕ ಹುಡುಗಿಯ ಪಾತ್ರವಾಗಿತ್ತು. ನ್ಯಾಷನಲ್‌ ವೆಲ್ವೆಟ್‌ , ಪ್ರೀತಿಪಾತ್ರ ಅಮೇರಿಕನ್ನರ ಅಚ್ಚುಮೆಚ್ಚಿನ ಮಿಕಿ ರೂನೆ ಹಾಗೂ ಆಂಗ್ಲ ನವನಟಿ ಏಂಜೆಲಾ ಲ್ಯಾನ್ಸ್‌ಬರಿಯರನ್ನೂ ತನ್ನ ತಾರಾಗಣದಲ್ಲಿ ಹೊಂದಿದ್ದು, ಡಿಸೆಂಬರ್‌ ೧೯೪೪ರಲ್ಲಿ ಬಿಡುಗಡೆಯಾದಾಗ ಅಭೂತಪೂರ್ವ ಯಶಸ್ಸು ಕಂಡು ಟೇಲರ್‌'ರ ಜೀವನದ ಗತಿಯನ್ನೇ ಬದಲಾಯಿಸಿತು. ನ್ಯಾಷನಲ್‌ ವೆಲ್ವೆಟ್‌ ನ ಚಿತ್ರೀಕರಣದ ಸಮಯದಲ್ಲಿ ಕುದುರೆಯಿಂದ ಬಿದ್ದುದರಿಂದ ಆಕೆಯ ಬೆನ್ನಿನಲ್ಲಿ ಆದ ಗಾಯವು ಆಕೆಗೆ ನಂತರ ಉಂಟಾದ ಅನೇಕ ಬೆನ್ನಿನ ತೊಂದರೆಗಳಿಗೆ ಕಾರಣವಾಯಿತು. ನ್ಯಾಷನಲ್‌ ವೆಲ್ವೆಟ್‌ ಚಿತ್ರವು US$೪ ದಶಲಕ್ಷಕ್ಕೂ ಹೆಚ್ಚಿನ ಮೊತ್ತದ ಗಲ್ಲಾ ಪೆಟ್ಟಿಗೆ ಗಳಿಕೆ ಕಂಡಿತಲ್ಲದೇ ಟೇಲರ್‌ರ ವಾರ್ಷಿಕ ವೇತನವನ್ನು ಪ್ರತಿ ವರ್ಷಕ್ಕೆ $೩೦,೦೦೦ಕ್ಕೆ ಹೆಚ್ಚಿಸಲು ಹೊಸ ದೀರ್ಘ-ಕಾಲೀನ ಒಪ್ಪಂದವನ್ನು ಅವರೊಂದಿಗೆ ಸಹಿ ಹಾಕಿತು. ವೆಲ್ವೆಟ್‌ ಚಿತ್ರದ ಗಲ್ಲಾ ಪೆಟ್ಟಿಗೆ ಯಶಸ್ಸಿನ ಲಾಭ ಪಡೆದುಕೊಳ್ಳಲು, ಟೇಲರ್‌ರನ್ನು ಮತ್ತೊಂದು ಪ್ರಾಣಿಗಳಿಗೆ ಸಂಬಂಧಿಸಿದ ಕೃತಿಯ ಚಿತ್ರ, ನಾಝಿಗಳನ್ನು ಸತತವಾಗಿ ಬೇಸ್ತುಬೀಳಿಸುವ ವಿಶ್ವ ಸಮರ IIರಲ್ಲಿನ ಮಿತ್ರದೇಶಗಳ ಹೋರಾಟಗಾರ ಎಂಬಂತೆ ಬಿಂಬಿಸಲ್ಪಟ್ಟ "ಬಿಲ್‌‌" ಎಂಬ ಬೇರೆಯೇ ಆದ ನಾಯಿಯ ಕುರಿತಾದ ಕಥೆಯಿರುವ, ಕರೇಜ್‌ ಆಫ್‌ ಲ್ಯಾಸ್ಸೀ ಯಲ್ಲಿ ನಟಿಸಲು ಒತ್ತಾಯಿಸಲಾಯಿತು, ಟೇಲರ್‌ರದು ಇದರಲ್ಲಿ ಮತ್ತೊಂದು ಹೊರಗಿನ ಪಾತ್ರ. ೧೯೪೬ರ ಕರೇಜ್‌ ಆಫ್‌ ಲ್ಯಾಸ್ಸೀ ಚಿತ್ರದ ಯಶಸ್ಸು ಟೇಲರ್‌ರಿಗೆ ವಾರಕ್ಕೆ $೭೫೦, ಆಕೆಯ ತಾಯಿಗೆ $೨೫೦, ಇದರೊಂದಿಗೆ $೧,೫೦೦ ಬೋನಸ್‌/ಲಾಭಾಂಶ ಗಳಿಸಲು ಅವಕಾಶ ನೀಡುವ ಮತ್ತೊಂದು ಒಪ್ಪಂದಕ್ಕೆ ದಾರಿ ಮಾಡಿತು. ವಾರ್ನರ್‌ ಬ್ರದರ್ಸ್‌' ಸಂಸ್ಥೆಯ ಪರವಾಗಿ ಎರವಲು ನಟಿಸಿದ ಲೈಫ್‌ ವಿತ್‌ ಫಾದರ್‌ (೧೯೪೭)ನಲ್ಲಿನ ಮೇರಿ ಸ್ಕಿನ್ನರ್‌, ಸಿಂಥಿಯಾ (೧೯೪೭)ದಲ್ಲಿನ ಸಿಂಥಿಯಾ ಬಿಷಪ್‌, ಎ ಡೇಟ್‌ ವಿತ್‌ ಜ್ಯೂಡಿ (೧೯೪೮)ಯಲ್ಲಿನ ಕೆರೋಲ್‌ ಪ್ರಿಂಗಲ್‌ ಹಾಗೂ ಜ್ಯೂಲಿಯಾ ಮಿಸ್‌ಬಿಹೇವ್ಸ್‌ (೧೯೪೮)ನಲ್ಲಿನ ಸೂಸನ್‌ ಪ್ರಾಕೆಟ್‌ನಂತಹಾ ಆಕೆಯ ಪಾತ್ರಗಳೆಲ್ಲವೂ ಯಶಸ್ವಿಯೆಂದು ಸಾಬೀತಾದವು. ಧನಖಾತರಿಯ/ನಂಬಲರ್ಹ ಹರೆಯದ ತಾರೆ ಎಂಬ ಆಕೆಯ ಖ್ಯಾತಿ ಹಾಗೂ "ಒನ್‌-ಷಾಟ್‌ ಲಿಜ್‌ " ಎಂಬ ಅವರ ಉಪನಾಮಗಳು (ಒಂದೇ ಟೇಕ್‌ನಲ್ಲಿ ದೃಶ್ಯವೊಂದನ್ನು ಚಿತ್ರೀಕರಿಸಬಲ್ಲ ಆಕೆಯ ಸಾಮರ್ಥ್ಯ ಸೂಚಿಸುವ) ಮೆಟ್ರೋದೊಂದಿಗೆ ಪೂರ್ಣ ಹಾಗೂ ಉಜ್ವಲ ವೃತ್ತಿಜೀವನವನ್ನು ಖಚಿತಪಡಿಸಿದವು. ಅಮೇರಿಕಾದ ಶ್ರೇಷ್ಠಕೃತಿಯೆನಿಸಿದ ಚಿತ್ರ ಲಿಟಲ್‌ ವಿಮೆನ್‌ (೧೯೪೯)ನಲ್ಲಿನ ಟೇಲರ್'ರ ಆಮಿಯ ಪಾತ್ರವು ಆಕೆಯ ಹರೆಯದ ಪಾತ್ರಗಳಲ್ಲಿ ಕೊನೆಯದಾಗಿತ್ತು. ಅಕ್ಟೋಬರ್‌‌ ೧೯೪೮ರಲ್ಲಿ, RMS ಕ್ವೀನ್‌ ಮೇರಿ ಎಂಬ ಹಡಗನ್ನು ಏರಿ ತಾನು ನಟಿಸಿದ ಪ್ರಥಮ ಪ್ರಾಪ್ತವಯಸ್ಕ ಪಾತ್ರವನ್ನು ಹೊಂದಿರುವ ಕಾನ್ಸ್‌ಪಿರೇಟರ್‌ ಚಿತ್ರದ ಆರಂಭವಾಗುತ್ತಿರುವ ಚಿತ್ರೀಕರಣದಲ್ಲಿ ಭಾಗವಹಿಸಲು ಇಂಗ್ಲೆಂಡ್‌ಗೆ ಪ್ರಯಾಣಿಸಿದರು.

ಪ್ರಾಪ್ತವಯಸ್ಕ ಪಾತ್ರಗಳಿಗೆ ಬದಲಾವಣೆ[ಬದಲಾಯಿಸಿ]

ಫಾದರ್‌ ಆಫ್‌ ದ ಬ್ರೈಡ್‌ (1950)ನಲ್ಲಿ

೧೯೪೯ರಲ್ಲಿ, ಕಾನ್ಸ್‌ಪಿರೇಟರ್‌ ಚಿತ್ರವು ಬಿಡುಗಡೆಯಾದಾಗ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತು, ಆದರೆ ಟೇಲರ್‌'ರ (ಚಿತ್ರೀಕರಣದ ಸಮಯದಲ್ಲಿ ಟೇಲರ್‌ ಕೇವಲ ೧೬ ವರ್ಷದವಳಾಗಿದ್ದಳು ಎಂಬುದನ್ನು ಗಮನದಲ್ಲಿಟ್ಟುಕೊಂಡು) ತಿಳಿಯದೆಯೇ ಕಮ್ಯೂನಿಸ್ಟ್‌ ಗೂಢಚಾರಿಯನ್ನು (೩೮-ವರ್ಷ-ವಯಸ್ಸಿನ ರಾಬರ್ಟ್‌ ಟೇಲರ್‌ ವಹಿಸಿದ ಪಾತ್ರ) ಮದುವೆಯಾಗುವ ೨೧-ವರ್ಷ-ವಯಸ್ಸಿನ ಪದಾರ್ಪಿತೆ ಮೆಲಿಂಡಾ ಗ್ರೇಟನ್‌ಳ ಪಾತ್ರದ ನಟನೆಯನ್ನು ಚಿತ್ರವೊಂದರಲ್ಲಿ ವಯಸ್ಕ ನಾಯಕಿಯ ಪ್ರಥಮ ಪಾತ್ರವಾಗಿ ವಿಮರ್ಶಕರು ಮೆಚ್ಚಿದರೂ, ಸಾರ್ವಜನಿಕರು ಆಕೆಯನ್ನು ವಯಸ್ಕ ಪಾತ್ರಗಳಲ್ಲಿ ಸ್ವೀಕರಿಸಲು ಒಪ್ಪಲು ಸಿದ್ಧರಿರದ ಹಾಗೆ ಭಾಸವಾಯಿತು. ಟೇಲರ್‌'ರ ತನ್ನ ಪ್ರತಿ ವಾರಕ್ಕೆ $೨,೦೦೦ಗಳ ಹೊಸ ವೇತನದಲ್ಲಿ ಪರದೆಯ ಆರಾಧ್ಯದೈವ ವಾನ್‌ ಜಾನ್ಸನ್‌ರೊಂದಿಗೆ ಜೋಡಿಯಾಗಿ ನಟಿಸಿದ ಪ್ರಥಮ ಚಿತ್ರ ದ ಬಿಗ್‌ ಹ್ಯಾಂಗ್‌ ಓವರ್‌ (೧೯೫೦), ವಿಮರ್ಶಕರಿಂದ ಹಾಗೂ ಗಲ್ಲಾ ಪೆಟ್ಟಿಗೆಯ ದೃಷ್ಟಿ ಎರಡೂ ದೃಷ್ಟಿಗಳಿಂದ ವಿಫಲವಾಗಿತ್ತು. ಈ ಚಿತ್ರವು ಟೇಲರ್‌ರಿಗೆ ತನ್ನ ಆಗತಾನೇ ಮೂಡಿದ್ದ ಇಂದ್ರಿಯಸಂವೇದಿ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶವನ್ನೂ ನೀಡಲಿಲ್ಲ. ಆಕೆಯ ವಯಸ್ಕ ಪಾತ್ರಗಳಲ್ಲಿನ ಪ್ರಥಮ ಗಲ್ಲಾ ಪೆಟ್ಟಿಗೆ ಯಶಸ್ಸು ಸ್ಪೆನ್ಸರ್‌ ಟ್ರೇಸಿ ಹಾಗೂ ಜೋನ್‌ ಬೆನೆಟ್‌ರೊಡನೆ ಆಕೆ ನಟಿಸಿದ ಪ್ರಣಯ ಹಾಸ್ಯಪ್ರಧಾನ ಚಿತ್ರ ಫಾದರ್‌ ಆಫ್‌ ದ ಬ್ರೈಡ್‌ (೧೯೫೦)ನ ಕೇ ಬ್ಯಾಂಕ್ಸ್‌ ಪಾತ್ರವು ನೀಡಿತು. ಈ ಚಿತ್ರದ ಉತ್ತರಭಾಗವಾಗಿ, ಫಾದರ್ಸ್‌ ಲಿಟಲ್‌ ಡಿವಿಡೆಂಡ್‌ (೧೯೫೧) ಚಿತ್ರವು ಹೊರಬಂದಿತು, ಟೇಲರ್‌'ರ ಸಹನಟಿ ಸ್ಪೆನ್ಸರ್‌ ಟ್ರೇಸಿ "ನೀರಸ...ನೀರಸ...ನೀರಸ" ಎಂದು ಹೇಳುವ ಮೂಲಕ ಅದರ ಬಗ್ಗೆ ತಮ್ಮ ಭಾವನೆಯನ್ನು ಸಾರಾಂಶವಾಗಿ ವ್ಯಕ್ತಪಡಿಸಿದ್ದರು." ಈ ಚಿತ್ರವನ್ನು ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮವಾಗಿ ಸ್ವೀಕರಿಸಲಾಯಿತಾದರೂ ಅಭಿನಯಪೂರ್ಣತೆ ಹೊಂದಿರುವ ನಟಿಯಾಗಿ ಆಕೆಯ ವೃತ್ತಿಜೀವನದ ಅವಧಿಯನ್ನು ಸಫಲವಾಗುವಂತೆ ಮಾಡಿದ್ದು ಟೇಲರ್‌'ರ ಮುಂದಿನ ಚಿತ್ರ. ೧೯೪೯ರ ಉತ್ತರಭಾಗದಲ್ಲಿ, ಜಾರ್ಜ್‌ ಸ್ಟೀವನ್ಸ್‌‌ರ ನಿರ್ದೇಶನದ 'ಎ ಪ್ಲೇಸ್‌ ಇನ್‌ ದ ಸನ್‌ ದ ಚಿತ್ರೀಕರಣದಲ್ಲಿ ಭಾಗವಹಿಸಲು ಟೇಲರ್‌ ಆರಂಭಿಸಿದ್ದರು. ೧೯೫೧ರಲ್ಲಿ ಅದರ ಬಿಡುಗಡೆಯಾದಾಗ ಜಾರ್ಜ್ ಈಸ್ಟ್‌ಮನ್‌ (ಮಾಂಟ್‌ಗೊಮೆರಿ ಕ್ಲಿಫ್ಟ್‌ ) ಹಾಗೂ ಆತನ ಬಡ, ಗರ್ಭಿಣಿಯಾದ ಕಾರ್ಖಾನೆಯಲ್ಲಿ-ಕೆಲಸ ಮಾಡುವ ಸ್ನೇಹಿತೆ ಅಲೈಸ್‌ ಟ್ರಿಪ್‌ (ಷೆಲ್ಲಿ ವಿಂಟರ್ಸ್‌‌)ರ ಮಧ್ಯೆ ಬರುವ ಓರ್ವ ಕೆಟ್ಟುಹೋದ ಪ್ರಮುಖೆ ಏಂಜೆಲಾ ವಿಕರ್ಸ್‌ ಆಗಿ ಟೇಲರ್‌ರ ಅಭಿನಯಕ್ಕೆ ಶ್ಲಾಘನೆಗಳ ಸುರಿಮಳೆಯಾಯಿತು. ಈ ಚಿತ್ರವು ಟೇಲರ್‌'ರ ವೃತ್ತಿಜೀವನದ ನಿರ್ಣಾಯಕ ಅಭಿನಯವೆನಿಸಿತಲ್ಲದೇ ವಿಮರ್ಶಕರಿಂದ ಮುಂದಿನ ೫೦ ವರ್ಷಗಳ ಚಿತ್ರರಂಗದ ಇತಿಹಾಸದುದ್ದಕ್ಕೂ ಕಾಪಾಡಿಕೊಂಡು ಬಂದ ಶ್ರೇಷ್ಠ ಅಭಿನಯ ಎಂಬ ಖ್ಯಾತಿಯು ಅವರಿಗೆ ದೊರೆಯಿತು. ದ ನ್ಯೂಯಾರ್ಕ್‌ ಟೈಮ್ಸ್‌ನ A.H. ವೇಯ್ಲರ್‌, "ಎಲಿಜಬೆತ್‌'ರ ಶ್ರೀಮಂತ ಹಾಗೂ ಸೌಂದರ್ಯವತಿ ಏಂಜೆಲಾ ಆಗಿ ನೀಡಿದ ಅಭಿನಯ/ಚಿತ್ರಣ/ನಿರೂಪಣೆ ಆಕೆಯ ವೃತ್ತಿಜೀವನದ ಅತ್ಯುತ್ತಮ ಪ್ರಯತ್ನ," ಎಂದು ಬರೆದರು ಹಾಗೂ ಬಾಕ್ಸ್‌ಆಫೀಸ್‌ ಪತ್ರಿಕೆಯ ವಿಮರ್ಶಕರು ನಿಸ್ಸಂದಿಗ್ಧವಾಗಿ "ಕುಮಾರಿ ಟೇಲರ್‌ರು ಅಕಾಡೆಮಿ ಪ್ರಶಸ್ತಿಯನ್ನು ಪಡೆಯಲು ಅರ್ಹರು" ಎಂದು ಹೇಳಿದರು. "ನಿಮ್ಮನ್ನು ಸುಂದರಿ ಎಂದು ಜನರು ಪರಿಗಣಿಸುವುದಾದರೆ, ನೀವು ನಟಿಸಲು ಯತ್ನಿಸುತ್ತಿರುವ ಓರ್ವ ಪರಿಚಾರಿಕೆಯೂ ಆಗಿರಬಹುದು - ಆದರೆ ಖಂಡಿತಾ ನಿಮ್ಮನ್ನು ಗೌರವದಿಂದ ನಡೆಸಿಕೊಳ್ಳಲಾಗುವುದಿಲ್ಲ", ಎಂದು ನಂತರ ಆಕೆ ಕಟುವಾಗಿ ಟೀಕಿಸಿದರು. ಓರ್ವ ನಟಿಯಾಗಿ ಅಂತಹಾ ನಿರ್ಧಾರಕ ಯಶಸ್ಸಿನ ನಂತರವೂ, ಟೇಲರ್‌ ತನಗೆ ಆ ಸಮಯದಲ್ಲಿ ನೀಡಲಾಗುತ್ತಿರುವ ಪಾತ್ರಗಳ ಬಗ್ಗೆ ತೀವ್ರವಾದ ಅಸಮಾಧಾನ ಹೊಂದಿದ್ದರು. ದ ಬೇರ್‌ಫೂಟ್‌ ಕಾಂಟೆಸ್ಸಾ ಹಾಗೂ ಐ ವಿಲ್‌ ಕ್ರೈ ಟುಮಾರೋ ನಂತಹಾ, ಚಿತ್ರಗಳಲ್ಲಿ ಆಕೆ ನಾಯಕಿಯ ಪಾತ್ರ ವಹಿಸಲು ಇಚ್ಛಿಸಿದರೂ, MGM ಆಕೆಯನ್ನು ತನ್ನ ಜೀವನವನ್ನೇ ಹೋಲುವ ಪಾತ್ರವಿರುವ ಕಾಲ್‌ಅವೇ ವೆಂಟ್‌ ದಟ್‌ಅವೇ (೧೯೫೧), ಲವ್‌ ಈಸ್‌ ಬೆಟರ್‌ ದ್ಯಾನ್‌ ಎವರ್‌ (೧೯೫೨), ಇವಾನ್‌ಹೋ (೧೯೫೨), ದ ಗರ್ಲ್‌ ಹೂ ಹ್ಯಾಡ್‌ ಎವ್ವೆರಿಥಿಂಗ್‌ (೧೯೫೩) ಹಾಗೂ ಬ್ಯೂ ಬ್ರಮ್ಮೆಲ್‌ (೧೯೫೪)ನಂತಹಾ ಉಪೇಕ್ಷೆಯ ಪಾತ್ರಗಳ ಹಾಗೂ ಮರೆತುಹೋಗುವಂತಹಾ ಚಿತ್ರಗಳಿಗೇ ಸೀಮಿತಗೊಳಿಸಿದ್ದರು. ಟೇಲರ್‌ರು ಇವಾನ್‌ಹೋ ಚಿತ್ರದಲ್ಲಿ ತನಗೆ ಲೇಡಿ ರೊವೆನಾಳ ಪಾತ್ರವೇ ಬೇಕೆಂದು ಸ್ಪಷ್ಟಪಡಿಸಿದ್ದರೂ ಅದನ್ನು ಆಗಲೇ ಜೋನ್‌ ಫಾಂಟೇನ್‌ರಿಗೆ ವಹಿಸಿದ್ದರಿಂದ ಆಕೆಗೆ ಕೃತಘ್ನಳಾದ ರೆಬೆಕ್ಕಾಳ ಪಾತ್ರ ನೀಡಲಾಯಿತು. ಆಕೆ ಮೊದಲ ಬಾರಿ ಗರ್ಭಿಣಿಯಾದಾಗ, MGM ಆಕೆ ಪೂರ್ಣ ಮಟ್ಟದ ಗರ್ಭಿಣಿಯಾಗುವ ಮೊದಲೆಯೇ ಆಕೆಯನ್ನು ಮತ್ತೊಂದು ಚಿತ್ರಕ್ಕೆ ದುಡಿಸಿಕೊಳ್ಳಲು ದ ಗರ್ಲ್‌ ಹೂ ಹ್ಯಾಡ್‌ ಎವ್ವೆರಿಥಿಂಗ್‌ ಚಿತ್ರದ ಕೆಲಸ (ದೈನಂದಿನ ಕೆಲಸದ ಸಮಯವನ್ನು ಎರಡು ಗಂಟೆಗಳ ಕಾಲ ಹಿಗ್ಗಿಸಲಾಗಿತ್ತು ಕೂಡಾ)ವಹಿಸುವ ಮೂಲಕ ಆಕೆಗೆ ಒತ್ತಡ ಹೇರಿತು. ಟೇಲರ್‌ ತನ್ನ ಎರಡನೇ ಪತಿ ಮೈಕೆಲ್‌ ವೈಲ್ಡಿಂಗ್‌ರೊಂದಿಗೆ ಆಗತಾನೆ ಹೊಸ ಮನೆಯನ್ನು ಖರೀದಿಸಿರುವುದರಿಂದ ಹಾಗೂ ಸದ್ಯದಲ್ಲೇ ಮಗು ಹುಟ್ಟುವುದರಿಂದ ಆರ್ಥಿಕ ಸ್ಥಿತಿ ಹದಗೆಡಬಹುದಾದರಿಂದ ತನಗೆ ಹಣದ ಅವಶ್ಯಕತೆ ಇತ್ತು ಎಂದು ಬೇಸರಿಸಿದರು. ಎಲಿಫೆಂಟ್‌ ವಾಕ್‌ (೧೯೫೪) ಚಿತ್ರದಲ್ಲಿನ ಪಾತ್ರವನ್ನು ಆಕೆಗಾಗಿಯೇ ರೂಪಿಸಿದ್ದರೂ ಗರ್ಭಧಾರಣೆಯ ಕಾರಣ ಟೇಲರ್‌ರು ಆ ಚಿತ್ರವನ್ನು ನಿರಾಕರಿಸುವ ಪರಿಸ್ಥಿತಿ ಬಂದೊದಗಿತು. ಟೇಲರ್‌ರನ್ನು ಬಹುಪಾಲು ಹೋಲುವ ವಿವಿಯೆನ್‌ ಲೇಹ್ಯ್‌ರು ಆ ಪಾತ್ರವನ್ನು ಪಡೆದುಕೊಂಡರಲ್ಲದೇ ಸಿಲೋನ್‌/ಶ್ರೀಲಂಕಾದಲ್ಲಿ ನಡೆದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ತೆರಳಿದರು. ಚಿತ್ರೀಕರಣದ ಸಮಯದಲ್ಲಿ ಲೇಹ್ಯ್‌ ತೀವ್ರ ನರಾಘಾತಕ್ಕೊಳಗಾದ ಕಾರಣ, ಅಂತಿಮವಾಗಿ ಟೇಲರ್‌ ಜನವರಿ ೧೯೫೩ರಲ್ಲಿ ತನ್ನ ಮಗು ಮೈಕೆಲ್‌ ವೈಲ್ಡಿಂಗ್‌,Jr.ನ ಜನನಾ ನಂತರ ಆ ಪಾತ್ರವನ್ನು ಮರಳಿ ಪಡೆದುಕೊಂಡರು. ಟೇಲರ್‌'ರ ಮುಂದಿನ ತೆರೆಯ ಮೇಲಿನ ಪ್ರಯತ್ನವಾದ, ರ್ರ್ಹಾಪ್‌ಸೋಡಿ ಯು (೧೯೫೪), ಮತ್ತೊಂದು ಬೇಸರದ ಪ್ರಣಯಭರಿತ ರೂಪಕವಾಗಿತ್ತಲ್ಲದೇ, ಅಷ್ಟೇ ಸ್ಪಷ್ಟವಾಗಿ ನಿರಾಶಾದಾಯಕವಾಗಿತ್ತು. ಟೇಲರ್‌ ಶೃತಿಪೂರ್ಣ ಪಿಟೀಲುವಾದಕ (ವಿಟ್ಟೋರಿಯೋ ಗಾಸ್‌‌ಮನ್‌) ಹಾಗೂ ಶ್ರದ್ಧಾವಂತ ಯುವ ಪಿಯಾನೋ ವಾದಕ(ಜಾನ್‌ ಎರಿಕ್‌ಸನ್‌)ರುಗಳನ್ನು ಪ್ರೀತಿಸುವ ಸುಂದರ ಶ್ರೀಮಂತ ಯುವತಿಯಾದ ಲ್ಯೂಸೀ/ಲೌಯ್ಸಿ ಡ್ಯೂರಾಂಟ್‌ಳ ಪಾತ್ರ ವಹಿಸಿದ್ದರು. ನ್ಯೂಯಾರ್ಕ್ ಹೆರಾಲ್ಡ್‌ ಟ್ರಿಬ್ಯೂನ್‌ ನ ಓರ್ವ ಚಿತ್ರ ವಿಮರ್ಶಕ ಈ ಬಗ್ಗೆ ಹೀಗೆಂದು ಬರೆದರು : "ಈ ಚಿತ್ರದಲ್ಲಿ ಸೌಂದರ್ಯವಿದೆ ಸರಿ, ಛಾಯಾಗ್ರಾಹಕದ/ಛಾಯಾಗ್ರಹಣದ/ಕ್ಯಾಮರಾದ/ಪರದೆಯ ಪ್ರತಿ ಕೋನದಲ್ಲೂ ಮಿಸ್‌ ಟೇಲರ್‌ ಹೊಳೆಯುತ್ತಾರೆ... ಆದರೆ ಇದರಲ್ಲಿ ಉದಾತ್ತ/ಉತ್ತಮ ಸಂಭಾಷಣೆ ಹಾಗೂ ಸ್ಫುರದ್ರೂಪಿ ಪ್ರತಿಮಾ ಪ್ರತಿಪಾದನೆಯ ಹೊರತಾಗಿಯೂ ಕಥಾಭಾಗದ ಅಗತ್ಯ ಹಿಡಿತವಿಲ್ಲ." ಟೇಲರ್‌'ರ ನಾಲ್ಕನೇ ಅವಧಿಯ ಚಿತ್ರ, ಎಲಿಫೆಂಟ್‌ ವಾಕ್‌ ಹಾಗೂ ರ್ರ್ಹಾಪ್‌ಸೋಡಿ ಗಳ ನಂತರದ ದಿನಗಳಲ್ಲಿ ತಯಾರಾದ ಬ್ಯೂ ಬ್ರಮ್ಮೆಲ್‌ , ಚಿತ್ರದ ಶೀರ್ಷಿಕೆ ಪಾತ್ರ/ತಾರೆ, ಸ್ಟೀವರ್ಟ್‌ ಗ್ರಾಂಗರ್‌ರಿಗೆ ಪ್ರಣಯಭರಿತ ಬೆಂಬಲ ನೀಡುವ ಏಕೈಕ ಉದ್ದೇಶದ ಸಂಮೋಹಕ ಸುಂದರಿ ಎಂದು ಹಲವರಿಂದ ಭಾವಿಸಲಾದ ವರ್ಣಮಯ ಪೋಷಾಕುಗಳನ್ನು ಧರಿಸಿದ ಲೇಡಿ ಪೆಟ್ರೀಷಿಯಾಳ ಪಾತ್ರದಲ್ಲಿ ಆಕೆಯನ್ನು ಹೊಂದಿತ್ತು. ದ ಲಾಸ್ಟ್‌‌ ಟೈಮ್‌ ಐ ಸಾ ಪ್ಯಾರಿಸ್‌‌ (೧೯೫೪) ಚಿತ್ರವು ಆಕೆಯ ಹಿಂದಿನ ಚಿತ್ರಗಳಿಗಿಂತ ಸ್ವಲ್ಪವೇ ಉತ್ತಮವೆನಿಸಿದ ಟೇಲರ್‌ ದ ಬಿಗ್‌ ಹ್ಯಾಂಗ್‌ಓವರ್‌ ನ ಸಹನಟ/ನಟಿ ವಾನ್‌ ಜಾನ್ಸನ್‌ರ ಸಹವರ್ತಿಯಾಗಿ ನಟಿಸಿದ ಚಿತ್ರವಾಗಿದೆ. ಎರಡನೇ ಬಾರಿ ಗರ್ಭಿಣಿಯಾಗಿದ್ದರೂ, ಝೆಲ್ಡಾ ಫಿಟ್ಜ್‌ಗೆರಾಲ್ಡ್‌‌ರ ಮೇಲೆ ಆಧಾರಿತವಾದ ಹೆಲೆನ್‌ ಎಲ್ಸ್‌ವರ್ತ್‌ ವಿಲ್ಲಿಸ್‌ಳ ಪಾತ್ರವಿದ್ದ ಹನ್ನೆರಡು ತಿಂಗಳ ಅವಧಿಯಲ್ಲಿ ನಾಲ್ಕನೇಯದಾದ ಚಿತ್ರದಲ್ಲಿ ಟೇಲರ್‌ ಮುಂದುವರಿದರು. ಈ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡರೂ, ಆಕೆ ಮತ್ತಷ್ಟು ಸತ್ವಪೂರ್ಣ/ದೈಹಿಕ ಆಕರ್ಷಣೆಯ ಪಾತ್ರಗಳಿಗೆ ಹಾತೊರೆದರು.

೧೯೫೫-೧೯೭೦[ಬದಲಾಯಿಸಿ]

ಕ್ಲಿಯೋಪಾತ್ರ (1963)ದಲ್ಲಿ

ರಾಕ್‌ ಹಡ್ಸನ್‌‌ ಹಾಗೂ ಜೇಮ್ಸ್‌ ಡೀನ್‌ರವರುಗಳೆದುರು ಜಾರ್ಜ್‌ ಸ್ಟೀವನ್ಸ್‌'ರ ಮಹತ್ವದ ಕೃತಿ ಜಯಂಟ್‌/ಜೈಂಟ್‌ (೧೯೫೬)ನಲ್ಲಿ ಮತ್ತಷ್ಟು ಸತ್ವಪೂರ್ಣ ಪಾತ್ರದಲ್ಲಿ ನಟಿಸಿದ ನಂತರ, ಟೇಲರ್‌ರನ್ನು ಕೆಳಕಂಡ ಚಿತ್ರಗಳಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ/ನಾಯಕಿಯಾಗಿ ಅಕಾಡೆಮಿ ಪ್ರಶಸ್ತಿಗೆ ನಾಮಾಂಕಿತಗೊಳಿಸಲಾಯಿತು  : ಮೌಂಟ್‌ಗೊಮೆರಿ ಕ್ಲಿಫ್ಟ್‌‌ರ ಅಭಿಮುಖ ಪಾತ್ರದ ರೈನ್‌ಟ್ರೀ ಕೌಂಟಿ (೧೯೫೭)[೫]; ಪೌಲ್‌ ನ್ಯೂಮನ್‌ರ ಅಭಿಮುಖ ಪಾತ್ರದ ಕ್ಯಾಟ್‌ ಆನ್‌ ಎ ಹಾಟ್‌ ಟಿನ್‌ ರೂಫ್‌ (೧೯೫೮)[೬]; ಹಾಗೂ ಮಾಂಟ್‌ಗೊಮೆರಿ ಕ್ಲಿಫ್ಟ್‌ , ಕಾಥರೀನ್‌ ಹೆಪ್‌ಬರ್ನ್‌ ಹಾಗೂ ಮರ್ಸಿಡಿಸ್‌ ಮೆಕ್‌ಕೇಂಬ್ರಿಡ್ಜ್‌ರವರುಗಳೊಂದಿಗಿನ ಸಡೆನ್ಲೀ, ಲಾಸ್ಟ್‌ ಸಮ್ಮರ್‌ ‌ (೧೯೫೯)[೭]. ೧೯೬೦ರಲ್ಲಿ, ಅಂತಿಮವಾಗಿ ೧೯೬೩ರಲ್ಲಿ ಬಿಡುಗಡೆಯಾಗಲಿದ್ದ 20ತ್‌ ಸೆಂಚುರಿ ಫಾಕ್ಸ್‌ ಸಂಸ್ಥೆ'ಯ ಅದ್ಧೂರಿ ನಿರ್ಮಾಣದ ಚಿತ್ರ ಕ್ಲಿಯೋಪಾತ್ರ ದ,[೭] ಶೀರ್ಷಿಕೆ ಪಾತ್ರದಲ್ಲಿ ನಟಿಸಲು ಒಂದು ದಶಲಕ್ಷ ಡಾಲರ್‌ಗಳ ಒಪ್ಪಂದಕ್ಕೆ ಸಹಿ ಹಾಕಿದಾಗ ಟೇಲರ್‌ ಅದುವರೆಗಿನ ಅತ್ಯಂತ ಹೆಚ್ಚಿನ ಸಂಭಾವನೆ ಪಡೆದ ನಟಿ ಎನಿಸಿಕೊಂಡರು. ಅದರ ಚಿತ್ರೀಕರಣದ ಸಮಯದಲ್ಲಿ, ಆಕೆ ಚಿತ್ರದಲ್ಲಿ ಮಾರ್ಕ್‌ ಆಂಟನಿಯ ಪಾತ್ರ ವಹಿಸಿದ್ದ ತಮ್ಮ ಭಾವೀ ಪತಿ ರಿಚರ್ಡ್‌‌ ಬರ್ಟನ್‌ರೊಂದಿಗೆ ಪ್ರಣಯ ಬಾಂಧವ್ಯವನ್ನು ಆರಂಭಿಸಿದರು. ಆ ಸಮಯದಲ್ಲಿ ಈರ್ವರೂ ಇತರೆ ಸಂಗಾತಿಯೊಂದಿಗೆ ವಿವಾಹಿತರಾದದ್ದರಿಂದ ಈ ಪ್ರಣಯಗಾಥೆಯು ಪೀತ ಪತ್ರಿಕೆ/ಟ್ಯಾಬ್ಲಾಯ್ಡ್‌ಗಳ ವಿಪರೀತ ಗಮನವನ್ನು ತನ್ನೆಡೆ ಸೆಳೆಯಿತು.[೮] ಆಗಿನ ಪತಿ ಎಡ್ಡೀ ಫಿಷರ್‌ರನ್ನು ಸಹ-ತಾರೆಯಾಗಿ ಹೊಂದಿದ್ದ ಬಟರ್‌ಫೀಲ್ಡ್‌ 8 (೧೯೬೦),[೯] ಚಿತ್ರದಲ್ಲಿನ ಗ್ಲೋರಿಯಾ ವಾಂಡ್ರಸ್‌ಳ ಪಾತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ/ನಾಯಕಿಯರಿಗೆ ನೀಡುವ ಅಕಾಡೆಮಿ ಪ್ರಶಸ್ತಿಯನ್ನು ಟೇಲರ್‌ ಪ್ರಪ್ರಥಮವಾಗಿ ಪಡೆದರು. ಆಕೆಯ ಎರಡನೇ ಹಾಗೂ ಅಂತಿಮ ಅಕಾಡೆಮಿ ಪ್ರಶಸ್ತಿಯೂ, ಕೂಡಾ ಅತ್ಯುತ್ತಮ ನಟಿ/ನಾಯಕಿಯ ಪಾತ್ರಕ್ಕಾಗಿಯೇ ಆಗಿದ್ದು, ಮಾರ್ಥಾಳಾಗಿ ಅಭಿನಯ ನೀಡಿದ ಹೂ ಈಸ್‌ ಅಫ್ರೇಡ್‌ ಆಫ್‌ ವಿರ್ಜಿನಿಯಾ ವೂಲ್ಫ್‌‌ ? ಚಿತ್ರಕ್ಕೆ ನೀಡಲಾಗಿತ್ತು (೧೯೬೬),[೧೦], ಅದರಲ್ಲಿ ಆಗಿನ ಪತಿ ರಿಚರ್ಡ್‌‌ ಬರ್ಟನ್‌ರ ಅಭಿಮುಖವಾಗಿ ನಟಿಸಿದ್ದರು. ಟೇಲರ್‌ ಹಾಗೂ ಬರ್ಟನ್‌ ಈರ್ವರೂ ಆ ದಶಕದ ಅವಧಿಯಲ್ಲಿ ಆರು ಇತರೆ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು - ದ V.I.P.ಸ್‌ (೧೯೬೩), ದ ಸ್ಯಾಂಡ್‌ಪೈಪರ್‌ (೧೯೬೫), ದ ಟೇಮಿಂಗ್‌ ಆಫ್‌ ದ ಶ್ರ್ಯೂ (೧೯೬೭), ಡಾಕ್ಟರ್‌ ಫಾಸ್ಟಸ್‌ (೧೯೬೭), ದ ಕಾಮೆಡಿಯನ್ಸ್‌ ‌ {1967} ಹಾಗೂ ಭೂಮ್‌! (೧೯೬೮). ಟೇಲರ್‌ರು ಜಾನ್‌ ಹಸ್ಟನ್‌'ರ ರಿಫ್ಲೆಕ್ಷನ್ಸ್‌‌ ಇನ್‌ ಎ ಗೋಲ್ಡನ್‌ ಐ (೧೯೬೭) ಚಿತ್ರದಲ್ಲಿ ಮಾರ್ಲನ್‌ ಬ್ರಾಂಡೋರ ಅಭಿಮುಖವಾಗಿ (ನಿರ್ಮಾಣದ ಆರಂಭಕ್ಕೆ ಮುನ್ನವೇ ಮರಣಿಸಿದ ಮಾಂಟ್‌ಗೊಮೆರಿ ಕ್ಲಿಫ್ಟ್‌[೧೧] ರ ಬದಲಿಗೆ) ಹಾಗೂ ಮಿಯಾ ಫಾರೋರ ಅಭಿಮುಖವಾಗಿ ಸೀಕ್ರೆಟ್‌ ಸೆರೆಮನಿ (೧೯೬೮) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದಾಗ್ಯೂ, ಆ ದಶಕದ ಕೊನೆಯ ಹೊತ್ತಿಗೆ ವಾರ್ರೆನ್‌ ಬೀಟ್ಟಿರೊಂದಿಗಿನ ದ ಓನ್ಲೀ ಗೇಮ್‌ ಇನ್‌ ಟೌನ್‌ (೧೯೭೦) ಚಿತ್ರದ ವಿಫಲತೆಯು ರುಜುವಾತುಪಡಿಸಿದ ಹಾಗೆ ಆಕೆಯ ಗಲ್ಲಾ-ಪೆಟ್ಟಿಗೆ ಕೊಳ್ಳೆ ಹೊಡೆಯುವ ಸಾಮರ್ಥ್ಯವು ಗಮನಾರ್ಹವಾಗಿ ಕ್ಷೀಣಿಸಿತ್ತು.[೧೨]

೧೯೭೦–ಇಲ್ಲಿಯವರೆಗೆ[ಬದಲಾಯಿಸಿ]

ಆಕೆಯ ಹಾಲಿವುಡ್‌‌ನಲ್ಲಿ ಉಚ್ಛ್ರಾಯದ ನಂತರ, ಆಷ್‌ ವೆನ್‌ಸ್‌ಡೇ/ವೆಡ್ನಸ್‌ಡೇ ದಂತಹಾ ಪ್ರಾಸಂಗಿಕ ಚಿತ್ರಗಳಲ್ಲಿ ಟೇಲರ್‌ರು ಕಾಣಿಸಿಕೊಂಡರು. ಆಗಿನ ಪತಿ ರಿಚರ್ಡ್‌‌ ಬರ್ಟನ್‌ರೊಂದಿಗೆ ನಟಿಸಿದ ಡೈವೋರ್ಸ್‌ ಹಿಸ್‌, ಡೈವೋರ್ಸ್‌ ಹರ್ಸ್‌ ಎಂಬ ಹೆಸರಿನ ೧೯೭೩ರ TVಗೆಂದೇ-ತಯಾರಿಸಿದ ಚಲನಚಿತ್ರವೂ ಸೇರಿದಂತೆ ಆಕೆ ಕಿರುತೆರೆಯಲ್ಲಿಯೂ ಅನೇಕ ಬಾರಿ ಕಾಣಿಸಿಕೊಂಡಿದ್ದರು. ೧೯೮೫ರಲ್ಲಿ, TVಯ ಚಿತ್ರ ಹೆಡ್ಡಾ ಹಾಪ್ಪರ್‌ರ ಪಾತ್ರ ವಹಿಸಿದ್ದ ಜೇನ್‌ ಅಲೆಕ್ಸಾಂಡರ್‌ರ ಅಭಿಮುಖವಾಗಿ ನಟಿಸಿದ ಮಾಲೈಸ್‌ ಇನ್‌ ವಂಡರ್‌ಲ್ಯಾಂಡ್‌ ಚಿತ್ರದಲ್ಲಿ ಆಕೆ ಚಲನಚಿತ್ರ ಗಾಸಿಪ್‌ ಅಂಕಣಕಾರ್ತಿ ಲೊಯೆಲ್ಲಾ ಪಾರ್ಸನ್ಸ್‌ಳ ಪಾತ್ರ ವಹಿಸಿದ್ದರು ‌; ಹಾಗೂ ಕಿರುಸರಣಿ ನಾರ್ತ್‌ ಅಂಡ್‌ ಸೌತ್‌ ನಲ್ಲೂ ಕಾಣಿಸಿಕೊಂಡಿದ್ದರು. ೨೦೦೧ರಲ್ಲಿ, TV ಚಿತ್ರ ದೀಸ್‌ ಓಲ್ಡ್‌ ಬ್ರಾಡ್ಸ್‌ ‌ನಲ್ಲಿ ಆಕೆ ಓರ್ವ ಏಜೆಂಟ್‌/ಪ್ರತಿನಿಧಿಯ ಪಾತ್ರ ವಹಿಸಿದ್ದರು. ಜನರಲ್‌ ಹಾಸ್ಪಿಟಲ್‌ ಹಾಗೂ ಆಲ್‌ ಮೈ ಚಿಲ್ಡ್ರನ್‌ ನಂತಹಾ ಧಾರಾವಾಹಿಗಳೂ ಸೇರಿದಂತೆ ಅನೇಕ ಕಿರುತೆರೆ ಸರಣಿಗಳಲ್ಲಿ ಹಾಗೂ ಸಜೀವಚಿತ್ರಿಕೆ ಸರಣಿ ದ ಸಿಂಪ್ಸನ್ಸ್‌‌ ನಲ್ಲಿ —ಒಮ್ಮೆ ತನ್ನದೇ ಪಾತ್ರದಲ್ಲಿ ಹಾಗೂ ಒಮ್ಮೆ ಮ್ಯಾಗ್ಗೀ ಸಿಂಪ್ಸನ್‌ಳ ಧ್ವನಿಯಾಗಿ ಕಾಣಿಸಿಕೊಂಡಿದ್ದಾರೆ. ಟೇಲರ್‌ರು ಲಿಲ್ಲಿಯನ್‌ ಹೆಲ್‌ಮನ್‌'ರ ದ ಲಿಟಲ್‌ ಫಾಕ್ಸಸ್‌ ನ ಪುನರುಜ್ಜೀವಿತ ರೂಪಕದಲ್ಲಿ ಬ್ರಾಡ್‌ವೇ ಹಾಗೂ ವೆಸ್ಟ್‌ ಎಂಡ್‌ಗಳಲ್ಲಿ ತಮ್ಮ ಪದಾರ್ಪಣೆಯಾಗಿ ೧೯೮೨ರಲ್ಲಿ ರಂಗದ ಮೇಲೆ ನಟಿಸಿದ್ದಾರೆ. ಆಗ ಅವರು ನೋಯೆಲ್‌ ಕವರ್ಡ್‌'ರ ನಿರ್ಮಾಣದ ಪ್ರೈವೇಟ್‌ ಲೈವ್ಸ್‌ (೧೯೮೩) ಚಿತ್ರದಲ್ಲಿ ಭಾಗವಹಿಸಿದ್ದು, ಅದರಲ್ಲಿ ಆಕೆ ತನ್ನ ಮಾಜಿ ಪತಿ ರಿಚರ್ಡ್‌‌ ಬರ್ಟನ್‌ರೊಂದಿಗೆ ನಟಿಸಿದ್ದರು. ವಿದ್ಯಾರ್ಥಿಗಳಿಂದ ನಡೆಯಲ್ಪಡುವ ಆಕ್ಸ್‌ಫರ್ಡ್‌ನಲ್ಲಿನ ಬರ್ಟನ್‌ ಟೇಲರ್‌ ಚಿತ್ರ/ರಂಗಮಂದಿರಕ್ಕೆ ಈ ಪ್ರಸಿದ್ಧ ದಂಪತಿಯ ಹೆಸರನ್ನು ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಡ್ರಮಾಟಿಕ್‌ ಸೊಸೈಟಿಯ (OUDS) ನಿರ್ಮಾಣದ ಮಾರ್ಲೊವೆ ನಾಟಕದ ಡಾಕ್ಟರ್‌ ಫಾಸ್ಟಸ್‌ನ ಪಾತ್ರದಲ್ಲಿ ಬರ್ಟನ್‌ರು ನಟಿಸಿದ ನಂತರ ಇಡಲಾಯಿತು. ಟೇಲರ್‌ರದು ಇದರಲ್ಲಿ ಫಾಸ್ಟಸ್‌ '[ಆತನಿಗೆ] ಚುಂಬನ ನೀಡುವ ಮೂಲಕ ಅಮರನನ್ನಾಗಿ ಮಾಡಲು' ಬೇಡಿಕೊಳ್ಳುವ ದೈವಿಕ/ಪ್ರೇತದಂತಹಾ ಮೌನಿಯಾದ ಹೆಲೆನ್‌ ಆಫ್‌ ಟ್ರಾಯ್‌/ಟ್ರಾಯ್‌ನ ಹೆಲೆನ್‌ನ ಪಾತ್ರ. ನವೆಂಬರ್‌ ೨೦೦೪ರಲ್ಲಿ, ಟೇಲರ್‌ರ ಹೃದಯವು ದೇಹದುದ್ದಕ್ಕೂ ನಿರ್ದಿಷ್ಟವಾಗಿ ಪಾದದ ಕೀಲುಗಳು ಹಾಗೂ ಪಾದದಂತಹಾ ದೇಹದ ಕೆಳಭಾಗದವರೆಗೆ ರಕ್ತವನ್ನು ಪೂರೈಸಲು ಸಾಧ್ಯವಾಗದಷ್ಟು ಶಕ್ತಿಹೀನವಾಗಿರುವ ನಿಧಾನವಾಗಿ ವಿಸ್ತರಿಸುವ ರಕ್ತದಟ್ಟಣೆಯಿಂದಾಗುವ ಹೃದಯಸ್ತಂಭನವಿದೆಯೆಂಬುದು ಪತ್ತೆಯಾಗಿದೆ ಎಂದು ಘೋಷಿಸಿದರು. ಆಕೆ ತನ್ನ ಬೆನ್ನನ್ನು ಐದು ಬಾರಿ ಮುರಿದುಕೊಂಡಿದ್ದು, ಸೊಂಟದ ಎರಡೂ ಭಾಗಗಳನ್ನು ಬದಲಿಸಲಾಗಿದೆ, ಸೌಮ್ಯ ಮೆದುಳು ಗೆಡ್ಡೆ ಹಾಗೂ ಚರ್ಮದ ಅರ್ಬುದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರಲ್ಲದೇ ಎರಡು ಬಾರಿ ಮಾರಣಾಂತಿಕ ಶ್ವಾಸಕೋಶದ ಉರಿಯೂತ/ನ್ಯುಮೋನಿಯಾದಿಂದ ಬಳಲಿದ್ದಾರೆ. ಅವರು ಏಕಾಂಗಿಯಾಗಿದ್ದು ಅನೇಕ ವೇಳೆ ಅನಾರೋಗ್ಯ ಅಥವಾ ಇತರೆ ಖಾಸಗಿ ಕಾರಣಗಳಿಂದಾಗಿ ನಿಶ್ಚಿತ ಸಮಯಕ್ಕೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ವಿಫಲರಾಗುವುದು ಸಾಮಾನ್ಯವಾಗಿದೆ. ಅವರೀಗ ಗಾಲಿಕುರ್ಚಿ ಬಳಸುತ್ತಿದ್ದು, ಈ ಬಗ್ಗೆ ಅವರನ್ನು ಕೇಳಿದರೆ ತಮಗೆ ಓಸ್ಟಿಯೋಪೊರೋಸಿಸ್‌ ತೊಂದರೆಯಿದ್ದು ತಾವು ಹುಟ್ಟಿದಾಗಿಂದಲೂ ಸ್ಕೋಲಿಯೋಸಿಸ್‌ನಿಂದ ಪೀಡಿತರು ಎಂದು ತಿಳಿಸಿದ್ದಾರೆ.[೧೩][೧೪] ೨೦೦೫ರಲ್ಲಿ, ಮಗುವೊಂದನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪದ ವಿಚಾರಣೆ ಕ್ಯಾಲಿಫೋರ್ನಿಯಾನಲ್ಲಿ ನಡೆದಾಗ ಟೇಲರ್‌ರು ತನ್ನ ಸ್ನೇಹಿತ ಮೈಕೆಲ್‌ ಜಾಕ್ಸನ್‌ರಿಗೆ ಮೌಖಿಕ ಬೆಂಬಲವಿತ್ತಿದ್ದರು.[೧೫][೧೬] ಆಗ ಆತನನ್ನು ಖುಲಾಸೆಗೊಳಿಸಲಾಗಿತ್ತು. ೩೦ ಮೇ ೨೦೦೬ದಂದು, ತನಗೆ ಅನಾರೋಗ್ಯವಾಗಿದೆಯೆಂಬುದನ್ನು ನಿರಾಕರಿಸಲು ಹಾಗೂ ತಾನು ಅಲ್ಜೀಮರ್‌ ಕಾಯಿಲೆಯಿಂದ ನರಳುತ್ತಿದ್ದು ಸಾವಿನ ಸನಿಹವಿರುವುನೆಂದು ಮಾಡಿದ ಆರೋಪಗಳನ್ನು ತಳ್ಳಿಹಾಕಲು ಟೇಲರ್‌ರು ಲ್ಯಾರಿ ಕಿಂಗ್‌ ಲೈವ್‌ ಕಾರ್ಯಕ್ರಮ ದಲ್ಲಿ ಕಾಣಿಸಿಕೊಂಡರು.[೧೭] ಆಗಸ್ಟ್‌ ೨೦೦೬ರ ಕೊನೆಭಾಗದಲ್ಲಿ, ತಾನು ಸಾವಿಗೆ ಹತ್ತಿರವಿಲ್ಲವೆಂದು ಸ್ಪಷ್ಟಪಡಿಸಲು ಅನುಕೂಲವಾಗುವಂತೆ ದೋಣಿವಿಹಾರ ಮಾಡಲು ಟೇಲರ್‌ ನಿಶ್ಚಯಿಸಿದ್ದರು. ಆಕೆ ತನ್ನ ಆಭರಣಗಳು, ಕಲಾಕೃತಿಗಳು, ಪೋಷಾಕುಗಳು, ಪೀಠೋಪಕರಣ ಹಾಗೂ ಚಿರಸ್ಮರಣೀಯ ವಸ್ತುಗಳನ್ನು (ಸೆಪ್ಟೆಂಬರ್ ೨೦೦೬) ಮಾರುವ ಪ್ರಮುಖ ಸ್ಥಳವಾಗಿ ಕ್ರಿಸ್ಟೀಸ್‌ ಆಕ್ಷನ್‌ ಹೌಸ್‌ಅನ್ನು ನಿಗದಿಪಡಿಸಲು ಕೂಡಾ ನಿಶ್ಚಯಿಸಿದ್ದರು.[೧೮] ಇಂಟರ್‌ವ್ಯೂ ನಿಯತಕಾಲಿಕೆಯ ಫೆಬ್ರವರಿ ೨೦೦೭ರ ಸಂಚಿಕೆಯು ಪೂರ್ಣವಾಗಿ ಟೇಲರ್‌ರಿಗೆ ಮೀಸಲಾಗಿತ್ತು. ಪತ್ರಿಕೆಯು ಅವರ ಜೀವನ,ವೃತ್ತಿಜೀವನಗಳನ್ನು ಕೊಂಡಾಡಿ ಬರಲಿರುವ ಆಕೆಯ ೭೫ನೆಯ ಹುಟ್ಟುಹಬ್ಬವನ್ನು ಆಚರಿಸಿತ್ತು. ೫ ಡಿಸೆಂಬರ್‌ ೨೦೦೭ರಂದು, ಕ್ಯಾಲಿಫೋರ್ನಿಯಾದ ಗವರ್ನರ್‌/ಕಾರ್ಯಾಧ್ಯಕ್ಷ ಅರ್ನಾಲ್ಡ್‌ ಷ್ವಾರ್ಜೆನೆಗ್ಗರ್‌ ಹಾಗೂ ಪ್ರಥಮ ಮಹಿಳೆ ಮಾರಿಯಾ ಷ್ರಿವರ್‌ರವರುಗಳು ದ ಕ್ಯಾಲಿಫೋರ್ನಿಯಾ ಮ್ಯೂಸಿಯಮ್‌ ಫಾರ್‌ ಹಿಸ್ಟರಿ, ವಿಮೆನ್‌ ಅಂಡ್‌ ದ ಆರ್ಟ್ಸ್‌ ಸಂಸ್ಥೆಯಲ್ಲಿರುವ ಕ್ಯಾಲಿಫೋರ್ನಿಯಾ ಹಾಲ್‌ ಆಫ್‌ ಫೇಮ್‌/ಖ್ಯಾತರ ಪಟ್ಟಿಯಲ್ಲಿ, ಟೇಲರ್‌ರ ಹೆಸರನ್ನು ವಿಧ್ಯುಕ್ತವಾಗಿ ಸೇರಿಸಿದರು.[೧೯] ಟೇಲರ್‌ರು ತಮ್ಮ ನಿರಂತರ ಸಂಗಾತಿ ಜೇಸನ್‌ ವಿಂಟರ್ಸ್‌ರೊಂದಿಗಿನ ಒಂಬತ್ತನೇ ಮದುವೆಯ ವದಂತಿಯ ವಿಚಾರವಾಗಿ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಇದನ್ನು ವದಂತಿಯೆಂದು ನಿರಾಕರಿಸಲಾಯಿತು.[೨೦] ಆದಾಗ್ಯೂ, "ನನಗೆ ಗೊತ್ತಿರುವ ಪುರುಷರಲ್ಲಿ ಅದ್ಭುತ ವ್ಯಕ್ತಿಯೆಂದರೆ ಜೇಸನ್‌ ವಿಂಟರ್ಸ್‌ ಹಾಗೂ ಅದಕ್ಕಾಗಿಯೇ ನಾನು ಆತನನ್ನು ಪ್ರೀತಿಸುತ್ತೇನೆ. ಅವರು ನಮಗೆ ತುಂಬಾ ಉತ್ತಮವಾದ ಮನೆಯನ್ನು ಹವಾಯ್‌ನಲ್ಲಿ ಕೊಂಡುಕೊಟ್ಟಿದ್ದಾರೆ ಹಾಗೂ ನಮಗೆ ಸಾಧ್ಯವಾದಾಗಲೆಲ್ಲಾ ಅಲ್ಲಿಗೆ ಭೇಟಿ ನೀಡುತ್ತೇವೆ,"[೨೧] ಎಂದು ಪ್ರಶ್ನಾರ್ಹ ಗಾಸಿಪ್‌ ಅಂಕಣಕರ್ತ ಲಿಜ್‌ ಸ್ಮಿತ್‌ರಿಗೆ ಹೇಳಿದರೆಂದು ವರದಿಯಾಗಿದೆ. ಟೇಲರ್‌ರನ್ನು ಮಾನವಹಿತ ಸಾಧಕಿಯೆಂದು ಗೌರವಿಸಿದ ಮ್ಯಾಸಿ/ಕಿಯವರ ಪಾಸ್‌ಪೋರ್ಟ್‌ HIV/AIDS ೨೦೦೭ ಉತ್ಸವದಲ್ಲಿ ವಿಂಟರ್ರ್ಸ್‌ ಟೇಲರ್‌ರಿಗೆ ಜೊತೆ ನೀಡಿದ್ದರು. ೨೦೦೮ರಲ್ಲಿ ಟೇಲರ್‌ ಹಾಗೂ ವಿಂಟರ್ರ್ಸ್‌ ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜುಲೈ 4ರ ದಿನಾಚರಣೆಯನ್ನು ಕ್ರೀಡಾನೌಕೆಯಲ್ಲಿ ಆಚರಿಸುತ್ತಿದ್ದುದು ತಿಳಿದುಬಂದಿದೆ.[೨೨] ಈ ಜೋಡಿಯು ಮತ್ತೆ ೨೦೦೮ರಲ್ಲಿ ಮ್ಯಾಸಿ/ಕಿಯವರ ಪಾಸ್‌ಪೋರ್ಟ್ HIV/AIDS ಉತ್ಸವಕ್ಕೆ ಹಾಜರಾಗಿದ್ದರು. ೧ ಡಿಸೆಂಬರ್‌ ೨೦೦೭ರಂದು, ಜೇಮ್ಸ್‌ ಅರ್ಲ್‌ ಜೋನ್ಸ್‌ರ ಅಭಿಮುಖದ ಪಾತ್ರದಲ್ಲಿ A. R. ಗುರ್ನೆಯವರ ನಾಟಕ ಲವ್‌ ಲೆಟರ್ಸ್‌ ನ ಸಹಾಯಾರ್ಥ ಪ್ರದರ್ಶನದಲ್ಲಿ ಟೇಲರ್‌ ರಂಗದ ಮೇಲೆ ಮತ್ತೆ ನಟಿಸಿದರು. ಆ ಕಾರ್ಯಕ್ರಮದ ಗುರಿಯು ಟೇಲರ್‌'ರ AIDS ಪ್ರತಿಷ್ಠಾನಕ್ಕೆ $೧ ದಶಲಕ್ಷದಷ್ಟು ಮೊತ್ತವನ್ನು ಸಂಗ್ರಹಿಸುವುದಾಗಿತ್ತು. ಕಾರ್ಯಕ್ರಮದ ಟಿಕೇಟು/ತಿಕೀಟು/ಟಿಕೆಟ್‌ಗಳಿಗೆ $೨,೫೦೦ರ ದರ ವಿಧಿಸಲಾಗಿತ್ತಲ್ಲದೇ ೫೦೦ಕ್ಕೂ ಹೆಚ್ಚಿನ ಮಂದಿಯು ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಇದು 2007ರ ರೈಟರ್ಸ್‌ ಗಿಲ್ಡ್‌ ಆಫ್‌ ಅಮೇರಿಕಾ ಸಂಸ್ಥೆಯವರ ಮುಷ್ಕರದ ಸಮಯದಲ್ಲೇ ನಡೆದಿತ್ತು ಇದಕ್ಕಾಗಿ ಮುಷ್ಕರದ ನಿಯಮವನ್ನು ಮುರಿಯುವ ಬದಲಿಗೆ ಟೇಲರ್‌ರು "ಒಂದು ರಾತ್ರಿಯ ವಿನಾಯಿತಿಯನ್ನು" ನೀಡುವಂತೆ ಕೋರಿದರು. ರೈಟರ್ಸ್‌ ಗಿಲ್ಡ್‌ ಒಕ್ಕೂಟವು ಪ್ರದರ್ಶನಕ್ಕೆ ಅನುವು ಮಾಡಿಕೊಡಲು ಅಂದಿನ ರಾತ್ರಿ ಪ್ಯಾರಾಮೌಂಟ್‌ ಪಿಕ್ಚರ್ಸ್‌ ಪ್ರದೇಶದಲ್ಲಿ ಮುಷ್ಕರಕಾವಲು ಹೂಡದಿರಲು ಒಪ್ಪಿಗೆ ನೀಡಿತು.[೨೩] ಅಕ್ಟೋಬರ್‌‌ ೨೦೦೮ರಲ್ಲಿ, ಟೇಲರ್‌ ಹಾಗೂ ವಿಂಟರ್ರ್ಸ್‌ ಇಂಗ್ಲೆಂಡ್‌ಗೆ ‌ಕಡಲಯಾನ ಕೈಗೊಂಡರು. ಅಲ್ಲಿ ಅವರು ಸ್ನೇಹಿತರನ್ನು, ಕುಟುಂಬದವರನ್ನು ಭೇಟಿ ಮಾಡುತ್ತಾ ಹಾಗೂ ಖರೀದಿ ನಡೆಸುತ್ತಾ ಕಳೆದರು.[೨೪]

ನಿಧನ[ಬದಲಾಯಿಸಿ]

ದೀರ್ಘಕಾಲದಿಂದ ಹೃದಯಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದ ಟೇಲರ್ ೨೦೧೧ರ ಮಾರ್ಚ್ ೨೩ರಂದು ಲಾಸ್ ಏಂಜೆಲಿಸ್‌ನ ಸಿಡಾರ್ಸ್-ಸಿನೈ ಆರೋಗ್ಯ ಕೇಂದ್ರದಲ್ಲಿ ನಿಧನರಾದರು.

ಇತರೆ ಆಸಕ್ತಿಗಳು[ಬದಲಾಯಿಸಿ]

ಟೇಲರ್‌ 1981ರ ಕೊನೆಯ ವೇಳೆಗೆ ತಮ್ಮ ಜೀವನದ ಬಗೆಗಿನ ಕಾರ್ಯಕ್ರಮದಲ್ಲಿ. ಅಲನ್‌ ಲೈಟ್‌ರಿಂದ ಚಿತ್ರ

ಟೇಲರ್‌ರು ಆಭರಣಗಳ ಬಗ್ಗೆ ಒಲವನ್ನು ಹೊಂದಿದ್ದಾರೆ. ಆಕೆಯು ಖ್ಯಾತ ಆಭರಣ ವಿನ್ಯಾಸಕ ಷ್ಲೋಮೋ ಮೌಸ್ಸೇಫ್‌ರ ಗ್ರಾಹಕರಾಗಿದ್ದಾರೆ. ವರ್ಷಗಳ ಅವಧಿಯಲ್ಲಿ ಅವರು ಬಹಳಷ್ಟು ಜನಪ್ರಿಯ ಕಲಾತ್ಮಕ ಆಭರಣಗಳನ್ನು ಕೊಂಡಿದ್ದಾರೆ ಅವುಗಳಲ್ಲಿ ಹೆಚ್ಚು ಪ್ರಸ್ತಾಪವಾಗುವ ಪ್ರಮುಖವಾದ ಎರಡೆಂದರೆ ಪತಿ ರಿಚರ್ಡ್‌‌ ಬರ್ಟನ್‌ರಿಂದ ಪಡೆದ ಅನೇಕ ಉಡುಗೊರೆಗಳಲ್ಲಿ ಸೇರಿರುವ 33.19-carat (6.638 g) ಕ್ರುಪ್‌ ವಜ್ರ ಹಾಗೂ 69.42-carat (13.884 g) ಪೇರ್‌-ಆಕೃತಿಯ ಟೇಲರ್‌-ಬರ್ಟನ್‌ ವಜ್ರ. ಟೇಲರ್‌ ವ್ಯಾಲೆಂಟೀನ್ಸ್‌ ದಿನದ ಉಡುಗೊರೆಯಾಗಿ ೧೯೬೯ರಲ್ಲಿ ಬರ್ಟನ್‌ ಕೊಂಡುಕೊಟ್ಟಿದ್ದ 50-carat (10 g) ಲಾ ಪೆರೆಗ್ನಿಯಾ ಮುತ್ತನ್ನು ಕೂಡಾ ಹೊಂದಿದ್ದಾರೆ. ಈ ಮುತ್ತು ಹಿಂದೆ ಇಂಗ್ಲೆಂಡ್‌ನ ಮೇರಿ I ರಾಣಿಯ ಒಡೆತನದಲ್ಲಿತ್ತು ಹಾಗೂ ಬರ್ಟನ್‌ ಮುತ್ತನ್ನು ಧರಿಸಿರುವ ರಾಣಿ ಮೇರಿಯ ಚಿತ್ರವನ್ನು ಹೊಂದಲು ಇಚ್ಛಿಸಿದ್ದರು. ಚಿತ್ರವನ್ನು ಕೊಂಡುಕೊಂಡ ನಂತರ, ಬರ್ಟನ್‌ ಕುಟುಂಬವು ಬ್ರಿಟಿಷ್‌ ನ್ಯಾಷನಲ್‌ ಪೋಟ್ರೇಟ್‌ ಗ್ಯಾಲರಿ ಸಂಸ್ಥೆಯು ಮೇರಿಯ ಮೂಲ ಚಿತ್ರವನ್ನು ಹೊಂದಿಲ್ಲವೆಂಬುದನ್ನು ತಿಳಿದುಕೊಂಡಿತು, ಆದ್ದರಿಂದ ಅವರು ಆ ಚಿತ್ರವನ್ನು ಗ್ಯಾಲರಿ ಸಂಸ್ಥೆಗೆ ದಾನ ಮಾಡಿದರು.[೨೫][೨೬] ಆಕೆಯು ಈಗಲೂ ಹೊಂದಿರುವ ಆಭರಣಗಳ ಸಂಗ್ರಹವನ್ನು ಆಕೆಯ ಪುಸ್ತಕ ಮೈ ಲವ್‌ ಅಫೇರ್‌ ವಿತ್‌ ಜ್ಯೂವೆಲ್ಲರೀಸ್‌ ನಲ್ಲಿ (೨೦೦೨) ನ್ಯೂಯಾರ್ಕ್‌ನ ಛಾಯಾಗ್ರಾಹಕ ಜಾನ್‌ ಬಿಗೆಲೋ ಟೇಲರ್‌ರು (ಅವರ ಸಂಬಂಧಿಯಲ್ಲ) ತೆಗೆದ ಛಾಯಾಚಿತ್ರಗಳೊಂದಿಗೆ ದಾಖಲಿಸಲಾಗಿದೆ. ಟೇಲರ್‌ ದ ಎಲಿಜಬೆತ್‌ ಕಲೆಕ್ಷನ್‌ ಎಂಬ ಸಂಗ್ರಹಕ್ಕಾಗಿ, ಉತ್ಕೃಷ್ಠತೆ ಹಾಗೂ ನಾಜೂಕುತನ ಹೊಂದಿರುವ ಸೂಕ್ಷ್ಮ ಆಭರಣಗಳನ್ನು ತಯಾರಿಸಲು ಆಭರಣಗಳನ್ನು ವಿನ್ಯಾಸಗೊಳಿಸಲು ಆರಂಭಿಸಿದ್ದಾರೆ. ದ ಎಲಿಜಬೆತ್‌ ಟೇಲರ್‌ ಕಲೆಕ್ಷನ್‌ ಬೈ ಪಿರಾನೆಸಿ ಎಂಬ ಈ ಸಂಗ್ರಹವನ್ನು ಕ್ರಿಸ್ಟೀಸ್‌ ಸಂಸ್ಥೆಯಲ್ಲಿ ಮಾರಲಾಗುತ್ತದೆ. ಆಕೆ "ಪ್ಯಾಷನ್‌ ," "ವೈಟ್‌ ಡೈಮಂಡ್ಸ್‌ ," ಹಾಗೂ "ಬ್ಲಾಕ್‌ ಪರ್ಲ್ಸ್‌," ಎಂಬ ಹೆಸರಿನ ಒಟ್ಟಾರೆಯಾಗಿ ಅಂದಾಜು US$೨೦೦ ದಶಲಕ್ಷಗಳಷ್ಟು ಮೊತ್ತದಷ್ಟು ಮೌಲ್ಯದ ವಾರ್ಷಿಕ ಮಾರಾಟವನ್ನು ಹೊಂದಿರುವ ಮೂರು ಸುಗಂಧಗಳನ್ನು ಸಹಾ ಆಕೆ ಮಾರುಕಟ್ಟೆಗೆ ವಿತರಿಸಿದ್ದಾರೆ. ೨೦೦೬ರ ಶರತ್ಕಾಲದಲ್ಲಿ, ಟೇಲರ್‌ ಕಳೆದೊಂದು ದಶಕಕ್ಕೂ ಹೆಚ್ಚಿನ ಕಾಲದಿಂದ ಮಾರಾಟವಾಗುತ್ತಿರುವ ಅಗ್ರ ೧೦ ಉತ್ತಮ ಮಾರಾಟದ ಸುಗಂಧಗಳಲ್ಲಿ ಒಂದಾಗಿರುವ ತನ್ನ ವೈಟ್‌ ಡೈಮಂಡ್ಸ್‌ ಸುಗಂಧಗಳ ೧೫ನೇ ವಾರ್ಷಿಕೋತ್ಸವವನ್ನು ಆಚರಿಸಿದರು. ಟೇಲರ್‌ರು AIDS-ಸಂಬಂಧಿ ದತ್ತಿನಿಧಿಗಳು ಹಾಗೂ ಧನಸಂಗ್ರಹಕ್ಕಾಗಿ ತನ್ನ ಹೆಚ್ಚಿನ ಸಮಯ ಹಾಗೂ ಶಕ್ತಿಯನ್ನು ಮುಡುಪಿಟ್ಟಿದ್ದಾರೆ. ದ ಅಮೇರಿಕನ್‌ ಫೌಂಡೇಷನ್‌ ಫಾರ್‌ AIDS ರಿಸರ್ಚ್‌ (amfAR) ಸಂಸ್ಥೆಯನ್ನು ಆರಂಭಿಸಲು ತನ್ನ ಮಾಜಿ ಸಹನಟ ಹಾಗೂ ಸ್ನೇಹಿತ ರಾಕ್‌ ಹಡ್ಸನ್‌ರ ಮರಣಾನಂತರ ಸಹಾಯ ಮಾಡಿದ್ದಾರೆ. ಅವರು ತಮ್ಮದೇ ಆದ ಸ್ವಂತ AIDS ಪ್ರತಿಷ್ಠಾನವಾದ ದ ಎಲಿಜಬೆತ್‌ ಟೇಲರ್‌ ಏಡ್ಸ್‌ ಫೌಂಡೇಷನ್‌ (ETAF)ಅನ್ನು ಸ್ಥಾಪಿಸಿದ್ದಾರೆ. ೧೯೯೯ರ ವೇಳೆಗೆ, ಈ ರೋಗದ ವಿರುದ್ಧ ಹೋರಾಡಲು ಅಂದಾಜು US$೫೦ ದಶಲಕ್ಷದಷ್ಟು ಮೊತ್ತ ಸಂಗ್ರಹಿಸಲು ನೆರವಾಗಿದ್ದಾರೆ. ೨೦೦೬ರಲ್ಲಿ, ಟೇಲರ್‌ರು ಪರೀಕ್ಷಾ ಮೇಜುಗಳು ಹಾಗೂ X ರೇ ಉಪಕರಣಗಳಿಂದ ಸಜ್ಜುಗೊಂಡಿರುವ 37-foot (11 m) "ಕೇರ್‌ ವ್ಯಾನ್‌"ಗೆ ಚಾಲನೆ ನೀಡಿದರಲ್ಲದೇ AIDS ಹಾಗೂ HIV ಪೀಡಿತ ನ್ಯೂ ಅರ್ಲಿಯಾನ್ಸ್‌ ಜನತೆಗೆಂದು ಸಿದ್ಧಪಡಿಸಲಾದ ದತ್ತಿಸಂಸ್ಥೆಯಾದ ನ್ಯೂ ಅರ್ಲಿಯಾನ್ಸ್‌ ಏಡ್ಸ್‌ ಟಾಸ್ಕ್‌ ಫೋರ್ಸ್‌ ಸಂಸ್ಥೆಗೆ US$೪೦,೦೦೦ದಷ್ಟು ಮೊತ್ತವನ್ನು ದೇಣಿಗೆ ನೀಡಿದರು. ಎಲಿಜಬೆತ್‌ ಟೇಲರ್‌ HIV/AIDS ಪ್ರತಿಷ್ಠಾನ ಹಾಗೂ ಮೇಕೀ/ಸಿಸ್‌ ಸಂಸ್ಥೆಗಳ ವತಿಯಿಂದ ವಾಹನವನ್ನು ದೇಣಿಗೆ ನೀಡಲಾಗಿತ್ತು.[೨೭] ೧೯೮೦ರ ದಶಕದ ಆರಂಭದಲ್ಲಿ, ಟೇಲರ್‌ ಕ್ಯಾಲಿಫೋರ್ನಿಯಾದಲ್ಲಿನ ಬೆಲ್‌ ಏರ್‌ ಎಂಬಲ್ಲಿಗೆ ಸ್ಥಳಾಂತರಗೊಂಡರು, ಅದು ಈಗ ಅವರ ಪ್ರಸಕ್ತ ವಾಸಸ್ಥಳವಾಗಿದೆ. ಪಾಮ್‌ ಸ್ಪ್ರಿಂಗ್ಸ್‌, ಲಂಡನ್‌‌ ಹಾಗೂ ಹವಾಯ್‌ಗಳಲ್ಲಿ ಕೂಡಾ ಆಕೆ ಮನೆಗಳನ್ನು ಹೊಂದಿದ್ದಾರೆ. ಬೇಲಿ ಹಾಕಿದ ಹಾಗೂ ತಡೆಬಾಗಿಲುಗಳನ್ನು ಹೊಂದಿರುವ ರಸ್ತೆಬದಿಯಲ್ಲಿ ಮಾರುವ ಪ್ರವಾಸೀ ನಕ್ಷಾಪುಸ್ತಕಗಳನ್ನು ಕೂಡ ನಮೂದಿಸಲಾಗಿದ್ದು ಮಾರ್ಗದರ್ಶಕರು ಇಲ್ಲಿಗೆ ಆಗ್ಗಾಗ್ಗೆ ಬಂದುಹೋಗುತ್ತಿರುತ್ತಾರೆ. ಟೇಲರ್‌ರು ಜನರಲ್‌ ಹಾಸ್ಪಿಟಲ್‌ ಎಂಬ ಧಾರಾವಾಹಿಯ ಅಭಿಮಾನಿ ಕೂಡಾ ಆಗಿದ್ದರು. ವಾಸ್ತವವಾಗಿ, ಕ್ಯಾಸಡೀನ್‌ ಕುಟುಂಬದ ಮಹಾಮಾತೆಯಾದ ಹೆಲೆನಾ ಕ್ಯಾಸಡೀನ್‌ಳ ಪಾತ್ರವನ್ನು ಮೊದಲು ಆಕೆಯೇ ವಹಿಸಿದ್ದರು. ಟೇಲರ್‌ರು ಕಬ್ಬಾಲಾಹ್‌ ಕೇಂದ್ರದ ಸದಸ್ಯರು ಹಾಗೂ ಕಬ್ಬಾಲಾಹ್‌ನ ಬೆಂಬಲಿಗರೂ ಆಗಿದ್ದಾರೆ. ಆಕೆ ತನ್ನ ದೀರ್ಘಕಾಲೀನ ಸ್ನೇಹಿತ ಮೈಕೆಲ್‌ ಜಾಕ್ಸನ್‌ರಿಗೆ ಆತನ ೨೦೦೫ರ ಅತ್ಯಾಚಾರದ ವಿಚಾರಣೆಯ ಸಮಯದಲ್ಲಿ ದುಷ್ಟ-ನೋಟಗಳಿಂದ ಕಾಪಾಡಲು ಕೆಂಪು ಪಟ್ಟಿ/ಮಾಲೆಯನ್ನು ಧರಿಸಲು ಪ್ರೋತ್ಸಾಹಿಸಿದ್ದರು, ಅಂತಿಮವಾಗಿ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಯಿತು. ಅಕ್ಟೋಬರ್‌‌ ೬, ೧೯೯೧ರಂದು, ಟೇಲರ್‌ ನಿರ್ಮಾಣ ಉದ್ದಿಮೆಗಾರ ಲ್ಯಾರಿ ಫಾರ್ಟೆನ್ಸ್‌ಕಿಯವರನ್ನು ಜಾಕ್ಸನ್‌ರ ನೆವರ್‌ಲ್ಯಾಂಡ್‌ ರಾಂಚ್‌ನಲ್ಲಿ ಮದುವೆಯಾದರು.[೨೮] ೧೯೯೭ರಲ್ಲಿ, ಜಾಕ್ಸನ್‌ ಟೇಲರ್‌ರಿಗೆಂದೇ ವಿಶೇಷವಾಗಿ ರಚಿಸಿದ ಮಹಾಕಾವ್ಯ ಗೀತೆ "ಎಲಿಜಬೆತ್‌, ಐ ಲವ್‌ ಯೂ"ಯನ್ನು ರಚಿಸಿ, ಆಕೆಯ ೬೫ನೇ ಹುಟ್ಟಿದಹಬ್ಬದ ಆಚರಣೆಯಂದು ಅದರ ಪ್ರದರ್ಶನ ನೀಡಿದ್ದರು. ಅಕ್ಟೋಬರ್‌‌ ೨೦೦೭ರಲ್ಲಿ, ಆಕೆಯ ಸ್ವಾಧೀನದಲ್ಲಿರುವ ವಿನ್ಸೆಂಟ್‌ ವಾನ್‌ ಗಾಘ್‌ ಚಿತ್ರದ ಮೇಲಿನ ಕಾನೂನು ಸಮರವನ್ನು US ಸರ್ವೋಚ್ಚ ನ್ಯಾಯಾಲಯದಲ್ಲಿ ತಮ್ಮ ಯಹೂದ್ಯ ಪೂರ್ವಿಕರಲ್ಲಿ ಒಬ್ಬರಿಗೆ,[೨೯] ಸೇರಿದ್ದೆಂದು ಶಾಸನಾತ್ಮಕ ನಿಬಂಧನೆಗಳನ್ನು ಮೀರಿ ಹಕ್ಕುದಾರಿಕೆಯನ್ನು ಅಪೇಕ್ಷಿಸಿ ನಾಲ್ವರು ವ್ಯಕ್ತಿಗಳು ಹೂಡಿದ್ದ ಕಾನೂನು ವ್ಯಾಜ್ಯವನ್ನು ಮರುಪರಿಶೀಲಿಸಲು ನಿರಾಕರಿಸಿದಾಗ ಟೇಲರ್‌ ಗೆದ್ದರು. ಟೇಲರ್‌ರು ಹಾಲಿವುಡ್‌‌ ಬೌಲ್‌ ಕಾರ್ಯಕ್ರಮಕ್ಕೆ ಜೂನ್‌ ೮, ೨೦೦೯ರಂದು, ಇಟಾಲಿಯನ್‌ ಗಾಯಕ ಆಂಡ್ರಿಯಾ ಬೊಸೆಲ್ಲಿಯನ್ನು ಸಂಗೀತ ಕಾರ್ಯಕ್ರಮದಲ್ಲಿ ಕೇಳಲು ಹೋಗಿದ್ದರಲ್ಲದೇ ಅನೇಕ ತಿಂಗಳುಗಳ ನಂತರ ಅವರಿಗೆ ಇದೇ ಮೊದಲಿನ ರಾತ್ರಿ ಪ್ರಯಾಣವಾಗಿತ್ತು. ಸ್ಕೋಲಿಯೋಸಿಸ್‌ನಿಂದಾಗಿ ಗಾಲಿಕುರ್ಚಿಯಲ್ಲಿ ಬಂಧಿಯಾಗಿರುವ ಟೇಲರ್‌, ಆಕೆಯ ಮನಸ್ಸು ಹಾಗೂ ಆತ್ಮವನ್ನು "ಆತನ ಸೌಂದರ್ಯ, ಆತನ ದನಿ ಹಾಗೂ ಆತನ ಆತ್ಮಗಳು ಪರವಶತೆಗೆ ಕರೆದೊಯ್ದಿದ್ದವು" ಎಂದು ಹೇಳಿಕೊಂಡಿದ್ದರು. ಆ ನಟಿಯು ಟ್ವಿಟ್ಟರ್‌ ಸಾಮಾಜಿಕ ಸಂವಹನ ತಾಣದ ಮೂಲಕ ಇಟಾಲಿಯನ್‌ ಗಾಯಕನ ಸೋಮವಾರ ರಾತ್ರಿಯ ಸಂಗೀತ ಸಂಜೆಯ ನಂತರ ಆನ್‌ಲೈನ್‌ ಸಂದೇಶಗಳನ್ನು ಕಳಿಸಿದ್ದರು. "ನಾನು ಆಂಡ್ರಿಯಾ ಬೊಸೆಲ್ಲಿಯನ್ನು ನೋಡಲು ಕಳೆದ ರಾತ್ರಿ ಹೋಗಿದ್ದೆ. ಅನೇಕ ತಿಂಗಳುಗಳ ನಂತರ ನಾನು ಮೊದಲ ಬಾರಿ ಹೊರಹೋಗಿದ್ದುದು. ಹಾಲಿವುಡ್‌‌ ಬೌಲ್‌ ಸಂಸ್ಥೆಯು ನನಗೆ ನನ್ನ ಗಾಲಿಕುರ್ಚಿಯನ್ನು ಬಳಸಲು ಅನುಮತಿ ನೀಡಿತ್ತು" ಎಂದು ಆಕೆ ಹೇಳಿದ್ದರು.[೩೦] ಸೆಪ್ಟೆಂಬರ್‌ ೩, ೨೦೦೯ರಂದು ನಡೆದ ಮೈಕೆಲ್‌ ಜಾಕ್ಸನ್‌'ರ ಖಾಸಗಿ ಶವಯಾತ್ರೆಯಲ್ಲಿ ಟೇಲರ್‌ ಭಾಗವಹಿಸಿದ್ದರು.[೩೧]

ವೈಯಕ್ತಿಕ ಜೀವನ[ಬದಲಾಯಿಸಿ]

ಮದುವೆಗಳು[ಬದಲಾಯಿಸಿ]

ಟೇಲರ್‌ರು ಇದುವರೆಗೆ ಎಂಟು ಬಾರಿ ಮದುವೆಯಾಗಿ ಏಳು ಪತಿಯರನ್ನು ಹೊಂದಿದ್ದಾರೆ :

ಮಕ್ಕಳು[ಬದಲಾಯಿಸಿ]

ಟೇಲರ್‌ ಹಾಗೂ ವೈಲ್ಡಿಂಗ್‌ ಜೋಡಿಗೆ ಮೈಕೆಲ್‌ ಹೋವರ್ಡ್‌‌ ವೈಲ್ಡಿಂಗ್‌ (ಜನನ ೬ ಜನವರಿ ೧೯೫೩), ಹಾಗೂ ಕ್ರಿಸ್ಟೋಫರ್‌ ಎಡ್ವರ್ಡ್‌ ವೈಲ್ಡಿಂಗ್‌ (ಜನನ ೨೭ ಫೆಬ್ರವರಿ ೧೯೫೫) ಎಂಬ ಇಬ್ಬರು ಪುತ್ರರಿದ್ದಾರೆ. ಆಕೆ ಹಾಗೂ ಟಾಡ್‌ ಜೋಡಿಗೆ "ಲೀಜಾ" ಎಂದು ಕರೆಯಲ್ಪಡುವ (ಜನನ ೬ ಆಗಸ್ಟ್‌ ೧೯೫೭) ಎಲಿಜಬೆತ್‌ ಫ್ರಾನ್ಸಿಸ್‌ ಟಾಡ್‌ ಎಂಬ ಹೆಸರಿನ ಪುತ್ರಿಯಿದ್ದಾರೆ. ೧೯೬೪ರಲ್ಲಿ ಆಕೆ ಹಾಗೂ ಫಿಷರ್‌ ಓರ್ವ ಮಗಳನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದ್ದರು, ನಂತರ ಬರ್ಟನ್‌ ದತ್ತು ತೆಗೆದುಕೊಂಡ ಆಕೆಯ ಹೆಸರು ಮಾರಿಯಾ ಬರ್ಟನ್‌ (ಜನನ ೧ ಆಗಸ್ಟ್‌ ೧೯೬೧). ಆಕೆ ತನ್ನ ೩೯ನೆಯ ವಯಸ್ಸಿನಲ್ಲಿ ೨೫ ಆಗಸ್ಟ್‌ ೧೯೭೧ರಂದು ಅಜ್ಜಿಯಾದರು.

ಮದ್ಯದ ಗೀಳಿಗೆ ಚಿಕಿತ್ಸೆ[ಬದಲಾಯಿಸಿ]

೧೯೮೦ರ ದಶಕದಲ್ಲಿ, ಆಕೆ ಮದ್ಯದ ಗೀಳಿಗೆ ಚಿಕಿತ್ಸೆಯನ್ನು ಪಡೆದಿದ್ದರು.[೩೨]

ಪ್ರಶಸ್ತಿಗಳು ಹಾಗೂ ಗೌರವಗಳ ಪಟ್ಟಿ[ಬದಲಾಯಿಸಿ]

೧೯೯೯ರಲ್ಲಿ, ಟೇಲರ್‌ರನ್ನು ಆರ್ಡರ್‌ ಆಫ್‌ ಬ್ರಿಟಿಷ್‌ ಎಂಪೈರ್‌ನ ಸಂಸ್ಥೆಯ ಮಹಿಳಾ ದಳಪತಿಯಾಗಿ ನೇಮಿಸಲಾಯಿತು.

ಟಿಪ್ಪಣಿಗಳು[ಬದಲಾಯಿಸಿ]

  1. - ಎಲಿಜಬೆತ್‌ ಟೇಲರ್, ದ ಕೊಲಂಬಿಯಾ ಎನ್‌ಸೈಕ್ಲೋಪೀಡಿಯಾ Archived 2011-06-04 ವೇಬ್ಯಾಕ್ ಮೆಷಿನ್ ನಲ್ಲಿ.
  2. S.S. ಮನ್‌ಹಾಟ್ಟನ್‌ , ೨೭ ಏಪ್ರಿಲ್‌ ೧೯೩೯, ಪುಟ/ಹಾಳೆ ೨೫. Ancestry.com. ನ್ಯೂಯಾರ್ಕ್‌ ಪ್ರಯಾಣಿಕರ ಪಟ್ಟಿಗಳು, ೧೮೨೦-೧೯೫೭ [ಆನ್‌ಲೈನ್‌ ದತ್ತಸಂಚಯ]. ಪ್ರೊವೊ, UT, USA: Ancestry.com ಆಪರೇಷನ್ಸ್‌ Inc, ೨೦೦೬.
  3. S.S. ಅಧ್ಯಕ್ಷ ರೂಸ್‌ವೆಲ್ಟ್‌ , ೧ ನವೆಂಬರ್‌ ೧೯೩೯, ಪುಟ/ಹಾಳೆ ೨೦೯. ನ್ಯೂಯಾರ್ಕ್‌ ಪ್ರಯಾಣಿಕರ ಪಟ್ಟಿಗಳು, ೧೮೨೦-೧೯೫೭ [ಆನ್‌ಲೈನ್‌ ದತ್ತಸಂಚಯ]. ಪ್ರೊವೊ, UT, USA: Ancestry.com ಆಪರೇಷನ್ಸ್‌ Inc, ೨೦೦೬.
  4. ಲಿಜ್‌ :ಆನ್‌ ಇಂಟಿಮೇಟ್‌ ಬಯೋಗ್ರಾಫಿ ಆಫ್‌ ಎಲಿಜಬೆತ್‌ ಟೇಲರ್‌ , C ಡೇವಿಡ್‌ ಹೇಮನ್‌ರಿಂದ , ಬಿರ್ಚ್‌ ಲೇನ್‌ ಪ್ರೆಸ್‌ (೧೯೯೫), ಪುಟ ೩೩
  5. Parish, James Robert; Mank, Gregory W.; Stanke, Don E. (1978), The Hollywood Beauties, New Rochelle, New York: Arlington House Publishers, p. 329, ISBN 0-87000-412-3
  6. ಪಾರಿಷ್‌, p. ೩೩೦
  7. ೭.೦ ೭.೧ ಪಾರಿಷ್‌, p. ೩೩೧
  8. ಪಾರಿಷ್‌, pp. ೩೩೫-೩೩೬
  9. ಪಾರಿಷ್‌, p. ೩೩೩
  10. ಪಾರಿಷ್‌, p. ೩೪೪
  11. ಪಾರಿಷ್‌, p. ೩೪೩
  12. ಪಾರಿಷ್‌, p. ೩೫೦
  13. 'ಲ್ಯಾರಿ ಕಿಂಗ್‌ ಲೈವ್‌ ಕಾರ್ಯಕ್ರಮ'ದಲ್ಲಿ ಅನಾರೋಗ್ಯದ ವರದಿಗಳನ್ನು ತಳ್ಳಿಹಾಕಿದ ಎಲಿಜಬೆತ್‌ ಟೇಲರ್‌
  14. "ನ್ಯೂಯಾರ್ಕ್‌ ಪೋಸ್ಟ್‌ - Ms ಟೇಲರ್‌ರ ಗಾಲಿಕುರ್ಚಿಯಲ್ಲಿನ ಛಾಯಾಚಿತ್ರ". Archived from the original on 2009-07-14. Retrieved 2010-05-13.
  15. ನ್ಯೂಸ್‌ ಡೇ - ಎಲಿಜಬೆತ್‌ ಟೇಲರ್‌ ಮೈಕೆಲ್‌ ಜಾಕ್ಸನ್‌ರನ್ನು ಸಮರ್ಥಿಸಿಕೊಂಡರು
  16. "ಎಬೌಟ್‌ ಮೈಕೆಲ್‌ ಜಾಕ್ಸನ್‌ - ವಾಟ್‌ ಅದರ್ಸ್‌ ಸೇ". Archived from the original on 2009-05-14. Retrieved 2010-05-13.
  17. CNN.com - ಲ್ಯಾರಿ ಕಿಂಗ್‌ ಲೈವ್‌ ಕಾರ್ಯಕ್ರಮದ ಪ್ರತಿಲೇಖ/ನಕಲು
  18. "Elizabeth Taylor". CelebrityWonder.com. Retrieved 2007-04-02.
  19. ಟೇಲರ್‌ ಇಂಡಕ್ಟೆಡ್‌ ಇನ್‌ಟು ಕ್ಯಾಲಿಫೋರ್ನಿಯಾ ಹಾಲ್‌ ಆಫ್‌ ಫೇಮ್‌ Archived 2008-09-28 ವೇಬ್ಯಾಕ್ ಮೆಷಿನ್ ನಲ್ಲಿ. , ಕ್ಯಾಲಿಫೋರ್ನಿಯಾ ಮ್ಯೂಸಿಯಂ, ಪಡೆದಿದ್ದು ೨೦೦೭
  20. ಬ್ರೇಕಿಂಗ್‌ ನ್ಯೂಸ್‌ : ಟೇಲರ್‌ 'ನಾಟ್‌ ಪ್ಲಾನಿಂಗ್‌ ನೈಂತ್‌ ವೆಡ್ಡಿಂಗ್‌'
  21. ಎಲಿಜಬೆತ್‌ ಟೇಲರ್‌ ಹ್ಯಾಸ್‌ ಎ ನ್ಯೂ ಮ್ಯಾನ್‌
  22. "ಟೇಲರ್‌ ಅಂಡ್‌ ವಿಂಟರ್ರ್ಸ್‌ ಸ್ಟಿಲ್‌ ಗೋಯಿಂಗ್‌ ಸ್ಟ್ರಾಂಗ್‌". Archived from the original on 2010-05-15. Retrieved 2010-05-13.
  23. Associated Press (೨೦೦೭-೧೨-೦೨). "Striking writers give Elizabeth Taylor a pass". CNN.com. Archived from the original on 2007-12-03. Retrieved ೨೦೦೭-೧೨-೦೨. {{cite news}}: Check date values in: |accessdate= and |date= (help)
  24. ನಾನ್‌-ಸ್ಟಾಪ್‌ ದಿವಾಸ್‌ Archived 2009-08-08 ವೇಬ್ಯಾಕ್ ಮೆಷಿನ್ ನಲ್ಲಿ., ವಿಮೆನ್‌ ಆನ್‌ ದ ವೆಬ್, ಲಿಜ್‌ ಸ್ಮಿತ್‌ ೨೦೦೮
  25. ಎಲಿಜಬೆತ್‌ ಟೇಲರ್‌
  26. NPG 4861; ಕ್ವೀನ್‌ ಮೇರಿ I
  27. "AIDS Unit Donated by Dame Elizabeth Taylor". BBC News. 2006-02-24.
  28. "ಎಲಿಜಬೆತ್‌ ಟೇಲರ್‌, ಮ್ಯಾರೇಜಸ್‌ ಅಂಡ್‌ ಮೂವೀಸ್‌", web: hubpages.com/hub/Elizabeth_Taylor__Pics_and_Movies
  29. Thomson Reuters (೨೦೦೭-೧೦-೨೯). "Court lets Liz Taylor keep Van Gogh painting". Reuters.com. Retrieved ೨೦೦೮-೦೬-೨೬. {{cite news}}: |author= has generic name (help); Check date values in: |accessdate= and |date= (help)
  30. Alan Duke (2009-06-09). "Elizabeth Taylor makes first outing 'in months'". cnn.com.
  31. http://abcnews.go.com/Entertainment/MichaelJackson/michael-jackson-burial-private-finale-king-pop/story?id=8476277 (2009-09-03). {{cite news}}: |access-date= requires |url= (help); External link in |author= (help); Missing or empty |title= (help)CS1 maint: numeric names: authors list (link)
  32. "ಎಲಿಜಬೆತ್‌ ಟೇಲರ್‌ Biography.comನಲ್ಲಿ". Archived from the original on 2010-04-25. Retrieved 2010-05-13.

ಆಕರಗಳು[ಬದಲಾಯಿಸಿ]

ಹೆಚ್ಚಿನ ಮಾಹಿತಿಗಾಗಿ[ಬದಲಾಯಿಸಿ]

  • ಸ್ಪೋಟೋ, ಡೊನಾಲ್ಡ್‌ (೧೯೯೫). ಎ ಪ್ಯಾಷನ್‌ ಫಾರ್‌ ಲೈಫ್‌ : ದ ಬಯೋಗ್ರಾಫಿ ಆಫ್‌ ಎಲಿಜಬೆತ್‌ ಟೇಲರ್‌ . ನ್ಯೂಯಾರ್ಕ್‌ : ಹಾರ್ಪರ್‌ ಕಾಲಿನ್ಸ್‌, ISBN ೦-೦೬-೦೧೭೬೫೭-೧

ಬಾಹ್ಯ ಕೊಂಡಿಗಳು[ಬದಲಾಯಿಸಿ]