ವಿಷಯಕ್ಕೆ ಹೋಗು

ಎಡ್ವರ್ಡ್ ಸೈದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Edward Said
ಜನನEdward Wadie Said
1 November 1935
Jerusalem, Mandatory Palestine
ಮರಣ25 September 2003 (aged 67)
New York City, United States
ರಾಷ್ಟ್ರೀಯತೆAmerican
ಕಾಲಮಾನ20th-century philosophy
ಪ್ರದೇಶWestern philosophy
ಧರ್ಮAgnostic
ಪರಂಪರೆPost-colonialism, Post-modernism
ಗಮನಾರ್ಹ ಚಿಂತನೆಗಳುOccidentalism, Orientalism, The Other

ಎಡ್ವರ್ಡ್ ಸೈಯಿದ್

[ಬದಲಾಯಿಸಿ]

ಜಾಗತಿಕ ಮಟ್ಟದ ಚಿಂತಕರಲ್ಲಿ ಎಡ್ವರ್ಡ್ ಸೈದ್ ಪ್ರಮುಖನಾಗಿದ್ದಾನೆ. ಇವನು ೧೯೩೫ ರಲ್ಲಿ ಪ್ಯಾಲಿಸ್ತೇನ್ ದೇಶದಲ್ಲಿ ಜೆರುಸೆಲಮ್ ನ ,ಮುಸ್ಲಿಂ ಕುಟುಂಬವೊಂದರಲ್ಲಿ ಕ್ರಿಶ್ಚಿಯನ್ ದಂಪತಿಗಳ ಮಗನಾಗಿ ಹುಟ್ಟಿದನು.ಇವನ ತಂದೆಯ ಹೆಸರು ವಾದಿ ಇಬ್ರಾಹೀಂ, ತಾಯಿ ಹಿಲ್ಡಾ. ಪ್ರಾರಂಭದಿಂದಲು ಸೈದ್ ದ್ವಂದ್ವಗಳ ನಡುವೆಯೆ ಬೆಳೆದನು.ಸೈದ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಶ್ ಮತ್ತು ತೌಲನಿಕ ಸಾಹಿತ್ಯದ ಪ್ರಾಧ್ಯಾಪಕನಾಗಿದ್ದನು.ಸಾಹಿತ್ಯಿಕ ಸಿದ್ಧಾಂತಿಯೂ ಹಾಗೂ ಜನಪರನಾದ ಈತನು ವಸಾಹತ್ತೋತ್ತರ ಕ್ಷೇತ್ರದ ವಿಮರ್ಶಾ ಸಿದ್ಧಾಂತದ ಪ್ರತಿಪಾದಕನು ಹೌದು.ಪತ್ರಕರ್ತ ರಾಬರ್ಟ ಫಿಸ್ಕ ರವರ ಅಭಿಪ್ರಾಯದಂತೆ ಪ್ಯಾಲಿಸ್ತೇನಿಯನ್ನರ ರಾಜಕೀಯ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ ಎಡ್ವರ್ಡ್ ಸೈದ್.ಸಾಂಸ್ಕೃತಿಕ ವಿಮರ್ಶಕ, ಶಿಕ್ಷಣತಜ್ಞ ಮತ್ತು ಬರಹಗಾರನಾದ ಈತ ಪೌರಸ್ತ್ಯವಾದ[೧೯೭೮] ಎಂಬ ಪುಸ್ತಕದ ಮೂಲಕ ತುಂಬಾ ಹೆಸರುವಾಸಿಯಾದನು.ಪ್ರಾತಿನಿಧಿಕತ್ವದ ವಿವರಣೆಗಳು ಪೌರಸ್ತ್ಯವಾದಕ್ಕೆ ಆಧಾರಗಳು.ಈತನ ಪೌರಸ್ತ್ಯವದದ ಮರುವ್ಯಾಖ್ಯಾನದಂತೆ ಪೌರ್ವಾತ್ಯ ರಾಷ್ತ್ರಗಳ ಸಂಸ್ಕೃತಿಗಳನ್ನು ಕುರಿತಾಗಿ ಪಶ್ಚಿಮ ರಾಷ್ಟ್ರಗಳ ಅಧ್ಯಯನ ಮತ್ತು ಸಾಮಾನ್ಯವಾಗಿ ಪೌರಸ್ತ್ಯವಾದ ಒಂದು ಚೌಕಟ್ಟಾಗಿದೆ ಈ ಮೂಲಕ ಪಶ್ಚಿಮವೂ ಪೂರ್ವವನ್ನು ಯಾವ ರೀತಿಯಾಗಿ ಅವಲೋಕಿಸುತ್ತದೆ ಮತ್ತು ಪ್ರತಿನಿಧಿಸುತ್ತದೆ ಎಂಬುದಾಗಿದೆ.ಸೈದ್ ಒಬ್ಬ ವಿಮರ್ಶಕನಾಗಿ ಪೌರಸ್ತ್ಯವಾದ ಒಳಗೊಂಡಿರುವ ಸಾಂಸ್ಕೃತಿಕ ವಿಷಯಗಳನ್ನು ಪ್ರಬಲವಾಗಿ ಚರ್ಚಿಸಿದನು.ಅದರಲ್ಲೂ ವಿಶೇಷವಾಗಿ ಇತಿಹಾಸ ಮತ್ತು ಕ್ಷೇತ್ರ ಅದ್ಯಯನಗಳಿಗೆ ಅನ್ವಯಿಸಿದನು.ಆದರೆ ಕೆಲವು ಮುಂಚೂಣಿ ಶಿಕ್ಷಣ ತಜ್ಜ್ಞರು ಸೈದನ ಪೌರಸ್ತ್ಯವಾದದ ಪ್ರಭಂದವನ್ನು ವಿರೋದಿಸಿದರು ಅದರಲ್ಲಿ ಬರ್ನಾಡ್ ಲೇವಿಸ್ ಪ್ರಮುಖನು.ಜನಪರನಾದ ಈತನು ಸಮಕಾಲೀನ ರಾಜಕೀಯ ಮತ್ತು ಸಂಸ್ಕ್ರತಿ ಸಾಹಿತ್ಯ ಮತ್ತು ಸಂಗೀತ, ಉಪನ್ಯಾಸ ಮತ್ತು ಲೇಖನಗಳನ್ನು ಚರ್ಚಿಸಿದನು.

ಶಿಕ್ಷಣ

[ಬದಲಾಯಿಸಿ]

ಸೈದ್ ನ ಪ್ರಾಥಮಿಕ ಶಿಕ್ಷಣ ಕೈರೋ ನಗರದ ಜೆ.ಪಿ.ಎಸ್ ಶಾಲೆಯಲ್ಲಿ ೧೯೪೧ ರಿಂದ ೧೯೪೬ ರವರೆಗೆ ನಡೆಯಿತು.ಅವನು ಓದುತ್ತಿದ್ದ ಬ್ರಿಟಿಷ್ ಮಾದರಿಯ ಶಿಕ್ಷಣದಿಂದ ಉಪೇಕ್ಷೆ ಹೊಂದಿ ಅಸಂತೋಷಗಳಿಂದ ವಿದ್ಯಾರ್ಥಿ ಜೀವನವನ್ನು ಕಳೆದನು. ಈ ಜೆ.ಪಿ.ಎಸ್ ಶಾಲೆಯಲ್ಲಿಯೆ ಅವನಿಗೆ ಮೊಟ್ಟ ಮೊದಲ ವಸಾಹತುಶಾಹಿ ದರ್ಪದ ಅನುಭವವಾಯಿತು. ಜೆ.ಪಿ.ಎಸ್ ಶಾಲೆಯ ನಂತರ ೧೯೪೬ರಲ್ಲಿ ಕೈರೊ ಸ್ಕೂಲ್ ಆಫ್ ಅಮೆರಿಕನ್ ಚಿಲ್ಡ್ರನ್ ಎಂಬ ಶಾಲೆ ಯಲ್ಲಿ ಪ್ರವೇಶ ಪಡೆದನು. ಇವನ ಹಳೆಯ ಶಾಲೆಯಲ್ಲಿ ಇವನನ್ನು ಸೈದ್ (ಅರಬ್) ಎಂದು ಕರೆಯುತ್ತಿದ್ದರು ಆದರೆ ಈ ಶಾಲೆಯಲ್ಲಿ ಇವನನ್ನು ಎಡ್ವರ್ಡ್ ಎಂದೇ ಗುರುತಿಸುತ್ತಿದ್ದರು. ಮುಂದೆ ಕೈರೋವಿನ ವಿಕ್ಟೋರಿಯ ಕಾಲೇಜ್ ಸೇರಿದಾಗಲು ಎಡ್ವರ್ಡ್ ಎಂಬ ಹೆಸರೆ ಮುಂದುವರೆಯಿತು.ಸೈದ್, ಮರಿಯಮ್ ಕೋರ್ಟಾಸ್ ಎಂಬುವಳೊಡನೆ ವಿವಾಹವಾಗಿ ಈಗ ನ್ಯೂಯಾರ್ಕ್ ನ ರಿವರ್ ಸೈಡ್ ಡ್ರೈವ್ ಎಂಬಲ್ಲಿ ವಾಸವಾಗಿದ್ದಾನೆ.

ಎಡ್ವರ್ಡ್ ಸೈದ್ ನ ಪ್ರಮುಖ ಕೃತಿಗಳು

[ಬದಲಾಯಿಸಿ]

ಓರಿಯಂಟಲಿಸಂ (ಪೌರಸ್ತ್ಯವಾದ): ಈ ಕೃತಿಯು ಸೈದನಿಗೆ ಜಾಗತಿಕ ಕೀರ್ತಿಯನ್ನು ತಂದುಕೊಟ್ಟಿದೆ. ಈ ಕೃತಿಯು ೧೯೭೮ರಲ್ಲಿ ಪ್ರಕಟವಾಯಿತು. ಈ ಕೃತಿಯಲ್ಲಿ ಮೂರು ಅದ್ಯಾಯಗಳಿವೆ ೧. ಪೌರಸ್ತ್ಯ ಚಿಂತನೆಯ ವ್ಯಾಖ್ಯಾನ ಮತ್ತು ವ್ಯಾಪ್ತಿ ೨.ಪೌರಸ್ತ್ಯ ಚಿಂತನೆಯ ರಚನೆಗಳು ಮತ್ತು ಮರು ರಚನೆಗಳು ೩.ಪೌರಸ್ತ್ಯ ಚಿಂತನೆ ಮೂಲಥಃ ಗ್ರಹಿಕೆಯ ಸ್ವರೂಪವನ್ನು ವಿಶ್ಲೇಷಿಸುವ ಈ ಕೃತಿಯು ಅಸಮಾನ ಅಧಿಕಾರದ ಸಂಸ್ಕೃತಿಗಳು ಅಥವಾ ಸಮುದಾಯಗಳು ಎದುರಾದಾಗ ಹೇಗೆ ಗ್ರಹಿಸುತ್ತವೆ ಮತ್ತು ಅವುಗಳ ಉದ್ದೇಶವೇನು ಎಂಬ ಪ್ರಶ್ನೆಗಳಿಗೆ ಈ ಕೃತಿಯಲ್ಲಿ ಮಂಡಿಸಿದ್ದಾನೆ. ಮನುಷ್ಯನ ಅನುಭವಗಳ ಸಮಸ್ಯೆಗಳನ್ನು ಪ್ರಸ್ತಾಪಿಸುವಾಗ ಸಂಸ್ಕೃತಿ ಹೇಗೆ ರೂಪಿಸಲ್ಪಡುತ್ತದೆ,ವಿಭಿನ್ನ ಸಂಸ್ಕೃತಿ ಎಂದರೇನು,ಜನಾಂಗ\ ಧರ್ಮ \ ನಾಗರೀಕತೆ ಎಂಬ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದ್ದಾನೆ. ಎರಡು ಸಮಾನ ಶಕ್ತಿಯುಳ್ಳ ಸಂಸ್ಕ್ರತಿಗಳು ಮುಖಾಮುಖಿಯಾದಾಗ ಉಂಟಾಗುವ ಪರಿಣಾಮವನ್ನು ವಿವರಿಸುವ ಪರಿಕಲ್ಪನೆಯೇ ಪೌರಸ್ತ್ಯವಾದ. ಇದು ತಾತ್ವಿಕ ನೆಲೆಯಲ್ಲಿ ಪೂರ್ವ ಮತ್ತು ಪಶ್ಚಿಮಗಳ ನಡುವಿನ ಭಿನ್ನತೆಯನ್ನು ಮತ್ತು ವೈರುದ್ಯವನ್ನು ಒಪ್ಪಿಕೊಂಡು ಅವುಗಳ ರಾಜಕೀಯ ,ಸಾಮಜಿಕ ,ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ರಚನೆಗಳ ತೌಲನಿಕ ವಿಮರ್ಶೆ ಮತ್ತು ವ್ಯಾಖ್ಯಾನಗಳನ್ನು ಕೈಗೊಳ್ಳುವುದು ಜೊತೆಗೆ ಪೌರಸ್ತ್ಯವಾದ ವೆಂಬುದು ಒಂದು ಸಂಸ್ಥೆ,ಪೂರ್ವ ವನ್ನು ಕುರಿತು ಪಶ್ಚಿಮವು ಶತಮಾನಗಳ ಕಾಲ ರಚಿಸಿರುವ ಇಡೀ ವಾಜ್ಜ್ಞಯವನ್ನು ನಿಯಂತ್ರಿಸುವ ಒಂದು ಅಮೂರ್ತ ಸಂಸ್ಥೆ.ಈ ವರ್ಗವು ಪಾಶ್ಚಿಮಾತ್ಯ ಸಾಹಿತಿಗಳು, ಇತಿಹಾಸಜ್ಞರು ಸಮಾಜಶಾಸ್ತ್ರಜ್ಞರು ಮತ್ತು ರಾಜಕೀಯ ಚಿಂತಕರನ್ನು ಒಳಗೊಂಡಿದೆ.ವಿಲಿಯಂ ಜೋನ್ಸ್, ಮ್ಯಾಕ್ಸ್ ಮುಲ್ಲರ್, ಬ್ಯೂಹ್ಲನ್ ಮುಂತಾದವರು ಜರ್ಮನಿಯ ನವ ವೈಯಾಕರಣಿಗಳನ್ನು ಓರಿಯಂಟಲಿಸ್ಟ್ ಎಂದು ಕರೆಯಬಹುದು.ಪೌರಸ್ತ್ಯವಾದದಲ್ಲಿಯೂ ಸಹ ಎರಡು ವಿಧಗಳನ್ನು ಕಾಣಬಹುದು ಅವುಗಳೇಂದರೆ ೧.ಗೋಚರ ೨.ಆಗೋಚರ ಪೌರಸ್ತ್ಯ ಚಿಂತನೆಯ ವ್ಯಾಖ್ಯಾನ ಮತ್ತು ವ್ಯಾಪ್ತಿಯಲ್ಲಿ ಪೌರಾತ್ಯ ರಾಷ್ಟ್ರಗಳ ಸಾಮಾಜಿಕ ವ್ಯವಸ್ಥೆ, ಧರ್ಮ, ಸಾಹಿತ್ಯ, ಸಂಸ್ಕೃತಿಗಳಲ್ಲಿ ವಿಧ್ವಾಂಸರು ತಮ್ಮನ್ನು ತೊಡಗಿಸಿಕೊಳ್ಳುವುದರ ಬಗ್ಗೆ ಹೇಳಿದ್ದಾನೆ. ಪೌರಸ್ತ್ಯ ಚಿಂತನೆಯೆಂದರೆ ಪೂರ್ವವನ್ನು ಕುರಿತು ಪಶ್ಚಿಮವು ಶತಮಾನಗಳ ಕಾಲ ರಚಿಸಿರುವ ಇಡೀ ಮಾತುಗಾರಿಕೆಯನ್ನು ನಿಯಂತ್ರಿಸುವ ಒಂದು ಅಮೂರ್ತ ಸಂಸ್ಥೆ ಎಂದಿದ್ದಾನೆ.ಸಾಮ್ರಾಜ್ಯಗಳು ಅಳಿದ ಕೂಡಲೇ ಸಾಮ್ರಾಜ್ಯಶಾಹೀ ಅಳಿಯುವುದಿಲ್ಲ ಎಂಬುದು ಸೈದ್ ನ ಅಭಿಪ್ರಾಯ. ಈ ಒಂದು ಕೃತಿ ೨೬ ಕ್ಕೂ ಹೆಚ್ಚಿನ ಭಾಷೆಗಳಿಗೆ ಭಾಷಾಂತರವಾಗಿದೆ.

ಪೌರಸ್ತ್ಯವಾದದ ತ್ರಿವಳಿಗಳು

[ಬದಲಾಯಿಸಿ]

೧.ಓರಿಯಂಟಲಿಸಮ್ ೨.ದಿ ಕ್ವೆಶ್ಚನ್ ಆಫ್ ಪ್ಯಾಲೆಸ್ತೈನ್ ೩.ಕವರಿಂಗ್ ಇಸ್ಲಾಂ ಕಲ್ಚರ್ ಅಂಡ್ ಇಂಪಿರಿಯಲಿಸಂ: ಸೈದ್ ನ ಪ್ರಮುಖ ಕೃತಿಗಳಲ್ಲಿ ಇದು ಒಂದು. ಇದು ೧೯೯೩ರಲ್ಲಿ ಪ್ರಕಟಗೊಂಡಿತು. ಈ ಕೃತಿಯಲ್ಲಿ ಅಂತಿಮ ತೀರ್ಮಾನಗಳಿಗೆ ಅನೇಕ ತಿದ್ದುಪಡಿಗಳನ್ನು ಮಾಡಿದ್ದಲ್ಲದೆ ಅಸ್ಪಷ್ಟವಾಗಿದ್ದ ವಿಷಯಗಳಿಗೆ ಸ್ಪಷ್ಟತೆ ನೀಡಿದ್ದಾನೆ. ಈ ಕೃತಿಯ ಕ್ಷೇತ್ರ ವ್ಯಾಪಕವಾಗಿದೆ. ಇದರಲ್ಲಿ ಇಂಡಿಯಾ, ಇಂಡೊನೆಷ್ಯಾ, ಆಸ್ಟ್ರೇಲಿಯಾ ಮುಂತಾದ ದೇಶಗಳು ಸೈದ್ ನ ಚರ್ಚೆಯ ವಿಷಯಗಳಾಗಿವೆ. ಮುಖ್ಯವಾಗಿ ರಾಜಕೀಯ ಚಿಂತನೆ ಹಾಗೂ ಅದರ ಆಗು ಹೊಗುಗಳೊಡನೆ ಯಾವ ಸಂಭಂದವು ಇಲ್ಲ ಎಂಬ ವಿಶ್ವಾದ್ಯಂತ ಭಾವಿಸಲ್ಪಟ್ಟ ಸಂಸ್ಕೃತಿಗು ರಾಜಕೀಯ ಘಟನೆಗು ಮತ್ತು ಸಾಮ್ರಾಜ್ಯಶಾಹಿ ಸಿದ್ದಾಂತಕ್ಕು ಸಂಕೀರ್ಣತೆ ಗುರುತಿಸುತ್ತದೆ.

ಸೈದ್ ನ ಇತರ ಪ್ರಮುಖ ಕೃತಿಗಳು

[ಬದಲಾಯಿಸಿ]
  • ೧.ಪ್ಯಾಲಿಸ್ತೇನ್ ಪ್ರಶ್ನೆ
  • ೨.ದ ವರ್ಲ್ಡ್, ದ ಟೆಕ್ಸ್ಟ್, ಅಂಡ್ ದಿ ಕ್ರಿಟಿಕ್
  • ೩.ಔಟ್ ಆಫ್ ಪ್ಲೇಸ್
  • ೪.ಕವರಿಂಗ್ ಇಸ್ಲಾಂ
  • ೫.ಜೊಸೆಫ್ ಕಾನಾರ್ಡ್ ಅಂಡ್ ಫಿಕ್ಸ್ನಲ್ ಆಟೋಬಯೋಗ್ರಫಿ ( ಸೈದ್ ನ ಮೊದಲ ವಿಮರ್ಷಾ ಕೃತಿ)

ಮಿಲ್ ಆರ್ನಾಲ್ಡ್, ಕಾರ್ಲೈಲ್,ನ್ಯೂಮನ್, ಮೆಕಾಲೆ, ರಸ್ಕಿನ್ ,ಜಾರ್ಜ್ ಎಲಿಯಟ್ ಮತ್ತು ಡಿಕಿನ್ಸ್ ಕೂಡ ಸೇರಿದಂತೆ ವಿಕ್ಟೋರಿಯ ಯುಗದ ಉದಾರವಾದೀ ಸಾಂಸ್ಕೃತಿಕ ನಾಯಕರೆಲ್ಲರಿಗೂ ಜನಾಂಗ ಮತ್ತು ಸಾಮ್ರಾಜ್ಯವಾದದ ಬಗ್ಗೆ ನಿಶ್ಚಿತ ಅಭಿಪ್ರಾಯಗಳಿದ್ದವು-ಎಂಬುದು ಸೈದ್ ನ ಅಭಿಪ್ರಾಯ.