ವಿಷಯಕ್ಕೆ ಹೋಗು

ಇಮ್ಮಾನ್ಯುವೆಲ್ ಮಾಕ್ರೋನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Emmanuel Macron

ಇಮ್ಮಾನ್ಯುವೆಲ್ ಮಾಕ್ರೋನ್ ೨೧ ಡಿಸೆಂಬರ್ ೧೯೭೭ರಲ್ಲಿ ಫ಼್ರಾನ್ಸ್ ದೇಶದ ಆಮೆನ್ಸ್ ನಗರದಲ್ಲಿ ಜನಿಸಿದರು. ೨೦೦೪ರಲ್ಲಿ ತತ್ವಶಾಸ್ತ್ರ ಮತ್ತು ಸಮಾಜಸೇವಾ ವಿಷಯದಲ್ಲಿ ಪದವಿ ಪಡೆದರು.ರೋಥ್ಸ್‌ಚೈಲ್ಡ್ ಸಂಸ್ಥೆಯಲ್ಲಿ ಬ್ಯಾಂಕರ್ ಆಗಿ,೨೦೦೭ರಿಂದ ಫ಼್ರಾನ್ಸ್‌ನ ಸಮಾಜವಾದಿ ಪಕ್ಷದ ಪದಾಧಿಕಾರಿಯಾಗಿ, ಸರ್ಕಾರದ ಹಲವು ಹುದ್ದೆಗಳನ್ನು (ಫ಼್ರಾನ್ಸ್‌ನ ಹಣಕಾಸು ನಿರ್ವಾಹಕ, ಅರ್ಥ ಸಚಿವ) ನಿರ್ವಹಿಸಿ ೨೦೧೭ರಲ್ಲಿ ಫ಼್ರಾನ್ಸ್‌ನ ಅತ್ಯಂತ ತರುಣ ಅಧ್ಯಕ್ಷರಾಗಿ ಆಯ್ಕೆಗೊಂಡರು. []

ಇಮ್ಮಾನ್ಯುವೆಲ್ ಜೀನ್-ಮೈಕಲ್ ಫ಼್ರೆಡೆರಿಕ್ ಮ್ಯಾಕ್ರೋನ್ ಎಂಬುದು ಇಮ್ಮಾನ್ಯುವೆಲ್ ಮಾಕ್ರೋನ್‌ರ ಪೂರ್ಣ ಹೆಸರು. ವೈದ್ಯರಾದ ಫ಼್ರಾಂಕೋಸೆ ಮತ್ತು ನರಶಾಸ್ತ್ರದ ಪ್ರೊಫ಼ೆಸರ್ ಜೀನ್-ಮೈಕಲ್ ಮ್ಯಾಕ್ರೋನ್ ದಂಪತಿಗಳಿಗೆ ೨೧ ಡಿಸೆಂಬರ್ ೧೯೭೭ರಂದು ಜನಿಸಿದ ಇಮ್ಮಾನ್ಯುವೆಲ್, ರೋಮನ್ ಕ್ಯಾಥೋಲಿಕ್ ಪಂಥಕ್ಕೆ ಸೇರಿದವರು.

ಆಮೆನ್ಸ್ ನಗರದ ಲೈಕೇಯಲ್ಲಿ ಶಾಲೆ ಮತ್ತು ಪದವಿಪೂರ್ವ ಶಿಕ್ಷಣ ಪಡೆದ ಇಮ್ಮಾನ್ಯುವೆಲ್, ತಮ್ಮ ಶಾಲಾ ಶಿಕ್ಷಕಿ ಬಿಜೆಟ್ ಆಜ಼ಿಯೆರೆರನ್ನು ಪ್ರೇಮಿಸಿದರು. []ಕುಪಿತರಾದ ಇಮ್ಮಾನ್ಯುವೆಲ್ ಪೋಷಕರು, ಬೇರೆ ಶಾಲೆಗೆ ಸೇರಿಸಿದರು. ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಪದವಿ ಪಡೆದ ಇಮ್ಮಾನ್ಯುವೆಲ್, ಪಾಲ್ ರಿಕೋಎರ್ ಎಂಬ ತತ್ವಶಾಸ್ತ್ರಜ್ಞರಿಗೆ ಸಂಪಾದಕೀಯ ಸಲಹೆಗಾರರಾಗಿ ನಿಯುಕ್ತಿಗೊಂಡು, ರಿಕೋಎರ್‌ರ ಲಾಮೆಮೋರೆ, ಐಹಿಸ್ಟೊರೆ, ಐಓಬ್ಲಿ ಗ್ರಂಥ ರಚಿಸಲು ಸಹಾಯಗೈದರು.

ವೃತ್ತಿ ಜೀವನ

[ಬದಲಾಯಿಸಿ]

ಫ಼್ರಾನ್ಸ್ ಹಣಕಾಸು ಸಚಿವಾಲಯದಲ್ಲಿ ಹಣಕಾಸು ಅಧೀಕ್ಷಕರಾಗಿ ೨೦೦೪-೨೦೭ರವರೆಗೆ ಕಾರ್ಯಗೈದ ಇಮ್ಮಾನ್ಯುವೆಲ್, ೨೦೦೭ರಲ್ಲಿ ಹಣಕಾಸು ಕಮೀಷನ್‌ನ ಸಹಾಯಕ ನಿರ್ದೇಶಕರಾಗಿ ನಿಯುಕ್ತಿಗೊಂಡರು. ೨೦೦೮ರಲ್ಲಿ ತಮ್ಮ ಕೆಲಸವನ್ನು ತ್ಯಜಿಸಿ, ಬ್ಯಾಂಕರ್ ಆಗಲು ಇಚ್ಛಿಸಿದ ಇಮ್ಮಾನ್ಯುವೆಲ್, ೫೦,೦೦೦ ಯೂರೋ ದಂಡ ತೆತ್ತು ಸರ್ಕಾರಿ ಸೇವೆ ತ್ಯಜಿಸಿದರು. ಪ್ರತಿಷ್ಟಿತ ರೊಥ್ಸ್‌ಚೈಲ್ಡ್ ಅಂಡ್ ಸಿಯೆ ಬ್ಯಾಂಕ್ ಸಂಸ್ಥೆಯಲ್ಲಿ ಹೂಡಿಕಾ ಬ್ಯಾಂಕರ್‌ ಹುದ್ದೆಗೆ ನಿಯುಕ್ತಿಗೊಂಡರು.

ರಾಜಕೀಯ ಜೀವನ

[ಬದಲಾಯಿಸಿ]

ಇಮ್ಮಾನ್ಯುವೆಲ್ ೨೦೦೬-೨೦೦೯ರವರೆಗೆ ಫ಼್ರಾನ್ಸ್ ಸಮಾಜವಾದಿ ಪಕ್ಷದ ಸದಸ್ಯರಾಗಿದ್ದರು. ೨೦೧೨-೨೦೧೪ರ ಅವಧಿಯಲ್ಲಿ ಫ಼್ರಾನ್ಸ್ ಅಧ್ಯಕ್ಷ ಹಾಲೆಂಡ್ ವೈಯಕ್ತಿಕ ಸಲಹಾ ಸಮಿತಿಯಲ್ಲಿ ಸೇವೆಗೈದ ಇಮ್ಮಾನ್ಯುವೆಲ್, ೨೦೧೪ರ ಆಗಸ್ಟ್ ೨೬ರಂದು ಹಣಕಾಸು ಸಚಿವರಾಗಿಯೂ ನಿಯುಕ್ತಿಗೊಂಡರು. ಉದ್ಯಮಸ್ನೇಹಿ ನೀತಿಗಳನ್ನು ಜಾರಿಗೆ ತರಲು ಶ್ರಮಿಸಿದರು. ೨೦೧೫ರ ಆಗಸ್ಟ್ ಹೊತ್ತಿಗೆ ಫ಼್ರಾನ್ಸ್ ಸಮಾಜವಾದಿ ಪಕ್ಷದಿಂದ ಹೊರಬಂದರು.[]

ಎನ್ ಮಾರ್ಚೆಲ್ ಪಕ್ಷ

[ಬದಲಾಯಿಸಿ]

ಎನ್ ಮಾರ್ಚೆಲ್ ಎಂಬ ಹೊಸ ಪಕ್ಷವನ್ನು ೬ ಏಪ್ರಿಲ್ ೨೦೧೬ರಂದು ಇಮ್ಮಾನ್ಯುವೆಲ್ ಕಟ್ಟಿದರು. ಪ್ರಸಕ್ತ ಅಧ್ಯಕ್ಷ ಹಾಲೆಂಡ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದಾಗ, ೨೦೧೭ರ ಅಧ್ಯಕ್ಷ ಚುನಾವಣೆಗೆ ತಾವು ಸ್ಪರ್ಧಿಸುವುದಾಗಿ ಇಮ್ಮಾನ್ಯುವೆಲ್ ಘೋಷಿಸಿದರು.[] ಇದರ ನಿಮಿತ್ತ ೩೦ ಆಗಸ್ಟ್ ೨೦೧೬ ರಂದು ಹಣಕಾಸು ಸಚಿವ ಹುದ್ದೆಗೆ ರಾಜೀನಾಮೆಯಿತ್ತರು.

೨೦೧೭ ಫ಼ೆಬ್ರವರಿವರೆಗೆ ತಮ್ಮ ರಚನಾತ್ಮಕ ಕಾರ್ಯಕ್ರಮದ ಬಗ್ಗೆ ಏನನ್ನೂ ಸ್ಪಷ್ಟವಾಗಿ ತಿಳಿಸದುದಕ್ಕಾಗಿ ಇಮ್ಮಾನ್ಯುವೆಲ್ ಟೀಕೆಗೆ ಒಳಗಾದರು.

ಇಮ್ಮಾನ್ಯುವೆಲ್‌ರ ಪ್ರಬಲ ಎದುರಾಳಿ ಮರೀನ್ ಲೀ ಪೆನ್ ಫ಼್ರಾನ್ಸ್ ಅನ್ನು ಯೂರೋ ಹಣಕಾಸು ಒಕ್ಕೂಟದಿಂದ ಹೊರತರುವುದಾಗಿಯೂ, ಉಗ್ರವಾದ ಮತ್ತು ಮೂಲಭೂತವಾದವನ್ನು ಹಿಮ್ಮೆಟ್ಟಿಸಲು ಹೋರಾಡುವುದಾಗಿ ಘೋಷಣೆ ಮಾಡಿದರು. ಯೂರೋ ಒಕ್ಕೂಟದಲ್ಲಿ ಉಳಿಯುವುದು ಇಮ್ಮಾನ್ಯುವೆಲ್‌ರ ಘೋಷಣೆಯಾಯಿತು.

ನೀತಿ ನಿರೂಪಣೆ

[ಬದಲಾಯಿಸಿ]

ಹೂಡಿಕಾ ಬ್ಯಾಂಕರ್‌ ಹುದ್ದೆಯಲ್ಲಿ ಮತ್ತು ಹಣಕಾಸು ಇಲಾಖೆಯಲ್ಲಿ ದೀರ್ಘಕಾಲ ಕಾರ್ಯ ನಿರ್ವಹಿಸಿದ್ದ ಇಮ್ಮಾನ್ಯುವೆಲ್‌ರು ಪ್ರಬಲ ನಂಬಿಕೆ ಮುಕ್ತ ಮಾರುಕಟ್ಟೆ ನೀತಿ ಮತ್ತು ಉದಾರವಾದವರು.ಎಡಪಂಥ ಮತ್ತು ಬಲಪಂಥ ಎರಡರ ಉತ್ತಮ ಅಂಶಗಳನ್ನು ಹೊಂದಿದ ಮೂರನೆ ಮಾರ್ಗವನ್ನು ಇಮ್ಮಾನ್ಯುವೆಲ್‌ರ ಭಾಷಣಗಳಲ್ಲಿ ಕಾಣಬಹುದು. ಈ ವಿಷಯದಲ್ಲಿ ಬಿಲ್ ಕ್ಲಿಂಟನ್, ಟೋನಿ ಬ್ಲೇರ್‌ ಇವರುಗಳು ಇಮ್ಮಾನ್ಯುವೆಲ್‌ರ ನೆಚ್ಚಿನ ನಾಯಕರು. ಫ಼್ರಾನ್ಸ್‌ನಲ್ಲಿ ಬಹು ಚರ್ಚೆಗೆ ಒಳಗಾದ ಎಲ್ ಖೊಮ್ರಿ (ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುವುದನ್ನು ಸರಳಗೊಳಿಸುವ ನೀತಿ) ಕರಡು ತಿದ್ದುಪಡಿಯ ಪ್ರತಿಪಾದಕರಾಗಿದ್ದಾರೆ.

ವಿದೇಶಾಂಗ ನೀತಿ

[ಬದಲಾಯಿಸಿ]

ಸಿರಿಯಾದಲ್ಲಿ ಅಸ್ಸಾದ್ ಸರ್ಕಾರದ ವಿರುದ್ಧ ದನಿಯೆತ್ತಿದ್ದ ಇಮ್ಮಾನ್ಯುವೆಲ್‌,[] ಫ಼್ರೆಂಚ್-ಅಮೇರಿಕ ಫ಼ೌಂಡೇಷನ್‌ನ ತರುಣ ನಾಯಕ ಗೌರವಹುದ್ದೆಗೆ ೨೦೧೨ರಲ್ಲಿ ಆಯ್ಕೆಯಾಗಿದ್ದರು.[] ಹಾಲೆಂಡ್‌ರ ನೀತಿಗಳನ್ನು ಮಧ್ಯಪ್ರಾಚ್ಯದೇಶಗಳ ಮಟ್ಟಿಗೆ ಮುಂದುವರೆಸುವೆ ಎಂದು ಭಾಷಣಗಳಲ್ಲಿ ತಿಳಿಸಿದ್ದಾರೆ.

ಯೂರೋ ಒಕ್ಕೂಟ

[ಬದಲಾಯಿಸಿ]

ಯೂರೋ ಹನಕಾಸು ಒಕ್ಕೂಟದ ಪ್ರಬಲ ಪ್ರತಿಪಾದಕರಾಗಿರುವ ಇಮ್ಮಾನ್ಯುವೆಲ್‌ ಫ಼್ರಾನ್ಸ್ ಅನ್ನು ಒಕ್ಕೂಟದಲ್ಲಿ ಮುಂದುವರೆಸುವ ಬಗ್ಗೆ ಸ್ಪಷ್ಟವಾಗಿ ದನಿಯೆತ್ತಿದ್ದಾರೆ.

ವೈಯಕ್ತಿಕ ಬದುಕು

[ಬದಲಾಯಿಸಿ]

ತಮ್ಮ ಶಾಲಾಶಿಕ್ಷಕಿ ಬ್ರಿಜೆಟ್ ಟ್ರೋಗ್ನಿಉ‍ಕ್ಸ್ ತಮಗಿಂತ ೨೪ ವರ್ಷ ದೊಡ್ಡವರಾಗಿದ್ದರೂ, ೧೭ನೆ ಅಪರ ವಯಸ್ಸಿನಲ್ಲಿಯೇ ಪ್ರೇಮಿಸಿ ವರಿಸಿದ ಇಮ್ಮಾನ್ಯುವೆಲ್‌, ಮೂರು ಮಕ್ಕಳ ತಂದೆ.

ಉಲ್ಲೇಖಗಳು

[ಬದಲಾಯಿಸಿ]
  1. http://www.msn.com/en-us/news/world/emmanuel-macron-a-39-year-old-political-prodigy/ar-BBAPpLW?ocid=News
  2. http://www.gala.fr/stars_et_gotha/emmanuel_macron
  3. http://www.bbc.com/news/world-europe-36792249
  4. http://www.la-croix.com/Religion/Laicite/La-jeunesse-tres-catholique-candidats-presidentielle-2017-04-10-1200838526
  5. http://www.foxnews.com/world/2017/01/24/france-presidential-hopeful-macron-pushes-for-syria-talks.html
  6. "ಆರ್ಕೈವ್ ನಕಲು". Archived from the original on 2017-07-02. Retrieved 2017-05-08.