ಅಪೋಲೋ ಕಾರ್ಯಕ್ರಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಪೊಲೊ ಕಾರ್ಯಕ್ರಮ ಇಂದ ಪುನರ್ನಿರ್ದೇಶಿತ)
ಅಪೊಲೋ ಕಾರ್ಯಕ್ರಮದ ಚಿಹ್ನೆ

ಅಪೊಲೋ ಕಾರ್ಯಕ್ರಮ ಅಮೇರಿಕ ಸಂಯುಕ್ತ ಸಂಸ್ಥಾನನಾಸಾ ಸಂಸ್ಥೆಯು ೧೯೬೧ರಿಂದ ೧೯೭೪ರ ಮಧ್ಯೆ ಚಂದ್ರನಡೆಗೆ ಕಳುಹಿಸಿದ ಮಾನವ ಚಾಲಿತ ಬಾಹ್ಯಾಕಾಶ ನೌಕೆಗಳ ಸರಣಿ. ಈ ಕಾರ್ಯಕ್ರಮವು ಆಗಿನ ರಾಷ್ಟ್ರಪತಿಯಾದ ಜಾನ್ ಎಫ್. ಕೆನಡಿಯವರು ನಾಸಾದ ಧ್ಯೇಯವಾಗಿ ಘೋಷಿಸಿದ "೧೯೬೦ರ ದಶಕದಲ್ಲಿ ಚಂದ್ರನ ಮೇಲೆ ಮಾನವನನ್ನು ನಿಲ್ದಾಣ ಮಾಡಿಸಿ, ವಾಪಸ್ಸು ಸುರಕ್ಷಿತವಾಗಿ ಹಿಂದೆತರುವುದು" ಎಂಬುದನ್ನು ಪೂರೈಸಲು ನಡೆಸಲಾಯಿತು. ಈ ಧ್ಯೇಯವು ಜುಲೈ ೧೯೬೯ರಲ್ಲಿ ಅಪೊಲೋ ೧೧ರ ಯಶಸ್ಸಿನಿಂದ ಪೂರ್ಣಗೊಳಿಸಲಾಯಿತು.