ಹೆನ್ರಿ ಬ್ರಿಗ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆನ್ರಿ ಬ್ರಿಗ್ಸ್ (1561-1630) ಒಬ್ಬ ಇಂಗ್ಲಿಷ್ ಗಣಿತವಿದ.

ಜೀವನ[ಬದಲಾಯಿಸಿ]

ಉತ್ತರ ಹ್ಯಾಲಿಫ್ಯಾಕ್ಸಿನ ವಾರ್ಲಿವುಡ್ ಎಂಬಲ್ಲಿ ಜನನ. ಆಕ್ಸ್‌ಫರ್ಡಿನಲ್ಲಿ ಮರಣ (29 ಜನವರಿ 1630). ವಿದ್ಯಾಭ್ಯಾಸ ಕೇಂಬ್ರಿಜಿನಲ್ಲಿ ನಡೆಯಿತು. ಈತ 1596 ರ ತನಕ ಅಲ್ಲಿಯೇ ಪಾಠಪ್ರವಚನ ನಡೆಸುತ್ತಿದ್ದ. ಅನಂತರ ಲಂಡನ್ ಮತ್ತು ಆಕ್ಸ್‌ಫರ್ಡ್‌ಗಳಲ್ಲಿ ಗಣಿತವಿಜ್ಞಾನದ ಪ್ರಾಧ್ಯಾಪಕನಾಗಿ ಕೆಲಸಮಾಡಿದ. ಲಘುಗಣಕಗಳ ಬಗ್ಗೆ ಈತ ವಿಶೇಷ ಪರಿಶ್ರಮ ವಹಿಸಿ, ಸ್ಕಾಟ್ಲೆಂಡಿನ ಗಣಿತವಿದ ಜಾನ್ ನೇಪಿಯರ್ (1550-1617) ಸೂಚಿಸಿದ್ದ ಆಧಾರದ ಕೋಷ್ಟಕಗಳ (base tables) ಬದಲಿಗೆ 10 ಆಧಾರದ ಲಘುಗಣಕ ಕೋಷ್ಟಕಗಳನ್ನು ರಚಿಸಿದ. ಲೆಕ್ಕಾಚಾರಗಳಿಗೆ ಸಂಬಂಧಿಸಿದಂತೆ ದಶಮಾಂಶದ 14ನೆಯ ಸ್ಥಾನದವರೆಗೂ (14 decimal places) ನಿಖರತೆ ನೀಡಬಲ್ಲ ಕೋಷ್ಟಕದ ರಚನೆಯಲ್ಲೂ ಶ್ರಮವಹಿಸಿದ.[೧] ಪ್ರಚಲಿತವಾಗಿರುವ ದೀರ್ಘ ಭಾಗಾಹಾರದ ಕ್ರಮವನ್ನು ರೂಪಿಸಿದವ ಈತ.[೨] ಇವನು ರಚಿಸಿದ ಅರಿತ್‌ಮೆಟಿಕ ಲಾಗರಿತಮಿಕ ಗ್ರಂಥ 1624ರಲ್ಲಿ ಪ್ರಕಟವಾಯಿತು; ಮತ್ತೊಂದು ಕೃತಿ ಟ್ರಿಗೊನೊಮೆಟ್ರಿಕ್ ಬ್ರಿಟಾನಿಕ ಇವನ ಮರಣಾನಂತರ ಪ್ರಕಟವಾಯಿತು.

ಬ್ರಿಗ್ಸ್ (ಅರ್ಧಕೋನ) ಸೂತ್ರಗಳು[ಬದಲಾಯಿಸಿ]

a, b, c ಗಳು ಯಾವುದೇ ತ್ರಿಭುಜವೊಂದರ ಬಾಹುಗಳಾಗಿದ್ದು (sides) p ಅದರ ಅರ್ಧಪರಿಧಿಯಾಗಿರಲಿ (half perimeter). ಬಾಹುಗಳ ಅಭಿಮುಖ ಕೋನಗಳು (opposite angles) ಅನುಕ್ರಮವಾಗಿ  ಮತ್ತು  ಗಳಾಗಿರಲಿ. ಬಾಹು, ಅಭಿಮುಖ ಕೋನ ಮತ್ತು ಅರ್ಧಪರಿಧಿ ಇವುಗಳಿಗೆ ಇರುವ ತ್ರಿಕೋಣಮಿತೀಯ ಸಂಬಂಧ:

ಇದೇ ರೀತಿ  ಮತ್ತು  ಗಳಿಗೆ ಕೂಡ. ಜೊತೆಗೆ

ಮತ್ತು  ಎಂಬ ಸಂಬಂಧಗಳೂ ಇವೆ. ಇವಕ್ಕೆ ಬ್ರಿಗ್ಸ್ ಸೂತ್ರಗಳೆಂದು ಹೆಸರಿದೆ.

ಉಲ್ಲೇಖಗಳು[ಬದಲಾಯಿಸಿ]

  1.  One or more of the preceding sentences incorporates text from a publication now in the public domainChisholm, Hugh, ed. (1911). "Briggs, Henry" . Encyclopædia Britannica. Vol. 4 (11th ed.). Cambridge University Press. p. 566. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help)
  2. "Henry Briggs - Oxford Reference". {{cite journal}}: Cite journal requires |journal= (help)

ಹೊರಗಿನ ಕೊಂಡಿಗಳು[ಬದಲಾಯಿಸಿ]