ಸದಸ್ಯರ ಚರ್ಚೆಪುಟ:Usha ga89/ನನ್ನ ಪ್ರಯೋಗಪುಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರವಿರಾಜ್ ಸಾಗರ್


ಮಕ್ಕಳೊಂದಿಗೆ ಒಡನಾಡುತ್ತಾ, ಅವರ ಮನೋಲೋಕವನ್ನು ಹಿಗ್ಗಿಸಲು ತಮ್ಮದೇ ಆದ ಕಲಾಂತರ್ಗತ ಶಿಕ್ಷಣದ ಮೂಲಕ ಶ್ರಮಿಸುತ್ತಿರುವ ಸಾಹಿತಿ, ಸಂಘಟಕ, ಶಿಕ್ಷಕ ರವಿರಾಜ್ ಸಾಗರ್ ಎಂದು ಪರಿಚಿತರಾದ ರವಿಚಂದ್ರ.ಡಿ ಅವರು 1986 ಜುಲೈ 19 ರಂದು ಜನಿಸಿದರು.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮಂಡಗಳಲೆ ಗ್ರಾಮದವರು. ರಾಯಚೂರಿನ ಮಸ್ಕಿ ತಾಲೂಕಿನ ಮಲ್ಕಾಪುರದಲ್ಲಿ 16 ವರ್ಷ ಸೇವೆ ಸಲ್ಲಿಸಿ ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ  ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  

ಕಾಲೇಜು ದಿನಗಳಿಂದಲೇ  ಬರೆಯುವ ಹವ್ಯಾಸ ಬೆಳೆಸಿಕೊಂಡ ಇವರು ಪತ್ರಿಕೋದ್ಯಮ ,ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವೃತ್ತಿಯ ಜೊತೆಗೆ ಜಾನಪದ ಸಂಪಾದನೆ, ಮಕ್ಕಳ ನಾಟಕ ನಿರ್ದೇಶನ ಮತ್ತು ರಚನೆ, ಫೋಟೋಗ್ರಫಿಯಲ್ಲಿಯೂ ತೊಡಗಿಕೊಂಡಿದ್ದಾರೆ.


ಸಾಹಿತ್ಯ ಕೃಷಿ

ನರಲೇಲೆ (ಕವನ ಸಂಕಲನ), ಅಂಕಪಟ್ಟಿ ಬಾಲ್ಯ,ಮಂದಾರ ಮಾಲೆ ಇವರ ಮಕ್ಕಳ ಕವನ ಸಂಕಲಗಳಾಗಿವೆ.

ನಮ್ಮೂರ ಜಾನಪದ ಸಿರಿ, ನಮ್ಮೂರ ಜಾನಪದ ಅನುಸಂಧಾನ ಸಂಪಾದಿತ ಕೃತಿಗಳಾಗಿವೆ.

ಕಲಿತವರು ಮತ್ತು ಇತರೆ ನಾಟಕಗಳು ಮಕ್ಕಳ ನಾಟಕ ಸಂಕಲನವಾಗಿದೆ.

ಶಿವ ಮೆಚ್ಚಿದ ಬೆಟ್ಟದ ಹೂ, ಗುರುಗಳು ಹೇಳಿದ ಕಥೆಗಳು, ಸೂರ್ಯನ ಸಂದೇಶ ಮಕ್ಕಳ ಕಥಾ ಸಂಕಲನ ಪ್ರಕಟಿಸಿದ್ದಾರೆ.

ಕರ್ನಾಟಕ ದೇಸಿ ಚಿತ್ರಕಲೆ ಹಸೆ ಚಿತ್ತಾರ ಇವರ ಸಂಶೋಧನಾ ಕೃತಿಯಾಗಿದೆ.

ಪ್ರಸ್ತುತ ಹಂಪಿ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾರ್ಥಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು

ರವಿರಾಜ್ ಅವರಿಗೆ ಡಾ. ಕವಿತಾ ಕೃಷ್ಣ ದತ್ತಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ವತಿಯಿಂದ ಕನ್ನಡ ಸೇವರತ್ನ ಪುರಸ್ಕಾರ, ಸೃಜನ ಬಾಲ ಸಾಹಿತ್ಯ ಪುರಸ್ಕಾರ, ಹಸೆ ಚಿತ್ತಾರ ಸಿರಿ ಪುರಸ್ಕಾರ, ಮಕ್ಕಳ ಕಲ್ಪವೃಕ್ಷ ಪುರಸ್ಕಾರ, ಮಕ್ಕಳ ರತ್ನ ಪುರಸ್ಕಾರವನ್ನು ವಿವಿಧ ಸಂಘಟನೆಗಳ ಪುರಸ್ಕಾರಗಳು ದೊರೆತಿವೆ.

ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ನೂತನ ಕಲಾಂತರ್ಗತ ಕಲಿಕಾ ಪ್ರಯೋಗಗಳನ್ನು ಪರಿಚಯಿಸಿರುವ ಇವರು ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಅಕ್ಷರ ಸಿರಿ ರಾಜ್ಯ ಪುರಸ್ಕಾರ. ರಾಧಾಕೃಷ್ಣ ರಾಷ್ಟ್ರೀಯ ಉತ್ತಮ ಶಿಕ್ಷಕ ಪುರಸ್ಕಾರ, ಶಿಕ್ಷಕ ರತ್ನ ಪುರಸ್ಕಾರ, ,ಮತ್ತಿತರ ಸಂಘಟನೆಗಳಿಂದ ಉತ್ತಮ ಶಿಕ್ಷಕ, ಹಲವು ಪುರಸ್ಕಾರಗಳನ್ನು ಪುರಸ್ಕಾರ ಪಡೆದಿದ್ದಾರೆ.

ಸಂಘಟನಾ ಕ್ಷೇತ್ರ ಮತ್ತು ಸಂಶೋಧನೆ

ಮಕ್ಕಳ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷರಾಗಿ ,

ಭಾರತ ಜ್ಞಾನವಿಜ್ಞಾನ ಸಮಿತಿಯ ಜಿಲ್ಲಾ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯದ ಮಕ್ಕಳೇ ಬರೆದ ಬರಹಗಳ ಪತ್ರಿಕೆಯಾಗಿ ಮಕ್ಕಳ ಮಂದಾರ ಪತ್ರಿಕೆಯ ಸಂಪಾದಕರಾಗಿ 17 ವರ್ಷಗಳಿಂದ ಉಚಿತವಾಗಿ ಪತ್ರಿಕೆಯನ್ನು ಪ್ರಕಟಿಸಿ ವಿತರಿಸುತ್ತಿದ್ದಾರೆ.

ಜನಪದ  ಹಸೆ ಚಿತ್ತಾರ ಕಲಾವಿದರಾಗಿಯೂ ರಾಷ್ಟ್ರದಾದ್ಯಂತ ಪ್ರದರ್ಶನ ಮತ್ತು ಉಪನ್ಯಾಸಗಳನ್ನು ನೀಡುತ್ತಿದ್ದಾರೆ. ಇತಿಹಾಸ ಮತ್ತು ಜನಪದ ಚಿತ್ರಕಲೆಗಳ ಸಂಶೋಧನಾ ಕ್ಷೇತ್ರದಲ್ಲಿ ನಿರಂತರವಾಗಿ ಚಟುವಟಿಕೆಯಿಂದ ತೊಡಗಿಕೊಂಡಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಬಳಗದ ರಾಯಚೂರು ಜಿಲ್ಲಾ ಪ್ರತಿನಿಧಿಯಾಗಿ, ಮಸ್ಕಿ ತಾಲೂಕಿನ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ, ರಾಜ್ಯ ನಿರ್ದೇಶಕರಾಗಿ, ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯ ನಿರ್ವಹಿಸುತ್ತಿದ್ದಾರೆ.

ಉಲ್ಲೇಖ ,. https://www.bookbrahma.com/author/raviraj-sagar