ಮಿತ್ರವಿಂದಾ ಕುಲಕರ್ಣಿ
ಮಿತ್ರವಿಂದಾ ಕುಲಕರ್ಣಿ | |
---|---|
ಜನನ | ೧೯೪೪ ರ ಜುಲೈ ೧೭ ಧಾರವಾಡ |
ರಾಷ್ಟ್ರೀಯತೆ | ಭಾರತೀಯ |
ಕರ್ನಾಟಕದ ಉತ್ತಮ ಬರಹಗಾರ್ತಿಯಲ್ಲೊಬ್ಬರು.ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದವರು. ಇವರ ಮೊದಲ ಸಾಹಿತ್ಯವು ಕಥಾ ಪ್ರಕಾರದಲ್ಲಿದೆ. ಇವರ ಕೆಲವು ಸಾಹಿತ್ಯಗಳು ಹಿಂದಿ ಭಾಷೆಯಿಂದ ಅನುವಾದಕೊಂಡಿವೆ.
- ಇವರು ೧೯೪೪ ರ ಜುಲೈ ೧೭ ರಂದು ಜನಿಸಿದರು. ಮೂಲತಃ ಧಾರವಾಡದವರು. ತಂದೆ ಗುಂಡಾಸೂರ್ಯ ಹಾಗು ತಾಯಿ ಇಂದಿರಾಬಾಯಿ.
- ನಾಟಕ ಕಲಾವಿದರಾದ ಜಿ. ಹೆಚ್. ಕುಲಕರ್ಣಿಯವರೊಂದಿಗೆ ವಿವಾಹವಾದರು, ಈ ದಂಪತಿಗಳು ಸಮಾನ ಹವ್ಯಾಸಗಳನ್ನು ಬೆಳಸಿಕೊಂಡಿದ್ದಾರೆ. ಈಗ ಎರಡು ವರ್ಷಗಳಿಂದ ಬಾಗಲಕೋಟೆಯಲ್ಲಿ ನೆಲೆಸಿದ್ದಾರೆ.
- ಮಗಳು ತೃಪ್ತಿ ಹಾಗೂ ಅಳಿಯ ಅವಿನಾಶ್. ಸಂಗೀತದಲ್ಲಿ ಸಮಾನ ಅಸಕ್ತಿ ಹೊಂದಿದ ಇವರು ಸುರತ್ಕನಲ್ಲಿ ಭಜನ್ ಸಂಧ್ಯಾಗಳನ್ನು ನಡೆಸುತ್ತಿದ್ದರು.
- ಹಿಂದಿ ಭಾಷೆಯಲ್ಲಿ ಸ್ನಾತಕೊತ್ತರ ಪದವಿ ಪಡೆದ ಇವರು ಉಪನ್ಯಾಸಕಿಯಾಗಿ ದುಡಿದರು.
ಕೃತಿಗಳು[ಬದಲಾಯಿಸಿ]
ಕಣ್ಣು ತೆರೆದಾಗ ಹೀಗೊಂದು ಹಾಸ್ಯ ಪ್ರಸಂಗ, ಹಿಂದಿ ಪಾಠ, ಚಿಂತನ[೧]
ಕಥಾಸಂಕಲನಗಳು[ಬದಲಾಯಿಸಿ]
ಸಂಕೋಲೆಯಾಚೆ, ಅಪರಾಜಿತೆ
ಕಿರುನಾಟಕಗಳು[ಬದಲಾಯಿಸಿ]
ಕೆಲಸ ಕೆಲಸ, ಮರಳಿ ಬಂದಾಗ, ಕ್ಷಮಯಾಧರಿತ್ರಿ
ಲೇಖನ ಸಂಕಲನ[ಬದಲಾಯಿಸಿ]
ಮಹಾದೇವಿಯವರ ಸಾಹಿತ್ಯ ದಲ್ಲಿ ಮಳೆ
ಕಿರುಕತೆ[ಬದಲಾಯಿಸಿ]
ಆ ನೋಟ
ಉಲ್ಲೇಖಗಳು[ಬದಲಾಯಿಸಿ]
- ↑ ಚಂದ್ರಗಿರಿ,ನಾಡೋಜ ಡಾ ಸಾರಾಅಬೂಬ್ಬಕರ್ ಅಭಿನಂದನಾ ಗ್ರಂಥ, ಸಂಪಾದಕರು ಡಾ ಸಬಿಹಾ, ಸಿರಿವನ ಪ್ರಕಾಶನ, ಬೆಂಗಳೂರು, ಮೊದಲ ಮುದ್ರಣ-೨೦೦೯, ಪುಟ ಸಂಖ್ಯೆ ೨೯೯