ರಾಜು ಸ್ರಿವಾಸ್ತವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Raju1.jpg
ಹಾಸ್ತ್ಯನಟ ಸಾಮ್ರಾಟ, ರಾಜು ಸ್ರೀವಾಸ್ತವ್

ರಾಜು ಸ್ರೀವಾಸ್ತವ್,'Raju Srivastav'[೧] Filmy beat] (Hindi: राजू श्रीवस्तव) ರವರ ಬಾಲ್ಯದ ಹೆಸರು, ಸತ್ಯಪ್ರಕಾಶ್ ಸ್ರಿವಾಸ್ತವ್ ಎಂದು. ಸ್ರಿವಾಸ್ತವ್, ಡಿಸೆಂಬರ್, ೨೫, ೧೯೬೩ ರಲ್ಲಿ ಕಾನ್ಪುರದ ಮಧ್ಯಮ-ವರ್ಗದ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ತಂದೆ ’ವಿಖ್ಯಾತ ಕವಿ, ರಮೇಶ್ ಚಂದ್ರ’ ಸ್ರಿವಾಸ್ತವ ಗೆಳೆಯರಿಗೆಲ್ಲಾ ’ಬಲೈ ಕಾಕ’ ಎಂದು ಪ್ರಸಿದ್ಧರಾಗಿದ್ದರು.

ಹಾಸ್ಯ ರಾಜುರವರ ರಕ್ತವಾಹಿನಿಯಲ್ಲಿತ್ತು[ಬದಲಾಯಿಸಿ]

ಹಾಸ್ಯನಟನಾ ಪ್ರವೃತ್ತಿ, ಶಾಲಾದಿನಗಳಿಂದಲೇ ಮೊಳಕೆ ಒಡೆದಿತ್ತು. ಶಾಲಾದಿನಗಳಲ್ಲಿ ಅಧ್ಯಾಪಕರನ್ನು ಆಡಿಕೊಂಡು ನಗುತ್ತಿದ್ದರು. ಪಾಠಮಾಡುವ ಸಮಯದಲ್ಲಿ ಮಾಸ್ತರುಗಳ ಮಾತಾಡುವರೀತಿ, ಅವರ ಹಾವ-ಭಾವಗಳ ನಕಲನ್ನು ಚೆನ್ನಾಗಿ ಮಾಡುತ್ತಿದ್ದರು. ಮುಂದೆ ಇದೇ ಕೌಶಲ್ಯ ಅವರ ಜೀವನೋಪಾಯಕ್ಕೆ ದಾರಿಮಾಡಿಕೊಟ್ಟಿತು. ಮೊಟ್ಟಮೊದಲ ಪ್ರಯತ್ನವೆಂದರೆ, ಬೊಂಬಾಯಿಗೆ ಪಾದಾರ್ಪಣೆಮಾಡಿದ ಸಮಯದಲ್ಲಿ. ಮೇರುನಟ, ಅಮಿತಾಬ್ ಬಚ್ಚನ್ ರವರ ಮಾತಿನ ಶೈಲಿಗಳನ್ನು ನಕಲುಮಾಡುವಲ್ಲಿ ಯಶಸ್ಸು ಸಿಕ್ಕಿತು. ಕೆಲವು ವರ್ಷಗಳ ನಂತರ, ರಾಜಶ್ರಿ ಚಿತ್ರದ ಲಾಂಛನ ದಡಿಯಲ್ಲಿ ’ಮೈನೆ ಪ್ಯಾರ್ ಕಿಯ’ ಚಿತ್ರದಲ್ಲಿ ಒಂದು ಪುಟ್ಟಪಾತ್ರಮಾಡಲು ಸಿಕ್ಕಿತು. ಇದೇ ರೀತಿಯಾಗಿ ಇನ್ನೂ ಕೆಲವು ಹಿಂದಿ ಚಲನ ಚಿತ್ರಗಳಲ್ಲಿ ಚಿಕ್ಕ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ.

ಭಾರಿ-ಜನಪ್ರಿಯ ಧಾರಾವಾಹಿ ಬಿಗ್ ಬಾಸ್ (Season3) ನಲ್ಲಿ[ಬದಲಾಯಿಸಿ]

ಅಮಿತಾಬ್ ಬಚ್ಚನ್ ಪ್ರಸ್ತುತಪಡಿಸಿದ, ರವರ ಭಾರಿ-ಜನಪ್ರಿಯ ಧಾರಾವಾಹಿ ಬಿಗ್ ಬಾಸ್ (Season 3) ನಲ್ಲಿ ಪಾತ್ರಲಭಿಸಿತ್ತು. ಕಲ್ಯಾಣ್ ಜಿ ಆನಂದ್ ಜಿ, ಬಪ್ಪಿಲಹರಿ, ಮತ್ತು ನಿತಿನ್ ಮುಖೇಶ್ ಜೊತೆಗೆ ’ಸ್ಟೇಜ್ ಶೋ ಗಳಲ್ಲಿ ಭಾಗವಹಿಸಿದ್ದಾರೆ. ದೇಶವಿದೇಶಗಳಲ್ಲೂ ಚಲನಚಿತ್ರರಂಗಕ್ಕೆ ಬರುವಮೊದಲು, ಸುಪ್ರಸಿದ್ಧ ನಗೆನಟ ಜಾನಿಲಿವರ್ ಗುರುತಿಸಿದ್ದರು. ಸ್ಟೇಜ್ ಶೋಗಳಲ್ಲಿ ಜಾನಿಲಿವರ್ ತಂಡದಲ್ಲಿಪ್ರಮುಖ ವ್ಯಕ್ತಿಯಾಗಿ, ಅವರು ಬಹಳ ಹೆಸರುಮಾಡಿದರು. ಜನ ಅವರಹಾಸ್ಯಗಳನ್ನು ಸ್ವಾಗತಿಸಿದರು.

'ಭಾರತೀಯ ಟೆಲಿವಿಶನ್ ಮಾಧ್ಯಮ' ದಲ್ಲಿ ಅತ್ಯಂತ ಜನಪ್ರಿಯ ಹಾಸ್ಯಕಾರ[ಬದಲಾಯಿಸಿ]

'ರಾಜು ಸ್ರೀವಾಸ್ತವ್',ರವರನ್ನು ಮೀಡಿಯದವರು, ರಾಜು ಸ್ರೀವಾಸ್ತವ್ ಅಥವಾ ರಾಜು ಶ್ರೀವಾಸ್ತವ್ ಎಂದು ಗುರುತಿಸುತ್ತಾರೆ. ಅವರು 'ಭಾರತೀಯ ಟೆಲಿವಿಶನ್ ಮಾಧ್ಯಮ'ದಲ್ಲಿ ಅತ್ಯಂತ ಜನಪ್ರಿಯ ಹಾಸ್ಯಕಾರರಾಗಿ ವಿಜೃಂಭಿಸಿದ್ದಾರೆ. ಅವರ ಜೊತೆಯಲ್ಲಿ ಕೆಲಸಮಾಡಿದ ಹಾಸ್ಯಕಲಾಕಾರರು, ಇನ್ನೂ ತಮ್ಮ ಕಾಲನ್ನು ಭದ್ರವಾಗಿ ಜಮಾಯಿಸಲು ಹರಸಾಹಸಪಡುತ್ತಿರುವಾಗಲೇ ರಾಜು ಶ್ರೀವಾಸ್ತವ್ ರವರು, ತಮ್ಮ ಅಪಾರ ಹಾಸ್ಯಪ್ರಜ್ಞೆ, ಮತ್ತು ಸಂಗತಿಗಳನ್ನು ಸೊಗಸಾಗಿಯೂ 'ಒಮ್ಮೆಲೇ ಅರ್ಥವಾಗುವತರಹ ಪೇಷ್ 'ಮಾಡುವ ವಿಶೇಷ ಕೌಶಲಗಳಿಂದ ನಮ್ಮ ಜೀವನದ ಹಲವಾರು ಸಾಮಾನ್ಯ ಸಂಗತಿಗಳನ್ನೂ ರಸವತ್ತಾಗಿ ಬಣ್ಣಿಸುವ ಕಲೆಯನ್ನು ಹಸ್ತಗತಮಾಡಿಕೊಂಡಿರುವುದೇ ಅವರ ಜನಪ್ರಿಯತೆಗೆ ಕಾರಣವಾಗಿದೆ.

'ಗತವರ್ಷಕ್ಕೆ ವಿದಾಯ', ಮತ್ತು 'ಹೊಸವರ್ಷಕ್ಕೆ ಸುಖಾಗಮನ'[ಬದಲಾಯಿಸಿ]

ರಾಜು ಸ್ರೀವಾಸ್ತವ್ ರವರ ಅನೇಕ ಕುಶಲ ಕಾರ್ಯಕ್ರಮಗಳ ಪಟ್ಟಿಯಲ್ಲಿ, ಹೊಸವರ್ಷಕ್ಕೆ ಸುಖಾಗಮನ ಕೋರುವ ಮತ್ತು ಗತಿಸಿದ ವರ್ಷಕ್ಕೆ ವಿದಾಯಿಹೇಳುವ ಪ್ರಸಂಗವನ್ನು ಅತ್ಯಂತ ಅದ್ಭುತವಾಗಿಯೂ ಮನೋಜ್ಞವಾಗಿಯೂ ಪ್ರೇಕ್ಷಕವರ್ಗದಮುಂದೆ ಪೇಷ್ ಮಾಡಿ, ಒಂದು ವಿಕ್ರಮವನ್ನೇ ಸಾಧಿಸಿದ್ದಾರೆ.

'The Great Indian Laughter Challenge'[ಬದಲಾಯಿಸಿ]

ಅವರಿಗೆ ಮಾರ್ಗವನ್ನು ಸುಲಭಮಾಡಿಕೊಟ್ಟಿತು. ಮೊದಲ-ಜಯ ಲಭಿಸಲಿಲ್ಲ ಆದರೂ ಎರಡನೆಯ ಪ್ರಶಸ್ತಿ (1st runner-up title) The Great Indian Laughter Challenge-Champions, ನಲ್ಲೇ ತುಂಬಾ ಆಸಕ್ತಿವಹಿಸಿ, ಅನೇಕ 'ಮರೆಯಲಾರದ ನಗುಮಾಲೆ'ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಆಗ ಎಲ್ಲರ ಪ್ರೀತಿಗೌರವಗಳಿಗೆ ಪಾತ್ರರಾದ ರಾಜುರವರಿಗೆ “The King of Comedy” ದಯಪಾಲಿಸಲಾಯಿತು. ಅವರ ನಟನಾ ಕೌಶಲವನ್ನು ಗುರುತಿಸಿ ಹಲವಾರು ಚಿತ್ರನಿರ್ಮಾಪಕ ನಿರ್ದೇಶಕರು, ತಮ್ಮ ಚಿತ್ರಗಳಲ್ಲಿ ಸ್ವಲ್ಪ ದೊಡ್ಡ ಪಾತ್ರಗಳನ್ನೂ ಪಾತ್ರಗಳನ್ನು ಕೊಡಲಾರಂಭಿಸಿದರು.

ರಾಜು ಉತ್ತಮಮಟ್ಟದ ಹಾಸ್ಯವನ್ನು ಪ್ರದರ್ಶಿಸುವ ಇರಾದೆ ಹೊಂದಿದ್ದಾರೆ[ಬದಲಾಯಿಸಿ]

ರಾಜು ಉತ್ತಮಮಟ್ಟದ ಹಾಸ್ಯವನ್ನು ಇಷ್ಟಪಡುತ್ತಿದ್ದರು. ಅಶ್ಲೀಲತೆಯನ್ನು ಖಂಡಿಸುತ್ತಿದ್ದರು. ರಾಜುರವರ ಮಗಳು, ಅಂತರಾ ಸ್ರಿವಾಸ್ತವ್ ಶೌರ್ಯ-ಪ್ರಶಸ್ತಿಯನ್ನು ಪ್ರಧಾನಮಂತ್ರಿ ಶ್ರೀ ಮನಮೋಹನ ಸಿಂಗ್ ರವರ ಹಸ್ತದಿಂದ ಸನ್ಮಾನಿತರಾದರು. ಸಮಯದಲ್ಲಿ ಆಗಿನ ಎ.ಪಿಜೆ ಅಬ್ದುಲ್ ಕಲಾಮ್ ಮತ್ತು ಸೋನಿಯಗಾಂಧಿಯವರನ್ನು ಭೆಟ್ಟಿಯಾದರು. ರಾಜುರವರ ಅಭಿಮಾನಿ ಬಳಗ ಅಪಾರವಾಗಿದೆ.

'ಪಾಕೀಸ್ಥಾನ ಬೆದರಿಕೆಹಾಕಿದಾಗ' 'ಮುಂಬಯಿ-ಪುಲಿಸ್, ರಕ್ಷಣೆ[ಬದಲಾಯಿಸಿ]

ರಾಜುರವರ ಶೋ ಸಮಯದಲ್ಲಿ ಭೂ-ಅಂತರ್ಗತದೊರೆ-ದಾವೂದ್ ಈಬ್ರಾಹಿಂ ಬಗ್ಗೆ ನಗೆಯಾಡಲು ಆಕ್ಷೇಪಿಸಿ, ಪಾಕೀಸ್ಥಾನ,ಹೆದರಿಕೆಯ ಆದೇಶವನ್ನು ನೀಡಿದ್ದರು. ಆಗ,ಮುಂಬಯಿ ಪೋಲೀಸ್ ದಳ, ವ್ಯಾಪಕವಾಗಿ ರಕ್ಷಣೆಯ ವ್ಯವಸ್ಥೆಯನ್ನು ಮಾಡಿದ್ದರು.

'CBSE Board' ನಲ್ಲಿ ರಾಜುರವರ ಜೀವನ-ಚರಿತ್ರೆಯಭಾಗ[ಬದಲಾಯಿಸಿ]

'ರಾಜುಸ್ರಿವಾಸ್ತವ್' ರ ಜೀವನ-ಶೈಲಿಯನ್ನು ತಿಳಿಸುವ ಒಂದು ಪರಿಚ್ಛೇದವನ್ನು 'CBSE Board', ತನ್ನಪಠ್ಯಪುಸ್ತಕದಲ್ಲಿ, ಪಠ್ಯಕ್ರಮವನ್ನಾಗಿ ಅಳವಡಿಸಿದೆ. 'NCERT' ೮ ನೆ ತರಗತಿಯ ಪಠ್ಯಪುಸ್ತಕದಲ್ಲಿ, ಹಿಂದಿಭಾಷೆಯಲ್ಲಿ ಒಬ್ಬ ಹಾಸ್ಯ-ನಟನ ಜೀವನ ಚಿತ್ರವನ್ನು ಸೇರಿಸಿದ್ದಾರೆ. ಇದುವರೆಗೆ ಯಾವ ಸಮಯದಲ್ಲೂ, ಈತರಹ, ಪಠ್ಯಪುಸ್ತಕದಲ್ಲಿ ಹಾಸ್ಯಕಾರನ ಜೀವನವನ್ನು ಅಳವಡಿಸಿದ ದಾಖಲೆ ಕಂಡುಬರುವುದಿಲ್ಲ. ಇದೊಂದು ಹೊಸ ಸಾಧನೆ.

Big Boss-3,ನಲ್ಲೂ ಭಾಗವಹಿಸಿದ್ದರು[ಬದಲಾಯಿಸಿ]

Big Boss-3,ನಲ್ಲೂ ಭಾಗವಹಿಸಿದ್ದರು. ಇದು 'ಬಿಗ್ ಬ್ರದರ್' ನ 'Indian counterpart' ಆಗಿತ್ತು. ಡಿಸೆಂಬರ್,೪,೨೦೦೯ ರಲ್ಲಿ ೨ ತಿಂಗಳು ಮನೆಯಲ್ಲಿಯೇ ಇರಬೇಕಾಗಿ ಬಂತು.

ಹಿಂದಿಚಲನ-ಚಿತ್ರಗಳಲ್ಲಿ ನಟನೆ[ಬದಲಾಯಿಸಿ]

  • 1988 Tezaab Extra
  • 1993 Baazigar College Student
  • 2001 Aamdani Atthani Kharcha Rupaiyaa
  • Baba Chin Chin Choo
  • 2002 Waah! Tera Kya Kehna Banne Khan's assistant
  • 2003 Main Prem Ki Diwani Hoon Kareena's servant
  • 2007 Big Brother (film) Auto rickshaw driver & Sunny Deol's friend
  • 2007 Phir Hera Pheri
  • 2007 Bombay to Goa Anthony Gonsalves
  • 2010 Bhavnao Ko samjho Daya from Gaya (Money Lender)

ಟೆಲಿವಿಶನ್ ಕಾರ್ಯಕ್ರಮಗಳಲ್ಲಿ 'ಲೈವ್ ಶೋ' ಗಳಲ್ಲಿ ಕೊಟ್ಟ ಕಾರ್ಯಕ್ರಮಗಳು[ಬದಲಾಯಿಸಿ]

  • 'The Great Indian Laughter Challenge'
  • 'Bigg Boss' He was evicted after staying 9 weeks in the show on day 61.
  • 'Shaktiman'
  • 'Tea Time Manoranjan'
  • 'riteshKumar BohraItalic text'
  • 'Masti TV'
  • 'Raju Hazir Ho'
  • 'Comedy Ka Maha Muqabala'
  • 'Comedy Circus'
  • 'Dekh Bhai Dekh' (Cameo Role)

ಉಲ್ಲೇಖಗಳು[ಬದಲಾಯಿಸಿ]

  1. raju-shrivastava/biography