ಹೊಸ್ತೋಟ ಗಜಾನನ ಭಾಗವತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



    ಯಕ್ಷಗಾನ ಭಾಗವತ,ವಾದಕ ,ವೇಷಧಾರಿ , ಅರ್ಥಧಾರಿ, ಯಕ್ಷಗಾನ ಗುರು, ಯಕ್ಷಗಾನ ಕವಿ,ಪ್ರಸಂಗಕಾರ


"ಬಾಲ್ಯ"

೧೯೪೨ ರಲ್ಲಿ ಹನುಮಂತಿ ಹೊಸ್ತೋಟದಲ್ಲಿ ಗಣಪತಿ ಭಟ್ಟ ಹಾಗೂ ಮಹಾದೇವಿ ದಂಪತಿಯವರ ೨ನೇ ಮಗನಾಗಿ ಜನಿಸಿದರು.ಅಣ್ಣ ಹೊಸ್ತೋಟ ಮಂಜುನಾಥ ಭಾಗವತ ತಮ್ಮ ಹೊಸ್ತೋಟ ಶಂಕರ ನಾರಾಯಣ ಭಟ್ಟ ಅಕ್ಕ ಭವಾನಿ ತಂಗಿ ಚಂದ್ರಾವತಿ.ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಇವರಿಗೆ ಅಕ್ಕನ ಮನೆಯೇ ಆಶ್ರಯವಾಯಿತು.

"ಶಿಕ್ಷಣ"

ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಗ್ಗುವಿನಲ್ಲಿ ಅಭ್ಯಾಸ ಮಾಡಿದರು.ಬಳಿಕ ದಿ‌.ಕೆರೆಮನೆ ಶಿವರಾಮ ಹೆಗಡೆಯವರ ಶಿಷ್ಯರಲ್ಲಿ ಒಬ್ಬರಾದರು.ತಿಪ್ಪಣ್ಣ ನಾಯಕರಿಂದ ಮದ್ದಳೆ - ಚೆಂಡೆಯನ್ನು ಕಲಿತರು‌.ನಾರಾಯಣ ಭಾಗವತ ಉಪ್ಪೂರರ ತರಗತಿಯಲ್ಲಿ ಕಾಳಿಂಗ ನಾವಡರೊಂದಿಗೆ ಕಲಿತರು‌.

"ಯಕ್ಷಗಾನ ತರಬೇತಿ ಶಿಕ್ಷಕರಾಗಿ"

ಇವರಿಗೆ ಸ್ವಂತ ಮನೆ ಇರಲಿಲ್ಲ.ಉಳಿದ ಮನೆಯೇ ತಮ್ಮ ಮನೆಯೆಂದು ಭಾವಿಸಿದವರು.ಉಳಿದಮನೆಯ ವಿದ್ಯಾರ್ಥಿಗಳಿಗೆ ಯಕ್ಷಗಾನದ ಕುರಿತು ಪಾಠವನ್ನು ನೀಡಿ ಕಲಾವಿದರನ್ನಾಗಿ ಮಾಡಿದರು.ತನ್ನಣ್ಣ ಹೊಸ್ತೋಟ ಮಂಜುನಾಥ ಭಾಗವತರಂತೆ ತಮಗೆ ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ ಅದೇ ವಿಭಾಗದ ಪಾಠ ಮಾಡುತ್ತಿದ್ದರು. ೧೭ ಕ್ಕೂ ಹೆಚ್ಚು ಶಾಲೆಗಳಲ್ಲಿ ೩೧ ಕ್ಕೂ ಹೆಚ್ಚು ತರಬೇತಿ ನೀಡಿದರು.

"ಪ್ರಸಂಗ ರಚನೆಕಾರರಾಗಿ"

ಇವರು ತನ್ನಣ್ಣನಂತೆ ಯಕ್ಷಗಾನ ಪ್ರಸಂಗಕಾರರೂ ಹೌದು.ಸಾಧ್ವೀ ಜಯಂತಿ,ಕಲ್ಪನಾವಿಲಾಸ,ವೃಕ್ಷ ಮಹಾತ್ಮೆ ಸೇರಿದಂತೆ ೩೦ ಕ್ಕೂ ಹೆಚ್ಚು ಪ್ರಸಂಗ ರಚಿಸಿದರು‌‌.ದಿ.ಕಾಳಿಂಗ ನಾವುಡರ ನಾಗಶ್ರೀ ಪ್ರಸಂಗದಲ್ಲೂ ಸಣ್ಣ ಪದ್ಯವೊಂದನ್ನು ರಚಿಸಿದರು.

"ಯಕ್ಷಗಾನ ಕಲಾವಿದರಾಗಿ"

ಯಕ್ಷಗಾನ ಭಾಗವತ, ವೇಷಧಾರಿ,ಅರ್ಥಧಾರಿ,ಪ್ರಸಂಗ ಕವಿಯಾಗಿದ್ದರು‌.ಚಂಡೆ-ಮದ್ದಲೆಯಲ್ಲಿ ತಮ್ಮದೇ ಅದ ಛಾಪು ಮೂಡಿಸಿದರು‌.ಪ್ರತಿ ನಿತ್ಯ ರಾತ್ರಿ ಒಡ್ಡೋಲಗ ತತ್ಕಾರ ,ತನ್ನಣ್ಣನಿಂದ ರಚಿತವಾದ ಶ್ರೀ ರಾಮ ನಿರ್ಯಾಣದ ಪ್ರಸಂಗವನ್ನು ಹಾಡುತ್ತಿದ್ದರು.

ಯಕ್ಷಗಾನದ ಎಲ್ಲಾ ಅಂಗಗಳನ್ನು ಅಧ್ಯಯನ ಮಾಡಿದ್ದರು.

"ಕಲಾವಿದರೊಂದಿಗಿನೊಡನಾಟ"

ಗುರುಗಳಾದ ಶಿವರಾಮ ಹೆಗಡೆಯವರಿಗೆ "ಶಿವರಾಮ ಮಾವ"ಎನ್ನುವಷ್ಟರ ಮಟ್ಟಿಗೆ ಒಡನಾಟ ಇಟ್ಟುಕೊಂಡಿದ್ದರು.

ಗುರು ಮಹಾಬಲ ಹೆಗಡೆಯವರೊಂದಿಗೂ ಅತ್ಯಂತ ಉತ್ತಮ ಒಡನಾಟ ಹೊಂದಿದ್ದರು.

ದಂತಳಿಕೆ ಅನಂತ ಹೆಗಡೆ,ಕವಾಳೆ ಗಣಪತಿ ಭಾಗವತ ಮೊದಲಾದವರಿಗೆ ಗುರುಗಳಾಗಿದ್ದರು.

. ದಿವಂಗತ ರಾಮಚಂದ್ರ ನಾವುಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಇವರು ಕಾಳಿಂಗ ನಾವಡರ ಜೊತೆ ಮೃದಂಗದಲ್ಲಿ ಸಾಥ್ ನೀಡಲು ಮನೆ ಮನೆಗೆ ಹೋಗುತ್ತಿದ್ದರು.ಬಂದ ಹಣವನ್ನು ವಿನಯವಾಗಿ ತಿರಸ್ಕರಿಸಿದಾಗ ೧೦೦೦ ರೂ ಗಳನ್ನು ನಾವುಡರು ತನ್ನ ಕಿಸೆಗೆ ಹಾಕಿದ್ದಾರೆಂದು ಆಗಾಗ ಹೇಳುತ್ತಿದ್ದರು.

ಕೆರೆಮನೆ ಶಂಭು ಹೆಗಡೆ,ಚಿಟ್ಟಾಣಿ ರಾಮಚಂದ್ರ ಹೆಗಡೆಯವರಲ್ಲಿಯೂ ಅತ್ಯುತ್ತಮ ಒಡನಾಟ ಹೊಂದಿದ್ದರು. ಗೋಡೆ ನಾರಾಯಣ ಹೆಗಡೆಯವರಲ್ಲೂ ಉತ್ತಮ ಒಡನಾಟ ಹೊಂದಿದ್ದರು.

"ಬ್ರಹ್ಮಚಾರಿ ಭಾಗೋತಜ್ಜರು"

ಭಾಗವತರು ತನ್ನ ಅಣ್ಣನಂತೆ ಬ್ರಹ್ಮಚಾರಿಗಳಾಗಿದ್ದು,ಮನೆ- ಮನೆಗಳಲ್ಲಿ ವಾಸ ಮಾಡಿದವರಾಗಿದ್ದು ; ಅಲ್ಲಿಯ ಮಕ್ಕಳಿಗೆ ಯಕ್ಷಗಾನವನ್ನು ಭೋಧಿಸಿದರು.ಮನೆಯ ಹುಡುಗರ ಬಾಯಲ್ಲಿ "ಭಾಗೋತಜ್ಜರು" ಎಂದೇ ಖ್ಯಾತಿ ಪಡೆದರು‌.

ಜೀವನದುದ್ದಕ್ಕೂ ಅಣ್ಣನ ಆದರ್ಶವನ್ನು ಅಳವಡಿಸಿಕೊಂಡಿರು .


"ನಿಧನ"

    ೧೪ ಎಪ್ರಿಲ್ ೨೦೨೦ ರಂದು ಹೃದಯಾಘಾತದಿಂದ ನಿಧನ ಹೊಂದಿದರು.