ಹೇರೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಡುಪಿ ರಾ.ಹೆ. ೫೬ ಮುಖಾಂತರ ಬೈಂದೂರು ಮಾರ್ಗವಾಗಿ ಚಲಿಸುವಾಗ ಸಿಗುವ ಅರೆಹೊಳೆ ಕ್ರಾಸ್ ನಿಂದ ಬಲಕ್ಕೆ ೫ ಕಿ.ಮೀ ಕ್ರಮಿಸಿದರೆ ಸಿಗುವ ಗ್ರಾಮವೇ ಹೇರೂರು ಗ್ರಾಮ. ಇದು ಉಡುಪಿ ಜಿಲ್ಲೆಯ ಬೈಂದೂರು ತಾಲುಕಿನ ಒಂದು ಪ್ರಮುಖ ಗ್ರಾಮವಗಿದ್ದು, ಭತ್ತ ಇಲ್ಲಿನ ರೈತರ ಪ್ರಮುಖ ಬೆಳೆಯಾಗಿದೆ. ಕೊಡಚಾದ್ರಿಯಿಂದ ಹರಿದು ಬರುವ ಸೌಪರ್ಣೀಕ ನದಿಯು ಈ ಗ್ರಾಮದ ಮೂಲಕ ಹಾದುಹೋಗಿ, ಗಂಗೊಳ್ಳಿ ಸಮುದ್ರವನ್ನು ಸೇರುತ್ತದೆ. ಬಣ್ಗೇರಿ ಹೈಗುಳಿ, ಕೆಳ ಹೇರೂರು, ಮೇಕೋಡು, ಚಿತ್ತಾಡಿ ದುರ್ಗಾಪರಮೆಶ್ವರಿ, ಹುತ್ತನಗೋಳಿ ಅಮ್ಮನವರು ಇಲ್ಲಿನ ಗ್ರಾಮ ದೇವತೆಗಳಾಗಿದ್ದಾರೆ. ೨೦೧೧ರ ಜನಗಣತಿ ಮಾಹಿತಿಯ ಪ್ರಕಾರ ಹೇರೂರು ಗ್ರಾಮದ ಸ್ಥಳದ ಕೋಡ್ ಮತ್ತು ಗ್ರಾಮ ಕೋಡ್ ೬೦೮೬೭೫. ಹೇರೂರು ಗ್ರಾಮ ಕುಂದಾಪುರ ತೆಹಸಿಲ್ ಉಡುಪಿ ಜಿಲ್ಲೆಯಲ್ಲಿ ಇದೆ. ಇದು ಜಿಲ್ಲಾ ಕೇಂದ್ರವಾದ ಉಡುಪಿಯಿಂದ ೬೩ ಕಿಲೋಮೀಟರ್ ದೂರ ಮತ್ತು ಉಪ ಜಿಲ್ಲಾ ಕೇಂದ್ರವಾದ ಕುಂದಾಪುರದಿಂದ ೨೫ ಕಿಲೋಮೀಟರ್ ದೂರ ನೆಲೆಗೊಂಡಿದೆ. ೨೦೦೯ ರ ಅಂಕಿಅಂಶಗಳ ಪ್ರಕಾರ, ಹೇರೂರು ಹಳ್ಳಿಯು ಹೇರೂರು ಗ್ರಾಮದ ಪಂಚಾಯಿತಿ ಆಗಿದೆ.

"https://kn.wikipedia.org/w/index.php?title=ಹೇರೂರು&oldid=1038181" ಇಂದ ಪಡೆಯಲ್ಪಟ್ಟಿದೆ