ಹಲಗತ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಲಗತ್ತಿ ಗ್ರಾಮವು ರಾಮದುರ್ಗ ಕೇಂದ್ರದಿಂದ 05 ಕಿ.ಮೀ. ಅಂತರದಲ್ಲಿದೆ. ಈ ಗ್ರಾಮವು ಹೈನುಗಾರಿಕೆಗೆ ಸುಪ್ರಸಿದ್ಧಿ ಪಡೆದ ಗ್ರಾಮವಾಗಿದೆ. ಕೃಷಿಯಷ್ಟೇ ಹೈನುಗಾರಿಕೆ ವೃತ್ತಿ ಕೂಡ ಇಲ್ಲಾನ ಜನಸಾಮಾನ್ಯರ ಜೀವನಕ್ಕೆ ಮೂಲವಾಗಿದೆ. ರಾಮದುರ್ಗ ತಾಲೂಕಿನ ಹೈನುಗಾರಿಕೆಯಲ್ಲೇ ಅತಿ ಹೆಚ್ಚಾಗಿ ಈ ಗ್ರಾಮದಲ್ಲಿ ಹೈನುಗಾರಿಕೆ ವೃತ್ತಿ ಹೆಚ್ಚಿದೆ. ಆ ಕಾರಣಕ್ಕಾಗಿಯೇ, ರಾಮದುರ್ಗದ ಬೆಣ್ಣೆಯು ಸಹ ಜಿಲ್ಲೆಯ, ಪಕ್ಕದ ಜಿಲ್ಲೆಗಳಲ್ಲಿ ಹೆಸರುವಾಸಿಯಾಗಿದೆ.

ಶ್ರೀ ಪವಾಡ ಬಸವೇಶ್ವರ ದೇವಸ್ಥಾನದ ಜಾತ್ರೆಯು ಈ ಗ್ರಾಮದಲ್ಲಿ ಜನಪ್ರಿಯವಾಗಿದೆ.

"https://kn.wikipedia.org/w/index.php?title=ಹಲಗತ್ತಿ&oldid=1168675" ಇಂದ ಪಡೆಯಲ್ಪಟ್ಟಿದೆ