ಹಣದ ಕಾರ್ಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಹಣದ ಕಾರ್ಯಗಳು[ಬದಲಾಯಿಸಿ]

ಹಣದ ರೂಪ ಮತು ಮಹತ್ವ ಕಾಲಕಳೆದಂತೆ ಬದಲಾಗುತ್ತಾ ಬಂದಿರುತ್ತದೆ. ಅದನ್ನು ಅಧ್ಯಯನ ಮಾಡುವ ಮೊದಲು ಪ್ರಾಚೀನ ಕಾಲದಲ್ಲಿ ಅಸ್ತಿತ್ವದಲಿದ್ದ್ದ ವಿನಿಮಯದ ವಿಧಾನವನ್ನು

ತಿಳಿದುಕೊಳ್ಳುವುದು ಅಗತ್ಯವಿದೆ.

ವಸ್ತುಗಳ ವಿನಿಮಯ ಪದ್ದ್ಧತಿ ಅಥವ ಸಾಟಿ ಪದ್ಧತಿ[ಬದಲಾಯಿಸಿ]

ಪ್ರಾಚೀನ ಕಾಲದಲ್ಲಿ ಸರಕು-ಸೇವೆಗಳ ವಿನಿಮಯಕ್ಕೆ ಹಣವನ್ನು ಬಳಸುವ ಬದಲು ಸರಕು-ಸೇವೆಗಳನ್ನೇ ಬಳಸುತ್ತಿದ್ದರು. ಆಗ ಜನರಿಗೆ ಹಣವೆಮ್ಬುದು ಗೊತ್ತಿದ್ದಿಲ್ಲ. ಆಗ ಜನರ

ಬೇಡಿಕೆಗಳೂ ಸೀಮಿತವಾಗಿದ್ದರಿಂದ  ಅವರು ತಮ್ಮ  ಸ್ವಂತ  ಪ್ರಯತ್ನದಿಂದ ತಮ್ಮ  ಬಯಕೆಗಳನ್ನು ಈಡೇರಿಸಿಲಕೊಳ್ಳುತ್ತಿದ್ದರು. ಕ್ರಮೇಣ ನಾಗರಿಕತೆ  ಬೆಳೆದಂತೆ, ಜನರಿಗೆ ತಮ್ಮ  ಸ್ವಂತ
ಎಲ್ಲ ಅವಶ್ಯಕತೆಗಳನ್ನು  ತಮ್ಮ ಸ್ವ ಪ್ರಯತ್ನದಿಂದ ಪೂರೈಸಿಕೊಳ್ಳು ವುದು ಕಟಿಣವಾಗತೊಡಗಿತು. ಜನರಲ್ಲಿ ಪರಸ್ಪರ ಅವಲಂಬನೆ  ಹೆಚ್ಚಾಗತೊಡಗಿತು. ಹೀಗೆ ವಸ್ತುಗಳಿಗಾಗಿ ವಸ್ತುಗಳನ್ನು 
ವಿನಿಮಯ ಮಾಡಿ ಜನರು ತಮ್ಮ  ಬಯಕೆ ಗಳನ್ನು ಈಡೇಸಿಕೊಳ್ಳತೊಡಗಿದರು. ಈ ಪದ್ಧತಿಗೆ  "ವಸ್ತುಗಳ ವಿನಿಮಯ ಪದ್ಧತಿ ಅಥವಾ ಸಾಟಿ ಪದ್ಧತಿ" ಎಂದು ಕರೆಯಲಾಯಿತು.
ಕ್ರಮೇಣ ನಾಗರಿಕತೆ ಬೆಳೆದಂತೆ, ಮಾನವನ ಬೇಡಿಕೆಗಳು ಅಧಿಕವಾದಂತೆ ವಿನಿಮಯ ಪದ್ಧತಿ ಬೆಳೆಯಲಾರಂಬಿಸಿತು. ಆದರೆ ಮುಂದೆ ಈ ಪದ್ದತಿಯಲ್ಲಿ ಹಲವು ದೋಷಗಳು ಕಂಡುಬಂದವು.
ಈ  ದೋಷಗಳನ್ನು ನಿವಾರಿಸಲು ಸಾಧ್ಯವಾಗದ್ದರಿಂದ ಅದನ್ನು ಬಿಟ್ಟು ಕೊಡ ಬೇಕಾಯಿತು.

ಬೇಡಿಕೆಗಳ ದ್ವಿಮುಖ ಹೊಂದಾಣಿಕೆಯ ಅಭಾವ[ಬದಲಾಯಿಸಿ]

ಸಾಟಿ ಪದ್ಧತಿಯಲ್ಲಿ ಸಾಟಿ ಮಾಡಿಕೊಳ್ಳುವ ಇಬ್ಬರು ವ್ಯಕ್ತಿಗಳ ಬೇಡಿಕೆಗಳು ಪರಸ್ಪರ ಹೊಂದಾಣಿಕೆಯಾಗಬೇಕು. ಅಂದರೆ 'ಅ' ನಿಗೆ ಬೇಕಾದುದು 'ಬ'ನ ಬಳಿ ಇರಬೇಕು ಮತ್ತು 'ಬ 'ನಿಗೆ

ಬೇಕಾದುದು 'ಅ' ನ ಬಳಿ ಇರಬೇಕು. ಅವರಿಬ್ಬರೂ ವಿನಿಮಯ ಮಾಡೀಕೊಳ್ಳ ಲು ಒಪ್ಪಿಕೊಳ್ಳಬೇಕು. ಹಾಗಿದ್ದರೆ ಮಾತ್ರ ವಿನಿಮಯ ಸಾಧ್ಯ.ಇಬ್ಬರ ನಡುವೆ ಹೊಂದಾಣಿಕೆ  ಸಾಧ್ಯವಾಗದೇ
 ಇದ್ದ  ಪ್ರಸಂಗಗಳು ಬಂದ ಪ್ರಯುಕ್ತ ಈ ಪದ್ಧತಿಯನ್ನು  ಕೈಬಿಡಬೇಕಾಯಿತು.

ಮೌಲ್ಯಮಾಪನ ಕೊರತೆ[ಬದಲಾಯಿಸಿ]

ವಸ್ತು ವಿನಿಮಯ ಪದ್ಧತಿಯಲ್ಲಿ ವಸ್ತುಗಳ ವಿನಿಮಯ ಮೌಲ್ಯವನ್ನು ಅಳೆಯುವುದು ಸಾಧನವಿರಲಿಲ್ಲ. ಪ್ರತಿಸಾರಿ ವಿನಿಮಯ ಮಾಡುವ ವಸ್ತುಗಳ ಬೆಲೆಯನ್ನು ನಿರ್ಧರಿಸ ಬೆಕಾಗುತ್ತಿತ್ತು.

ಉದಾ :- ಜೋಳಕ್ಕೆ ಎಷ್ಟು ಅಕ್ಕಿಯನ್ನು ವಿನಿಮಯ ಮಾಡಬೆಕು ಎಂಬುದನ್ನು ವಿನಿಮಯ ಸಮಯದಲ್ಲೇ ನಿರ್ಧರಿಸಬೆಕಾಗುತ್ತಿತ್ತು. ಇದರಿಂದ ಮೌಲ್ಯನಿಗದಿ ಪಡಿಸುವುದು ತೊಂದರೆಯ ಕೆಲಸ ವಾಗುತ್ತಿತ್ತು.

ವಿಭಜನೆಯ ಅಭಾವ[ಬದಲಾಯಿಸಿ]

ವಸ್ತು ವಿನಿಮಯ ಪದ್ದತಿಯಲ್ಲಿ ವಸ್ತುಗಳನ್ನು ಸಣ್ಣ ಸಣ್ಣ ಭಾಗವನ್ನಾಗಿ ಮಾಡುವುದು ಅವಶ್ಯವಾಯಿತು. ಉದಾ : - ಅಕ್ಕಿ , ಜೋಳ ಗೊದಿ ಇತ್ಯಾದಿ ಧ್ಯಾನ್ಯಗಳನ್ನು ಸಣ್ಣ ಪ್ರಮಾಣದಲ್ಲಿ ವಿಭಜಿಸ ಬಹುದಿತ್ತು. ಆದರೆ ಪಶುಗಳಾದ ಆಕಳು, ಕುರಿ , ಕುದುರೆ ,ಎತ್ತು ಮೊದಲಾದವುಗಳನ್ನು

ವಿಭಜಿಸುವುದು ಭಹಳ ತೊಂದರೆ  ಕೆಲಸವಾಗಿತ್ತು. ಅವುಗಳ್ನ್ನು ವಿಭಜಿಸಿದರೆ ಅವುಗಳನ್ನು  ಕೊಲ್ಲಬೇಕಾಗುತ್ತಿತ್ತು, ಇದರಿಂದ ಅವುಗಳ  ಮೌಲ್ಯವೇ ನಾಶವಗುತ್ತಿತ್ತು ಅದು ಅಸಾದ್ಯವೆನಿಸತೊಡಗಿತು.

ಸಂಪತ್ತಿನ ಸಂಗ್ರಹಣೆ ಅಸಾಧ್ಯ[ಬದಲಾಯಿಸಿ]

ವಸ್ತುವಿನಿಮಯ ಪದ್ದತಿಯಲ್ಲಿ ಸಂಪತ್ತ್ತ್ತನ್ನು ಸಂಗ್ರಹಿಸುವುದು ಅಸಾಧ್ಯವಾಯಿತು. ಸಂಪತ್ತು ಎಂದರೆ ದವಸಧಾನ್ಯಗಳು, ಪಶು-ಪಕ್ಷಿ ಇತ್ಯಾದಿಗಳಾಗಿದ್ದವು. ಇವುಗಳನ್ನು ಬಹು ಕಾಲದವರೆಗೆ

ಕಾಯ್ದಿಡಲು ಸಾಧ್ಯವಾಗುತ್ತಿರಲಿಲ್ಲ. ಇವುಗಳನ್ನು ಕಾಯ್ದಿಟ್ಟರೆ ಅಪಾರ ನಷ್ಟಕ್ಕೊಳಗಾಗುತ್ತಿದ್ದರು.

ಲೇವಾ ದೇವಿ ವ್ಯವಹಾರದಲ್ಲಿ ತೊಂದರೆ[ಬದಲಾಯಿಸಿ]

ವಸ್ತುವಿನಿಮಯ ಪದ್ಧತಿಯಲ್ಲಿ ಸಾಲ ಕೊಡುವ ಮತ್ತು ತೆಗೆದುಕೊಳ್ಳುವ ವ್ಯವಹಾರಗಳಿಗೆ ತೊಂದರೆಯಾಗಿದ್ದಿತ್ತು. ಇಂತಹ ಲೇವಾ ದೇವಿಯಿಂದ ಸಾಲಗಾರನಿಗಾಗಲಿ ಅಥವಾ ಸಾಲ

ಕೊಟ್ಟವನಿಗಾಗಲಿ 

ನಷ್ಟವಾಗುತ್ತಿತ್ತು. ಉದಾ :- 'ಎ', 'ಬಿ 'ವ್ಯಕ್ತಿಗೆ ಒಂದು ಕುದುರೆಯನ್ನು ೨ ವರ್ಷಗಳವರೆಗೆ ಸಾಲವಾಗಿಕೊಟ್ಟಾಗ, ೨ ವರ್ಷಗಳ ನಂತರ 'ಬಿ' 'ಎ' ವ್ಯಕ್ತಿಗೆ ಕುದುರೆಯನ್ನು ಹಿಂದಿರುಗಿಸಿದಾಗ ಕುದುರೆಯ

ದುಡಿಯುವ ಶಕ್ತಿ ಕಡಿಮೆಯಾಗಿರುತ್ತದೆ. ಇದರಿಂದ 'ಎ' ನಿಗೆ ನಷ್ಟ್ಟವಗುತ್ತಿತ್ತು.

ಸೇವೆಗಳ ವಿನಿಮಯದಲ್ಲಿ ತೊಂದರೆ[ಬದಲಾಯಿಸಿ]

ವಸ್ತು ವಿನಿಮಯ ಪದ್ಧತಿಯಲ್ಲಿ ವಿನಿಮಯಕ್ಕೆ ಬಹಳ ಅನಾನುಕೂಲವಾಗುತ್ತಿತ್ತು. ಉದಾ :- ಶಿಕ್ಷಕರು. ವೈದ್ಯರು. ವಕೀಲರು , ಗಾಯಕರು ಮೊದಲಾದವರು ತಮಗೆ ಬೇಕಾದ ವಸ್ತುಗಳ್ನ್ನು ಕೊಳ್ಳುವಾಗ ಅವರು ಏನನ್ನು ಕೊಡಬೇಕು, ಎಷ್ಟ ನ್ನು ಕೊಡಬೇಕೆನ್ನುವ ಸಮಸ್ಯೆ ಉಧ್ಭವವಾಗುತ್ತಿತ್ತು. ಈ ಕಾರಣಗಳಿಂದ ವಸ್ತು ವಿನಿಮಯ ಪದ್ಧತಿಯನ್ನು ಬಿಡಬೇಕಾಯಿತು.

ಹಣದ ಹುಟ್ಟು ಬೆಳವಣಿಗೆ[ಬದಲಾಯಿಸಿ]

ಇಂದಿನ ವಿನಿಮಯ ಕಾರ್ಯವು ಕಾಗದ ಹಣ ಮತ್ತು ಬ್ಯಾಂಕು ಹಣದ ಮೂಲಕ ನಡೆಯುತ್ತದೆ. ವಸ್ತು ವಿನಿಮಯ ಪದ್ಧತಿಯಿಂದ ಪ್ರಾರಂಭವಾಗಿ ಕೆಲವೊಂದು ವಸ್ತುವಿನ ಮಾಧ್ಯಮದ

ಮೂಲಕ, ಆ ಮೇಲೆ ಲೋಹದ ನಾಣ್ಯದ ಮೂಲಕ, ಕಾಗದ ಹಣದ ಮೂಲಕ ಹಾಗೂ ಬ್ಯಾಂಕು ಹಣದ ಮೂಲಕ ನಡೆದಿರುವುದು ಕಂಡು ಬರುತ್ತದೆ. ವಸ್ತುವಿನ ಹಣ ,ಲೋಹದ ಹಣ ,

ಕಾಗದ ಹಣ, ಬ್ಯಾಂಕು ಹಣ ಇವೇ ಮೊದಲಾದವು ಹಣದ ವಿಕಾಸದ ವಿವಿಧ ಹಂತಗಳಾಗಿವೆ.ಕಾಲಾನುಕ್ರಮದಲ್ಲಿ ಉಂಟಾದ ಈ ವಿಕಾಸವು ಬದಲಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಮಾನವನ ಸ್ವಭಾವವನ್ನು ಸೂಚಿಸುತ್ತದೆ. ಹಣದ ಅರ್ಥ ವಿವರಣೆಯನ್ನು ಅನೇಕ ಅರ್ಥ ಶಾಸ್ತ್ರಜ್ನರು ಅನೇಕ ರೀತಿಯಲ್ಲಿ ನಿರೂಪಿಸಿದ್ದಾರೆ. ಡಿ.ಹೆಚ್. ರಾಬರ್ಟಿಸನ್ ಅವರ ಪ್ರಕಾರ "ಸರಕುಗಳಿಗೆ ಪ್ರತಿಫಲವಾಗಿ ಇಲ್ಲವೆ ಇತರ ಪ್ರಕಾರದ

ವ್ಯಾಪಾರದ ಕರಾರುಗಳ ಸಲ್ಲಿಕೆಗೆ ಯಾವುದು ಮಾನ್ಯವೋ ಅದೇ ಹಣ" ಎಂದು ಅಭಿಪ್ರಾಯಪಟ್ಟಿ ದ್ದಾರೆ.ಎಫ್. ಎ. ವಾಕರ್ ಎಂಬ ಅರ್ಥಶಾಸ್ತ್ರಜ್ನರು "ಹಣವು ಏನನ್ನು ಮಾದುತ್ತದೆಯೋ
ಅದೇ ಹಣ "ವೆಂದು ಹಣದ ಕಾರ್ಯಕ್ಕನುಸಾರವಾಗಿ ವಿವರಣೆ ನೀಡಿದ್ದಾರೆ. ಆದರೆ ಈ ಅರ್ಥವಿವರಣೆಯು ಹಣದ ಕೆಲಸವೇನು ? ಎಂಬ ಇನ್ನೊಂದು ಪ್ರಶ್ನೆಗೆ ಅವಕಾಶ ಮಾಡಿಕೊಡುತ್ತದೆ.

ಹಣದ ಕಾರ್ಯಗಳು :[ಬದಲಾಯಿಸಿ]

 ಆಧುನಿಕ ಜಗತ್ತಿನಲ್ಲಿ ಹಣವು ಅನೇಕ ಕಾರ್ಯಗಳನ್ನು ಮಾಡುತ್ತದೆ. ಅದಕ್ಕನುಗುಣವಾಗುವಂತ ಆ ಎಲ್ಲ  ಕಾರ್ಯಗಳನ್ನು ನಾಲ್ಕು ವಿಧವಾಗಿ ವಿಂಗಡಿಸಬಹುದು.

೧. ಪ್ರಧಾನ ಕಾರ್ಯಗಳು[ಬದಲಾಯಿಸಿ]

೨.ಉಪ ಕಾರ್ಯಗಳು[ಬದಲಾಯಿಸಿ]

೩.ಅವಲಂಬಿ ಕಾರ್ಯಗಳು[ಬದಲಾಯಿಸಿ]

೪.ಇತರ ಕಾರ್ಯಗಳು[ಬದಲಾಯಿಸಿ]

೧. ಪ್ರಧಾನ ಕಾರ್ಯಗಳು:-

ಕೆಳಗಿನ ಕಾರ್ಯಗಳು ಹಣದ ಪ್ರಧಾನ ಕಾರ್ಯಗಳಾಗಿದೆ.
  • ಹಣವು ವಿನಿಮಯ ಮಾಧ್ಯಮವಾಗಿದೆ: ಹಣವು ವಿನಿಮಯ ಮಾಧ್ಯಮವಾಗಿ ಕೆಲಸ ಮಾಡುತ್ತದೆ . ಅದು ವಸ್ತು ವಿನಿಮಯ ಪದ್ಧತಿಯ ದೋಷಗಳನ್ನು ನಿವಾರಿಸಿ, ವಿನಿಮಯ ಸುಗಮವಾಗಲು ಸಹಾಯಮಾಡಿದೆ. ಹಣವನ್ನು ಸರಕು-ಸೇವೆಗಳಿಗೂ, ಸರಕು-ಸೇವೆಗಲನ್ನು ಹಣಕ್ಕು ವಿನಿಮಯ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದೊಂದು ಸರ್ವಸಮ್ಮತವಾದ ವಸ್ತುವಾಗಿರುವುದರಿಂದ ಮಾರುವವರ ಮತ್ತು ಕೊಳ್ಳುವವರ ಭಯಕೆಗಳು ಪರಸ್ಪರ ಹೊಂದಾಣಿಕೆಯಾಗಬೇಕೆಂಬ ಅವಶ್ಯಕತೆಯಿಲ್ಲ. ತಮ್ಮಲ್ಲಿರುವ ಸರಕು-ಸೇವೆಗಳ್ನನ್ನು ಹಣಕ್ಕೆ ಮಾರಟ ಮಾಡಿ ಅದೆ ಹಣದಿಂದ ಬೇಕಾದ ಇತರ ಸರಕು-ಸೇವೆಯನ್ನು ಕೊಂಡು ಬಯಕೆಗಳನ್ನು ಈಡೇರಿಸಿಕೊಳ್ಳಬಹುದು.
  • ಹಣವು ಮೌಲ್ಯದ ಸಾಮಾನ್ಯ ಮಾಪನ ವಾಗಿದೆ: ಸರಕು-ಸೇವೆಗಳ ಮೌಲ್ಯವನ್ನು ನಿರ್ಧರಿಸುವುದು ಹಣದ ಎರಡನೆ ಕಾರ್ಯವಾಗಿದೆ. ಹಣ ರಹಿತ ಪ್ರಪಂಚದಲ್ಲಿ ವಸ್ತುಗಳ ಬೆಲೆಯನ್ನು ನಿರ್ಧರಿಸುವುದು

ಕಷ್ಟದ ಕೆಲಸವಾಗಿತ್ತು. ಹಣವು ಬಂದ ಬಳಿಕ ಎಲ್ಲ ವಸ್ತುಗಳ್ ಮತ್ತು ಸೇವೆಗಳ ಮೌಲ್ಯವನ್ನು ಗೊತ್ತುಪಡಿಸಿ ಅವುಗಳ ವಿನಿಮಯದ ಪ್ರಮಾಣವನ್ನು ನಿರ್ಧರಿಸುತ್ತದೆ. ಸರಕು-ಸೇವೆಗಳ ಮೌಲ್ಯವನ್ನು ಅಳೆಯಲು ಹಣವು ಪ್ರಮುಖ ಅಳತೆಗೋಲಾಗಿದೆ.

೨. ಹಣದ ಉಪಕಾರ್ಯಗಳು:-

ಹಣದ ಉಪ ಕಾರ್ಯಗಳು ಅದರ ಪ್ರಧಾನ ಕಾರ್ಯಗಳಿಂದ ಉದ್ಭವಿಸುತ್ತದೆ. ಅವುಗಳು ಮೂರು ಇವೆ.
  • ಭಾವಿ ವ್ಯವಹಾರಗಳ ಪ್ರಮಾಣ: ಹಣದ ಮೂಲಕ ಸಾಲ ಕೊಡುವ ಮತ್ತು ಸಾಲ ತರುವ ವ್ಯವಹಾರಗಳನ್ನು ಸುಲಭವಾಗಿ ಕೈಕೊಳ್ಳಬಹುದು. ಹಣದ ಮೌಲ್ಯವು ಸಾಮನ್ಯವಾಗಿ ಹಲವು ವರ್ಷಗಳ ವರೆಗೆ ಒಂದೇ ಇರುತ್ತದೆ. ಇದರಿಂದ ಪತ್ತಿನ ಸೌಲಭ್ಯಗಳು ಹೆಚ್ಚಾಗಿ, ವ್ಯಾಪಾರೋದ್ದಿಮೆಗಳು ಬೆಳಯುತ್ತದೆ. ಉತ್ಪಾದಕರ ಹಣಕಾಸಿನ ಸಂಸ್ಥೆಗಳಿಂದ ಹಣವನ್ನು ಸಾಲವಾಗಿ ಪಡೆದು ಹಲವಾರು ವರ್ಷಗಳ ನಂತರ ಅದನ್ನು ಮರುಪಾವತಿ ಮಾಡಬಹುದು. ಇದೂ ಅಲ್ಲದೆ ಹಣವು ಲೆಕ್ಕ ಪತ್ರವನ್ನಿಡಲು ಉಪಯುಕ್ತ ಸಾಧನವಾಗಿದೆ. ಅಕಸ್ಮಾತ್ ಹಣವಿಲ್ಲ್ಲದಿದ್ದರೆ ಖರೀದಿ ಮತ್ತು ಮಾರಾಟಗಳ ಹಾಗೂ ಕೊಡು-ತೆಗೆದುಕೊಳ್ಳುವ ವ್ಯವಹಾರಗಳ ಲೆಕ್ಕವನ್ನಿಡುವುದು ಬಹಳ ತೊಂದರೆಯಾಗುತ್ತಿತ್ತು.
  • ಹಣವು ಮೌಲ್ಯ ಸಂಗ್ರಹದ ಸಾಧನವಾಗಿದೆ: ಹಣವು ಮೌಲ್ಯದ ಸಂಗ್ರಹಕ್ಕೆ ಅನುಕೂಲವಾಗಿದೆ. ಸಂಪತ್ತನ್ನು ಹಣದ ರೂಪದಲ್ಲಿ ಬಹುಕಾಲ ಶೇಖರಿಸಿಟ್ಟರೂ, ಅದರ ಮೌಲ್ಯದಲ್ಲಿ ಹೆಚ್ಚು ಬದಲಾವಣೆಯಾಗುವುದಿಲ್ಲ. ಹಣವನ್ನು ಉಳಿತಾಯಮಾಡಿ, ನಮ್ಮ ಬಳಿ ಇಟ್ಟುಕೊಳ್ಳಬಹುದು. ಬ್ಯಾಂಕಿನಲ್ಲಿಡಬಹುದು, ಶೇರು ಪತ್ರಗಳಲ್ಲಿ ತೊಡಗಿಸಬಹುದು. ಆಗ ಲಾಭಾಂಶ, ಬಡ್ಡಿ ಸೇರಿ ಅದು ಹೆಚ್ಚಾಗುತ್ತಾ ಹೋಗುತ್ತದೆ. ಹಣದ ರೂಪದಲ್ಲಿ ಶೇಖರಿಸಿದ ಸಂಪತ್ತು ನಾಶವಾಗುವುದಿಲ್ಲ. ಇಂದಿನ ದಿನಗಳಲ್ಲಿ ಜನರು ಸಂಪತ್ತನ್ನು ಹಣದ ರೂಪದಲ್ಲಲ್ಲದೇ, ಆದಾಯ ಗಳಿಸುವ ಬಂಡವಾಳ ಪತ್ರಗಳಲ್ಲಿ ಸಂಗ್ರಹಿಸಿಡುತ್ತಾರೆ.
  • ಹಣವು ಮೌಲ್ಯವನ್ನು ಸ್ಥಳಾಂತರಿಸುವ ಸಾಧನವಾಗಿದೆ: ಕೆಲವು ಸ್ಥಿರಾಸ್ತಿಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು ಬರುವುದಿಲ್ಲ. ಆದರೆ ಅವುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಇತರ ಸ್ಥಳಗಳಲ್ಲಿರುವ ಅಂತಹ ಆಸ್ತಿಗಳನ್ನು ಕೊಂಡುಕೊಳ್ಳಬಹದು.

೩. ಹಣದ ಅವಲಂಬಿಕೆ ಕಾರ್ಯಗಳು :-

  ಹಣವು ಕೆಳ್ಗಿಬ ಅವಲಂಬಿಕೆ ಕಾರ್ಯಗಳನ್ನು ನಿರ್ವಹಿಸುತ್ತದೆ.
  • ರಾಷ್ತ್ರೀಯ ಆದಾಯದ ವಿತರಣೆ .
  • ಅಂಚಿನ ತುಷ್ಟಿಗುಣದ ಸಮಾನತೆ .
  • ಸಾಲದ ವ್ಯವಸ್ಥೆಗೆ ಆಧಾರ ಸ್ಥಂಭವಾಗಿದೆ.
  • ಬಂಡವಾಳ ಮತ್ತು ಸಂಪತ್ತುಗಳಿಗೆ ದ್ರವ್ಯತ್ವ ಮತ್ತು ಏಕರೂಪತೆಯನ್ನು ಹಣ ನೀಡುತ್ತದೆ.

೪. ಇತರ ಕಾರ್ಯಗಳು :-

 ಮೇಲಿನ ಕಾರ್ಯಗಳಲ್ಲದೆ ಹಣವು ಇತರ ಕಾರ್ಯಗಳನ್ನು ನಿರ್ವಹಿಸುತ್ತದೆ. ಅವು ಕೆಳಗಿನಂತಿವೆ.
  • ಮರುಪಾವತಿ ಸಾಮರ್ಥ್ಯ.
  • ಸಾರ್ವತ್ರಿಕ ಕೊಳ್ಳುವ ಶಕ್ತಿ.
  • ಬಂಡವಾಳದ ಉತ್ಪಾದನಾ ಸಾಮರ್ಥ್ಯ ಹೆಚ್ಚಳ.

ಮುಂತಾದವುಗಳು....

೫. ಸ್ಥಿರವಾದ ಕಾರ್ಯಗಳು.

೬. ಚಲನಾತ್ಮಕ ಕಾರ್ಯಗಳು.