ಸ್ವಪ್ನ ಸಾದೃಶ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ವಪ್ನ ಸಾದೃಶ್ಯ
cover
ಲೇಖಕರುಸಂಪಾದನೆ ಕಿರಣ್ ಎಂ. ಮತ್ತು ಅನೇಕ ಲೇಖಕರು
ಮುಖಪುಟ ಕಲಾವಿದಪ್ರಮೋದ್ ಪಿ
ದೇಶಭಾರತ
ಭಾಷೆಕನ್ನಡ
ವಿಷಯಸಿನೆಮಾ
ಪ್ರಕಾರಪ್ರಬಂಧ
ಪ್ರಕಾಶಕರುಸಂವಾದ ಡಾಟ್ ಕಾಂ
ಪ್ರಕಟವಾದ ದಿನಾಂಕ
ಡಿಸೆಂಬರ್ ೧, ೨೦೧೨
ಪುಟಗಳು೧೧೩

ಕಮರ್ಷಿಯಲ್ ಸಿನಿಮಾಗಳ ಬಗೆಗೆ. 'ಸ್ವಪ್ನ ಸಾದೃಶ್ಯ' ಕನ್ನಡದ ಕಮರ್ಷಿಯಲ್ ಸಿನಿಮಾಗಳ ಕುರಿತಂತೆ ಹೊರಬರುತ್ತಿರುವ ಮೊದಲ ಪ್ರಬಂಧಗಳ ಸಂಕಲನ. ಸಂವಾದ ಡಾಟ್ ಕಾಂ (www.samvaada.com) ಇದನ್ನು ಅನೇಕ ಲೇಖಕರುಗಳ ಸಹಾಯದಿಂದ ಹೊರತಂದಿದೆ. ಇದಕ್ಕೆ ಹಿರಿಯ ಪತ್ರಕರ್ತ ಹಾಗೂ ಲೇಖಕ ಜೋಗಿ ಮುನ್ನುಡಿ ಬರೆದಿದ್ದಾರೆ.

ಕನ್ನಡದಲ್ಲಿ ಸಿನಿಮಾಗಳ ಕುರಿತ ಬರಹ, ಪುಸ್ತಕಗಳು ಅತ್ಯಂತ ಕಡಿಮೆ ಇರುವ ಈ ಸಮಯದಲ್ಲಿ ಇಂಥದ್ದೊಂದು ಪುಸ್ತಕದ ಅನಿವಾರ್ಯತೆ ಇತ್ತು, ಅದೂ ಕಮರ್ಷಿಯಲ್ ಸಿನಿಮಾಗಳ ಬಗೆಗೆ. 'ಸ್ವಪ್ನ ಸಾದೃಶ್ಯ' ಕನ್ನಡದ ಕಮರ್ಷಿಯಲ್ ಸಿನಿಮಾಗಳ ಕುರಿತಂತೆ ಹೊರಬರುತ್ತಿರುವ ಮೊದಲ ವಿಮರ್ಶಾ ಲೇಖನಗಳ ಸಂಕಲನ. ಒಂದಿಡೀ ದಶಕದ ಮುಖ್ಯವೆನಿಸುವ ಹದಿಮೂರು ಸಿನಿಮಾಗಳನ್ನು ಆಯ್ದುಕೊಳ್ಳಲಾಗಿದೆ. ಈ ಪುಸ್ತಕದಲ್ಲಿ ಪ್ರತಿ ಸಿನಿಮಾದ ಕುರಿತೂ ಅಗತ್ಯ ವಿವರಗಳಿವೆ. ಇತ್ತೀಚೆಗೆ ಬಹಳ ಸುದ್ದಿಯಲ್ಲಿರುವ ದಯಾನಂದ ಟಿ ಕೆ ಒಳಗೊಂಡು ಯುವಕಲಾವಿದ ಮಂಸೋರೆ ತನಕ ಹಲವು ಭರವಸೆಯ ಬರಹಗಾರರು ಬರೆದ ಲೇಖನಗಳಿವೆ



ಬಾಹ್ಯಕೊಂಡಿಗಳು[ಬದಲಾಯಿಸಿ]